ಈ ವರ್ಷದ ಯುಗಾದಿ ಫಲ ಕಟಕ ರಾಶಿಯವರ ಪಾಲಿಗೆ ಹೇಗಿದೆ ತಿಳಿದುಕೊಳ್ಳಿ

Astrology

Kataka Rashi Astrology predicton 2023ಮಾರ್ಚ ತಿಂಗಳು ಬಿರು ಬೇಸಗೆ ಆರಂಭದ ಜೊತೆಗೆ ಒಂದಷ್ಟು ಗ್ರಹಕೂಟದ ಬದಲಾವಣೆಗಳನ್ನು ಹೊತ್ತು ತಂದಿದೆ. ಅದರಂತೆ ಕಟಕ ರಾಶಿಯವರ ಮಾರ್ಚ್ ತಿಂಗಳ ಮಾಸ ಭವಿಷ್ಯ ಹೇಗಿದೆ ಎಂದು ತಿಳಿಯೋಣ ಬನ್ನಿ.

ಈ ವರ್ಷದ ಮಾರ್ಚ್ ತಿಂಗಳು ಕರ್ಕಾಟಕ ರಾಶಿಯಲ್ಲಿ ಅಂತಹ ಬದಲಾವಣೆಗಳು ಸಂಭವಿಸಲಾರದೆ ಹೋದರು, ಚಿಕ್ಕ ಪುಟ್ಟ ಸಮಸ್ಯೆಗಳು ನಿಮ್ಮನ್ನು ಅರಸಿ ಬರುತ್ತದೆ. ಅದಕ್ಕಾಗಿ ನೀವು‌ ಮಾನಸಿಕವಾಗಿ ಸಿದ್ಧರಾಗುವುದು ಒಳಿತು. ಅಷ್ಟಮದಲ್ಲಿ ಶನಿ, ಬುಧ ಹಾಗೂ ರವಿ ಇದ್ದು, ಈ ಗ್ರಹಗಳ ಒಕ್ಕೂಟದಿಂದ ಅನಾರೋಗ್ಯ ಉಂಟಾಗುತ್ತದೆ. ಹಳೆಯ ದೀರ್ಘಕಾಲದ ರೋಗಗಳು ಇನ್ನಷ್ಟು ಉಲ್ಬಣಗೊಂಡು, ಹೊಸ ರೋಗಗಳು ಕಾಣಿಸುವ ಸಾಧ್ಯತೆಯೂ ಇದೆ.

ಮಾರ್ಚ್ 16 ರ ನಂತರ ರವಿ ತನ್ನ ಸ್ಥಾನವನ್ನು ಬದಲಿಸಿ ಭಾಗ್ಯಾಧಿಪತಿ ಸ್ಥಾನಕ್ಕೆ ಬರುತ್ತಾನೆ. ಇದೇ ಸಮಯಕ್ಕೆ ಬುಧನು ಸಹ ಭಾಗ್ಯಕ್ಕೆ ಬರುವುದರಿಂದ, ಈ ತಿಂಗಳಿನ ಮಧ್ಯಂತರದ ನಂತರ ಎಲ್ಲವೂ ಶುಭವಾಗುವ ಲಕ್ಷಣಗಳು ಕಾಣುತ್ತಿದೆ. ತಿಂಗಳಿನ ಮಧ್ಯಭಾಗದ ತನಕ ಅಷ್ಟೇನು ಬೆಳವಣಿಗೆಗೆ ಅವಕಾಶಗಳು ಬಾರದೆ ಇದ್ದರೂ, ತದನಂತರದಲ್ಲಿ ಎರಡು ಗ್ರಹಗಳ ಚಲನೆಯಿಂದಾಗಿ ಆರೋಗ್ಯದಲ್ಲಿ ಸುಧಾರಣೆ ಕಾಣುತ್ತದೆ. ಆದರೆ ಅಲ್ಲಿಯ ತನಕ ಆರೋಗ್ಯದ ಕಡೆ ಬಹಳವೇ ಎಚ್ಚರಿಕೆ ಬೇಕು.

ಪ್ರಯಾಣದಲ್ಲಿ ಎಚ್ಚರಿಕೆ ವಹಿಸುವುದು ಉತ್ತಮ, ಅದರಿಂದ ಸಮಸ್ಯೆಗಳನ್ನು ಉತ್ಪತ್ತಿ ಮಾಡಿಕೊಳ್ಳದಿರಿ. ಪುಡ್ ಪಾಯ್ಸನಿಂಗ್ ಆಗುವ ಸಾಧ್ಯತೆಯಿದ್ದು, ಬುಧ ಹಾಗೂ ರವಿ ಅಷ್ಟಮದಲ್ಲಿ ಇರುವುದರಿಂದ ಉಸಿರಾಟದ ತೊಂದರೆ ಕಾಡುತ್ತದೆ. ಸಾಕಷ್ಟು ಪ್ರಮಾಣದಲ್ಲಿ ಗಾಳಿ ಬೆಳಕು ಇರುವಂತಹ ಜಾಗದಲ್ಲಿ ಮಲಗುವುದು ಉತ್ತಮ. ಆರೋಗ್ಯ ಕ್ಷೀಣಿಸಿದಂತೆ ಕಾಣಿಸಿದರೂ, ಭಾಗ್ಯ ಬೆನ್ನತ್ತಿ ಬಂದಿರುವುದರಿಂದ ವೃತ್ತಿ ಕೈ ಹಿಡಿಯುತ್ತದೆ. ಮಾರ್ಚ್ ಮೊದಲ ವಾರದಲ್ಲಿ ಸಮಸ್ಯೆಗಳು ಸಾಕಷ್ಟು ಎದುರಾದರೂ, ಎರಡನೆಯ ವಾರದ ನಂತರ ಎಲ್ಲವು ಸುಲಲಿತವಾಗಿ ನಡೆಯುತ್ತವೆ.

ಇದನ್ನೂ ಓದಿ..ಮಿಥುನ ರಾಶಿಯವರ ಗುಣಲಕ್ಷಣ, ನಡತೆ ಹಾಗೂ ಉದ್ಯೋಗ ವಿಚಾರದಲ್ಲಿ ಹೇಗಿರತ್ತೆ ಗೊತ್ತಾ..

2023ರ ಮಾರ್ಚ್ ತಿಂಗಳಲ್ಲಿ ಕರ್ಕಾಟಕ ರಾಶಿಯಲ್ಲಿ ಶುಕ್ರ ಹಾಗೂ ಗುರು ಭಾಗ್ಯದಲ್ಲಿ ಚಲಿಸುವುದರಿಂದ ಕೆಟ್ಟದಾಗುವ ಘಳಿಗೆ ಕೂಡ ಒಳಿತನ್ನೇ ತರುತ್ತದೆ. ಅದೃಷ್ಟ ನಿಮ್ಮ ಬೆನ್ನಿಗೆ ಇರುತ್ತದೆ. ಅವಿವಾಹಿತ ಮಕ್ಕಳಿಗೆ ಇದು ವಿವಾಹಕ್ಕೆ ಸಕಾಲವಾಗಿದ್ದು, ಗುರುಬಲ ಚೆನ್ನಾಗಿ ಇರುವಾಗಲೇ ವಿವಾಹವಾಗುವುದರಿಂದ ನಿಮ್ಮ ವೈವಾಹಿಕ ಜೀವನ ಸುಖಮಯವಾಗಿರುತ್ತದೆ. ಏಪ್ರಿಲ್22 ರ ಒಳಗೆ ವಿವಾಹದ ಕುರಿತು ನಿರ್ಧಾರ ಮಾಡುವುದು ಒಳಿತು.

ಮುಂದಿನ ದಿನಗಳಲ್ಲಿ ದಶಮಕ್ಕೆ ಹೋಗುವ ಗುರುವಿನಿಂದಾಗಿ ಸ್ವಲ್ಪ ಬಲ ಕುಗ್ಗಿದ ಹಾಗೆ ಅನ್ನಿಸಬಹುದು. ಆದರೆ ವಾಸ್ತವದಲ್ಲಿ ನೀವು ಬಲವಂತರಾಗಿಯೇ ಇರುವಿರಿ. ಶುಕ್ರ ಉಚ್ಛನಾಗಿ ಭಾಗ್ಯದಲ್ಲಿ ಇದ್ದರೂ ಸಹ, ಮಾರ್ಚ್‌12 ರ ನಂತರ ಹತ್ತನೆಯ ಮನೆಗೆ ಚಲಿಸುವುದರಿಂದ ಅಷ್ಟೇನು ಒಳ್ಳೆಯ ಬದಲಾವಣೆಗಳು ಕಾಣಲಾರವು. ಹಾಗಾಗಿ ಯಾವುದೇ ಕೆಲಸಕ್ಕೆ ಅದೃಷ್ಟವನ್ನು ಕಾಯುತ್ತಿದ್ದರೆ 12ರ ಒಳಗೆ ಮಾಡಿಕೊಳ್ಳುವುದು ಜಾಣ್ಮೆ.

ಇದರ ನಂತರ ಕುಟುಂಬದ ಹೊರಗು ಜಗಳಗಳು ನಡೆಯಬಹುದು. ಆಡುವ ಮಾತಿನ ಮೇಲೆ ನಿಗಾ ವಹಿಸದಲ್ಲಿ ಉದ್ಯೋಗದ ಜಾಗಗಳಲ್ಲಿ ಮಾತಿನ ಚಕಮಕಿ ನಡೆದು ಪ್ರೀತಿಪಾತ್ರರಿಂದ ದೂರಾಗುವ ಸಂದರ್ಭ ಬರಬಹುದು. ಹತ್ತನರಯ ಮನೆಯಲ್ಲಿ ಶುಕ್ರನ ಜೊತೆ ರಾಹುವು ಸೇರುವುದರಿಂದ ಬೆಂಕಿಗೆ ತುಪ್ಪ ಸುರಿದ ಹಾಗೆ ಒಂದರ ಜೊತೆ ಮತ್ತೊಂದು ಸಮಸ್ಯೆಗಳು ಎದುರಾಗುತ್ತವೆ. ಇದರ ನಡುವೆ ಒಳ್ಳೆಯ ಸೂಚನೆಯೆಂದರೆ ಕಾಂಟ್ರಾಕ್ಟ್ ಕೆಲಸ ಸಿಗುವ ಸಾಧ್ಯತೆಯಿದೆ. ರಿಯಲ್ ಎಸ್ಟೇಟ್, ದಲ್ಲಾಳಿ ಕೆಲಸಗಳಿಂದ ಒಳ್ಳೆಯ ಲಾಭವಾಗುತ್ತದೆ. ಶುಭವಾಗಲಿ.

ಇದನ್ನೂ ಓದಿ..ಮೀನ ರಾಶಿಯವರಿಗೆ ಗುರುಬಲ ಇರುವುದರಿಂದ ಈ ತಿಂಗಳ ಕೊನೆವರೆಗೂ ಏನೆಲ್ಲಾ ಆಗುತ್ತೆ ತಿಳಿದುಕೊಳ್ಳಿ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ

Leave a Reply

Your email address will not be published. Required fields are marked *