Ultimate magazine theme for WordPress.

Capricorn: ಮಕರ ರಾಶಿಯವರು ಈ ಯುಗಾದಿ ತಿಂಗಳು ತಿಳಿಯಬೇಕಾದ ಮುಖ್ಯ ವಿಚಾರ ಇಲ್ಲಿದೆ

0 72

Capricorn Kannada Astrology: ಹನ್ನೆರಡು ರಾಶಿಗಳಲ್ಲಿ ಒಂದಾದ ಮಕರ ರಾಶಿಯ ಮಾರ್ಚ್ ತಿಂಗಳ ಮಾಸ ಭವಿಷ್ಯ ಹೇಗಿದೆ ಎಂದು ತಿಳಿಯೋಣ ಬನ್ನಿ. ಉತ್ತರಾಷಾಢ ನಕ್ಷತ್ರದ ಎರಡು ಮೂರು ಮತ್ತು ನಾಲ್ಕನೇ ಪಾದಗಳು, ಶ್ರವಣಾನಕ್ಷತ್ರದ ನಾಲ್ಕು ಚರಣಗಳು ಹಾಗೂ ಧನಿಷ್ಠಾ ನಕ್ಷತ್ರದ ಮೊದಲ ಎರಡು ಚರಣಗಳು ಮಕರರಾಶಿಯಲ್ಲಿ ಸೇರಿದ ನಕ್ಷತ್ರಗಳಾಗಿವೆ. ಮಕರ ರಾಶಿಯ (Capricorn) ಅದೃಷ್ಟದ ಬಣ್ಣವು ನೀಲಿ ಹಾಗೂ ಕಪ್ಪು ಆಗಿದ್ದು, ಶನಿಶ್ವರ ದೇವರು ಈ ರಾಶಿಯ ಅಧಿಪತಿಯಾಗಿದ್ದಾನೆ.

ಈ ಮಕರ ರಾಶಿಯ ಮಿತ್ರ ರಾಶಿಯು ಕುಂಭರಾಶಿಯಾದರೆ, ಸಿಂಹರಾಶಿಯು ಶತೃರಾಶಿಯಾಗಿದೆ. ಇನ್ನು ಮಕರ ರಾಶಿಯವರೆಂದ ತಕ್ಷಣ ಇವರ ಚುರುಕು ತನವೇ ನೆನಪಾಗುತ್ತದೆ. ಉತ್ತಮವಾದಂತಹ ನಾಯಕತ್ವದ ಗುಣಗಳನ್ನು ಇವರು ಹೊಂದಿದ್ದು, ಒಳ್ಳೆಯ ಆಡಳಿತಗಾರ ಎನಿಸಿಕೊಂಡಿರುತ್ತಾರೆ. ಇವರಿಗೆ ಮಾರ್ಚ ತಿಂಗಳಲ್ಲಿ 4 ,5, 14, 18,19ನೇ ತಾರೀಖು ಬಹಳ ಒಳ್ಳೆಯ ದಿನಗಳಾಗಿವೆ. ಈ ದಿನಗಳಲ್ಲಿ ಯಾವುದೇ ಕೆಲಸದ ಶುಭಾರಂಭವನ್ನು ಮಾಡಬಹುದಾಗಿದೆ.

ಮಕರ ರಾಶಿಯವರು ಸ್ವಭಾವತಃ ಮುಂಗೋಪಿಗಳಾಗಿದ್ದು, ಸ್ವಲ್ಪ ಒರಟು ಸ್ವಭಾವವನ್ನಿ ಬೆಳೆಸಿಕೊಂಡಿರುತ್ತಾರೆ. ಆದಾಗ್ಯೂ ಇವರು ಸಮರ್ಥ ನಾಯಕರು ಎನಸಿಕೊಳ್ಳುವುದರಲಿಲ್ಲ ಹಿಂದೆ ಬೀಳುವುದಿಲ್ಲ. ಜನ್ಮತಃ ಸ್ವಭಾವವೇ ಹೀಗಿರುವುದರಿಂದ ಈ ತಿಂಗಳು ಇವರಿಗೆ ಶುಭ ಹಾಗೂ ಅಶುಭವು ಕೂಡಿ ಬಂದಿದೆ. ಮಕರ ರಾಶಿಯವರು ಈ ತಿಂಗಳು ಹೊರ ರಾಜ್ಯ ಅಥವಾ ದೂರದ ಊರುಗಳಿಗರ ಪ್ರವಾಸವನ್ನು ಕೈಗೊಳ್ಳುತ್ತಾರೆ. ಪುಣ್ಯಕ್ಷೇತ್ರದ ದರ್ಶನವು ಸಹ ಲಭ್ಯವಾಗಲಿದೆ.

ಮಕರ ರಾಶಿಯವರು ದುಡುಕು ಸ್ವಭಾವವನ್ನು ಬಿಟ್ಟು ನಿಧಾನವಾಗಿ ಯೋಚಿಸಿ ನಡೆದರೆ ಈ ತಿಂಗಳು ಉತ್ತಮ ಫಲಗಳನ್ನು ಕಾಣಲಿದ್ದಾರೆ‌. ಹೆಚ್ಚಿನ ಕೆಲಸಗಳನ್ನು ಮೈಮೇಲೆ ಎಳೆದುಕೊಂಡು ಒಂದನ್ನು ನಿಭಾಯಿಸಲಾಗದೆ ಒದ್ದಾಡುವ ಪ್ರಸಂಗ ಬರಬಹುದು. ಹಾಗಾಗಿ ಕೆಲಸ ಒಪ್ಪಿಕೊಳ್ಳುವ ಮೊದಲು ಯೋಚನೆ ಮಾಡಿ. ಇನ್ನು ವ್ಯಾಪಾರ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಹೆಚ್ಚಿನ ಶ್ರಮ ಹಾಕುವ ಅಗತ್ಯವಿದೆ. ವ್ಯವಹಾರ ಕ್ಷೇತ್ರದಲ್ಲಿ ಸ್ಪರ್ಧೆಗಳು ಹೆಚ್ಚಾಗಲಿದ್ದು, ಎಷ್ಟು ವೇಗವಾಗಿ ಕೆಲಸ ಮಾಡುತ್ತಿರೋ ಅಷ್ಟು ಸಂಪಾದನೆಯನ್ನು ಮಾಡಲಿದ್ದಿರಿ.

ಇದನ್ನೂ ಓದಿ..ಮೇಷ ರಾಶಿಯವರು ಈ 3 ಎಚ್ಚರಿಕೆ ಪಾಲಿಸಿದರೆ ಸಾಕು, ನಿಮ್ಮ ಜೀವನ ಸುಂದರವಾಗಿರುತ್ತೆ

ಕೃಷಿಕರಿಗೆ ಈ ಮಾರ್ಚ್ ತಿಂಗಳಲ್ಲಿ ವಿವಿಧ ಮೂಲಗಳಿಂದ ದುಡ್ಡು ಬರುವ ಸಂಭವವಿದೆ. ಹಾಗೂ ಸನ್ಮಾನ್ ಮುಂತಾದ ಕಾರ್ಯಕ್ರಮಗಳು ಸಹ ಜರುಗಲಿವೆ. ಸಂಘ-ಸಂಸ್ಥೆಗಳನ್ನು ನಡೆಸುತ್ತಿರುವವರಿಗೆ ಒಳ್ಳೆಯ ಅವಕಾಶಗಳು ಲಭಿಸಲಿವೆ. ರಾಜಕಾರಣಿಗಳಿಗೆ ಈ ತಿಂಗಳು ಕೆಲಸ ಹೆಚ್ಚಾಗಲಿದ್ದು, ಜನರಿಂದ ನಿಂದನೆಯನ್ನು ಕೇಳಬೇಕಾಗಬಹುದು. ಪ್ರಯತ್ನ ಪಟ್ಟರೆ ಮಾತ್ರ ಯಶಸ್ಸು ಸಿಗಲು ಸಾಧ್ಯವಿದೆ.

Leave A Reply

Your email address will not be published.