Aries Horoscopeಶೋಭಾಕೃತ ಎನ್ನುವ ಹೊಸ ಸಂವತ್ಸರವು ಯುಗಾದಿಯ (ugadi) ನಂತರ ಆರಂಭವಾಗುತ್ತದೆ. ಹೊಸ ಸಂವತ್ಸರದ ಆರಂಭದಿಂದ ಎಲ್ಲ ರಾಶಿಗಳ ಗ್ರಹಗತಿಗಳು ಸಹ ಬದಲಾವಣೆ ಕಾಣುತ್ತವೆ. ಅಂತದ್ದೆ ಒಂದು ಬದಲಾವಣೆ ಮೊದಲ ರಾಶಿಯಾದ (Aries) ಮೇಷರಾಶಿಯಲ್ಲಿಯು ಕಾಣಬಹುದು. ಹೊಸ ಸಂವತ್ಸರ ಶುರುವಿನಲ್ಲಿಯೆ ನಿಮಗೆ ಒಳ್ಳೆಯ ದಿನಗಳು ಎದುರಾಗುತ್ತವೆ. ಯಾಕೆಂದರೆ ನೀವು ಇಲ್ಲಿಯ ವರೆಗೆ ಬಹುತೇಕ ಕಷ್ಟದ ದಿನಗಳನ್ನು ಕಂಡಿರುವಿರಿ. ಇನ್ನು ಮುಂದೆ ನಿಮಗೆ ಒಳ್ಳೆಯ ದಿನಗಳು ಎದುರಾಗಲಿವೆ.

ಗುರುವು ಹನ್ನೆರಡನೆ ಮನೆಯಲ್ಲಿ ಇರುವುದರಿಂದ ಇಷ್ಟು ದಿನಗಳಲ್ಲಿ ನೀವು ನೋವು ಅಪಮಾನಗಳನ್ನೇ ಹೆಚ್ಚಾಗಿ ಅನುಭವಿಸಿರುವಿರಿ. ಸಂವತ್ಸರದ ಆರಂಭದಲ್ಲಿ ಶನಿಯು ಮಕರ ರಾಶಿಯಿಂದ ಕುಂಭರಾಶಿಗೆ ಚಲಿಸಿದರೆ, ಗುರುವು ಮೀನ ರಾಶಿಯಲ್ಲಿ ಇದ್ದು ಏಪ್ರಿಲ್‌12, 2023 ನಂತರ ಮೇಷ ರಾಶಿಗೆ ಬರುತ್ತಾನೆ. ಜೂನ್ ಮೊದಲ ವಾರದ ನಂತರ ಗುರುವು ಮತ್ತೆ ಮೀನರಾಶಿಯನ್ನು ಪ್ರವೇಶ ಮಾಡುತ್ತಾನೆ. ಶನಿಯು ಹಿಮ್ಮುಖ ಚಲನೆಯಲ್ಲಿ ಇರುವುದರಿಂದ ವಕ್ರಸ್ಥನಾಗುತ್ತಾನೆ. ಇದರಿಂದ ನೀವು ಒಂದಷ್ಟು ಜಾಗರೂಕತೆಯಿಂದ ಇರಬೇಕಾದ ಅನಿವಾರ್ಯತೆಯಿದೆ.

2023-2024 ರ ಅವಧಿಯಲ್ಲಿ ಶುಕ್ರ ಹಾಗೂ ಕೇತು ವ್ಯತಿರಿಕ್ತ ಪರಿಣಾಮವನ್ನು ಬೀರುವುದರಿಂದ ಬೇರೆ ಬೇರೆ ರೀತಿಯ ಸಮಸ್ಯೆಗಳು ಎದುರಾಗುತ್ತವೆ. ಅಕ್ಟೋಬರ್ ತನಕವೂ ದಿನಗಳು ಅಷ್ಟೊಂದು ಚೆನ್ನಾಗಿಲ್ಲದಿದ್ದರೂ, ಆನಂತರದ ದಿನಗಳಲ್ಲಿ ಸಿನಿಮಾ‌ ಕಷ್ಷೇತ್ರದಲ್ಲಿ ದುಡಿಯುತ್ತಿರುವವರಿಗೆ ಒಳ್ಳೆಯ ದಿನಗಳು ಆರಂಭವಾಗುತ್ತದೆ. ಯಾರನ್ನು ಅತಿಯಾಗಿ ನಂಬಿ, ಅವರ ಸಹಾಯಕ್ಕಾಗಿ ಎದುರು ನೋಡಬೇಡಿ. ನಿಮ್ಮ ಪಾಡಿಗೆ ನಿಮ್ಮ ಕೆಲಸಗಳನ್ನು ಮಾಡಿಕೊಳ್ಳುವ ನಿಟ್ಟಿನಲ್ಲಿ ನಿಮ್ಮ ಯೋಚನೆಗಳಿದ್ದರೆ ಒಳಿತು.

ಇದನ್ನೂ ಓದಿ..ಶಿವನ ಮೂರನೇ ಕಣ್ಣಿನಷ್ಟು ಶಕ್ತಿ ಇರುವ ಆ 2 ರಾಶಿಗಳು ಯಾವುವು ಗೊತ್ತಾ ಇಲ್ಲಿದೆ

ಮೇಷ ರಾಶಿಯಲ್ಲಿ ಜನಿಸಿದಂತ ನಿಮಗೆ ಬಹಳವೇ ಹಟದ ಸ್ವಭಾವವಿದ್ದು, ಎಲ್ಲವನ್ನು ನಿಮ್ಮ ಹಟದಿಂದ ಸಾಧಿಸುವ ಪ್ರಯತ್ನ ಮಾಡುತ್ತಿರಿ. ಆದರೆ ಅದು ಎಲ್ಲ ಸಮಯದಲ್ಲಿಯೂ ಒಳ್ಳೆಯದಲ್ಲ ಎನ್ನುವುದು ನಿಮಗೆ ನೆನಪಿರಲಿ. ನಿಮಗೆ ಆತ್ಮವಿಶ್ವಾಸ ಹೆಚ್ಚಾಗಿಯೆ ಇರುತ್ತದೆ. ಮನೆಯಲ್ಲಿ ಅಸಮಾಧಾನಗಳು ತಲೆ ತೋರಿದರೆ ನೀವು ತಾಳ್ಮೆ ಕಳೆದುಕೊಳ್ಳದೆ ವ್ಯವಹರಿಸಿದಲ್ಲಿ ಸಮಸ್ಯೆಗಳು ಹೆಚ್ಚು ದಿನ ನಿಲ್ಲುವುದಿಲ್ಲ. ಹಣಕಾಸಿನ ವಿಚಾರದಲ್ಲಿ ಜಾಗ್ರತೆಯಿಂದ ಇರಿ. ಯಾವುದೇ ಕಾರಣಕ್ಕೂ ಸಾಲವನ್ನು ಮಾಡುವುದಕ್ಕೆ ಹೋಗಬೇಡಿ.

ಹೊಸ ಹೊಸ ಯೋಜನೆಗಳಿಗೆ ನೀವು ಬಂಡವಾಳ ಹಾಕುವುದಾದರೆ ನಿಮ್ಮ ಹಣಕಾಸಿನ ಬಗ್ಗೆ ಮೊದಲು ಯೋಚಿಸಿ‌ ನಿರ್ಧರಿಸುವುದು ಒಳಿತು. ಏಕೆಂದರೆ ಈ ವರ್ಷ ನಿಮಗೆ ಹಣದ ಒಳ ಹರಿವು ಸಾಕಷ್ಟು ಪ್ರಮಾಣದಲ್ಲಿ ಆಗಲಾರದು. ವಿವಾಹ ಕಾರ್ಯಕ್ಕೂ ಒಂದಷ್ಟು ಅಡ್ಡಿ ಆತಂಕಗಳು ಬಂದೊದಗಿದರೂ, ಎಲ್ಲವೂ ಮಂಜಿನಂತೆ ಕರಗಿ ಹೋಗುತ್ತವೆ. ಚಿಂತಿಸಬೇಕಾದ ಅಗತ್ಯವಿಲ್ಲ. ಸ್ನೇಹಿತರ ವರ್ಗದಲ್ಲಿ ಮನಸ್ಥಾಪಗಳು ಆಗುವ ಸಾಧ್ಯತೆಯಿದೆ. ಆದಷ್ಟು ಮಾತಿನಲ್ಲಿ ಹಿಡಿತವಿರಲಿ.

ಇದನ್ನೂ ಓದಿ..ಯುಗಾದಿ ಭವಿಷ್ಯ: ಮೀನ ರಾಶಿಯವರು ಇಷ್ಟು ದಿನ ಕಾಯ್ತಾ ಇದ್ದ ಒಳ್ಳೆ ಟೈಮ್ ಬಂದೇಬಿಡ್ತು

2023ರ ವರ್ಷದ ಆರಂಭದಿಂದಲೂ ಶನಿಯು ಹನ್ನೊಂದನೆಯ ಮನೆಯಲ್ಲಿ ಸ್ಥಿತನಾಗಿ ಇರುವುದರಿಂದ ಶುಭಫಲಗಳು ನಿಮಗೆ ಸಿಗಲಿವೆ. ಶನಿಯು ಬಲಾಡ್ಯನಾಗಿರುವುದರಿಂದ ಎಣ್ಣೆ ಹಾಗೂ ಎಣ್ಣೆಯ ಕಾಳುಗಳ ವ್ಯಾಪಾರ ಚೆನ್ನಾಗಿ ನಡೆದು ಲಾಭ ತರಲಿದೆ. ಸಗಟು ವ್ಯಾಪಾರಿಗಳು ಈ ಒಂದು ವರ್ಷದ ಅವಧಿಯಲ್ಲಿ ಸ್ವಲ್ಪ ಕಷ್ಟಪಡಬೇಕಾಗಿ ಬಂದರೂ ಸಹ ಒಳ್ಳೆಯ ಲಾಭವನ್ನು ಕಾಣಲಿದ್ದಾರೆ. ವಿದ್ಯಾರ್ಥಿಗಳಿಗೆ ಈ ವರ್ಷ ಚೆನ್ನಾಗಿದೆ. ಕಾನೂನಾತ್ಮಕ ವಿವಾದಗಳಲ್ಲಿ ಸಿಲುಕಿಕೊಂಡಿದ್ದರೆ, ಈ ವರ್ಷ ಶನಿಯ ಪ್ರಭಾವದಿಂದ ಕೋರ್ಟು ಕೇಸುಗಳು ಮುಗಿದು ನೆಮ್ಮದಿಯನ್ನು ತರಲಿವೆ. ಒಟ್ಟಿನಲ್ಲಿ ಈ ವರ್ಷ ಮಿಶ್ರಫಲವು ಮೇಷರಾಶಿಯನ್ನು ಆವರಸಿಕೊಂಡಿದೆ.

By

Leave a Reply

Your email address will not be published. Required fields are marked *