Ugadi Astrology: ಇದೇ ಮಾರ್ಚ್ 22ನೇ ತಾರಿಕು ಯುಗಾದಿ ಹಬ್ಬ ಇರುವುದರಿಂದ, ಈ 7 ರಾಶಿಯವರಿಗೆ ಬಾರಿ ಅದೃಷ್ಟ ನೀವೆ ಪುಣ್ಯವಂತರು

0 4

Ugadi Astrology On 2023: ಇದೇ ಮಾರ್ಚ್ ತಿಂಗಳ 22ನೇ ತಾರಿಕು ಯುಗಾದಿ ಹಬ್ಬವಿದೆ. ಯುಗಾದಿಯೆಂದರೆ ಹಳೆಯ ಸಂವತ್ಸರ ಮುಗಿದು ಹೊಸ ಸಂವತ್ಸರದ ಆರಂಭವಾಗುವ ಹಬ್ಬವಾಗಿದೆ. ಈ ಹಬ್ಬವು ಹಿಂದುಗಳ ಪವಿತ್ರ ಹಬ್ಬವಾಗಿದೆ. ಹಬ್ಬದ ಜೊತೆಯಲ್ಲಿ ಕೆಲವೊಂದು ರಾಶಿಗಳ ಮೇಲೆ ಅದೃಷ್ಟ ಸಹ ಶುರುವಾಗಿದ್ದು, ಈ ರಾಶಿಯವರಿಗೆ ಇನ್ನು ಹತ್ತು ವರ್ಷಗಳ ಕಾಲ (Raj yoga) ರಾಜಯೋಗವು ಬರಲಿದೆ. ಹಾಗಿದ್ದರೆ ಅವು ಯಾವವು ಎನ್ನುವುದನ್ನು ನೋಡೊಣ.

Ugadi ಯುಗಾದಿಯ ನಂತರ ಈ ಏಳು ರಾಶಿಯವರಿಗೆ ಕುಬೇರನ (Kubera) ಸಂಪೂರ್ಣ ಅನುಗ್ರಹ ದೊರೆಯಲಿದ್ದು, ಇವರ ಕಷ್ಟಗಳೆಲ್ಲ ದೂರವಾಗುತ್ತವೆ. ಇಷ್ಟು ವರ್ಷಗಳ ಶ್ರಮಕ್ಕೆ ಪ್ರತಿಫಲ ಸಿಗುವ ಸಮಯ ಈಗ ಕೂಡಿ ಬಂದಿದೆ. ಇಲ್ಲಿಯವರೆಗೂ ಈ ರಾಶಿಯವರು ಅನುಭವಿಸಿದ ಅವಮಾನಗಳಿಗೆಲ್ಲ ಸಮಯವೇ ಉತ್ತರವನ್ನು ನೀಡಲಿದೆ. ಇವರು ಕುಬೇರನ ನೇರ ದೃಷ್ಟಿಗೆ ಪಾತ್ರರಾಗುವುದರಿಂದ ಇವರ ಮನೆಯಲ್ಲಿ ಹಣದ ಪ್ರವಾಹವೇ ಸೃಷ್ಟಿಯಾಗಲಿದೆ.

Ugadi Astrology

ಈ ಏಳು ರಾಶಿಯವರಿಗೆ ಮಾರ್ಚ್22 ರ ನಂತರ ಗಜಕೇಸರಿ (Gajakesari) ಯೋಗವು ಸಹ ಆರಂಭವಾಗುತ್ತದೆ. ಗಜಕೇಸರಿಯ ಯೋಗವೆಂದರೆ ಈ ರಾಶಿಯವರು ಯಾವ ಕೆಲಸವನ್ನು ಈ ಸಮಯದಲ್ಲಿ ಕೈಗೆತ್ತಿಕೊಳ್ಳುತ್ತಾರೋ ಆ ಎಲ್ಲ ಕೆಲಸಗಳು ಬಹುಬೇಗನೇ ಪೂರ್ಣವಾಗುತ್ತವೆ. ಇವರಿಗೆ ಗುರುವಿನ ಬಲವು ಸಹ ಚೆನ್ನಾಗಿದ್ದು, ಎಲ್ಲಿಯೂ ಹಣಕಾಸಿನ ಸಮಸ್ಯೆಗಳು ಉದ್ಬವವಾಗುವುದಿಲ್ಲ. ಈ ಹಿಂದೆ ಇದ್ದಂತಹ ಸಾಲಗಳು ಸಹ ಕ್ರಮೇಣವಾಗಿ ತೀರುತ್ತವೆ.

ಈ ಯುಗಾದಿ ಕಳೆಯುತ್ತಿದ್ದ ಹಾಗೆ ಈ ರಾಶಿಯವರು ಹೊಸ ಹೊಸ ಉದ್ಯಮಗಳಲ್ಲಿ ತೊಡಗಿಸಿಕೊಳ್ಳಬಹುದು. ಸ್ವಂತ ಉದ್ಯೋಗವನ್ನು ಮಾಡುವವರಿಗೆ ಈ ದಿನಗಳು ಚೆನ್ನಾಗಿದೆ. ಇವರ ಗ್ರಹಗತಿಗಳು ಕೂಡ ಎಲ್ಲ ರೀತಿಯ ಸಹಕಾರವನ್ನು ನೀಡಲಿವೆ. ಮನೆಯ ಸ್ಥಿತಿ ಸಹ ಸುಧಾರಿಸಲಿದ್ದು, ಅತೀ ಶೀಘ್ರವಾಗಿ ಉನ್ನತಿಯನ್ನು ಕಾಣುತ್ತಾರೆ. ಇವರ ಯೋಗವು ರಾಜಯೋಗವಾಗಿದ್ದರಿಂದ ಇವರನ್ನು ಹಿಂದಿಕ್ಕಲು ಯಾರಿಗೂ ಸಾಧ್ಯವಾಗುವುದಿಲ್ಲ. ಕೆಲಸವಿಲ್ಲದವರಿಗೆ ಕೈ ತುಂಬಾ ಕೆಲಸಗಳು ದೊರೆಯುತ್ತವೆ‌.

ಇಲ್ಲಿಯವರೆಗೆ ವಿವಾಹದಲ್ಲಿದ್ದ ಅಡಚಣೆಗಳು ದೂರವಾಗಿ, ಬೇಗನೆ ಕಂಕಣ ಕೂಡಿ ಬರಲಿದೆ. ಇನ್ನು ಹತ್ತು ವರ್ಷಗಳ ಕಾಲ ಇವರಿಗೆ ಗಜಕೇಸರಿ ಯೋಗವು ಇರುವುದರಿಂದ ಬಂಧು ಬಾಂಧವರಿಂದಲೂ ಇವರಿಗೆ ಮನ್ನಣೆಗಳು ದೊರೆಯುತ್ತದೆ. ಇವರು ಸಮಾಜದಲ್ಲಿ ಬಹುಬೇಗನೆ ಗುರುತಿಸಿಕೊಳ್ಳಲಿದ್ದು, ಸ್ವಲ್ಪ ಪ್ರಯತ್ನ ಮಾಡಿದಲ್ಲಿ ಒಳ್ಳೆಯ ಜನನಾಯಕರಾಗುತ್ತಾರೆ‌. ಈ ರಾಶಿಯವರಿಗೆ ರಾಜಕೀಯವು ಹೇಳಿ ಮಾಡಿಸಿದ ವೇದಿಕೆಯಾಗಿದ್ದು, ಇವರ ಚಾಣಾಕ್ಷ ತನದಿಂದ ಎಲ್ಲರನ್ನು ಮೋಡಿ ಮಾಡುತ್ತ ತಮ್ಮ ಸ್ಥಾನವನ್ನು ಭದ್ರಗೊಳಿಸುತ್ತಾರೆ.

ಇದನ್ನೂ ಓದಿ..ಮಕರ ರಾಶಿಯವರು ಈ ಯುಗಾದಿ ತಿಂಗಳು ತಿಳಿಯಬೇಕಾದ ಮುಖ್ಯ ವಿಚಾರ ಇಲ್ಲಿದೆ

ತುಲಾರಾಶಿ, ಕಟಕರಾಶಿ, ಸಿಂಹರಾಶಿ, ವೃಶ್ಚಿಕರಾಶಿ, ಕನ್ಯಾರಾಶಿ, ಮೀನ ರಾಶಿ ಹಾಗು ಧನಸ್ಸು ರಾಶಿಗಳಲ್ಲಿ ಜನಿಸಿದವರಿಗೆ ಈ ಯುಗಾದಿಯ ನಂತರ ಬಹಳ ಒಳ್ಳೆಯದ ದಿನಗಳು ಆರಂಭವಾಗಲಿದ್ದು, ಇವರು ತಾವು ಬಯಸಿದ ಜೀವನವನ್ನು ಪಡೆಯುತ್ತಾರೆ. ಇವರು ಯಾವುದೇ ಕೆಲಸ ಮಾಡಿದರು ಸಹ ಅದರಲ್ಲಿ ವಿಜಯವನ್ನು ಕಾಣುತ್ತಾರೆ. ಈ ಹತ್ತು ವರ್ಷಗಳಲ್ಲಿ ಅವರನ್ನು ಯಾವುದೇ ರೀತಿಯ ಕೌಟುಂಬಿಕ ಸಮಸ್ಯೆಗಳು ಬಾಧಿಸುವುದಿಲ್ಲ. ಆದಾಗ್ಯೂ ಸಮಸ್ಯೆಗಳು ತಲೆದೋರಿದರೆ ಓಂ ಅಂಬಾಭವಾನಿ ಎನ್ನುವ ಮಂತ್ರವನ್ನು ಹೇಳಿಕೊಂಡು ಭಗವತಿಯನ್ನು ನೆನೆಸಿ ಮುಂದಡಿಯಿಡಿ. ಶುಭವಾಗುತ್ತದೆ.

Leave A Reply

Your email address will not be published.