Ultimate magazine theme for WordPress.

Scorpio astrology: ವೃಶ್ಚಿಕ ರಾಶಿಯವರಿಗೆ ಯುಗಾದಿ ನಂತರ ಕಷ್ಟಗಳು, ಮಂಜಿನಂತೆ ಕರಗುತ್ತಾ? ಯಾಕೆಂದರೆ..

0 7

Scorpio astrology on April Month: ಏಪ್ರಿಲ್ ತಿಂಗಳಿನ (Scorpio) ವೃಶ್ಚಿಕ ರಾಶಿಯ ಮಾಸ ಭವಿಷ್ಯವು ಹೇಗಿದೆ, ಯಾವ ಯಾವ ಗ್ರಹಗಳು ಬದಲಾಗಿ ಫಲಗಳನ್ನು ನೀಡಲಿವೆ ಎಂಬುದನ್ನು ತಿಳಿಯೋಣ. ವೃಷಭರಾಶಿಗೆ ಶುಕ್ರನು 6 ಏಪ್ರಿಲ್’ನಂದು ಪ್ರವೇಶ ಮಾಡುತ್ತಾನೆ. ಇದೇ ಏಪ್ರಿಲ್ ತಿಂಗಳ 14ನೇ ತಾರೀಕಿನಂದು ರವಿಯು ಮೇಷ ರಾಶಿಗೆ ಬರಲಿದ್ದಾನೆ. ಹಾಗೆ 22ನೇ ತಾರೀಕಿನಂದು ಗುರುವು ಸಹ ಮೇಷ ರಾಶಿಯನ್ನು ಪ್ರವೇಶ ಮಾಡುತ್ತಾನೆ. ಇವು ವೃಶ್ಚಿಕ (Scorpio) ರಾಶಿಯ ಗ್ರಹ ಸಂಚಾರಗಳಾಗಿದ್ದು ಇದರಿಂದಾಗಿ ಯಾವ ಫಲಗಳು ಸಿಗುತ್ತದೆ ಎಂದು ನೋಡೊಣ.

ಏಪ್ರಿಲ್ ತಿಂಗಳಿನಲ್ಲಿ ಪ್ರಮುಖವಾಗಿ Scorpio ವೃಶ್ಚಿಕ ರಾಶಿಯಲ್ಲಿ (Guru) ಗುರುವಿನ ಸ್ಥಾನ ಬದಲಾಗಲಿದ್ದು ಇದರಿಂದಾಗಿ ಒಂದಷ್ಟು ಶುಭ ಫಲಗಳನ್ನು ಈ ತಿಂಗಳಿನಲ್ಲಿ ನಿರೀಕ್ಷಿಸಬಹುದು. ರವಿಯು ಐದು ಹಾಗೂ ಆರನೇ ಮನೆಯಲ್ಲಿ ಸಂಚಾರ ಮಾಡುತ್ತಾನೆ. ಇದು ರವಿಯ ಉಚ್ಛಕ್ಷೇತ್ರವಾದರು ಸಹ ಷಷ್ಟ ಸ್ಥಾನವು ವೃಶ್ಚಿಕ ರಾಶಿಗೆ ಅಷ್ಟೊಂದು ಉತ್ತಮಫಲಗಳನ್ನು ನೀಡಲಾರದು. ಇನ್ನೇನು ಕೈಗೆ ಸಿಗಬೇಕು ಎನ್ನುವಷ್ಟರಲ್ಲಿ ನಿಮ್ಮ ವಸ್ತುವು ಜಾರಿ ಹೋಗಬಹುದು. ಆಗಬೇಕಾದ ಕೆಲಸಗಳು ಆಗದೆ ಹೋಗಬಹುದು.

ಕುಜನು ವೃಶ್ಚಿಕ ರಾಶಿಯಲ್ಲಿ ಎಂಟನೇ ಮನೆಯಲ್ಲಿ ಸಂಚಾರ ಮಾಡುತ್ತಿದ್ದು, ಅನಾರೋಗ್ಯಗಳನ್ನು ತರುತ್ತಾನೆ. ದೇಹಕ್ಕೆ ಪೆಟ್ಟುಗಳು ಬೀಳುವ ಸಾಧ್ಯತೆಯಿದ್ದು, ಆದಷ್ಟು ವಾಹನ ಸವಾರರು ಎಚ್ಚರಿಕೆಯಿಂದ ಇರಿ. ಮಾನಸಿಕವಾಗಿ ಸಹ ಈ ಸಮಯವು ಜರ್ಜರ ಸ್ಥಿತಿಯನ್ನು ತಂದೊಡ್ಡಲಿದ್ದು ಜಾಗರೂಕತೆಯಿಂದ ಇರುವುದು ಅನಿವಾರ್ಯವಾಗುತ್ತದೆ. ಇಲ್ಲವಾದಲ್ಲಿ ವೃಥಾ ಅಪವಾದಕ್ಕೆ ಗುರಿಯಾಗಬೇಕಾದಿತು. ಇನ್ನು ಬುಧನು ಆರನೇ ಮನೆಯಲ್ಲಿ ಸಂಚರಿಸಿದ್ದು ಬಹಳ ಶುಭವು ಅಲ್ಲದ, ಕೆಟ್ಟದ್ದನ್ನು ಮಾಡದ ಸಮಸ್ಥಿತಿಯನ್ನು ತರಲಿದ್ದಾನೆ. ಆಗಬೇಕಾದ ಕೆಲಸಗಳಲ್ಲಿ ಹಿನ್ನಡೆ ಉಂಟಾಗುವ ಸಾಧ್ಯತೆಗಳೆ ಹೆಚ್ಚಿವೆ.

ಕೆಲವೊಮ್ಮೆ ರಾಹುವಿನಿಂದಾಗಿ ದೀಢಿರ್ ಬದಲಾವಣೆಗಳು ಉಂಟಾಗುತ್ತವೆ. ಲಾಭ ಬಂದರೂ ಅಥವಾ ನಷ್ಟವಾದರೂ ಹೆಚ್ಚು ಎನ್ನಿಸುವಂತಹ ಸ್ಥಿತಿ ನಿರ್ಮಾಣವಾಗುತ್ತದೆ. ರಾಹು ಹಾಗೂ ಬುಧನ ಸಂಕ್ರಮಣದಿಂದಾಗಿ ಶುಭವೋ ಅಶುಭವೋ ಒಟ್ಟಿನಲ್ಲಿ ನಿಮ್ಮ ಜೀವನ ಈ ತಿಂಗಳಿನಲ್ಲಿ ಬದಲಾಗುತ್ತದೆ. ಪಂಚಮದಿಂದ ಗುರುವು ಆರನೇ ಮನೆಗೆ ಬರುತ್ತಿರುವುದರಿಂದ ಗುರು ಬಲವು ಸಹ ಕಳೆದುಕೊಳ್ಳುತ್ತಿರಿ. ಇದರಿಂದಾಗಿ ಶುಭವು ಘಟಿಸುವುದು ನಿಧಾನವಾಗುತ್ತದೆ.

ಶುಕ್ರ ಸ್ಥಾನವು ಬದಲಾಗಲಿದ್ದು, ಒಂದಷ್ಟು ಒಳ್ಳೆಯ ಫಲಗಳನ್ನು ಶುಕ್ರನಿಂದ ನಿರೀಕ್ಷಿಸಬಹುದು. ಮದುವೆಯ ಕಾರ್ಯಗಳು ನಿಶ್ಚಯವಾಗಲಿದ್ದು, ಮನೆಯಲ್ಲಿ ಮಂಗಳಕಾರ್ಯಕ್ಕೆ ಮುನ್ನುಡಿ ಬರೆಯುತ್ತಿರಿ. ಹಣಕಾಸಿನ ವ್ಯವಸ್ಥೆಯಲ್ಲಿ ಒಳಿತಾಗಲಿದೆ. ಶನಿಯು ನಾಲ್ಕನೆ ಮನೆಯಲ್ಲಿ ಇರುವುದರಿಂದ ಮೂಳೆ ಸಂಬಂಧಿತ ಖಾಯಿಲೆಗಳಲ್ಲಿ ಕೊಂಚ ಬಳಲಲಿದ್ದಿರಿ. ಅನಾನುಕೂಲ ಉಂಟಾಗಲಿದೆ. ರಾಹು ಆರನೇ ಮನೆಯಲ್ಲಿ ಇರುವುದರಿಂದ ಭೂ ವ್ಯವಹಾರಗಳನ್ನು ಮಾಡುತ್ತಿರುವವರಿಗೆ ಶುಭವಾಗುತ್ತದೆ.

ಇದನ್ನೂ ಓದಿ..ಇದೇ ಮಾರ್ಚ್ 22ನೇ ತಾರಿಕು ಯುಗಾದಿ ಹಬ್ಬ ಇರುವುದರಿಂದ, ಈ 7 ರಾಶಿಯವರಿಗೆ ಬಾರಿ ಅದೃಷ್ಟ ನೀವೆ ಪುಣ್ಯವಂತರು

ಹನ್ನೆರಡನೆಯ ಮನೆಯಲ್ಲಿ ಕೇತು ಇರುವುದರಿಂದ ವಿದ್ಯಾರ್ಥಿಗಳಿಗೆ ಬಹಳ ಶುಭವಾಗಲಿದೆ. ಆಧ್ಯಾತ್ಮ ಸಾಧನೆಯಲ್ಲಿ ತೊಡಗಿರುವವರಿಗೆ ಇದು ಒಳ್ಳೆಯ ಕಾಲವಾಗಿದೆ. ಟ್ರಾಫಿಕ್ ಫೋಲಿಸ್ ಕೆಲಸ ಮಾಡುವವರಿಗೆ ಕೆಲಸ ಸ್ವಲ್ಪ ಕಷ್ಟವಾಗಲಿದೆ. ದೂರದ ಊರಿಗೆ ಪ್ರಯಾಣ ಹೋಗುವವರಿಗೆ 22ನೇ ತಾರಿಕಿನ ತನಕ ಅನುಕೂಲವಿದೆ. ಅದರ ನಂತರ ದಿನಗಳು ಚೆನ್ನಾಗಿಲ್ಲ. ರಾಜಕೀಯ ವ್ಯಕ್ತಿಗಳಿಗೆ ಹಾಗೂ ಸರ್ಕಾರಿ ಕೆಲಸದಲ್ಲಿ ಇರುವವರಿಗೆ ಸಮಯ ಅಷ್ಟೇನು ಉತ್ತಮಾಗಿಲ್ಲ. ವರ್ಗಾವಣೆಗಳು ನಡೆಯಬಹುದು. ಮಾನಸಾದೇವಿಯ ಆರಾಧನೆಯು ನಿಮ್ಮನ್ನು ಕಷ್ಟಗಳಿಂದ ಕಾಪಾಡುತ್ತದೆ.

Leave A Reply

Your email address will not be published.