ಕೇಂದ್ರ ಸರ್ಕಾರ (Central Govt) ಜನರಿಗೆ ಈಗ ಇನ್ನಷ್ಟು ಪ್ರಯೋಜನಗಳನ್ನು ನೀಡಲು ಸಿದ್ಧವಾಗಿ ನಿಂತಿದ್ದು ಸರ್ಕಾರ ನೀಡುತ್ತಿರುವಂತಹ ಹೊಸ ಯೋಜನೆಯಿಂದಾಗಿ ಖಂಡಿತವಾಗಿ ಸಾಕಷ್ಟು ಜನರಿಗೆ ನೆಮ್ಮದಿ ಸಿಗಲಿದೆ. ಬಹುತೇಕ ಜನರು ಖಂಡಿತವಾಗಿ ವೋಟರ್ ಐಡಿ( Voter ID) ಡ್ರೈವಿಂಗ್ ಲೈಸೆನ್ಸ್ ಹಾಗೂ ರೇಷನ್ ಕಾರ್ಡ್ (Ration Card) ಅನ್ನು ಹೊಂದಿರುತ್ತಾರೆ. ಕೆಲವೊಮ್ಮೆ ಮೂರು ಗುರುತು ಕಾರ್ಡುಗಳಲ್ಲಿ ಕೂಡ ಬೇರೆ ಬೇರೆ ರೀತಿಯ ವಿಳಾಸ ಅಥವಾ ವಿವರಗಳು ಇರಬಹುದು.

ಇನ್ನು ಇವುಗಳಲ್ಲಿ ಇರುವಂತಹ ಬೇರೆ ಬೇರೆ ವಿವರಗಳನ್ನು ನೀವು ಬದಲಾಯಿಸಲು ಬೇರೆ ಬೇರೆ ಕೇಂದ್ರಗಳಿಗೆ ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಇದು ನಿಮಗೂ ಕೂಡ ತಲೆನೋ’ ವಿನ ಕೆಲಸವಾಗಿರುತ್ತದೆ. ಈ ಪ್ರಮುಖ ದಾಖಲೆಗಳಲ್ಲಿ ಇರುವಂತಹ ವಿವರಗಳನ್ನು ಸದ್ಯಕ್ಕೆ ಒಂದೇ ಸ್ಥಳದಲ್ಲಿ ಬದಲಾಯಿಸುವುದು ಕಷ್ಟಕರವಾಗಿರಬಹುದು ಆದರೆ ಮುಂದಿನ ದಿನಗಳಲ್ಲಿ ಇದು ಕೇಂದ್ರ ಸರ್ಕಾರದ ಹೊಸ ಯೋಜನೆಯ ಮೂಲಕ ಅತ್ಯಂತ ಸುಲಭವಾಗಿರಲಿದೆ.

ಇದನ್ನೂ ಓದಿ..ಇನ್ನೇನು ಎಲೆಕ್ಷನ್ ಬರುವ ಸಮಯ ನಿಮ್ಮ ವೋಟರ್ ID ಹಾಳಾಗಿದ್ದರೆ ಅಥವಾ ಕಳೆದು ಹೋಗಿದ್ದರೆ ಇಲ್ಲಿದೆ ಹೊಸ ವೋಟರ್ ID ಪಡೆಯುವ ಸುಲಭ ವಿಧಾನ

ಇದಕ್ಕಾಗಿಯೇ ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೊಸ ವೇದಿಕೆಯನ್ನು ನಿರ್ಮಾಣ ಮಾಡುತ್ತಿದೆ ಎಂಬುದಾಗಿ ಸುದ್ದಿ ತಿಳಿದು ಬಂದಿದೆ. ಇದರ ಪ್ರಕಾರ ನೀವು ಒಂದು ವೇಳೆ ಆಧಾರ್ ಕಾರ್ಡ್ ನಲ್ಲಿ ಬದಲಾವಣೆಯನ್ನು ಮಾಡಿದರೆ ಉಳಿದ ಸರಕಾರಿ ದಾಖಲೆಗಳಲ್ಲಿ ಕೂಡ ಸ್ವಯಂ ಚಾಲಿತವಾಗಿ ಬದಲಾವಣೆ ಮೂಡಿ ಬರಲಿದೆ.

ಈ ಮೂಲಕ ಹೇಳುವುದಾದರೆ ಒಂದು ವೇಳೆ ಆಧಾರ್ ಕಾರ್ಡ್ ನಲ್ಲಿ ಬದಲಾವಣೆ ಕಂಡು ಬಂದರೆ ಡ್ರೈವಿಂಗ್ ಲೈಸೆನ್ಸ್ ರೇಷನ್ ಕಾರ್ಡ್ ನಲ್ಲಿ ಕೂಡ ನೀವು ಯಾವುದೇ ಬದಲಾವಣೆ ಮಾಡಬೇಕಾದ ಅಗತ್ಯ ಇರುವುದಿಲ್ಲ ಆದಾಗಲೇ ಅದರಲ್ಲಿ ಕೂಡ ಬದಲಾವಣೆ ಮೂಡಿ ಬಂದಿರುತ್ತದೆ.

ಇದನ್ನೂ ಓದಿ..ಹೊಸ ಪೆಟ್ರೋಲ್ ಬಂಕ್ ಓಪನ್ ಮಾಡಲು ಬಂಡವಾಳ ಎಷ್ಟಿರಬೇಕು? ಇದಕ್ಕೆ ಅರ್ಜಿಸಲ್ಲಿಸೋದು ಹೇಗೆ ಸಂಪೂರ್ಣ ಮಾಹಿತಿ ಇಲ್ಲಿದೆ

ಈಗಾಗಲೇ ಇದರ ಕುರಿತಂತೆ ಮಹತ್ತರವಾದ ಬದಲಾವಣೆಯನ್ನು ಜಾರಿಗೆ ತರುವ ಕುರಿತಂತೆ ಸಚಿವಾಲಯ ಚರ್ಚೆಗಳನ್ನು ನಡೆಸುತ್ತಿದ್ದು ಜನರಿಗೆ ಡ್ರೈವಿಂಗ್ ಲೈಸೆನ್ಸ್ ಮತದಾರರ ಚೀಟಿ ಪಡಿತರ ಚೀಟಿ ನೀಡುವಂತಹ ಸಂಸ್ಥೆಗಳೊಂದಿಗೆ ಇದನ್ನು ಮೊದಲಿಗೆ ಜಾರಿಗೆ ತರುವ ನಿಟ್ಟಿನಲ್ಲಿ ಪ್ರಯತ್ನ ಕೂಡ ಈಗಾಗಲೇ ಪ್ರಾರಂಭವಾಗಿದೆ ಎಂಬುದಾಗಿ ತಿಳಿದು ಬಂದಿದೆ. ಇದು ಮುಂದಿನ ದಿನಗಳಲ್ಲಿ ಜನರಿಗೆ ಸಾಕಷ್ಟು ಕೆಲಸವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದೆ.

By

Leave a Reply

Your email address will not be published. Required fields are marked *