ಬಾಡಿ ಹಿಟ್ ಕಡಿಮೆ ಮಾಡಲು ಈ 2 ಇದ್ರೆ ಸಾಕು

0 1

ದೇಹದ ಉಷ್ಣತೆ ಹತ್ತು ಹಲವಾರು ಕಾರಣಗಳಿಂದ ಉಂಟಾಗುತ್ತದೆ ಇವುಗಳಲ್ಲಿ ಮುಖ್ಯವಾದದ್ದು ಪರಿಸರದಲ್ಲಿನ ಉಷ್ಣತೆ. ನಮ್ಮ ದೇಹದ ಸುತ್ತ ಮುತ್ತಲ್ಲಿನ ಪರಿಸರದಲ್ಲಿನ ಉಷ್ಣತೆಯು ನಮ್ಮ ದೇಹದ ಉಷ್ಣತೆಯ ಮೇಲೆ ಪರಿಣಾಮವನ್ನು ಉಂಟು ಮಾಡುತ್ತದೆ. ಬೇಸಗೆಯಲ್ಲಿ ಹೆಚ್ಚಾಗುವ ಸೂರ್ಯನ ತಾಪದಿಂದ ನಮ್ಮ ದೇಹದ ತಾಪಮಾನ ಕೂಡಾ ಹೆಚ್ಚಾಗುತ್ತದೆ. ಬಿಸಿಲು ಮಾತ್ರವಲ್ಲದೆ ನಾವು ಸೇವಿಸುವ ಆಹಾರವು ಸಹ ನಮ್ಮ ದೇಹದ ಉಷ್ಣತೆಯನ್ನು ನಿರ್ಧರಿಸುತ್ತದೆ. ನಾವು ದಿನನಿತ್ಯ ಸೇವಿಸುವ ಅತಿಯಾದ ಖಾರವಾದ ಪದಾರ್ತ ಮದ್ಯ ಹಾಗೂ ಕೆಫೈನ್ ಇತ್ಯಾದಿಗಳ ಸೇವನೆಯಿಂದಲೂ ದೇಹದ ತಾಪಮಾನ ಹೆಚ್ಚುತ್ತದೆ. ಕೆಲವೊಮ್ಮೆ ಅನಾರೋಗ್ಯ ಹಾಗೂ ಅದಕ್ಕೆ ನಾವು ಸೇವಿಸುವ ಔಷಧಿಗಳು ಸಹ ದೇಹದ ಉಷ್ಣತೆಯನ್ನು ಹೆಚ್ಚಿಸುತ್ತವೆ. ನೈಸರ್ಗಿಕವಾಗಿ ನಮಗೆ ಲಭ್ಯವಿರುವ ಕೆಲವು ಮೂಲಿಕೆ ಹಾಗೂ ಮನೆ ಮದ್ದುಗಳ ಸಹಾಯದಿಂದ ನಾವು ನಮ್ಮ ದೇಹದ ತಾಪಮಾನವನ್ನು ಸಮತೋಲನದಲ್ಲಿ ಇರಿಸಿಕೊಳ್ಳಬಹುದು.

ಇನ್ನು ದೇಹದ ಉಷ್ಣತೆ ಏರುವುದಕ್ಕೆ ಕಾರಣಗಳು ಎಂದು ನೋಡುವುದಾದರೆ, ಕೃತಕ ಅಥವಾ ಬಿಗಿಯಾದ ಬಟ್ಟೇಗಳನ್ನು ಧರಿಸುವುದು. ಜ್ವರ ಅಥವಾ ಸೋಂಕು ತಗಲುವುದು. ಆಯಾಸಕಾರಿಯಾದ ವ್ಯಾಯಾಮ ಅಥವಾ ಚಟುವಟಿಕೆಗಳನ್ನು ಮಾಡುವುದರಿಂದ ದೇಹದ ತಾಪಮಾನ ಹೆಚ್ಚುತ್ತದೆ. ಅತಿಯಾದ ಬಿಸಿಲಿಗೆ ನಮ್ಮನು ನಾವು ಒಡ್ಡಿಕೊಳ್ಳುವುದರಿಂದಲು ದೇಹದ ತಾಪವೇರಬಹುದು. ಹೀಗೆ ಇನ್ನೂ ಹಲವಾರು ಕಾರಣಗಳಿಂದ ದೇಹದ ತಾಪಮಾನ ಏರಿಕೆ ಆಗಬಹುದು.

ಹಾಗಿದ್ದರೆ ಉಷ್ಣತೆಯನ್ನು ಕಡಿಮೆ ಮಾಡಿಕೊಳ್ಳುವುದು ಹೇಗೆ? ಎಂದು ನೋಡುವುದಾದರೆ, ಹೆಚ್ಚೆಚ್ಚು ಖಾರವಾಗಿರುವ ಪದಾರ್ಥಾಗಳನ್ನು ಸೇವಿಸ ಬಾರದು. ಕೊಬ್ಬು ಹೆಚ್ಚಿರುವ ಅಥವಾ ಕರಿದ ಪದಾರ್ಥಗಳನ್ನು ಸೇವಿಸದೇ ಇರುವುದು. ಕೆಫೈನ್ ಹಾಗೂ ಮದ್ಯ ಸೇವಿಸದಿರುವುದು. ಸೋಡಿಯಂ ಅಂಶ ಕಡಿಮೆ ಇರುವ ಪದಾರ್ಥಗಳ ಸೇವನೆ. ಬಾದಾಮಿ, ಎಳ್ಳು ಅಥವಾ ಜೋಳದ ಎಣ್ಣೆಯ ಬದಲಾಗಿ ಕೊಬ್ಬರಿ ಅಥವಾ ಆಲಿವ್ ಎಣ್ಣೆಯನ್ನು ಬಳಸುವುದು.
ಆಹಾರದಲ್ಲಿನ ಕಾಳು ಹಾಗೂ ಧಾನ್ಯಗಳನ್ನು ಕಡಿಮೆ ಮಾಡಿ, ವಾರಕ್ಕೆ 2 ಅಥವಾ 3 ಬಾರಿ ಮಾತ್ರ ಸೇವಿಸುವುದು. ಸಸ್ಯಾಹಾರ ಸೇವನೆಯನ್ನು ಹೆಚ್ಚಿಸಿ, ಮಾಂಸಾಹಾರವನ್ನು ಕಡಿಮೆ ಮಾಡುವುದು ಈ ಎಲ್ಲಾ ಅಂಶಗಳನ್ನು ನಾವು ಪಾಲನೆ ಮಾಡುವ ಮೂಲಕ ನಮ್ಮ ದೇಹದ ಉಷ್ಣತೆ ಹೆಚ್ಚಾಗದ ಹಾಗೆ ನೋಡಿಕೊಳ್ಳಬಹುದು.

ಇನ್ನು ನಮ್ಮ ದೇಹವನ್ನು ತಂಪಾಗಿ ಇಟ್ಟುಕೊಳ್ಳಲು ಯಾವ ಮನೆಮದ್ದು ಇದೆ ಎನ್ನುವುದನ್ನು ನೋಡುವುದಾದರೆ ಈ ಮೂರು ವಸ್ತುಗಳನ್ನು ಬಳಸಿಕೊಂಡು ಇದರಿಂದ ಕಷಾಯ ತಯಾರಿಸಿ ಆ ಕಷಾಯವನ್ನು ಸೇವಿಸುವ ಮೂಲಕ ನಾವು ನಮ್ಮ ದೇಹದ ಉಷ್ಣತೆ ಹೆಚ್ಚಾಗದ ಹಾಗೆ ನೋಡಿಕೊಳ್ಳಬಹುದು. ನಾವಿಲ್ಲಿ ತಿಳಿಸುವ ಮೂರು ವಸ್ತುಗಳನ್ನು ಗ್ರಂತಿಕೆ ಅಂಗಡಿಗಳಲ್ಲಿ ಪಡೆದುಕೊಳ್ಳಬಹುದು. ಮೊದಲನೆಯದಾಗಿ ಲಾವಂಚ , ರಕ್ತ ಚಂದನ ಹಾಗೂ ಸೊಗಡಿಗೆ ಬೇರು ಈ ಮೂರು ವಸ್ತುಗಳು ನಮಗೆ ಮುಖ್ಯವಾಗಿ ಬೇಕು. ಈ ಸೊಗಡಿಗೆ ಬೇರನ್ನು ತಂದು ಚೆನ್ನಾಗಿ ತೊಳೆದು ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ ಇಟ್ಟುಕೊಳ್ಳಬೇಕು. ಒಂದು ಪಾತ್ರೆಗೆ ಎರಡರಿಂದ ಮೂರು ಗ್ಲಾಸ್ ಅಷ್ಟು ನೀರು ಇಲ್ಲವೇ ಒಂದು ಲೀಟರ್ ಅಷ್ಟು ನೀರು ಹಾಕಿ ಕುದಿಯಲು ಬಿಡಬೇಕು. ಒಂದು ಕುದಿ ಬಂದ ನಂತರ ಲಾವಂಚ ಬೇರಿನ ಚೂರು ಇಲ್ಲವೇ ಅದರ ಪುಡಿಯನ್ನು ಸ್ವಲ್ಪ ಹಾಕಬೇಕು ಹಾಗೂ ರಕ್ತ ಚಂದನ ಇದನ್ನು ಕೂಡಾ ಸ್ವಲ್ಪ ತುಂಡುಗಳನ್ನು ಹಾಕಿ ಐದರಿಂದ ಹತ್ತು ನಿಮಿಷಗಳ ಕಾಲ ಚೆನ್ನಾಗಿ ಕುದಿಸಬೇಕು. ಅಷ್ಟರ ನಂತರ ಕೊನೆಯಲ್ಲಿ ಒಂದು ಚಮಚ ಸೊಗಡೇ ಬೇರಿನ ಪುಡಿಯನ್ನು ಹಾಕಿ ಮುಚ್ಚಳ ಮುಚ್ಚಿ ಸ್ಟೋವ್ ಆಫ್ ಮಾಡಿ ಇಟ್ಟು ನಂತರ ಸೋಸಿಕೊಂಡು ಇಡೀ ದಿನದಲ್ಲಿ ಆಗಾಗ ಇದನ್ನು ಕುಡಿಯುವುದರಿಂದ ನಾವು ನಮ್ಮ ದೇಹವನ್ನು ತಂಪಾಗಿ ಇಟ್ಟುಕೊಳ್ಳಬಹುದು.

Leave A Reply

Your email address will not be published.