ಬರಿ 100 ಗ್ರಾಂ ಕಪ್ಪು ದ್ರಾಕ್ಷಿ ತಿನ್ನೋದ್ರಿಂದ ಏನ್ ಲಾಭವಿದೆ ಗೊತ್ತೇ?

0 0

ಬರೀ 100 ಗ್ರಾಮ್ ಕಪ್ಪು ದ್ರಾಕ್ಷಿಯನ್ನು ತಿನ್ನುವುದರಿಂದ ಇಷ್ಟೊಂದು ಲಾಭಗಳು ಇವೆ ಅನ್ನುವುದನ್ನು ತಿಳಿದುಕೊಂಡರೆ ನಾವು ಹುಡುಕಿಕೊಂಡು ಹೋಗಿ ಕಪ್ಪು ದ್ರಾಕ್ಷಿಯನ್ನು ತಿನ್ನುತ್ತೇವೆ. ಕಪ್ಪು ದ್ರಾಕ್ಷಿ ಬರೀ ವೈನ್ ತಯಾರಿಕೆಗೆ ಮಾತ್ರ ಬಳಕೆ ಆಗುವುದಿಲ್ಲ. ಅದರ ಜೊತೆಗೆ ಇದು ಹಲವಾರು ಆರೋಗ್ಯಕರ ಅಂಶಗಳನ್ನು ಹೊಂದಿದೆ. ರಕ್ತದಲ್ಲಿನ ಕೊಬ್ಬಿನ ಅಂಶವನ್ನು ಕಡಿಮೆ ಮಾಡಿ ಗ್ಲುಕೋಸ್ ಮತ್ತು ಇನ್ಸುಲಿನ್ ಅಂಶವನ್ನು ನಿಯಂತ್ರಣ ಮಾಡುತ್ತದೆ. 100 ಗ್ರಾಮ್ ದ್ರಾಕ್ಷಿಯಲ್ಲಿ ಇರುವಂತಹ ಅಂಶಗಳು ಯಾವ್ಯಾವದು ಅವು ಎಷ್ಟು ಪ್ರಮಾಣದಲ್ಲಿ ಇದೆ ಅನ್ನೋದರ ಬಗ್ಗೆ ತಿಳಿದುಕೊಳ್ಳೋಣ… 104 ಗ್ರಾಮ್ ಕ್ಯಾಲೋರಿ, 1.9 ಗ್ರಾಮ್ ಪ್ರೊಟೀನ್, 0.24 ಗ್ರಾಮ್ ಕೊಬ್ಬು, 1.04 ಗ್ರಾಮ್ ನಾರಿನ ಅಂಶ , 4.08 ಮಿಲಿ ಗ್ರಾಮ್ ವಿಟಮಿನ್ ಸಿ , 10 ಮೈಕ್ರೋ ಗ್ರಾಮ್ ವಿಟಮಿನ್ ಎ , 288 ಮಿಲಿ ಗ್ರಾಮ್ ಪೊಟ್ಯಾಶಿಯಂ , 0.54 ಮಿಲಿ ಗ್ರಾಮ್ ಕಬ್ಬಿಣದ ಅಂಶವನ್ನು ಈ ಕಪ್ಪು ದ್ರಾಕ್ಷಿ ಹೊಂದಿರುತ್ತದೆ.

ಇನ್ನು ಬರೀ 100 ಗ್ರಾಂ ದ್ರಾಕ್ಷಿಯನ್ನು ಸೇವಿಸುವುದರಿಂದ ಏನೆಲ್ಲ ಲಾಭಗಳು ಇವೆ ಅನ್ನೋದನ್ನ ನೋಡೋಣ…. ಕಪ್ಪು ದ್ರಾಕ್ಷಿಯನ್ನು ಸೇವಿಸುವುದರಿಂದ ಚರ್ಮ ಸುಕ್ಕು ಗಟ್ಟುವುದನ್ನ ತಡೆಯುತ್ತದೆ. ಹೊಟ್ಟೆಯ ಬೊಜ್ಜನ್ನು ಕರಗಿಸಲು ಇದು ಸಹಾಯ ಮಾಡುತ್ತದೆ. ಕಪ್ಪು ದ್ರಾಕ್ಷಿಯಲ್ಲಿ ಬಿ ಕಾಂಪ್ಲೆಕ್ಸ್, ತಾಮ್ರದ ಅಂಶ , ಕಬ್ಬಿಣದ ಅಂಶ ಮತ್ತು ಸೆಲಿನಿಯಂ ಅಂಶಗಳು ಹೆಚ್ಚಾಗಿ ಇದ್ದು ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕಪ್ಪು ದ್ರಾಕ್ಷಿ ಮೂತ್ರ ಸಂಬಂಧಿತ ಸೋಂಕುಗಳನ್ನು ತಡೆಗಟ್ಟಿ ಮೂತ್ರದ ಸೋಂಕನ್ನು ಉಂಟು ಮಾಡುವ ಬ್ಯಾಕ್ಟೀರಿಯಾಗಳ ವಿಯುದ್ಧ ಹೋರಾಡುತ್ತದೆ. ಒಂದು ಲೋಟ ಕಪ್ಪು ದ್ರಾಕ್ಷಿಯ ರಸಕ್ಕೆ ಒಂದು ಚಮಚ ಜೇನು ತುಪ್ಪವನ್ನು ಬೆರೆಸಿ ಸೇವಿಸುತ್ತಾ ಬಂದರೆ ದೇಹದಲ್ಲಿ ರಕ್ತ ಹೆಚ್ಚಾಗುತ್ತದೆ. ದ್ರಾಕ್ಷಿಯಲ್ಲಿರುವ ನೀಲಿ ಅಂಶ ಕೆಟ್ಟ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುತ್ತದೆ. ದ್ರಾಕ್ಷಿಯಲ್ಲಿ ಇರುವ ಮ್ಯಾಲಿಕ್ ಆಸಿಡ್ ನೈಸರ್ಗಿಕವಾಗಿ ಹಲ್ಲುಗಳ ಬಣ್ಣ ಮಾಸುವುದನ್ನು ತಡೆಗಟ್ಟುತ್ತದೆ ಆ ಮೂಲಕ ಹಲ್ಲುಗಳ ಬಣ್ಣ ಮಾಸಲು ಬಿಡುವುದಿಲ್ಲ. ದ್ರಾಕ್ಷಿ ಬೀಜದ ಸತ್ವವು ಕ್ಯಾನ್ಸರ್ ಉಂಟು ಮಾಡುವ ತಲೆ ಮತ್ತು ಕುತ್ತಿಗೆ ಎಲುಬಿನ ಕಾಸುನೋಮಾ ಕೋಶಗಳಿಂದ ಆರೋಗ್ಯವಂತ ಕೋಶಗಳಿಗೆ ಯಾವುದೇ ರೀತಿಯ ಹಾನಿ ಆಗದಂತೆ ತಡೆಗಟ್ಟುತ್ತದೆ. ಇವಿಷ್ಟು ನಾವು ಕಪ್ಪು ದ್ರಾಕ್ಷಿಯನ್ನು ತಿನ್ನುವುದರಿಂದ ಆಗುವಂತಹ ಪ್ರಯೋಜನಗಳು.

Leave A Reply

Your email address will not be published.