ಬಸವ ವಸತಿ ಯೋಜನೆಯಡಿ ಮನೆ ಕಟ್ಟಿಕೊಳ್ಳಲು ಅರ್ಜಿ ಸಲ್ಲಿಸೋದು ಹೇಗೆ? ಇಲ್ಲಿದೆ ಮಾಹಿತಿ

0 16

ಆರ್ಥಿಕವಾಗಿ ಹಿಂದುಳಿದಿರುವವರಿಗೆ ಮನೆ ನಿರ್ಮಾಣ ಮಾಡಿಕೊಳ್ಳಲು ಸರ್ಕಾರದಿಂದ ಅನೇಕ ಯೋಜನೆಗಳಿವೆ. ರಾಜೀವ್ ಗಾಂಧಿ ಗ್ರಾಮೀಣ ವಸತಿ ಯೋಜನೆಯಲ್ಲಿ ಮುಖ್ಯ ಯೋಜನೆಯಾದ ಬಸವ ವಸತಿ ಯೋಜನೆಯ ಬಗ್ಗೆ ಈ ಲೇಖನದಲ್ಲಿ ನೋಡೋಣ.

ಗ್ರಾಮೀಣ ಭಾಗದ ಜನರು ತಮ್ಮದೆ ಆದ ಮನೆ ನಿರ್ಮಿಸಿಕೊಳ್ಳಲು ಬಸವ ವಸತಿ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಯೋಜನೆಯಡಿಯಲ್ಲಿ ಸರ್ಕಾರದಿಂದ 1.30 ಲಕ್ಷ ರೂಪಾಯಿ ಸಬ್ಸಿಡಿ ಅಥವಾ ಸಹಾಯಧನ ಸಿಗುತ್ತದೆ. ಬಸವ ವಸತಿ ಯೋಜನೆ ಗ್ರಾಮೀಣ ಭಾಗದ ಜನರು ಅರ್ಜಿ ಸಲ್ಲಿಸಬಹುದು.

ಗ್ರಾಮೀಣ ಭಾಗದಲ್ಲಿ ಮನೆ ಕಟ್ಟಲು ಜಾಗವಿದ್ದು ಆರ್ಥಿಕ ಪರಿಸ್ಥಿತಿ ಸರಿ ಇಲ್ಲದೆ ಇರುವವರು ಹಾಗೂ ಹಳೆಯ ಮನೆಯಲ್ಲಿ ವಾಸ ಮಾಡುತ್ತಿರುವವರು ಹೊಸದಾಗಿ ಮನೆ ನಿರ್ಮಿಸಿಕೊಳ್ಳಲು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ರಾಜ್ಯ ಸರ್ಕಾರದಿಂದ ಯಾವುದೆ ವರ್ಗದವರಿಗೆ 1,20,000 ರೂಪಾಯಿಯನ್ನು ಸಿಗುತ್ತದೆ. ಅಭ್ಯರ್ಥಿಯು ಮೂವತ್ತು ಸಾವಿರ ರೂಪಾಯಿಯನ್ನು ವಂತಿಕೆ ರೂಪದಲ್ಲಿ ಸರ್ಕಾರಕ್ಕೆ ಕೊಡಬೇಕಾಗುತ್ತದೆ.

ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರು 30,000 ರೂಪಾಯಿಯನ್ನು ಸರ್ಕಾರಕ್ಕೆ ಭರಿಸಬೇಕಾಗಿಲ್ಲ. ಕೇಂದ್ರ ಸರ್ಕಾರವೆ ಅವರಿಗೆ ಉಚಿತವಾಗಿ ಹಣ ಕೊಡುತ್ತದೆ. ಬಸವ ವಸತಿ ಯೋಜನೆಗೆ ಅರ್ಜಿ ಸಲ್ಲಿಸಲು ಕೆಲವು ಅರ್ಹತೆಗಳು ಇರಬೇಕು. ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿರಬೇಕು, ನಿವೇಶನ ರಹಿತ, ವಸತಿರಹಿತ ಪಟ್ಟಿಯಲ್ಲಿ ಅಭ್ಯರ್ಥಿಯ ಹೆಸರಿರಬೇಕು. ಅಭ್ಯರ್ಥಿ ಆರ್ಥಿಕವಾಗಿ ಹಿಂದುಳಿದಿರಬೇಕು. ಜಾಗದ ಹಕ್ಕುಪತ್ರವನ್ನು ಹೆಂಡತಿಯ ಹೆಸರಿನಲ್ಲಿ ವಿತರಿಸಬೇಕು.

ಈ ಯೋಜನೆ ಅಡಿಯಲ್ಲಿ ಕನಿಷ್ಠ 250 ಚದರ ಅಡಿ ಗರಿಷ್ಠ 700 ಚದರ ಅಡಿ ಜಾಗದಲ್ಲಿ ಹೊಸ ಮನೆಯನ್ನು ನಿರ್ಮಾಣ ಮಾಡಿಕೊಳ್ಳಬಹುದು. ಹೊಸ ಮನೆಯನ್ನು ನಿರ್ಮಿಸಿ ಹತ್ತು ವರ್ಷಗಳವರೆಗೆ ಮನೆಯ ಒಡೆತನ ಸರ್ಕಾರಕ್ಕೆ ಇರುತ್ತದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಫಾರ್ಮ್ ಅನ್ನು ತುಂಬಬೇಕು, ಅಡಮಾನ ಪತ್ರ ಬರೆದು ಕೊಡಬೇಕು, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ವೋಟರ್ ಐಡಿ, ನಿವೇಶನದ ಖಾತಾ ಪತ್ರ, ಗ್ರಾಮ ಪಂಚಾಯತಿ ವತಿಯಿಂದ ಕಟ್ಟಡ ಲೈಸೆನ್ಸ್ ಬೇಕಾಗುತ್ತದೆ.

ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ ಐಟಿ ಪಾರ್ಕ್ ರಾಜಾಜಿನಗರ ಕೈಗಾರಿಕಾ ಪ್ರದೇಶ ರಾಜಾಜಿನಗರ ಬೆಂಗಳೂರು, ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ, ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ, ಗ್ರಾಮ ಪಂಚಾಯತಿ ಕಾರ್ಯದರ್ಶಿ ಅವರನ್ನು ಕಾಂಟಾಕ್ಟ್ ಮಾಡಿ ಅರ್ಜಿ ಫಾರ್ಮ್ ತೆಗೆದುಕೊಂಡು ಅರ್ಜಿ ಭರ್ತಿ ಮಾಡಿ ಬೇಕಾದ ದಾಖಲಾತಿಗಳನ್ನು ಸಲ್ಲಿಸಬೇಕು.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.