Ayurveda tips for Kadubasale: ಈಗಿನ ಕಾಲದಲ್ಲಿ ಎಲ್ಲರೂ ಕೂಡ ಹೆಲ್ತ್ ಬಗ್ಗೆ ಗಮನ ಕೊಡುತ್ತಿದ್ದಾರೆ. ಆರೋಗ್ಯ ಒಂದು ಚೆನ್ನಾಗಿದ್ದರೆ ಎಲ್ಲವೂ ಚೆನ್ನಾಗಿಯೇ ಇರುತ್ತದೆ. ಆದರೆ ಈಗ ಜೀವನಶೈಲಿ ಬದಲಾಗಿ, ಉತ್ತಮವಾದ ಆಹಾರ ಸೇವನೆ ಮಾಡದೆ ಬಿಪಿ, ಶುಗರ್, ಕೊಲೆಸ್ಟ್ರಾಲ್ ಈ ಎಲ್ಲಾ ಸಮಸ್ಯೆಗಳು ಶುರುವಾಗುತ್ತದೆ. ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳಲು ಶುರುವಾಗಿದೆ. ಇದರಿಂದ ಇನ್ನು ಆರೋಗ್ಯ ಸಮಸ್ಯೆ ಹೆಚ್ಚಾಗುತ್ತದೆ. ಈ ಸಮಸ್ಯೆಗಳಿಗೆ ಇಂದು ಒಂದು ಮನೆಮದ್ದಿನ ಬಗ್ಗೆ ತಿಳಿಸಿಕೊಡುತ್ತೇವೆ..

ಆಯುರ್ವೇದಕ್ಕೆ ಸಂಬಂಧಿಸಿದ ಹಾಗೆ ಈ ಒಂದು ಗಿಡಮೂಲಿಕೆಯನ್ನು ಬಳಸಿ, ಆರೋಗ್ಯವನ್ನು ಸರಿಪಡಿಸಿಕೊಳ್ಳಬಹುದು. ಈ ಗಿಡಮೂಲಿಕೆಯ ಹೆಸರು ಪಥಾರ್ಚಟ್ಟ, ಸಾಮಾನ್ಯವಾಗಿ ಇದನ್ನು ಕಾಡು ಬಸಳೆ ಎಂದು ಕೂಡ ಕರೆಯುತ್ತಾರೆ. ಈ ಗಿಡದ ಎಲೆಗಳು ಹೃದಯದ ಸಮಸ್ಯೆಗೆ ತುಂಬಾ ಒಳ್ಳೆಯದು. ಇದೊಂದೇ ಅಲ್ಲದೆ, ಇನ್ನು ಹಲವು ಆರೋಗ್ಯ ಸಮಸ್ಯೆಗಳಿಗೆ ಈ ಗಿಡವನ್ನು ಔಷಧಿಯಾಗಿ ಬಳಸಲಾಗುತ್ತದೆ. ಈ ಗಿಡದಿಂದ ಏನೆಲ್ಲಾ ಆರೋಗ್ಯಕ್ಕೆ ಪ್ರಯೋಜನ ಸಿಗುತ್ತದೆ ಎಂದು ತಿಳಿಸುತ್ತದೆ.

ಹೈಬಿಪಿ ಇರುವವರಿಗೆ ಪಥಾರ್ಚಟ್ಟ ತುಂಬಾ ಒಳ್ಳೆಯದು. ಈ ಸಸ್ಯದ ಬಳಕೆ ಇಂದ ನಿಮ್ಮ ದೇಹದಲ್ಲಿ ಮುಚ್ಚಿ ಹೋಗಿರುವ ರಕ್ತನಾಳಗಳು ತೆರೆಯುತ್ತದೆ, ಹಾಗೆಯೇ ರಕ್ತನಾಳಗಳ ವಾಲ್ ಗಳನ್ನು ಕೂಡ ವಿಸ್ತರಿಸುತ್ತದೆ. ಈ ರೀತಿಯಾಗಿ ರಕ್ತನಾಳಗಳು ಆರೋಗ್ಯವಾಗಿ ಇರುವ ಹಾಗೆ ನೋಡಿಕೊಳ್ಳುತ್ತದೆ. ಇದರಿಂದಾಗಿ ರಕ್ತದ ಪರಿಚಲನೆ ಉತ್ತಮವಾಗುತ್ತದೆ, ಹಾಗೆಯೇ ಹೃದಯಕ್ಕೆ ಸ್ಟ್ರೆಸ್ ಆಗುವುದಿಲ್ಲ. ಬಿಪಿ ಇರುವವರಿಗೆ ಕೂಡ ಒಳ್ಳೆಯದು, ಬಿಪಿ ಕಂಟ್ರೋಲ್ ಮಾಡುತ್ತದೆ. ದೊಡ್ಡ ದೊಡ್ಡ ರೋಗಗಳನ್ನು ಕೂಡ ಗುಣಪಡಿಸುತ್ತದೆ.

Ayurveda tips for Kadubasale

ಹಾಗೆಯೇ ಇದು ಕೊಲೆಸ್ಟ್ರಾಲ್ ಅನ್ನು ಕೂಡ ಕಡಿಮೆ ಮಾಡುತ್ತದೆ. ಹಾಗೆಯೇ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗೆಯೇ ದೇಶದಲ್ಲಿ ಶಾಕ್ ಉತ್ಪಾದಿಸುತ್ತದೆ. ಹೃದಯದಲ್ಲಿ ಸಂಗ್ರಹವಾಗಿರುವ ಅಧಿಕ ಕೊಲೆಸ್ಟ್ರಾಲ್ ಹಾಗೂ ಫ್ಯಾಟ್ ಅಂಶವನ್ನು ಕರಗುವ ಹಾಗೆ ಮಾಡುತ್ತದೆ. ರಕ್ತ ಪರಿಚಲನೆ ಚೆನ್ನಾಗಿ ನಡೆಯುವ ಹಾಗೆ ಮಾಡುತ್ತದೆ, ಹಾಗೆಯೇ ಹೈಬಿಪಿಯನ್ನು ಕಂಟ್ರೋಲ್ ಮಾಡುತ್ತದೆ.. ಹೃದಯದ ಸಮಸ್ಯೆಗಳಿಂದ ರಕ್ಷಣೆ ಕೊಡುತ್ತದೆ.

ಬಿಪಿ ಇರುವವರು ಈ ಕಾಡು ಬಸಳೆ ಸೊಪ್ಪಿನಿಂದ ಜ್ಯುಸ್ ತಯಾರಿಸಿ ಸೇವಿಸಿ, ಒಂದು ವಾರಕ್ಕೆ ಎರಡು ಸಾರಿ ಸೇವಿಸಿ, ಇದರಿಂದ ಬಿಪಿ ಕಂಟ್ರೋಲ್ ಆಗುತ್ತದೆ. ಈ ಜ್ಯುಸ್ ತಯಾರಿಸುವುದು ಹೇಗೆ ಎಂದು ನೋಡುವುದಾದರೆ, 1 ಕಪ್ ನೀರು ತೆಗೆದುಕೊಂಡು, ಅದಕ್ಕೆ ಕಾಡು ಬಸಳೆ ಸೊಪ್ಪು ಸೇರಿಸಿ. ಈ ಎರಡನ್ನು ಸೇರಿಸಿ, ಅದನ್ನು ಚೆನ್ನಾಗಿ ಕುದಿಸಿ, ನಂತರ ಕಡಿಮೆ ಉರಿಯಲ್ಲಿ ಗಾಢವಾಗಿ ಬೇಯಿಸಿ. ಬಳಿಕ ತಣ್ಣಗೆ ಆಗಲು ಬಿಡಿ. ನಿಮ್ಮ ದೇಹವನ್ನು ಉತ್ತಮವಾಗಿಸಿ ಜೊತೆಗೆ ಹೃದಯಕ್ಕೆ ಸಂಬಂಧಪಟ್ಟ ಆರೋಗ್ಯ ಸಮಸ್ಯೆಗಳಿಂದ ನಿಮಗೆ ರಕ್ಷಣೆ ಸಿಗುತ್ತದೆ.

By AS Naik

Leave a Reply

Your email address will not be published. Required fields are marked *