ಸಿಂಹ ರಾಶಿಯವರಿಗೆ ಧನುರ್ಮಾಸದಲ್ಲಿ ಒಳ್ಳೆಯದಾಗುತ್ತಾ? ಈ ತಿಂಗಳು ಹೇಗಿರಲಿದೆ ನೋಡಿ

0 0

ಪ್ರತಿಯೊಂದು ರಾಶಿಯೂ ತನ್ನದೇ ಆದ ಮಹತ್ವ ಹೊಂದಿದೆ. ಒಂದೊಂದು ರಾಶಿಗೆ ಕೆಲವು ಸಮಯದಲ್ಲಿ ಒಳ್ಳೆಯದಾಗುತ್ತದೆ ಅದೇ ರೀತಿ ಸಿಂಹ ರಾಶಿಗೆ ಧನುರ್ಮಾಸದಲ್ಲಿ ಯಾವ ರೀತಿಯಲ್ಲಿ ಒಳ್ಳೆಯದಾಗುತ್ತದೆ ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಸಿಂಹ ರಾಶಿಯವರಿಗೆ ಧನುರ್ಮಾಸದಲ್ಲಿ ಒಳ್ಳೆಯದಾಗುತ್ತದೆ. ಸಿಂಹ ರಾಶಿಯ ರಾಶ್ಯಾಧಿಪತಿ ರವಿ, ಡಿಸೆಂಬರ್ 16 ಕ್ಕೆ ರವಿ ಧನುರಾಶಿಗೆ ಬರುತ್ತಾನೆ ಇದನ್ನು ಧನುರ್ ಸಂಕ್ರಮಣ ಎಂದು ಕರೆಯುತ್ತಾರೆ. ಈ ತಿಂಗಳಿನಲ್ಲಿ ಸಿಂಹ ರಾಶಿಯವರಿಗೆ ಬಹಳ ಮಹತ್ವ ಕೊಡುತ್ತಾರೆ ಪ್ರಾಮುಖ್ಯತೆ ವೃದ್ಧಿಯಾಗುತ್ತದೆ. ಸಿಂಹ ರಾಶಿಯವರಿಗೆ ಆರ್ಥಿಕ ಲಾಭ ಆಗುತ್ತದೆ. ಸಿಂಹ ರಾಶಿಯವರು ಯಾವ ಕೆಲಸ ಮಾಡಿದರು ಈ ತಿಂಗಳಿನಲ್ಲಿ ಯಶಸ್ಸು ಪಡೆಯಬಹುದು ಆದರೆ ಸ್ವಲ್ಪ ತೊಂದರೆಗಳಾಗುತ್ತದೆ ಅದಕ್ಕೆ ಪರಿಹಾರವಾಗಿ ಸಿಂಹ ರಾಶಿಯವರ ವಯಕ್ತಿಕ ಜಾತಕದಲ್ಲಿ ರವಿ ಗ್ರಹ ಉತ್ತಮ ಸ್ಥಾನದಲ್ಲಿದ್ದರೆ ವರ್ತುಲಾಕಾರದ ಮಂಡಲದ ಮಾಣಿಕ್ಯವನ್ನು ಧಾರಣೆ ಮಾಡಬೇಕು ಆದರೆ ಇದು ಕಾಸ್ಟ್ಲಿ ಆಗುತ್ತದೆ ಅಥವಾ ಅಮಾವಾಸ್ಯೆ ದಿನ ಹೋಮ ಮಾಡಿ ಕೃಷ್ಣವೀಟಿಕ ರತ್ನ ಧಾರಣೆ ಮಾಡುವುದರಿಂದ ನೆಗೆಟಿವ್ ಎನರ್ಜಿ ನಾಶವಾಗುತ್ತದೆ. ಸಿಂಹ ರಾಶಿಯವರ ಮಕ್ಕಳ ವಿಷಯದಲ್ಲಿ ಸಮಸ್ಯೆಯಾಗಿರುತ್ತದೆ ಅದು ಈ ತಿಂಗಳಿನಲ್ಲಿ ನಿವಾರಣೆಯಾಗುತ್ತದೆ. ಸಿಂಹ ರಾಶಿಯವರು ರವಿಯ ಆರಾಧನೆ ಮಾಡುವುದು, ಗೋಧಿ ದಾನ ಮಾಡುವುದು ಒಳ್ಳೆಯದು. ಈ ತಿಂಗಳಿನಲ್ಲಿ ಹೆಚ್ಚು ರವಿಯ ಸ್ತೋತ್ರ ಮಾಡುವುದು ಒಳ್ಳೆಯದು.

ಈ ರಾಶಿಯವರು ರಾಜಕೀಯದಲ್ಲಿದ್ದರೆ ಅಥವಾ ಉದ್ಯೋಗದಲ್ಲಿ ಪ್ರಮೋಷನ್ ಸಿಗುವ ಸಾಧ್ಯತೆಗಳಿವೆ ಆದರೆ ಸಣ್ಣ ಪ್ರಮಾಣದ ಸಮಸ್ಯೆಗಳು ಬರಬಹುದು. ಧನುರ್ಮಾಸದ ಮಧ್ಯದಲ್ಲಿ ಉದ್ಯೋಗ ವಿಷಯದಲ್ಲಿ ಒಳ್ಳೆಯದಾಗುತ್ತದೆ. ಸಿಂಹ ರಾಶಿಯವರು ಈ ತಿಂಗಳಿನಲ್ಲಿ ಸಾಲ ಕೊಡಬಾರದು. ಡಿಸೆಂಬರ್ ತಿಂಗಳಿನ ಶುರುವಿನಲ್ಲಿ ಕಿರಿಕಿರಿ ಆಗುತ್ತದೆ ನಂತರದ ದಿನಗಳಲ್ಲಿ ಒಳ್ಳೆಯದಾಗುತ್ತದೆ. ಸಿಂಹ ರಾಶಿಯವರು ಈ ತಿಂಗಳು ಹೆಚ್ಚು ಹಣವನ್ನು ಇನ್ವೆಸ್ಟ್ ಮಾಡಬಾರದು. ಧನುರ್ಮಾಸ ಎಲ್ಲರಿಗೂ ಒಳ್ಳೆಯದೇ ಅದರಲ್ಲೂ ಸಿಂಹ ರಾಶಿಯವರಿಗೆ ಹೆಚ್ಚಿನ ರೀತಿಯಲ್ಲಿ ಒಳ್ಳೆಯದು. ಆದ್ದರಿಂದ ಈ ರಾಶಿಯವರು ತಪ್ಪದೇ ಈ ತಿಂಗಳಿನಲ್ಲಿ ರವಿ ಆರಾಧನೆ ಮಾಡುವುದರಿಂದ ಅವರ ಜೀವನ ಸುಗಮವಾಗಿ ನಡೆಯುತ್ತದೆ. ಈ ಮಾಹಿತಿಯನ್ನು ತಪ್ಪದೇ ಸಿಂಹ ರಾಶಿಯವರಿಗೆ ತಿಳಿಸಿ.

Leave A Reply

Your email address will not be published.