ಬಾಯಿ ದುರ್ವಾಸನೆ ಸಾಮಾನ್ಯಾವಾಗಿ ಎಲ್ಲರಲ್ಲೂ ಕಂಡುಬರುತ್ತದೆ. ಆದರೂ ಕೆಲವರಲ್ಲಿ ಕಂಡು ಬರುವುದಿಲ್ಲ. ನಮ್ಮ ದೇಹದಲ್ಲಿ ಅನಾರೋಗ್ಯ ಅಥವಾ ನಿದ್ರಾಹೀನತೆಯಿಂದ ಸಹ ಬಾಯಿಯ ದುರ್ವಾಸನೆ ಕಂಡು ಬರಬಹುದು. ಬಾಯಿಯ ಸ್ಥಿತಿಯನ್ನು ನೋಡಿಯೇ ನಮ್ಮ ಆರೋಗ್ಯದ ಸಮಸ್ಯೆಯನ್ನು ವೈದ್ಯರು ಹೇಳುತ್ತಾರೆ. ಆದ್ದರಿಂದ ನಾವು ಇಲ್ಲಿ ಬಾಯಿ ದುರ್ವಾಸನೆಯನೆಯ ಪರಿಹಾರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಕೆಲವರಿಗೆ ತಾವು ಮಾತನಾಡುವಾಗ ಬಾಯಿಯಿಂದ ದುರ್ವಾಸನೆ ಬರುವುದು ತಿಳಿದಿರುವುದಿಲ್ಲ. ಅವರ ಎದುರುಗಡೆ ಇರುವವರಿಗೆ ತಿಯುತ್ತದೆ. ಆದರೆ ಅವರಿಗೆ ಹೇಳಲು ಮುಜುಗರವಾಗುತ್ತದೆ. ಎಲ್ಲಾದರೂ ಬೇಸರ ಮಾಡಿಕೊಂಡರೆ ಎಂದು ಹೇಳುವದಿಲ್ಲ.ಇದಕ್ಕೆ ಪರಿಹಾರವನ್ನು ಮಾಡಿಕೊಳ್ಳಬೇಕು. ಇದಕ್ಕೆ ಪರಿಹಾರವೆಂದರೆ ದಿನಕ್ಕೆ ಎರಡು ಬಾರಿ ಹಲ್ಲು ಉಜ್ಜಬೇಕು. ಆಹಾರ ಸೇವನೆಯ ನಂತರ ಪ್ರತಿ ಬಾರಿಯೂ ಬಾಯಿಯನ್ನು ಮುಕ್ಕಳಿಸುವ ಅಭ್ಯಾಸವನ್ನು ಇಟ್ಟುಕೊಳ್ಳಬೇಕು. ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ಉಪ್ಪು ಬೆರೆಸಿ ಬಾಯಿಮುಕ್ಕಳಿಸಬೇಕು.

ಔಷಧ ಅಂಗಡಿಗಳಲ್ಲಿ ಸಿಗುವ ಬಾಯಿ ಸ್ವಚ್ಚ ಮಾಡುವ ಔಷಧ ಬಳಸಬಹುದು. ಹಾಗೆಯೇ ಸೂರ್ಯಕಾಂತಿ ಬೀಜವನ್ನು ಸಹ ಉಪಯೋಗಿಸುತ್ತಾರೆ. ಸೂರ್ಯಕಾಂತಿ ಬೀಜವನ್ನು ಅಗೆದು ನೀರು ಕುಡಿದರೆ ಬಾಯಿಯ ವಾಸನೆ ಹೋಗಲಾಡಿಸಲು ಸಾಧ್ಯವಿದೆ. ದಿನಕ್ಕೊಂದು ಸೇಬುಹಣ್ಣನ್ನು ಸೇವಿಸುವದರಿಂದ ಬಾಯಿಯಲ್ಲಿರುವ ಬ್ಯಾಕ್ಟೀರಿಯಾ ನಾಶವಾಗುತ್ತದೆ. ಇದರಿಂದಲೂ ಸಹ ಬಾಯಿಯ ದುರ್ಗಂಧ ನಾಶವಾಗುತ್ತದೆ. ಹಾಗೆಯೇ ನಿಂಬೆರಸವನ್ನು ಬಿಸಿನೀರಿನ ಜೊತೆ ಹಾಕಿ ಸೇವನೆ ಮಾಡುವುದರಿಂದ ಬಾಯಿಯ ದುರ್ವಾಸನೆ ದೂರವಾಗುತ್ತದೆ.ಎಲ್ಲರಿಗೂ ತಿಳಿದ ಹಾಗೆಯೇ ಏಲಕ್ಕಿ ಬೀಜವನ್ನು ಅಗೆಯುತ್ತ ಇದ್ದರೆ ಬಾಯಿಯ ದೂರವಾಸನೆ ಹೋಗುತ್ತದೆ.

ಹಾಗೆಯೇ ಸಕ್ಕರೆ ಪ್ರಮಾಣ ಕಡಿಮೆ ಇರುವ ಚಿಂಗಮ್ ಅಗೆಯುವದರಿಂದ ಬಾಯಿಯಲ್ಲಿ ಎಂಜಲ ಪ್ರಮಾಣ ಜಾಸ್ತಿ ಆಗುತ್ತದೆ. ಇದರಿಂದಲೂ ಸಹ ಬಾಯಿಯ ದುರ್ವಾಸನೆ ಹೋಗಲಾಡಿಸಬಹುದು. ಧೂಮಪಾನ ಮತ್ತು ಮದ್ಯಪಾನ ಯಾವುದೇ ದುಶ್ಚಟಗಳಿದ್ದರೆ ಅವುಗಳಿಂದ ತಕ್ಷಣವೇ ದೂರವಾದರೆ ಬಾಯಿಯ ದುರ್ವಾಸನೆ ಹೋಗಲಾಡಿಸಿಕೊಳ್ಳಬಹುದು. ಇಷ್ಟೆಲ್ಲ ಮಾಡಿದರು ಸಹ ಬಾಯಿಯ ದುರ್ವಾಸನೆ ಹೋಗದಿದ್ದರೆ ವೈದ್ಯರನ್ನು ಭೇಟಿಮಾಡಿ ಸಲಹೆಗಳನ್ನು ಪಡೆದುಕೊಳ್ಳಬೇಕು. ನಮ್ಮದೇಹಕ್ಕೆ ಯಾವುದೇ ಅಡ್ಡ ಪರಿಣಾಮ ಬೀರದಂತೆ ನೋಡಿಕೊಳ್ಳುವದು ನಮ್ಮ ಹೊಣೆಯಾಗಿರುತ್ತದೆ.

Leave a Reply

Your email address will not be published. Required fields are marked *