ಪ್ರತಿಯೊಂದು ಹಣ್ಣುಗಳು ಅದರದೇ ಆದ ವಿಟಮಿನ್ ಗಳು ಮತ್ತು ಪೋಷಕಾಂಶಗಳನ್ನು ಹೊಂದಿರುತ್ತವೆ. ಹಣ್ಣುಗಳಲ್ಲಿ ಹಲಸಿನಹಣ್ಣು ಕೂಡ ಒಂದು. ಇದು ಒಂದು ಸೀಸನ್ ನಲ್ಲಿ ಮಾತ್ರ ಸಿಗುತ್ತದೆ. ಹಾಗಾಗಿ ಆ ಸಮಯದಲ್ಲಿ ತಾಜಾ ತಿಂದರೆ ಒಳ್ಳೆಯದು. ಅದನ್ನು ಸೋಸಿ ಪ್ಯಾಕ್ ಮಾಡಿ ಸೇಲ್ ಮಾಡುತ್ತಾರೆ. ಇದನ್ನು ಒಂದು ವರ್ಷದ ತನಕ ಇಡುತ್ತಾರೆ. ಆದರೆ ಇದಕ್ಕಿಂತ ಸೀಸನ್ ನಲ್ಲಿ ತಿಂದರೆ ಬಹಳ ಒಳ್ಳೆಯದು. ಆದ್ದರಿಂದ ನಾವು ಇಲ್ಲಿ ಹಲಸಿನ ಹಣ್ಣಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಕೆಲವು ಹಣ್ಣುಗಳು ಆಯಾ ಸೀಸನ್ ನಲ್ಲಿ ಮಾತ್ರ ಸಿಗುತ್ತದೆ. ಅವುಗಳಿಗೆ ಉದಾಹರಣೆ ಎಂದರೆ ಗೇರುಹಣ್ಣು, ನೇರಳೆಹಣ್ಣು ಇನ್ನೂ ಹಲವಾರು ಹಣ್ಣುಗಳಿವೆ. ಹಾಗೆಯೇ ಅವುಗಳಲ್ಲಿ ಹಲಸಿನ ಹಣ್ಣು ಕೂಡ ಒಂದು. ಪ್ರತಿಯೊಂದು ಹಣ್ಣುಗಳನ್ನು ಸೇವನೆ ಮಾಡುವುದರಿಂದ ಆ ಹಣ್ಣಿನ ಸತ್ವಗಳು ದೇಹಕ್ಕೆ ಸಿಗುತ್ತವೆ. ಹಲಸಿನ ಹಣ್ಣನ್ನು ತಿನ್ನುವುದರಿಂದ ಅದರಲ್ಲಿರುವ ಪೋಷಕಾಂಶಗಳು ದೊರೆಯುತ್ತವೆ. ಹಾಗೆಯೇ ಹಲಸಿನ ಹಣ್ಣಿನಿಂದ ಹಲವಾರು ಪ್ರಯೋಜನಗಳು ಇವೆ. ಇದು ಹೃದಯ ಸಂಬಂಧಿ ಕಾಯಿಲೆಗಳನ್ನು ದೂರ ಮಾಡುತ್ತದೆ.

ಹಲಸಿನ ಕಾಯಿಯನ್ನು ಕೊರೆದು ಅದನ್ನು ಸೋಸಿ ಅದನ್ನು ಪದಾರ್ಥಗಳನ್ನು ಮಾಡುತ್ತಾರೆ. ಇದರಿಂದ ದೇಹದಲ್ಲಿ ಇರುವ ಪಿತ್ತ ಶಮನ ಆಗುತ್ತದೆ. ಇದರಲ್ಲಿ ಫೈಬರ್ ಹೆಚ್ಚು ಇರುತ್ತದೆ. ಹಾಗಾಗಿ ರಕ್ತ ಹೀನತೆ ಮತ್ತು ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ. ಇದರಿಂದ ದೇಹಕ್ಕೆ ಶಕ್ತಿ ಸಿಗುತ್ತದೆ. ಹಾಗೆಯೇ ಹಲಸಿನ ಕಾಯಿಯ ಪದಾರ್ಥಗಳು ಬಹಳ ರುಚಿಯಾಗಿರುತ್ತವೆ. ಹಾಗೆಯೇ ಹಲಸಿನಹಣ್ಣನ್ನು ಇಷ್ಟ ಪಡದವರು ಬಹಳ ಕಡಿಮೆ. ಹೆಚ್ಚಾಗಿ ಎಲ್ಲರೂ ಇದನ್ನು ಇಷ್ಟಪಡುತ್ತಾರೆ. ಹಲಸಿನ ಹಣ್ಣನ್ನು ಹಾಗೆಯೇ ತಿಂದರೆ ಒಂದು ರುಚಿ ಇರುತ್ತದೆ.

ಹಾಗೆಯೇ ಅದಕ್ಕೆ ಜೇನುತುಪ್ಪ ಹಾಗೂ ಸಕ್ಕರೆ ಸೇರಿಸಿ ತಿನ್ನಬೇಕು. ಇದರಿಂದ ದೇಹಕ್ಕೆ ಶಕ್ತಿ ಮತ್ತು ಪುಷ್ಟಿ ದೊರೆಯುತ್ತದೆ. ಇದರ ಬೀಜದಿಂದ ಅನೇಕ ರುಚಿಕರ ಖಾದ್ಯವನ್ನು ತಯಾರಿಸಬಹುದು. ಇದರಲ್ಲಿ ವಿಟಮಿನ್ ಎ ಮತ್ತು ಸಿ ಇರುವುದರಿಂದ ಮುಖದಲ್ಲಿ ನೆರಿಗೆಗಳು ಕಡಿಮೆ ಆಗುತ್ತದೆ. ಇದರಲ್ಲಿ ಕಾರ್ಬೋಹೈಡ್ರೇಟ್ ಮತ್ತು ಕ್ಯಾಲೋರಿ ಇದೆ. ಇದರಿಂದ ಅಸ್ತಮಾ, ನಿಶ್ಯಕ್ತಿ ಮತ್ತು ಕ್ಯಾನ್ಸರ್ ವಿರುದ್ಧ ಹೋರಾಡುವಲ್ಲಿ ಇದು ಸಹಕಾರಿ. ಕೊನೆಯದಾಗಿ ಹೇಳುವುದೇನೆಂದರೆ ಹಲಸಿನ ಹಣ್ಣನ್ನು ತಿಂದು ಇದರ ಪ್ರಯೋಜನ ಪಡೆದುಕೊಳ್ಳಿ.

Leave a Reply

Your email address will not be published. Required fields are marked *