ನಿಮ್ಮ ಜಾತಕದಲ್ಲಿ ರಾಜಯೋಗ ಇದ್ದರೆ ಏನು ಫಲ ತಿಳಿದುಕೊಳ್ಳಿ

0 7

ನಮ್ಮ ಭಾರತ ದೇಶದಲ್ಲಿ ಅದರಲ್ಲಿಯೂ ಹಿಂದೂ ಸಂಪ್ರದಾಯದಲ್ಲಿ ರಾಶಿ ನಕ್ಷತ್ರ ಭವಿಷ್ಯ ಜಾತಕ ಇವುಗಳ ಕುರಿತಾಗಿ ಅಪಾರವಾದ ನಂಬಿಕೆ ಇದೆ ಜಾತಕದ ಆಧಾರದ ಮೇಲೆ ಒಬ್ಬ ಮನುಷ್ಯನ ಜೀವನ ಯಾವ ರೀತಿಯಾಗಿ ಇರುತ್ತದೆ ಎಂಬುದನ್ನು ನಿರ್ಧರಿಸಲಾಗುತ್ತದೆ. ನಾವಿಂದು ಜಾತಕದಲ್ಲಿ ಲಗ್ನದಲ್ಲಿ ಆರನೇ ಮನೆ ಎಂಟನೇ ಮನೆ ಮತ್ತು ಹನ್ನೆರಡನೇ ಮನೆ ಇವುಗಳು ಯಾವ ರೀತಿಯಾದಂತಹ ಫಲವನ್ನು ಕೊಡುತ್ತವೆ ಎನ್ನುವುದರ ಕುರಿತಾದ ಮಾಹಿತಿಯನ್ನು ತಿಳಿದುಕೊಳ್ಳೋಣ.

ಜಾತಕದಲ್ಲಿನ ಈ ಮನೆಗಳು ಆ ಜಾತಕದ ವ್ಯಕ್ತಿಯನ್ನು ಕೆಲವೊಮ್ಮೆ ಕೆಳಗೆ ಬೀಳಿಸುತ್ತವೆ ಇನ್ನೊಮ್ಮೆ ಮೇಲಕ್ಕು ಎತ್ತುತ್ತವೆ. ಆರನೇಯ ಎಂಟನೆಯ ಮತ್ತು ಹನ್ನೆರಡನೇ ಮನೆಗಳನ್ನು ದುಸ್ಥಾನಗಳು ಎಂದು ಕರೆಯುತ್ತಾರೆ ಈ ಮನೆಗಳನ್ನು ನೋಡಿದರೆ ಭಯ ಬಿಳುತ್ತಾರೆ ಅವು ಕೆಟ್ಟದ್ದನ್ನು ಉಂಟು ಮಾಡುತ್ತವೆ ಎಂದು. ಆದರೆ ಅವುಗಳು ಒಳ್ಳೆಯದನ್ನು ಕೂಡ ಮಾಡುತ್ತವೆ ಹಾಗಾಗಿ ನಿಮ್ಮ ಗೃಹ ಗತಿಗಳು ದುಸ್ಥಾನದಲ್ಲಿ ಕುಳಿತುಕೊಂಡರು ಕೂಡ ಕೆಲವೊಮ್ಮೆ ಒಳ್ಳೆಯದನ್ನೇ ಉಂಟು ಮಾಡುತ್ತವೆ.

ಆರನೇ ಮನೆಯ ಅಧಿಪತಿ ಆರರಲ್ಲಿ ಇದ್ದರೆ ಮತ್ತು ಎಂಟನೇ ಮನೆಯ ಅಧಿಪತಿ ಎಂಟರಲ್ಲಿ ಇತ್ತು ಎಂದರೆ ಹನ್ನೆರಡನೇ ಮನೆಯ ಅಧಿಪತಿ ಹನ್ನೆರಡನೇ ಮನೆಯಲ್ಲಿ ಇದ್ದರೆ ಇದು ವಿಪರೀತ ರಾಜಯೋಗ ವಾಗಿರುತ್ತದೆ ಆರು ಮತ್ತು ಹನ್ನೆರಡು ಹೊರತುಪಡಿಸಿ ಎಂಟನೇ ಅಧಿಪತಿ ಎಂಟನೇ ಮನೆಯಲ್ಲಿ ಒಳ್ಳೆಯ ಗ್ರಹವಾಗಿದ್ದರೆ ನಿಮಗೆ ವಿಪರೀತ ವಾದಂತಹ ಧನಲಾಭವಾಗುತ್ತದೆ. ಎಂಟನೇ ಮನೆಯನ್ನು ಸಾಧನೆ ಮನೆಯೆಂದು ಕರೆಯಲಾಗುತ್ತದೆ ಎಂಟನೇ ಮನೆಯಲ್ಲಿ ಶನಿ ಬಂದು ಕುಳಿತುಕೊಂಡರೆ ಆ ವ್ಯಕ್ತಿಗೆ ತುಂಬಾ ಯಶಸ್ಸು ಸಿಗುತ್ತದೆ ಹೊಸ ಹೊಸ ವಿಷಯಗಳನ್ನು ಕಂಡುಹಿಡಿಯುವುದಕ್ಕೆ ಸಾಧ್ಯವಾಗುತ್ತದೆ. ಜೀವನದಲ್ಲಿ ಕೆಲವೇ ಕ್ಷಣಗಳಲ್ಲಿ ಹಣವನ್ನು ಮಾಡಬೇಕು, ಅವರಿಗೆ ಗೊತ್ತಿಲ್ಲದ ರೀತಿಯಲ್ಲಿ ಹಣ ಬರುತ್ತಿದ್ದರೆ ಅದಕ್ಕೆ ಎಂಟನೇ ಮನೆಯಲ್ಲಿ ಎಂಟನೇ ಅಧಿಪತಿ ಇರಬೇಕು.

ಆರು ಮತ್ತು ಹನ್ನೆರಡನೇ ಮನೆ ಎಂಟನೇ ಮನೆಗೆ ಹೋಲಿಸಿದರೆ ಸ್ವಲ್ಪ ಬದಲಾಗಿರುತ್ತವೆ. ಆರನೇ ಮನೆಯನ್ನು ಕಾಯಿಲೆ ಸ್ಥಾನ ಎಂದು ಕರೆಯಲಾಗುತ್ತದೆ ಇದು ರೋಗಗ್ರಸ್ತವಾಗಿರುತ್ತದೆ ಆರನೇ ಮನೆಯ ಅಧಿಪತಿ ಆರನೇ ಮನೆಯಲ್ಲಿಯೇ ಕುಳಿತುಕೊಂಡರೆ ಅಲ್ಲಿ ಶುಭಗ್ರಹಗಳಾದ ಗುರು ಶುಕ್ರ ಅಥವಾ ಬುಧ ಕುಳಿತುಕೊಂಡರೆ ಔಷಧೀಯ ಕ್ಷೇತ್ರದಲ್ಲಿ ಔಷಧಗಳನ್ನು ಕಂಡುಹಿಡಿಯುವವರು ಯಶಸ್ಸನ್ನ ಸಾಧಿಸುತ್ತಾರೆ.

ಮುಂದಿನದಾಗಿ ಹನ್ನೆರಡನೇ ಮನೆ ಇದು ಆಸ್ಪತ್ರೆಗೆ ಸಂಬಂಧಪಟ್ಟಿರುವಂತಹ ವಿದೇಶಕ್ಕೆ ಸಂಬಂಧಪಟ್ಟಿರುವಂತಹ ಮನೆ ಯಾರು ಯಾರು ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಾರೆ ದೇವಸ್ಥಾನದ ಪುರೋಹಿತರಾಗಿರುತ್ತಾರೆ ಅವರಿಗೆ ಹನ್ನೆರಡನೇ ಮನೆ ಮುಖ್ಯವಾಗಿರುತ್ತದೆ. ಹನ್ನೆರಡನೇ ಮನೆಯ ಅಧಿಪತಿ ಹನ್ನೆರಡನೇ ಮನೆಯಲ್ಲಿಯೇ ಕುಳಿತುಕೊಂಡರೆ ಅದರಿಂದಲೂ ಕೂಡ ವಿಪರೀತವಾದಂತಹ ರಾಜಯೋಗ ದೊರೆಯುತ್ತದೆ.

ಶಾಸ್ತ್ರದ ಪ್ರಕಾರ ರಾಜಯೋಗ ಎಂದರೆ ಒಂದು ಸ್ವಂತ ವಾಹನ ಒಂದು ಸ್ವಂತ ಮನೆ ಹೊಟ್ಟೆ ತುಂಬಾ ಊಟ ದೊರೆಯುವಂಥದ್ದು. ಅಂದರೆ ಒಬ್ಬ ಮನುಷ್ಯನ ಜೀವನದ ಅವಶ್ಯಕತೆಗೆ ಏನೇನು ಬೇಕು ಅದನ್ನು ಒದಗಿಸುವುದು ರಾಜಯೋಗ. ಒಬ್ಬ ವ್ಯಕ್ತಿಯನ್ನು ಇದ್ದಕ್ಕಿದ್ದಹಾಗೆ ಕಷ್ಟಪಡದಂತೆ ಕೋಟ್ಯಾಧಿಪತಿಯನ್ನಾಗಿ ಮಾಡುವುದು ರಾಜಯೋಗ ಅಲ್ಲ. ಯಾರು ಜೀವನದಲ್ಲಿ ತೊಂದರೆ ಇದ್ದರೂ ಅದನ್ನು ಸ್ವೀಕರಿಸಿ ತಮ್ಮ ಕೆಲಸವನ್ನು ಮಾಡುತ್ತಾರೆ ಅಂತವರಿಗೆ ಭಗವಂತ ಅವರ ಜೀವನದಲ್ಲಿ ಉತ್ತಮ ತಿರುವನ್ನು ತಂದುಕೊಡುತ್ತಾನೆ ಮನಸ್ಸು ಶುದ್ಧವಾಗಿರುವಂತಹ ಕಡೆ ಭಗವಂತ ನೆಲೆಸುತ್ತಾನೆ. ಈ ರೀತಿಯಾಗಿ ಜಾತಕದಲ್ಲಿ ಆರನೇ ಮನೆ ಎಂಟನೇ ಮತ್ತು ಹನ್ನೆರಡನೇ ಮನೆಯಲ್ಲಿ ಆ ಮನೆಯ ಅಧಿಪತಿಗಳು ಆ ಮನೆಯಲ್ಲಿದ್ದರೆ ಯಾವ ರೀತಿಯ ಫಲವುಂಟಾಗುತ್ತದೆ ಎಂಬುದರ ಕುರಿತಾದ ಮಾಹಿತಿ ಇದಾಗಿದೆ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರೊಂದಿಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರೊಂದಿಗೆ ಹಂಚಿಕೊಳ್ಳಿರಿ.

Leave A Reply

Your email address will not be published.