ಸಿನಿಮಾದ ರೂಪವೇ ಇತ್ತೀಚಿನ ದಿನಗಳಲ್ಲಿ ಬದಲಾಗಿ ಹೋಗುತ್ತಿದೆ ಹಿಂದೆ ಸಿನಿಮಾಗಳಲ್ಲಿ ಇದ್ದಂತಹ ಕಥೆಯಾಗಿರಬಹುದು ಅಥವಾ ಸಿನಿಮಾದ ಶೈಲಿ ಆಗಿರಬಹುದು ಅದು ಎಷ್ಟೋ ಜನರಿಗೆ ಮಾದರಿಯಾಗಿ ಇರುತ್ತಿತ್ತು ಸಿನಿಮಾಗಳನ್ನು ನೋಡಿ ತಮ್ಮ ಜೀವನವನ್ನು ಬದಲಿಸಿಕೊಂಡಂತಹ ಅದೆಷ್ಟೋ ಉದಾಹರಣೆಗಳಿವೆ ಆದರೆ ಈಗ ಸಿನಿಮಾದ ವ್ಯಾಖ್ಯಾನವೇ ಬದಲಾಗಿ ಬಿಟ್ಟಿದೆ ಅದರಲ್ಲಿಯೂ ಕೂಡ ನಟಿಯರನ್ನ ಯಾವ ರೀತಿಯಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ

ಕೇವಲ ಐಟಂ ಸಾಂಗ್ ಗ್ಲಾಮರಸ್ ಗಾಗಿ ಅವರ ದೇಹವನ್ನು ಪ್ರದರ್ಶನ ಮಾಡುವುದಕ್ಕೆ ಬರಿ ಅಷ್ಟಕ್ಕೆ ಹೀರೋಯಿನ್ ಗಳು ಸೀಮಿತವಾಗಿ ಬಿಟ್ಟಿದ್ದಾರೆ ಆದರೆ ಒಂದಷ್ಟು ಹೀರೋಯಿನ್ ಗಳು ಮಾತ್ರ ತಮಗೆ ಪಾತ್ರದಲ್ಲಿ ಪ್ರಾಮುಖ್ಯತೆ ಇದ್ದರೆ ಮಾತ್ರ ಅಭಿನಯಿಸುವುದು ಎಂದು ಪಟ್ಟನ್ನು ಹಿಡಿದು ಕುಳಿತಿದ್ದಾರೆ ಸಿನಿಮಾದಲ್ಲಿ ದೇಹವನ್ನ ಪ್ರದರ್ಶನ ಮಾಡುವುದಿಲ್ಲ ಬದಲಾಗಿ ನೀವು ಪಾತ್ರಕ್ಕೆ ಪ್ರಾಮುಖ್ಯತೆಯನ್ನು ಕೊಡಬೇಕು ಎಂದು.

ಅಂಥವರಲ್ಲಿ ನ್ಯಾಚುರಲ್ ಬ್ಯೂಟಿ ಆಗಿರುವಂತಹ ಸಾಯಿ ಪಲ್ಲವಿಯವರು ಒಬ್ಬರು. ಇತ್ತೀಚಿನ ದಿನಗಳಲ್ಲಿ ಸಾಯಿಪಲ್ಲವಿಯವರು ತಮ್ಮ ಸಹಜವಾದ ಸೌಂದರ್ಯದ ಮೂಲಕ ಎಲ್ಲರ ಮನ ಗೆದ್ದಿದ್ದಾರೆ. ನಗುಮುಖದ ಮುದ್ದು ಸುಂದರಿ ತಮ್ಮ ದೇಹವನ್ನು ಸಿನಿಮಾದಲ್ಲಿ ಯಾವತ್ತೂ ಪ್ರದರ್ಶನ ಮಾಡಿಲ್ಲ ಬಹುತೇಕ ಸಿನಿಮಾಗಳಲ್ಲಿ ಅವರು ಮೈತುಂಬ ಬಟ್ಟೆ ಹಾಕಿರುವ ಪಾತ್ರಗಳನ್ನು ಒಪ್ಪಿಕೊಳ್ಳುತ್ತಾರೆ ಹಾಗಾದರೆ ಸಾಯಿಪಲ್ಲವಿ ಅವರ ಸಿನಿಮಾ ಸಿದ್ದಾಂತ ಏನು ಯಾವ ಸಿದ್ಧಾಂತದ ಮೂಲಕ ಅವರು ಎಲ್ಲರ ಗಮನವನ್ನು ಸೆಳೆದರು ಯಾವ ಸಿದ್ಧಾಂತದ ಮೂಲಕ ಅವರು ಸಿನಿಮಾ ರಂಗದಲ್ಲಿ ಅವಕಾಶವನ್ನು ಕಳೆದುಕೊಂಡರು ಎಂಬುದರ ಕುರಿತಾದ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ.

ಸಾಯಿ ಪಲ್ಲವಿ ತೆಲುಗು ತಮಿಳು ಮಲಯಾಳಂ ಭಾಷೆಗಳಲ್ಲಿ ಅಭಿನಯಿಸಿದ್ದಾರೆ. ಮೂಲತಹ ತಮಿಳುನಾಡಿನ ಮೂಲದವರಾದ ಸಾಯಿ ಪಲ್ಲವಿಯವರು ಚಿಕ್ಕವಯಸ್ಸಿನಲ್ಲಿ ಬಾಲ ಕಲಾವಿದೆಯಾಗಿ ಗುರುತಿಸಿಕೊಂಡವರು. ತಮಿಳಿನ ಒಂದಿಷ್ಟು ಸಿನಿಮಾಗಳಲ್ಲಿ ಬಾಲ ಕಲಾವಿದೆಯಾಗಿ ನಟನೆ ಮಾಡಿ ನಂತರ ಸಿನಿಮಾರಂಗದಿಂದ ಕೆಲವು ಕಾಲ ಹಿಂದೆಸರಿದು ತಮ್ಮ ಶಿಕ್ಷಣವನ್ನು ಮುಗಿಸಿಕೊಳ್ಳುತ್ತಾರೆ ಇವರು ಎಂಬಿಬಿಎಸ್ ಪದವಿಯನ್ನು ಪಡೆದಿದ್ದಾರೆ.

ಬಾಲ ಕಲಾವಿದೆಯಾಗಿರುವ ಕಾರಣ ಸಿನಿಮಾರಂಗದ ಬಗ್ಗೆ ಆಸಕ್ತಿ ಇರುತ್ತದೆ ಹಾಗಾಗಿ ಮಲಯಾಳಂನ ಪ್ರೇಮಮ್ ಸಿನಿಮಾದಲ್ಲಿ ಇವರಿಗೆ ಅವಕಾಶ ಸಿಗುತ್ತದೆ ಆ ಪಾತ್ರ ಇವರಿಗೆ ಒಳ್ಳೆಯ ಹೆಸರನ್ನು ತಂದುಕೊಡುತ್ತದೆ ಇದಾದನಂತರ 2015 ರಿಂದ ಒಂದಾದ ನಂತರ ಒಂದು ಸಿನಿಮಾಗಳಲ್ಲಿ ಅಭಿನಯಿಸುತ್ತಾರೆ ಫಿದಾ ಎನ್ನುವ ಸಿನಿಮಾದ ಮೂಲಕ ತೆಲುಗು ಸಿನಿಮಾ ರಂಗಕ್ಕೆ ಕಾಲಿಡುತ್ತಾರೆ ಆ ಸಿನಿಮಾ ಕೂಡ ಅವರಿಗೆ ಒಳ್ಳೆಯ ಹೆಸರನ್ನು ತಂದುಕೊಡುತ್ತದೆ.

ಸಾಯಿ ಪಲ್ಲವಿ ಕೇವಲ ನಟನೆ ಮಾತ್ರವಲ್ಲ ಡಾನ್ಸ್ ಕೂಡ ತುಂಬಾ ಚೆನ್ನಾಗಿ ಮಾಡುತ್ತಾರೆ 2018ರಲ್ಲಿ ದಿಯಾ ಸಿನಿಮಾದ ಮೂಲಕ ತಮಿಳು ಸಿನಿಮಾ ರಂಗಕ್ಕೆ ಕಾಲಿಡುತ್ತಾರೆ. ಒಂದಾದ ನಂತರ ಒಂದು ಹಿಟ್ ಸಿನಿಮಾಗಳನ್ನು ನೀಡಿದಂತಹ ಸಾಯಿಪಲ್ಲವಿ ಅವರು ಇಡೀ ಜಗತ್ತಿನಾದ್ಯಂತ ಚರ್ಚೆಗೆ ಒಳಗಾಗಿದ್ದು ಎರಡು ವಿಷಯಕ್ಕೆ. ಮೊದಲನೆಯದು ಒಂದಷ್ಟು ಸಿನಿಮಾಗಳಲ್ಲಿ ಸಾಯಿಪಲ್ಲವಿ ಅವರು ಮೇಕಪ್ ಇಲ್ಲದೆ ಕಾಣಿಸಿಕೊಂಡಿದ್ದಾರೆ ಮತ್ತೊಂದು ಅವರ ಮುಖದಲ್ಲಿ ಪಿಂಪಲ್ಸ್ ಇರುವುದನ್ನು ಮೇಕಪ್ ಇಲ್ಲದೆ ಸಿನಿಮಾಗಳಲ್ಲಿ ನೇರವಾಗಿ ತೋರಿಸಲಾಗಿದೆ.

ಅಂದರೆ ಸಿನಿಮಾಗಳನ್ನು ಒಪ್ಪಿಕೊಳ್ಳುವ ಮೊದಲು ಸಿನಿಮಾಗಳಲ್ಲಿ ನಾನು ಸಹಜವಾಗಿ ಕಾಣಿಸಿಕೊಳ್ಳಬೇಕು ಎನ್ನುವ ಒಪ್ಪಂದದ ಮೇರೆಗೆ ಅವರ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಾರೆ ಅದೇ ರೀತಿ ಅವರು ಸಾಕಷ್ಟು ಕಾರ್ಯಕ್ರಮಗಳಲ್ಲಿ ತುಂಡುಡುಗೆಯ ಬಟ್ಟೆಯನ್ನೂ ಧರಿಸುವುದಿಲ್ಲ ಸಾಮಾನ್ಯವಾಗಿ ಸೀರೆ ಅಥವಾ ಚೂಡಿದಾರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇದೆಲ್ಲಕ್ಕೂ ಮಿಗಿಲಾಗಿ ಅವರು ಚರ್ಚೆಗೆ ಗ್ರಾಸವಾಗಿದ್ದು ಒಮ್ಮೆ ಅವರಿಗೆ ಎರಡು ಕೋಟಿಯ ಜಾಹೀರಾತಿನ ಅವಕಾಶ ಬಂದಿರುತ್ತದೆ ಅದರಲ್ಲಿ ಯಾವುದೋ ಒಂದು ಕ್ರೀಮ್ ಹಚ್ಚಿದರೆ ಬಿಳಿ ಬಣ್ಣ ಬರುತ್ತದೆ ಎಂಬುದು ಅದರ ವಿಷಯವಾಗಿತ್ತು.

ಸಾಯಿ ಪಲ್ಲವಿ ಅವರು ತಕ್ಷಣವೇ ಅದನ್ನು ತಿರಸ್ಕರಿಸುತ್ತಾರೆ. ಕಂಪನಿಯವರು ಜಾಹೀರಾತಿಗಾಗಿ ಒಂದು ಸಿನಿಮಾಕ್ಕೆ ಕೊಡುವ ಬೆಲೆಗಿಂತ ಹೆಚ್ಚು ಬೆಲೆಯನ್ನು ಕೊಡುತ್ತೇವೆ ಎಂದರೂ ಕೂಡ ಸಾಯಿ ಪಲ್ಲವಿ ಅವರು ಅದನ್ನು ತಿರಸ್ಕರಿಸುತ್ತಾರೆ. ಮುಖದಲ್ಲಿ ಬಿಳಿ ಬಣ್ಣ ಶ್ರೇಷ್ಠ ಕಪ್ಪು ಬಣ್ಣ ಕೀಳು ಎನ್ನುವಂತಹ ಸಂದೇಶವನ್ನು ಜನರಿಗೆ ನಾನು ಸಾರುವುದಿಲ್ಲ ಎಂದು ನೇರಾನೇರವಾಗಿ ಜಾಹೀರಾತನ್ನು ತಿರಸ್ಕರಿಸುತ್ತಾರೆ.

ಸಾಯಿ ಪಲ್ಲವಿ ಅವರು ಕೀರ್ತಿ ಸುರೇಶ್ ಅವರಂತೆ ತಮಗೆ ತಾವೇ ಒಂದು ಬೇಲಿಯನ್ನು ಹಾಕಿಕೊಂಡಿದ್ದಾರೆ ತಮ್ಮ ಸಿದ್ಧಾಂತವನ್ನು ಪಾಲನೆ ಮಾಡುತ್ತಿದ್ದಾರೆ ಸಿನಿಮಾದಲ್ಲಿ ಅವಕಾಶಗಳು ಸಿಗದೆ ಇದ್ದರೂ ಅಡ್ಡಿಲ್ಲ ಕೋಟಿ ಕೋಟಿ ಹಣವನ್ನು ನಾವು ಮಿಸ್ ಮಾಡಿಕೊಂಡರು ಅಡ್ಡಿಲ್ಲ ಯಾವುದೇ ಕಾರಣಕ್ಕೂ ಸಿನಿಮಾದಲ್ಲಿ ದೇಹವನ್ನು ಪ್ರದರ್ಶನ ಮಾಡುವುದಿಲ್ಲ ತುಂಡು ಉಡುಗೆಯನ್ನು ನಾನು ಹಾಕುವುದಿಲ್ಲ ಎಂದು ಸಾಯಿ ಪಲ್ಲವಿ ಅವರು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಈ ಮೂಲಕವೂ ಕೂಡ ಸಾಯಿ ಪಲ್ಲವಿ ಅವರು ಪ್ರತಿಯೊಬ್ಬರಿಗೆ ಮಾದರಿಯಾಗುತ್ತಿದ್ದಾರೆ ದೇಹ ಪ್ರದರ್ಶನ ಮಾಡುವುದಿಲ್ಲ ಎನ್ನುವ ಕಾರಣಕ್ಕಾಗಿ ಅವರು ಅನೇಕ ಅವಕಾಶಗಳನ್ನು ಕಳೆದುಕೊಂಡಿದ್ದಾರೆ. ಒಟ್ಟಾರೆಯಾಗಿ ಇವತ್ತಿನ ದಿನ ಸಾಯಿ ಪಲ್ಲವಿ ಅವರ ಸಿದ್ಧಾಂತವನ್ನು ನಾವು ಮೆಚ್ಚಲೇ ಬೇಕಾಗಿದೆ. ಸಿನಿಮಾರಂಗದಲ್ಲಿ ಅವರಿಗೆ ಇಷ್ಟವಾಗುವಂತಹ ಪಾತ್ರಗಳು ಹೆಚ್ಚು ಹೆಚ್ಚು ಸಿಗಲಿ ಎಂದು ನಾವು ಹಾರೈಸೋಣ.

Leave a Reply

Your email address will not be published. Required fields are marked *