ಆಧುನಿಕ ಅಪ್ಪ-ಅಮ್ಮ ಸೀದಾ ಅಂತರ್ಜಾಲದಲ್ಲಿ ಈಜಾಡಿ ಮಗುವಿಗೆ ಯಾವುದೋ ಒಂದು ಹೆಸರನ್ನು ಹೆಕ್ಕಿ ತೆಗೆದು, ತಮಗೆ ಇಷ್ಟವಾದ್ದನ್ನು ಇಟ್ಟುಬಿಡುತ್ತಾರೆ. ಆದರೆ ಸುಸಂಬದ್ಧವಾಗಿದೆಯಾ? ಎಂಬುದನ್ನು ವಿಚಾರಿಸಿ ನೋಡುವುದಿಲ್ಲ. ಆದರೆ ಇದು ಸರಿಯಾದ ನಿಯಮ ಅಲ್ಲ. ಹೆಸರು ಸದಾ ಅರ್ಥ ಪೂರ್ಣವಾಗಿರಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಜನರು ಮನಸ್ಸಿಗೆ ಬಂದ ಹೆಸರನ್ನು ಇಡ್ತಾರೆ. ಆದ್ರೆ ಹೆಸರು ನಮ್ಮ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂಬುದನ್ನು ಅವರು ಗಮನಿಸೋದಿಲ್ಲ. ಕರೆಯೋಕೆ ಮಾತ್ರವಲ್ಲ ಹೆಸರಿನಲ್ಲಿ ಇನ್ನೇನೇನೋ ಅಡಗಿದೆ. ಈ ಪ್ರಕಾರ ಕೆಲವು ಅಕ್ಷರಗಳಿಂದ ಆರಂಭ ಆಗುವ ಹೆಸರಿನ ಹುಡುಗಿಯರನ್ನು ವಿವಾಹ ಆದರೆ ಅಂತಹ ವ್ಯಕ್ತಿಗಳು ಬಹಳ ಅದೃಷ್ಟವನ್ನು ಪಡೆಯುತ್ತಾರೆ. ಅದೇನು ಎನ್ನುವುದರ ಕುರಿತಾಗಿ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಮಗು ಅಮ್ಮನ ಗರ್ಭದಲ್ಲಿ ಇರುವಾಗಲೇ ಅಪ್ಪ-ಅಮ್ಮ ಆ ಮಗುವಿನ ಅಷ್ಟೂ ಭವಿಷ್ಯದ ಬಗ್ಗೆ ಸುಂದರ ಕನಸುಗಳನ್ನು ಹೆಣೆದು, ಪ್ಲಾನಿಂಗ್ ಶುರು ಮಾಡುತ್ತಾರೆ. ಪೋಷಕರಲ್ಲಿ ಅಷ್ಟು ತವಕ, ಕೌತುಕ, ಆಸಕ್ತಿ ಮನೆ ಮಾಡಿರುತ್ತದೆ. ಕೂಸು ಹುಟ್ಟೋಕೆ ಮುಂಚೆ ಕುಲಾವಿ ಹೊಲಿಸಿದರು ಅಂತಾ ಮಗುವಿನ ಹೆಸರನ್ನೂ ನಿರ್ಣಯಿಸಿಬಿಡುತ್ತಾರೆ. ಆದರೆ ಹೆಸರಿನಲ್ಲೇನಿದೆ ಬಿಡಿ ಅಂತಾ ನಾವು ಅನೇಕ ಬಾರಿ ಹೇಳಿರ್ತೇವೆ. ಆದ್ರೆ ಹೆಸರಿನಲ್ಲಿ ನಮ್ಮ ಗುರುತಿದೆ. ಹೆಸರು ನಮ್ಮ ಜೀವನದ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತದೆ. ಹಾಗಾಗಿಯೇ ನಾಮಕರಣವನ್ನು ಭಾರತೀಯರು ಶಾಸ್ತ್ರೋಕ್ತವಾಗಿ ಮಾಡ್ತಾರೆ.

ವ್ಯಕ್ತಿಯ ಜನ್ಮದಿನಾಂಕ, ಸಮಯ, ಅವನ ರಾಶಿಚಕ್ರ ಚಿಹ್ನೆ ಮತ್ತು ಹೆಸರಿನ ಮೊದಲ ಅಕ್ಷರವನ್ನು ಆಧರಿಸಿ, ಅದಕ್ಕೆ ಹೊಂದುವ ಅಕ್ಷರದಿಂದಲೇ ಹೆಸರಿಡುವ ಪ್ರಯತ್ನ ಮಾಡ್ತಾರೆ. ಹೆಸರಿನಿಂದ ಸಮಸ್ಯೆಯಾಗುತ್ತಿದೆ ಎನ್ನುವ ಕಾರಣಕ್ಕೆ ಅನೇಕರು ಹೆಸರು ಬದಲಿಸಿಕೊಂಡಿದ್ದನ್ನು ಕೂಡ ನೀವು ನೋಡಿರುತ್ತೀರಿ. ಹೆಸರು ಬದಲಾದ ನಂತರ ಅದೃಷ್ಟ ಬದಲಾದ ಉದಾಹರಣೆಗಳೂ ಇವೆ. ಸಾಮಾನ್ಯವಾಗಿ ಮದುವೆಯಾಗುವ ಸಂದರ್ಭದಲ್ಲಿ ನಾವು ಜಾತಕ ನೋಡುತ್ತೆವೆ. ಆದರೆ ಹೆಸರಿಗೆ ಹೆಚ್ಚು ಮಹತ್ವ ನೀಡಲು ಹೋಗುವುದಿಲ್ಲ.

ಶಾಸ್ತ್ರದಲ್ಲಿ, ವ್ಯಕ್ತಿಯ ಹೆಸರಿನ ಮೊದಲ ಅಕ್ಷರ, ವ್ಯಕ್ತಿಯ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಹೇಳಲಾಗಿದೆ. ಶಾಸ್ತ್ರದಲ್ಲಿ ವ್ಯಕ್ತಿಯ ಹೆಸರಿನ ಮಹತ್ವವನ್ನು ಹೇಳಲಾಗಿದೆ. ಹಾಗೆಯೇ ಯಾವ ಹೆಸರಿನಿಂದ ಶುರುವಾಗುವ ಹುಡುಗಿಯ ಸ್ವಭಾವ ಹೇಗಿರುತ್ತದೆ ಎಂಬುದನ್ನೂ ಹೇಳಲಾಗಿದೆ. ಜ್ಯೋತಿಷ್ಯದ ಪ್ರಕಾರ, ಕೆಲ ಹೆಸರಿನ ಹುಡುಗಿಯರು ತಾವು ಮದುವೆಯಾಗುವ ಹುಡುಗನಿಗೆ ಅದೃಷ್ಟ ತರ್ತಾರೆ. ಮದುವೆಯ ನಂತರ ಹುಡುಗರಿಗೆ ಲಾಟರಿ ಹೊಡೆದಂತೆ. ಜೀವನ ಪರ್ಯಂತ ಲಕ್ಷ್ಮಿ ಮನೆಯಲ್ಲಿರುತ್ತಾಳೆ. ಸಂಪತ್ತಿನ ದೇವರ ಕೃಪೆಯಿರುವ ಹುಡುಗಿಯರು ಮನೆಯಲ್ಲಿದ್ದರೆ ಯಾವುದೇ ಆರ್ಥಿಕ ಸಮಸ್ಯೆ ಕಾಡುವುದಿಲ್ಲ. ಇಂದು ಯಾವ ಹೆಸರಿನ ಹುಡುಗಿಯರು ಮದುವೆ ನಂತ್ರ ಪತಿ ಮನೆಯಲ್ಲಿ ಹಣದ ಹೊಳೆ ಹರಿಸ್ತಾರೆ ಎಂಬುದನ್ನು ನೋಡೋಣ.

ಮೊದಲಿಗೆ P ಅಕ್ಷರದಿಂದ ಪ್ರಾರಂಭವಾಗುವ ಹುಡುಗಿ : ಶಾಸ್ತ್ರದ ಪ್ರಕಾರ, ಯಾವ ಹುಡುಗಿ ಹೆಸರು ಪಿ ಅಕ್ಷರದಿಂದ ಆರಂಭವಾಗುತ್ತದೆಯೋ ಆ ಹುಡುಗಿಯರು ಅದೃಷ್ಟವಂತರು. ಈ ಹುಡುಗಿಯರು ತುಂಬಾ ಸರಳ ಸ್ವಭಾವದವರು. ಅವರಿಗೆ ಮಾತಿನ ಕಲೆ ಗೊತ್ತು. ಒಳ್ಳೊಳ್ಳೆ ಮಾತುಗಳನ್ನಾಡಿ ಎಲ್ಲರ ಮನಸ್ಸು ಕದಿಯುತ್ತಾರೆ. ಅವರಿಗೆ ವಿಭಿನ್ನವಾದ ಆಕರ್ಷಣೆಯ ಶಕ್ತಿ ಇರುತ್ತದೆ. ಈ ಹುಡುಗಿಯರ ಮಾತಿಗೆ ಮರುಳಾಗದವರಿಲ್ಲ. ಮದುವೆಯ ನಂತರ ಅವಳು ತನ್ನ ಗಂಡನಿಗೆ ಅದೃಷ್ಟಶಾಲಿ ಎಂದು ಸಾಬೀತುಪಡಿಸುತ್ತಾಳೆ. P ಅಕ್ಷರದ ಹುಡುಗಿಯನ್ನು ಮದುವೆಯಾದ ಹುಡುಗರ ಬಾಳಲ್ಲಿ ಸದಾ ಲಕ್ಷ್ಮಿ ನೆಲೆಸಿರುತ್ತಾಳೆ.

ಎರಡನೆಯದಾಗಿ L ಅಕ್ಷರದ ಹೆಸರಿನ ಹುಡುಗಿಯರು :- ಜ್ಯೋತಿಷ್ಯಶಾಸ್ತ್ರದ ಪ್ರಕಾರ, ತಾಯಿ ಲಕ್ಷ್ಮಿ ಈ ಹೆಸರಿನ ಹುಡುಗಿಯರಿಗೆ ವಿಶೇಷ ಕೃಪೆ ತೋರುತ್ತಾಳೆ. ಜೀವನದಲ್ಲಿ ಎಲ್ಲಾ ಸೌಕರ್ಯಗಳು ಸುಲಭವಾಗಿ ದೊರೆಯುತ್ತವೆ. ತಾಯಿ ಲಕ್ಷ್ಮಿಯ ಕೃಪೆಯಿಂದ ಅವರ ಆರ್ಥಿಕ ಸ್ಥಿತಿಯೂ ಉತ್ತಮವಾಗಿರುತ್ತದೆ. ಮದುವೆಯ ನಂತರ, ಗಂಡನ ಅದೃಷ್ಟ ಬದಲಾಗುತ್ತದೆ. L ಅಕ್ಷರದಿಂದ ಶುರುವಾಗುವ ಹುಡುಗಿಯನ್ನು ಮದುವೆಯಾಗುವ ಹುಡುಗನಿಗೆ ಕುಬೇರ ಒಲಿಯುತ್ತಾನೆ ಎಂದು ನಂಬಲಾಗಿದೆ.

ಮೂರನೆಯದಾಗಿ K ಅಕ್ಷರದ ಹುಡುಗಿಯರು:- ಈ ಅಕ್ಷರದಿಂದ ಹೆಸರು ಶುರುವಾಗುವ ಹುಡುಗಿಯರನ್ನು ತುಂಬಾ ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ. ಸಮಾಜದ ಒಳಿತಿಗಾಗಿ ಸಾಕಷ್ಟು ಕೆಲಸವನ್ನು K ಅಕ್ಷರದ ಹುಡುಗಿಯರು ಮಾಡುತ್ತಾರೆ. ಅವರು ಸ್ವಭಾವತಃ ತುಂಬಾ ನೇರವಾಗಿರುತ್ತಾರೆ. ಪ್ರತಿಯೊಬ್ಬರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗ್ತಾರೆ. ಪ್ರತಿ ಕೆಲಸವನ್ನೂ ತುಂಬಾ ಜಾಗರೂಕತೆಯಿಂದ ಮಾಡ್ತಾರೆ. ಜಾಗರೂಕತೆಯಿಂದ ಮಾಡುವ ಕೆಲಸವೇ ಗಂಡನ ಯಶಸ್ಸಿಗೆ ಕಾರಣವಾಗುತ್ತದೆ. K ಅಕ್ಷರದಿಂದ ಶುರುವಾಗುವ ಹುಡುಗಿಯನ್ನು ಮದುವೆಯಾದ ವ್ಯಕ್ತಿಯ ಬಾಳಲ್ಲಿ ಆರ್ಥಿಕ ಸಮಸ್ಯೆ ಕಾಡುವುದಿಲ್ಲ.

Leave a Reply

Your email address will not be published. Required fields are marked *