ಅಪ್ಪು ಇಲ್ಲದ ದುಂಖವನ್ನು ಅಭಿಮಾನಿಗಳ ಮುಂದೆ ತೋರಿಸಿಕೊಳ್ಳದೆ ಇರೋದಕ್ಕೆ ಕಾರಣವೇನು ಗೊತ್ತೇ? ಇದರ ಹಿಂದಿದೆ ಒಂದು ದೊಡ್ಡ ಉದ್ದೇಶ

0 2

ಯಾರೂ ಊಹಿಸದಂತೆ ಪುನೀತ್ ರಾಜಕುಮಾರ್ ಅವರು ನಮ್ಮನ್ನು ಬಿಟ್ಟು ಬಹುದೂರ ಹೋಗಿದ್ದಾರೆ. ಪುನೀತ್ ಅವರ ಸಾವು ಅವರ ಕುಟುಂಬದವರಿಗೆ ಬರಸಿಡಿಲು ಬಡಿದಂತಾಯಿತು ಆದರೂ ತಮ್ಮ ದುಃಖವನ್ನು ಅಭಿಮಾನಿಗಳಿಗೆ ತೋರಿಸಿಕೊಳ್ಳದೆ ದುಃಖವನ್ನು ಸಹಿಸಿಕೊಂಡರು ಇದಕ್ಕೆ ಕಾರಣವೇನು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಪುನೀತ್ ಅವರ ಹೆಂಡತಿ ಮಕ್ಕಳು ದುಃಖವನ್ನು ನುಂಗಿಕೊಂಡು ಶಾಂತಮೂರ್ತಿಗಳಾಗಿ ದಂಗಾಗಿ ನಿಂತಿದ್ದರು. ಅಕ್ಟೋಬರ್ 29 ನೇ ತಾರೀಖಿನಂದು ಪುನೀತ್ ಅವರಿಗೆ ಸ್ವಲ್ಪ ಸುಸ್ತು ಕಾಣಿಸಿಕೊಂಡಿತು ಪತ್ನಿ ಅಶ್ವಿನಿ ಅವರ ಜೊತೆ ರಮಣಶ್ರೀ ಆಸ್ಪತ್ರೆಗೆ ತೆರಳಿದರು. ಹೋಗುವಾಗ ತಮ್ಮ ಗನ್ ಮ್ಯಾನ್ ಅನ್ನು ಮನೆಯಲ್ಲೆ ಬಿಟ್ಟು ಹೋಗಿದ್ದರು.

ಡ್ರೈವರ್, ಪುನೀತ್ ಹಾಗೂ ಅಶ್ವಿನಿ ಮೂವರು ಆಸ್ಪತ್ರೆಗೆ ಹೋಗಿದ್ದರು ಅಲ್ಲಿ ಪುನೀತ್ ಅವರು ಕುಸಿದು ಬಿದ್ದರು ನಂತರ ಅಲ್ಲಿಂದ ವಿಕ್ರಂ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಹೋಗುವಾಗಲೆ ಅಶ್ವಿನಿ ಅವರ ಮಡಿಲಲ್ಲಿ ಪುನೀತ್ ಅವರು ಹೃದಯಾಘಾತದಿಂದ ನಿಧನರಾದರು. ಈ ಸಂಗತಿಯನ್ನು ಪುನೀತ್ ಅವರ ಕುಟುಂಬದವರಿಗೆ ಸಹಿಸಲು ಕಷ್ಟವಾಯಿತು.

ಪುನೀತ್ ಸಾವಿನ ವಿಷಯ ತಿಳಿಯುತ್ತಿದ್ದಂತೆಯೆ ದೊಡ್ಮನೆ ಕುಟುಂಬದವರು ಆಸ್ಪತ್ರೆಗೆ ಬಂದಿದ್ದರು ಅವರು ದೊಡ್ಮನೆ ನೋವು ನಮಗೆ ಇರಲಿ ಹೊರಗಿನವರಿಗೆ ತೋರಿಸುವುದು ಬೇಡ ಎಂದು ನಿರ್ಧಾರ ಮಾಡಿದ್ದರು. 2006ರಲ್ಲಿಯೂ ಡಾಕ್ಟರ್ ರಾಜಕುಮಾರ್ ಅವರು ಕೂಡ ಇದೆ ರೀತಿ ಹಠಾತ್ತನೆ ನಿಧನರಾದರು.

ಆಗ ಇಷ್ಟೊಂದು ಮಾಧ್ಯಮಗಳಿರಲಿಲ್ಲ ಒಂದು ಖಾಸಗಿ ಮಾಧ್ಯಮದಿಂದ ರಾಜಕುಮಾರ್ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೆ ಅಭಿಮಾನಿಗಳು ಅಣ್ಣಾವ್ರ ಮನೆಗೆ ನುಗ್ಗಿ ಅಣ್ಣಾವ್ರ ಪಾರ್ಥಿವ ಶರೀರವನ್ನು ಹೊತ್ತೊಯ್ದರು. ಪೊಲೀಸರಿಗೂ ಈ ರೀತಿ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಗೊತ್ತಿರಲಿಲ್ಲ. ಅಣ್ಣಾವ್ರ ಸಮಾಧಿಗೆ ಒಂದು ಹಿಡಿ ಮಣ್ಣು ಹಾಕಲು ಕುಟುಂಬದವರಿಗೆ ಕಷ್ಟವಾಯಿತು ಅಷ್ಟರಮಟ್ಟಿಗೆ ಅಭಿಮಾನಿಗಳು ಸೇರಿದ್ದರು.

ಅಣ್ಣಾವ್ರನ್ನು ವ್ಯವಸ್ಥಿತವಾಗಿ ಕಳುಹಿಸಿಕೊಡಲು ಸಾಧ್ಯವಾಗಲಿಲ್ಲ ಎಂಬ ನೋವು ದೊಡ್ಮನೆಯವರಿಗೆ ಇತ್ತು ಅಲ್ಲದೆ ಆ ಸಮಯದಲ್ಲಿ ಅನೇಕ ಆಸ್ತಿ ಪಾಸ್ತಿ, ಜೀವ ಬಲಿಯಾಯಿತು ಇದರಿಂದ ದೊಡ್ಮನೆಯವರಿಗೆ ನೋವಾಯಿತು. ಆ ಕಾರಣದಿಂದ ಪುನೀತ್ ಅವರು ಹಠಾತ್ತನೆ ನಿಧನರಾದಾಗ ಅವರಿಗೂ ಸಾಕಷ್ಟು ಸಂಖ್ಯೆಯ ಅಭಿಮಾನಿಗಳು ಇದ್ದಾರೆ ನಾವು ಗೋಳಾಡಿದರೆ ಅಭಿಮಾನಿಗಳ ನೋವು ಇನ್ನಷ್ಟು ಹೆಚ್ಚಾಗಬಹುದು, ಹಿಂದೆ ನಡೆದ ಘಟನೆ ಮತ್ತೆ ಮರುಕಳಿಸಬಹುದು ಎಂಬ ಕಾರಣಕ್ಕಾಗಿ ದೊಡ್ಮನೆ ಕುಟುಂಬದವರು ತಮ್ಮ ನೋವನ್ನು ಹೆಚ್ಚಾಗಿ ತೋರಿಸಿಕೊಂಡಿಲ್ಲ. ದೊಡ್ಮನೆ ಕುಟುಂಬದವರು ಅಭಿಮಾನಿಗಳಿಗಾಗಿ ಬದುಕುತ್ತಾರೆ ಈ ಕಾರಣದಿಂದಲೆ ಅವರನ್ನು ಎಲ್ಲರೂ ಇಷ್ಟಪಡುತ್ತಾರೆ.

ಪುನೀತ್ ಸತ್ತ ನಂತರ ಅವರ ಪಾರ್ಥಿವ ಶರೀರವನ್ನು ಅವರ ಮನೆಗೆ ಕರೆತಂದಾಗ ರಾಘಣ್ಣ ಮೀಡಿಯಾ ಮುಂದೆ ಬಂದು ಪುನೀತ್ ನಮಗಿಂತ ಮೊದಲೆ ಹೋಗಿಬಿಟ್ಟ ನಾನು ಮೊದಲು ಹೋಗುತ್ತೇನೆ ಎಂದು ಅಂದುಕೊಂಡಿದ್ದೆ. ಪುನೀತ್ ಅವರ ಅಂತ್ಯಕ್ರಿಯೆ ಸಮಯದಲ್ಲಿ ಇನ್ನೊಂದು ಜೀವಕ್ಕೆ ಯಾವುದೆ ರೀತಿಯಲ್ಲಿ ಹಾನಿ ಉಂಟಾಗಬಾರದು ಎಂದು ಹೇಳಿದರು. ದುಃಖದ ಸಮಯದಲ್ಲಿ ಅಭಿಮಾನಿಗಳಿಗೆ ತೊಂದರೆ ಆಗಬಾರದು ಎಂದು ಹೇಳಲು ದೊಡ್ಮನೆಯವರಿಂದ ಮಾತ್ರ ಸಾಧ್ಯ ಹೀಗಾಗಿ ಕನ್ನಡ ನಾಡಿನಲ್ಲಿ ರಾಜ್ ಕುಟುಂಬವನ್ನು ದೇವರಂತೆ ಆರಾಧಿಸಲಾಗುತ್ತದೆ. ಇಂತಹ ಕುಟುಂಬವನ್ನು ಪಡೆದ ಕನ್ನಡ ಚಿತ್ರರಂಗ ಧನ್ಯ ಎಂದು ಹೇಳಬಹುದು.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.