ಯುವಜನರಲ್ಲಿ ಹೆಚ್ಚಾಗಿ ಹೃದಯಾಘಾತ ಆಗ್ತಿರೋದು ಯಾಕೆ ಗೊತ್ತೇ ನಿಮಗಿದು ಗೊತ್ತಿರಲಿ

Uncategorized
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ಪುನೀತ್ ರಾಜಕುಮಾರ್ ಅವರು ನಮ್ಮನ್ನು ಅಗಲಿರುವ ಸುದ್ದಿ ತುಂಬಾ ನೋವನ್ನುಂಟು ಮಾಡುತ್ತಿದೆ. ಪುನೀತ್ ರಾಜಕುಮಾರ್ ಅವರು ಯಾವಾಗಲೂ ಫಿಟ್ ಆಗಿರುತ್ತಿದ್ದರು ವ್ಯಾಯಾಮ ಮಾಡುತ್ತಿದ್ದರು ಜಿಮ್ ಗೆ ಹೋಗುತ್ತಿದ್ದರು. ಅಂಥವರು ಹೃದಯಾಘಾತದಿಂದ ತೀರಿಕೊಂಡರು ಎನ್ನುವುದನ್ನು ನಂಬುವುದಕ್ಕೆ ಕಷ್ಟವಾಗುತ್ತದೆ

ಹಾಗಾದರೆ ಹೃದಯಾಘಾತ ಎಂದರೇನು ಕಾರ್ಡಿಯಾಕ್ ಅರಸ್ಟ್ ಅಂದರೇನು ಎದೆಯಲ್ಲಿ ನೋವು ಕಾಣಿಸಿಕೊಂಡರೆ ವೈದ್ಯರ ಬಳಿ ಹೋಗಬೇಕು ಅದಕ್ಕೂ ಹೃದಯಾಘಾತಕ್ಕೆ ಸಂಬಂಧ ಇದೆಯೆ ಸಾಧಾರಣವಾಗಿ ಬರುವ ಎದೆನೋವು ಯಾವುದು ಹಾಗೂ ಹೃದಯಘಾತ ಆಗುವಾಗ ಬರುವ ಎದೆನೋವು ಯಾವ ರೀತಿಯಾಗಿರುತ್ತದೆ ಕಾರ್ಡಿಯಾಕ್ ಅರಸ್ಟ್ ಅಂದರೇನು ಅದನ್ನು ಬಾರದ ಹಾಗೆ ತಡೆಯುವುದು ಹೇಗೆ ಅದರ ಕುರಿತು ವೈದ್ಯರು ಏನು ಹೇಳುತ್ತಾರೆ ಎಂಬುದನ್ನು ತಿಳಿದುಕೊಳ್ಳೋಣ.

ಪುನೀತ್ ರಾಜಕುಮಾರ್ ಅವರದ್ದು ಸಾಯುವ ವಯಸ್ಸಲ್ಲ ಹಿಂದಿನ ಕಾಲದಲ್ಲಿ ಹೃದಯಾಘಾತ ಸುಮಾರು ಅರವತ್ತು ವರ್ಷ ಮೇಲ್ಪಟ್ಟವರಲ್ಲಿ ಕಾಣಿಸಿಕೊಳ್ಳುತ್ತಿತ್ತು ಆದರೆ ಈಗ ಇಪ್ಪತ್ತೆಂಟು ವರ್ಷದವರಿಗೂ ಕೂಡ ಹೃದಯಾಘಾತವಾಗುವ ಸುದ್ದಿಯನ್ನು ನಾವು ಕೇಳುತ್ತೇವೆ. ಹೃದಯದ ರಕ್ತನಾಳದಲ್ಲಿ ರಕ್ತ ಸಂಚಾರವಾಗದಿದ್ದಾಗ ಅಲ್ಲಿ ಸಮಸ್ಯೆ ಉಂಟಾಗುತ್ತದೆ. ಎದೆಯ ಎಡ ಭಾಗದಲ್ಲಿ ನೋವು ಕಾಣಿಸಿಕೊಂಡಾಗ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು

ಯಾಕೆಂದರೆ ಹೃದಯ ದೇಹದ ಎಡಭಾಗದಲ್ಲಿರುವ ಇರುವ ಕಾರಣ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಹೃದಯದಲ್ಲಿ ನೋವು ಯಾವಾಗ ಕಾಣಿಸಿಕೊಳ್ಳುತ್ತದೆ ಎಂದರೆ ಹೃದಯಬಡಿತ ಸ್ಥಗಿತವಾದಾಗ ಹೃದಯದ ಭಾಗದಲ್ಲಿ ಇನ್ಫೆಕ್ಷನ್ ಆದಾಗ ಹೃದಯದ ಬಳಿ ಇರುವ ರಕ್ತನಾಳಗಳು ಉದಿಕೊಂಡಾಗ ಕೆಲವೊಮ್ಮೆ ಜನರು ಯಾವುದಾದರೂ ವಿಷಯವನ್ನು ಕೇಳಿ ಭಯ ಭೀತಿರಾದಾಗ ಇನ್ನೂ ಅನೇಕ ಕಾರಣಗಳಿಗೆ ಹೃದಯದಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

ಹಾಗಾದರೆ ಹೃದಯಾಘಾತ ಎಂದರೆ ಏನು ಎಂದರೆ ಹೃದಯಕ್ಕೆ ರಕ್ತ ಸಂಪರ್ಕ ನಿಂತು ಹೋದಾಗ ನೋವು ಕಾಣಿಸಿಕೊಳ್ಳುತ್ತದೆ ಇದನ್ನ ಹೃದಯಾಘಾತ ಎನ್ನಬಹುದು ಆದರೆ ಹೃದಯಾಘಾತವಾದ ಎಲ್ಲ ವ್ಯಕ್ತಿಗಳು ಸಾವನ್ನಪ್ಪುವುದಿಲ್ಲ. ನಿರ್ಲಕ್ಷ್ಯ ಮಾಡದೆ ಸರಿಯಾದ ಸಮಯದಲ್ಲಿ ಅದಕ್ಕೆ ಚಿಕಿತ್ಸೆಯನ್ನು ತೆಗೆದುಕೊಂಡರೆ ಡಯಗ್ನೋಸಿಸ್ ಸರಿಯಾಗಿ ಆದರೆ ಮನುಷ್ಯ ಉಳಿದುಕೊಳ್ಳುತ್ತಾನೆ.

ಆದರೆ ಮ್ಯಾಸಿವ್ ಹಾರ್ಟ್ ಅಟ್ಯಾಕ್ ಆದಾಗ ಮನುಷ್ಯ ಉಳಿದುಕೊಳ್ಳುವುದು ಕಷ್ಟ. ಆಧುನಿಕ ಜೀವನಶೈಲಿ ಮೈಗೂಡುತ್ತಿದ್ದಂತೆ ಜನರ ಆರೋಗ್ಯ ತನ್ನ ಇತಿಮಿತಿಯನ್ನು ಕಳೆದುಕೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದು ಅದನ್ನು ನಿರ್ಲಕ್ಷ್ಯ ಮಾಡಿದರೆ ನಮಗೆ ಅಪಾಯ ತಪ್ಪಿದ್ದಲ್ಲ. ಸಣ್ಣ ಗ್ಯಾಸ್ಟಿಕ್ ಆದರೂ ಕೂಡ ಅದನ್ನು ನಿರ್ಲಕ್ಷ ಮಾಡುತ್ತಾ ಹೋದರೆ ಅದರಿಂದ ಹೃದಯಕ್ಕೆ ಹಾನಿಯಾಗುತ್ತದೆ.

ಇನ್ನೂ ಹೃದಯದ ಸಮಸ್ಯೆ ಇದ್ದರಂತೂ ತುಂಬಾ ಜಾಗೃತರಾಗಿರಬೇಕು. ನಮ್ಮ ಹೃದಯ ಬಡಿತ ಏರುಪೇರಾದರೆ ನಮಗೆ ಮೈ ಬೆವರುವುದು ತಲೆಸುತ್ತು ಬರುವುದು ಉಸಿರಾಟದ ತೊಂದರೆ ಎದುರಾಗುವುದು ಹೀಗೆಲ್ಲಾ ಆಗುತ್ತದೆ ಇದನ್ನು ಕಾರ್ಡಿಯಾಕ್ ಅರೆಸ್ಟ್ ಎಂದು ವೈದ್ಯರು ಭಾಷೆಯಲ್ಲಿ ಕರೆಯುತ್ತಾರೆ ಸಹಜವಲ್ಲದ ಹೃದಯದ ಕಾರ್ಯ ಚಟುವಟಿಕೆ ರಕ್ತವನ್ನು ಪಂಪ್ ಮಾಡುವ ಪ್ರಕ್ರಿಯೆಗೆ ಬ್ರೇಕ್ ಹಾಕುತ್ತದೆ.

ಮನುಷ್ಯನಿಗೆ ಆಗುವ ಹೃದಯಾಘಾತಗಳಲ್ಲಿ ಹಲವಾರು ವಿಧಗಳಿವೆ. ಹೃದಯದ ಕಾರ್ಯ ಚಟುವಟಿಕೆಯ ಮೇಲೆ ಇದ್ದಕ್ಕಿದ್ದಂತೆ ಪ್ರಭಾವಬೀರಿ ಉಸಿರಾಟದ ತೊಂದರೆ ತಲೆಸುತ್ತು ಬರುವುದು ಸುಸ್ತಾಗುವುದು ಎದೆಯಭಾಗದಲ್ಲಿ ಬಿಗಿತಕಂಡು ಬರುವುದು ಹೃದಯ ಬಡಿತದಲ್ಲಿ ಏರುಪೇರಾಗುವುದು ಪ್ರಜ್ಞೆ ತಪ್ಪುವುದು ತುಂಬಾ ಕಷ್ಟಪಟ್ಟು ಉಸಿರಾಡುವುದು ಇವೆಲ್ಲವೂ ಕಾರ್ಡಿಯಾ ಆರೆಸ್ಟ್ ನ ಲಕ್ಷಣಗಳು ಎಂದು ಹೇಳಬಹುದು. ಹಾಗಾದರೆ ಹೃದಯಾಘಾತ ಆದಾಗ ಯಾವೆಲ್ಲ ಮುಂಜಾಗ್ರತೆ ಕ್ರಮಗಳನ್ನು ಅನುಸರಿಸಬೇಕು ಎಂಬುದನ್ನು ತಿಳಿದು ಕೊಳ್ಳೋಣ.

ಈಗಾಗಲೇ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಯನ್ನು ಎದುರಿಸುತ್ತಿರುವ ಜನರು ತಮಗೆ ಎದುರಾಗುವ ಸೂಚನೆಗಳಿಗೆ ಅಥವಾ ಚಿಹ್ನೆಗಳಿಗೆ ತಕ್ಷಣವೇ ಪ್ರತಿಕ್ರಿಯೆ ನೀಡಿ ನಿರ್ಲಕ್ಷ ಮಾಡದೆ ವೈದ್ಯರ ಬಳಿ ತೆರಳಿ ತುರ್ತು ಚಿಕಿತ್ಸೆ ಪಡೆದುಕೊಳ್ಳಬೇಕು. ಹೀಗೆ ಮಾಡುವುದರಿಂದ ವೈದ್ಯರಿಗೂ ಪ್ರಾರಂಭದಲ್ಲಿಯೇ ಸಮಸ್ಯೆಯನ್ನು ಪತ್ತೆ ಹೆಚ್ಚುವುದಕ್ಕೆ ಮತ್ತು ಅದಕ್ಕೆ ಸೂಕ್ತ ಪರಿಹಾರವನ್ನು ಒದಗಿಸುವುದಕ್ಕೆ ಅನುಕೂಲವಾಗುತ್ತದೆ. ಹೃದಯಾಘಾತ ಆದಾಗ ರೋಗಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದರಿಂದ ವೈದ್ಯರು ಮತ್ತೊಮ್ಮೆ ಅಟ್ಯಾಕ್ ಆಗದಂತೆ ತುರ್ತು ಚಿಕಿತ್ಸೆಯನ್ನು ನೀಡುತ್ತಾರೆ.

ರಕ್ತನಾಳದಲ್ಲಿ ರಕ್ತ ಸಂಚಾರ ಸರಿಯಾಗಿ ಆಗುವಂತೆ ಮತ್ತು ಹೃದಯ ಬಡಿತ ಸರಿಯಾಗಿ ಆಗುವ ಹಾಗೆ ಮಾಡುತ್ತಾರೆ. ಇದರ ಜೊತೆಗೆ ಆರೋಗ್ಯಕರವಾದ ಹೃದಯಕ್ಕೆ ಬೇಕಾದ ಆಹಾರ ಪದ್ಧತಿಯನ್ನು ಒದಗಿಸುವುದರ ಜೊತೆಗೆ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಂಡು ಉತ್ತಮ ವ್ಯಾಯಾಮವನ್ನು ದೇಹಕ್ಕೆ ಒದಗಿಸುವುದರ ಮೂಲಕ ಆರೋಗ್ಯಕರವಾದ ಜೀವನ ನಿಮ್ಮದಾಗಿಸಿಕೊಳ್ಳಬಹುದು.

ವ್ಯಾಯಾಮ ಹಾಗೂ ಆರೋಗ್ಯ ಕ್ರಮದ ಮೂಲಕವಾಗಿ ಬೊಜ್ಜು ಮೈ ಕರಗಿಸಿಕೊಳ್ಳಬೇಕು. ಧೂಮಪಾನ ಚಟ ಇರುವವರಿಗೆ ಹೃದಯಾಘಾತ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ ಆದ್ದರಿಂದ ಅಪಾಯಕಾರಿ ಚಟದಿಂದ ದೂರ ಇರಬೇಕು. ಜಂಕ್ ಫುಡ್ ಗಳನ್ನು ತಿನ್ನುವುದರಿಂದ ದೇಹದಲ್ಲಿ ಕೊಬ್ಬಿನಂಶ ಸಂಗ್ರಹವಾಗಿ ರಕ್ತ ಸಂಚಾರಕ್ಕೆ ಅಡಚಣೆ ಉಂಟಾಗಿ ಹೃದಯಘಾತ ಉಂಟಾಗಬಹುದು. ಹಾಗಾಗಿ ಜಂಕ್ ಫುಡ್ ತಿನ್ನುವ ಪ್ರಮಾಣವನ್ನು ಕೂಡ ಕಡಿಮೆ ಮಾಡಿಕೊಳ್ಳಬೇಕು. ಈ ರೀತಿಯ ನಿಯಮಗಳನ್ನು ಅನುಸರಿಸುವ ಮೂಲಕ ನಮ್ಮ ಜೀವ ರಕ್ಷಣೆಯನ್ನು ಮಾಡಿಕೊಳ್ಳಬಹುದು ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಸ್ನೇಹಿತರು ಹಾಗು ಪರಿಚಿತರಿಗೂ ತಿಳಿಸಿರಿ.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *