10 ಸೆಕೆಂಡ್ ನಲ್ಲಿ ಎದುರಾಳಿಯನ್ನು ನೆಲಕ್ಕೆ ಉರುಳಿಸುವ ಈ ವ್ಯಕ್ತಿ ಯಾರು ನೋಡಿ

0 0

ಬಾಕ್ಸಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡಲು ಅವರ ದೇಹ ಸದೃಢವಾಗಿರಬೇಕು. ಬಾಕ್ಸಿಂಗ್ ನಲ್ಲಿ ಸಾಧನೆ ಮಾಡುವುದು ಸುಲಭವಲ್ಲ. ಬಾಕ್ಸಿಂಗ್ ನಲ್ಲಿ ಮಿಂಚಿದ ಅಮೆರಿಕದ ಮೈಕ್ ಟೈಸನ್ ಅವರ ಬಗ್ಗೆ ಹಾಗೂ ಅವರ ಮೇಲಿನ ವಿವಾದದ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಮಹಮದ್ ಅಲಿ ಬಾಕ್ಸಿಂಗ್ ಲೋಕದ ದಿಗ್ಗಜ. ಮಹಮ್ಮದ್ ಅಲಿಯಷ್ಟೆ ಸಮರ್ಥ ಬಾಕ್ಸರ್ ಎಂದು ಅಮೆರಿಕಾದ ಮೈಕ್ ಟೈಸನ್ ಅವರನ್ನು ಕರೆಯುತ್ತಾರೆ. ಮೈಕ್ ಟೈಸನ್ ಅವರು 1966 ಜೂನ್ ತಿಂಗಳಲ್ಲಿ ನ್ಯೂಯಾರ್ಕ್ ನಲ್ಲಿ ಜನಿಸುತ್ತಾರೆ. ಅವರ ತಾಯಿಯ ಹೆಸರು ಲೊರೆನ್ಸ್ ಸ್ಮಿತ್, ಅವರ ತಂದೆಯ ಬಗ್ಗೆ ಅಷ್ಟಾಗಿ ಮಾಹಿತಿ ಇಲ್ಲದೆ ಇದ್ದರೂ ಮೈಕ್ ಅವರು ಜನಿಸಿದಾಗ ಅವರ ತಾಯಿ ಜಿಮ್ಮಿ ಕಿರಿಕ್ ಪ್ಯಾಟ್ರಿಕ್ ಎಂಬುವವರನ್ನು ಮೈಕ್ ಅವರ ತಂದೆ ಎಂದು ಪರಿಚಯಿಸಿದರು ಆದರೆ ಮೈಕ್ ಅವರ ಬರ್ತ್ ಸರ್ಟಿಫಿಕೇಟ್ ನಲ್ಲಿ ತಂದೆಯ ಹೆಸರು ಬೇರೆಯಾಗಿದೆ. ಜಿಮ್ಮಿ ಅವರು ಮೈಕ್ ಅವರ ತಾಯಿಯನ್ನು ಬಿಟ್ಟು ಹೋಗುತ್ತಾರೆ ಆಗ ಕುಟುಂಬದ ಜವಾಬ್ದಾರಿ ಮೈಕ್ ಅವರ ತಾಯಿಯ ಮೇಲೆ ಬೀಳುತ್ತದೆ ಆಗ ಮೈಕ್ ಹತ್ತು ವರ್ಷದವನಿದ್ದಾಗ ಬ್ರೌನ್ಸ್ ವಿಲ್ ಗೆ ಸ್ಥಳಾಂತರ ಆಗುತ್ತಾರೆ. ಬ್ರೌನ್ಸ್ ವಿಲ್ ಕ್ರೈಂಗೆ ಹೆಸರುವಾಸಿಯಾಗಿತ್ತು.

ಮೈಕ್ ಒರಟು ಸ್ವಭಾವದವನಾಗಿದ್ದ, ಅವನು ಸುಮ್ಮನೆ ಎಲ್ಲರೊಂದಿಗೆ ಜಗಳ ಮಾಡುತ್ತಿದ್ದ, ತನಗಿಂತ ದೊಡ್ಡವರೊಂದಿಗೆ ಜಗಳಕ್ಕೆ ಇಳಿಯುತ್ತಿದ್ದ. ಮೈಕ್ ಅವರ ಬಳಿ ಇದ್ದ ಪಾರಿವಾಳಕ್ಕೆ ಹಿಂಸೆ ಕೊಟ್ಟಿದ್ದಕ್ಕೆ ಯುವಕರನ್ನು ನಜ್ಜುಗುಜ್ಜು ಮಾಡಿದ್ದ. ಯಾವಾಗಲೂ ಗಲಾಟೆಯಲ್ಲಿ ತೊಡಗಿಕೊಂಡ ಮೈಕ್ ಕೆಲವು ಸಲ ಲಾಕಪ್ ಕಂಬಿಯನ್ನು ಎಣಿಸಿದ್ದನು. ಯಾರಾದರೂ ಅವನಿಗೆ ತಮಾಷೆ ಮಾಡಿದರೆ ರೇಗಿಸಿದರೆ ಅವರನ್ನು ಸುಮ್ಮನೆ ಬಿಡುತ್ತಿರಲಿಲ್ಲ. ಚಿಕ್ಕವನಿದ್ದಾಗಿನಿಂದಲೂ ಮೊಂಡು ಧೈರ್ಯ ಹೊಂದಿದ್ದನು. ಮೈಕ್ ಹದಿನಾರು ವರ್ಷದವನಿದ್ದಾಗ ಅವನ ತಾಯಿ ತೀರಿಕೊಳ್ಳುತ್ತಾಳೆ ಅವನ ತಾಯಿ ಸಾಯುವಾಗ ಹತ್ತಿರದ ಬಾಕ್ಸಿಂಗ್ ಟ್ರೈನರ್ ಹಾಗೂ ಮ್ಯಾನೇಜರ್ ಕಸ್ಡಿ ಅಮಾಟೊ ಬಳಿ ಬಿಡುತ್ತಾರೆ. ಬಾಕ್ಸಿಂಗ್ ಟ್ರೈನರ್ ಗರಡಿಯಲ್ಲಿ ಬೆಳೆದು ಬಾಕ್ಸಿಂಗ್ ಬಗ್ಗೆ ಕಲಿತುಕೊಳ್ಳುತ್ತಾನೆ. ಈ ಸಮಯದಲ್ಲಿ ಬಾಬಿ ಸ್ಟುವರ್ಡ್ ಎಂಬ ಮಾಜಿ ಬಾಕ್ಸರ್ ಪರಿಚಯವಾಗುತ್ತಾರೆ ಅವರಿಂದಲೂ ಬಾಕ್ಸಿಂಗ್ ಬಗ್ಗೆ ತಿಳಿದುಕೊಳ್ಳುತ್ತಾನೆ.

ನಂತರ 1982ರಲ್ಲಿ ಇಂಟರ್ನ್ಯಾಷನಲ್ ಜ್ಯೂನಿಯರ್ ಒಲಂಪಿಕ್ಸ್ ನಲ್ಲಿ ಜ್ಯೂನಿಯರ್ ಬಾಕ್ಸಿಂಗ್ ನಲ್ಲಿ ಗೋಲ್ಡ್ ಮೆಡಲ್ ಗೆಲ್ಲುತ್ತಾರೆ. ಇದು ಮೈಕ್ ಅವರ ಮೊದಲ ಗೆಲುವಾಗಿತ್ತು. ಕೇವಲ 8 ಸೆಕೆಂಡ್ ಒಳಗೆ ಎದುರಾಳಿಯನ್ನು ಸೋಲಿಸಿ ವಿಶ್ವದಾಖಲೆಯನ್ನು ಮೈಕ್ ಬರೆದರು. ಈ ಗೆಲುವಿನಿಂದ ಅವರನ್ನು ಐರನ್ ಮೈಕ್, ಕಿಡ್ ಡೈನಾ ಮೈಕ್ ಹೀಗೆ ಕೆಲವು ಹೆಸರುಗಳಿಂದ ಕರೆಯಲಾಗುತ್ತಿತ್ತು. 19 ವರ್ಷದ ನಂತರ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆಲ್ಲುತ್ತಾರೆ, ಕಡಿಮೆ ಸಮಯದಲ್ಲಿ ಎದುರಾಳಿಯನ್ನು ಸೋಲಿಸುತ್ತಾರೆ. ಮೈಕ್ ಟೈಸನ್ ಅವರು ಸ್ಪರ್ಧೆಯಲ್ಲಿ ಎದುರಾಳಿ ಎಷ್ಟೇ ಸಮರ್ಥರಾಗಿದ್ದರೂ ಅವರನ್ನು ಸೋಲಿಸುತ್ತಿದ್ದರು. ಕೇವಲ ಅಮೆರಿಕ ಮಾತ್ರವಲ್ಲದೆ ಜಗತ್ತಿನ ಅನೇಕ ದೇಶಗಳಲ್ಲಿ ಅವರ ಹೆಸರು ಪ್ರಸಿದ್ಧವಾಯಿತು. ಮೈಕ್ ಅವರಿಗೆ ಹೆಸರಿನ ಜೊತೆಗೆ ಹಣ, ಪ್ರತಿಷ್ಠೆ ದೊರೆಯಿತು. ಮೈಕ್ ಅವರು ತಮ್ಮ ಬಹುಕಾಲದ ಗೆಳತಿ ಆದ ರಾಬಿನ್ಸ್ ಗಿವೆನ್ಸ್ ಎಂಬುವವರನ್ನು ಮದುವೆಯಾಗುತ್ತಾರೆ ಆದರೆ ಮದುವೆಯಾಗಿ ಸ್ವಲ್ಪ ಸಮಯದಲ್ಲಿ ತಮ್ಮ ವೃತ್ತಿ ಬದುಕಿಗೆ ರಾಬಿನ್ಸ್ ಅಡ್ಡಿಯಾಗುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತದೆ. ಮೈಕ್ ಅವರು ಸ್ಪರ್ಧೆಯಲ್ಲಿ ಗೆಲ್ಲುವ ಮೂಲಕ ಸಾಕಷ್ಟು ಹಣವನ್ನು ಗಳಿಸುತ್ತಿದ್ದರು ಹಣಕಾಸಿನ ವ್ಯವಹಾರದಲ್ಲಿ ರಾಬಿನ್ಸ್ ಮತ್ತು ಮೈಕ್ ಇಬ್ಬರಿಗೂ ಮನಸ್ತಾಪ ಉಂಟಾಗಿ ಕೋರ್ಟ್ ಮೂಲಕ ಮದುವೆಯಾಗಿ ಒಂದು ವರ್ಷಕ್ಕೆ ವಿಚ್ಛೇದನ ಪಡೆಯುತ್ತಾರೆ.

ನಂತರ ಮೈಕ್ ಅವರು ಸ್ಪರ್ಧೆಗಳಲ್ಲಿ ಭಾಗವಹಿಸಿ ಅಭಿಮಾನಿಗಳನ್ನು ಹೊಂದಿದರು. ತಮ್ಮ ಬಿಡುವಿನ ಸಮಯದಲ್ಲಿ ಗರ್ಲ್ ಫ್ರೆಂಡ್ಸ್ ಜೊತೆಗೆ ಕಳೆಯುತ್ತಾರೆ. ಅವರು ಕೆಲವುಸಲ ಡ್ರಗ್ಸ್ ಸೇವಿಸಿ ಗಂಭೀರ ಅಪವಾದಕ್ಕೆ ಗುರಿಯಾಗಿದ್ದರು. 1992 ರಲ್ಲಿ ಅವರು ಮಿಸ್ ಅಮೆರಿಕ ಸ್ಪರ್ಧೆಯ ಸ್ಪರ್ಧಿಯೊಬ್ಬರಿಗೆ ಹೋಟೆಲ್ ರೂಮ್ ನಲ್ಲಿ ಅತ್ಯಾಚಾರವೆಸಗಲು ಪ್ರಯತ್ನಿಸಿದ್ದಾರೆ ಎಂಬ ಆರೋಪಕ್ಕೆ ಒಳಗಾದರು, ಈ ಆರೋಪದಡಿ ಅವರನ್ನು ಬಂಧಿಸಲಾಯಿತು ಆದರೆ ಮೈಕ್ ಅವರು ಈ ಅಪವಾದವನ್ನು ನಿರಾಕರಿಸಿ ಹೋಟೆಲ್ ನಲ್ಲಿ ತನ್ನ ಹಾಗೂ ಯುವತಿಯ ನಡುವೆ ಪರಸ್ಪರ ಒಪ್ಪಿಗೆಯಿಂದ ನಡೆಯಿತು, ನಾನು ಅವಳ ಮೇಲೆ ಬಲವಂತದ ದೌರ್ಜನ್ಯ ಎಸಗಿಲ್ಲ ಎಂದು ಮೈಕ್ ವಾದಿಸಿದರು ಆದರೆ ಅವರ ವಾದ ಗೆಲ್ಲದ ಕಾರಣ ಆರು ವರ್ಷ ಅವರಿಗೆ ಜೈಲುವಾಸವಾಯಿತು. ಮೈಕ್ ಅವರು ಜೈಲಿನಲ್ಲಿರುವಾಗ ಇಸ್ಲಾಮ್ ಧರ್ಮದ ಪ್ರಭಾವಕ್ಕೆ ಒಳಗಾಗಿ ಇಸ್ಲಾಮ್ ಧರ್ಮಕ್ಕೆ ಮತಾಂತರವಾದ ನಂತರ ಅವರ ಹೆಸರು ಮಾಲಿಕ್ ಅಬ್ದುಲ್ ಅಜೀಜ್ ಆಗಿ ಬದಲಾಯಿತು. ಮೈಕ್ ಅವರ ಸಭ್ಯತೆಯ ನಡೆ-ನುಡಿಯಿಂದ ಮೂರು ವರ್ಷಕ್ಕೆ ಅವರನ್ನು ಜೈಲಿನಿಂದ ಬಿಡುಗಡೆಗೊಳಿಸಲಾಯಿತು. ನಂತರ ಮೈಕ್ ಅವರು ಹಳೆಯದನ್ನು ಮರೆತು ಬಾಕ್ಸಿಂಗ್ ನಲ್ಲಿ ಅಖಾಡಕ್ಕಿಳಿದರು.

ಮೈಕ್ ಅವರು 1997 ರಲ್ಲಿ ಹೋಲಿಫೀಲ್ಡ್ ಎಂಬ ದೈತ್ಯ ಬಾಕ್ಸರ್ ವಿರುದ್ಧ ಆಡಬೇಕಿತ್ತು ಪಂದ್ಯದ ಮಧ್ಯದಲ್ಲಿ ಮೈಕ್ ಅವರಿಗೆ ತಾನು ಹೋಲಿಫೀಲ್ಡ್ ವಿರುದ್ಧ ಗೆಲ್ಲಲಾರೆ ಎಂದು ಅರಿತು ಪಂದ್ಯದ ಕೊನೆಯಲ್ಲಿ ಮೈಕ್ ತನ್ನ ಎದುರಾಳಿಯ ಕಿವಿಯನ್ನು ಕಚ್ಚಿ ಗಾಯಗೊಳಿಸಿದರು ಇದು ಬಾಕ್ಸಿಂಗ್ ನಲ್ಲಿ ನಿಷಿದ್ಧ. ಇದರಿಂದ ಮಾಧ್ಯಮ ಹಾಗೂ ಜನರು ಮೈಕ್ ಅವರನ್ನು ಕಟುವಾಗಿ ನಿಂದಿಸಿದರು. ಆಗ ಮೈಕ್ ಜನರ ಮುಂದೆ ಕ್ಷಮೆ ಕೇಳಿದರು ಆದರೆ ಪ್ರಯೋಜನವಾಗಲಿಲ್ಲ, ಬಾಕ್ಸಿಂಗ್ ನಿಂದ ಒಂದು ವರ್ಷ ಅವರನ್ನು ಹೊರ ಹಾಕಲಾಯಿತು. ನಂತರ ಬಾಕ್ಸಿಂಗ್ ಗೆ ವಾಪಸ್ ಬಂದರು ಮೊದಲಿನಷ್ಟು ಅವರು ಸ್ಟ್ರಾಂಗ್ ಇರಲಿಲ್ಲ ಅವರು ವೀಕ್ ಆಗುತ್ತಾ ಹೋದರು 2005ರಲ್ಲಿ ತಾವೇ ಸ್ವಯಂ ನಿವೃತ್ತಿ ಘೋಷಿಸಿಕೊಂಡರು. ಅವರು 1975 ರಿಂದ 2005 ರವರೆಗಿನ ತಮ್ಮ ಬಾಕ್ಸಿಂಗ್ ಜೀವನದಲ್ಲಿ ಅನೇಕ ಬಿರುದುಗಳು ಸನ್ಮಾನಗಳಿಗೆ ಪಾತ್ರರಾಗಿದ್ದಾರೆ. ಬಾಕ್ಸಿಂಗ್ ಹೆವಿ ವೇಟ್ ಟೈಟಲ್ ಅನ್ನು ಗೆದ್ದ ಜಗತ್ತಿನ ಮೊಟ್ಟಮೊದಲ ಕಿರಿಯ ಫೈಟರ್ ಎಂಬ ಕೀರ್ತಿ ಮೈಕ್ ರದ್ದು ಅಲ್ಲದೆ ಇವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ದ ರಿಂಗ್ ಮ್ಯಾಕ್ಸಿನ್ ಹೊರಡಿಸಿದ ನೂರು ಜನ ಅತ್ಯಂತ ಪವರ್ ಫುಲ್ ಬಾಕ್ಸರ್ ಪಟ್ಟಿಯಲ್ಲಿ ಮೈಕ್ ಟೈಸನ್ ಅವರು ಸ್ಥಾನ ಪಡೆದಿದ್ದಾರೆ.

Leave A Reply

Your email address will not be published.