ಶಂಕರ್ ಅಶ್ವಥ್ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ಪ್ರಮುಖ ಪೋಷಕನಟರಲ್ಲಿ ಇವರೂ ಸಹ ಒಬ್ಬರು. ಇವರು ಕನ್ನಡ ಸಿನಿರಂಗದ ದಿಗ್ಗಜ ಚಾಮಯ್ಯ ಮೇಷ್ಟ್ರು ಎಂದೇ ಹೆಸರಾದ ನಟ ಅಶ್ವಥ್ ಅವರ ಪುತ್ರ. ಹಲವಾರು ಚಿತ್ರಗಳಲ್ಲಿ ತಮ್ಮ ಪ್ರಬುದ್ಧ ನಟನೆಯಿಂದ ಅಭಿನಯ ಪ್ರೌಢಿಮೆ ಮೆರೆದಿದ್ದಾರೆ.

ಜೀವನೋಪಾಯಕ್ಕಾಗಿ ಟ್ಯಾಕ್ಸಿ ಕೂಡ ಓಡಿಸುತ್ತಿರುವ ಅಶ್ವಥ್ ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಕನ್ನಡ ಸೀಸನ್ 8 ರ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಶಂಕರ್ ಅಶ್ವತ್ ಅವರು ಬಿಗ್ ಬಾಸ್ ಕಾರ್ಯಕ್ರಮದಿಂದ ಹೊರ ಬಂದ ನಂತರ ಈಗ ಏನು ಮಾಡುತ್ತಾ ಇದ್ದಾರೆ ? ಅವರ ಈಗಿನ ಜೀವನ ಹೇಗಿದೆ ಅನ್ನೋದನ್ನ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

“ಕುಳಿತುಕೊಂಡು ತಿಂದರೆ ಎಷ್ಟು ದಿನವೂ ಬರುವುದಿಲ್ಲ, ಆದೆ ದುಡಿದು ತಿಂದರೆ ರೋಗವೂ ಬರುವುದಿಲ್ಲ” ಅಂತ ನಮ್ಮ ತಂದೆ ಹೇಳಿದ್ದಾರೆ ಎಂದು ತಂದೆ ಹೇಳಿದ ಮಾತನ್ನು ಸದಾ ನೆನಪಿನಲ್ಲಿ ಇಟ್ಟುಕೊಂಡು ಜೀವನೋಪಾಯಕ್ಕಾಗಿ ನಟ ಶಂಕರ್ ಅಶ್ವತ್ಥ್ ಅವರು ಊಬರ್ ಚಾಲನೆ ಮಾಡುತ್ತಾರೆ ಹಾಗೂ ಅವರ ಪತ್ನಿ ಕ್ಯಾಟರಿಂಗ್ ಮಾಡುತ್ತಾರೆ. ಶಂಕರ್‌ ಅಶ್ವತ್ಥ್‌ ಅವರು ಸ್ಯಾಂಡಲ್‌ವುಡ್‌ನ ಒಬ್ಬ ಅನುಭವಿ ಹಿರಿಯ ಕಲಾವಿದ. ಸೋಶಿಯಲ್‌ ಮೀಡಿಯಾ ಮೂಲಕ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತ ಇರುತ್ತಾರೆ.80-90 ರ ದಶಕದಲ್ಲಿ ಸಿನಿಮಾರಂಗವನ್ನು ಆಳಿದ ಹಿರಿಯ ಕಲಾವಿದರ ಬಹುತೇಕ ಮಕ್ಕಳುಗಳು ತಮ್ಮ ತಂದೆಯಂತೆ ಚಿತ್ರರಂಗದಲ್ಲಿ ನೆಲೆಯೂರಲು ಪ್ರಯತ್ನ ಪಟ್ಟರೂ ಅದು ಆಗಲಿಲ್ಲ. ಅಭಿನಯ ಎಂಬುದು ತಮ್ಮ ರಕ್ತದಲ್ಲೇ ಬಂದಿದ್ದರೂ ನಟನಾ ಕೌಶಲ್ಯತೆಗಳನ್ನು ಹೊಂದಿದ್ದರು ಸಹ ನಿರ್ದೇಶಕ ಮತ್ತು ನಿರ್ಮಾಪಕರು ಅವಕಾಶಗಳನ್ನು ನೀಡುತ್ತಿರಲಿಲ್ಲ.

ಈಗ ಇದೆ ಸಾಲಿನಲ್ಲಿ ಚಾಮಯ್ಯ ಮೇಷ್ಟ್ರು ಅವರ ಪುತ್ರ ಶಂಕರ್ ಅಶ್ವತ್ಥ್ ಅವರು ಸಹ ಒಬ್ಬರು. ಅವರ ಸದ್ಯದ ಪರಿಸ್ಥತಿ ಹೇಗಿದೆ ಎಂದರೆ ಕೇಳಿದರೆ ಕರುಣಾಜನಕ ಎನಿಸುತ್ತದೆ. ಹಿರಿಯ ಕಲಾವಿದ ಅಶ್ವಥ್ ಅವರ ಪುತ್ರ ಶಂಕರ್ ಅಶ್ವಥ್ ಅವರು ಸಿನಿಮಾಗಳಲ್ಲಿ ನಟಿಸಲು ಅವಕಾಶವಿಲ್ಲದೆ ಈಗ ಊಬರ್ ಕ್ಯಾಬ್ ಡ್ರೈವಿಂಗ್ ಮಾಡುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಆದರೆ ಕಷ್ಟ ಕಾಲದಲ್ಲಿ 60 ವರ್ಷ ದಾಟಿದರೂ ಏನೂ ಮಾಡದೆ ಕುಳಿತುಕೊಳ್ಳುವ ಬದಲು ಏನಾದರೂ ಕೆಲಸ ಮಾಡುವುದು ಒಳ್ಳೆಯದು ಎಂದು ತಿಳಿದು ಕ್ಯಾಬ್ ಓಡಿಸಲು ಆರಂಭಿಸಿದರು ಶಂಕರ್ ಅಶ್ವತ್ ಅವರು.
ನಂತರ ದರ್ಶನ್ ಅಭಿನಯದ ಯಜಮಾನ ಚಿತ್ರದಲ್ಲಿ ಹಾಗೂ ಇತ್ತೀಚೆಗೆ ಬಿಡುಗಡೆಯಾದ ಪೊಗರು ಸಿನಿಮಾಗಳಲ್ಲಿ ಪೋಷಕ ನಟನಾಗಿ ಅಭಿನಯಿಸುವ ಅವಕಾಶ ಇವರಿಗೆ ಸಿಕ್ಕಿತ್ತು.

ನಂತರ ಬಿಗ್ ಬಾಸ್ ಸೀಸನ್ ಎಂಟರಲ್ಲಿ ಸ್ಪರ್ಧಿಯಾಗಿ ಸಹ ಭಾಗವಹಿಸಿದ್ದರು. ಹಲವು ಸಿನಿಮಾಗಳಲ್ಲಿ ನಟಿಸಿರುವ ಶಂಕರ್​ ಅಶ್ವತ್ಥ್​ ಅವರಿಗೆ ಬಿಗ್​ ಬಾಸ್​ ಮೂಲಕ ಇನ್ನಷ್ಟು ಜನಪ್ರಿಯತೆ ಸಿಕ್ಕಂತಾಯಿತು. ಬಿಗ್​ ಬಾಸ್​ ಕನ್ನಡ ಸೀಸನ್​ 8ರ ಹಿರಿಯ ಸ್ಪರ್ಧಿ ಎಂದು ಅವರು ಹೈಲೈಟ್​ ಆಗಿದ್ದರು. ಯುವಕರಿಗೆ ಸರಿಸಾಟಿಯಾಗಿ ಪೈಪೋಟಿ ನೀಡುತ್ತಿದ್ದ ಅವರಿಗೆ ಕೆಲವೊಮ್ಮೆ ಹಿನ್ನಡೆ ಆಗುತ್ತಿತ್ತು ಆದರೂ ಒಟ್ಟು ಐದು ವಾರಗಳ ಕಾಲ ಅವರು ಬಿಗ್ ಬಾಸ್ ಮನೆಯಲ್ಲಿ ಕಾಲ ಕಳೆದಿದ್ದರು. ಐದನೇ ವಾರದ ಎಲಿಮಿನೇಷನ್​ನಲ್ಲಿ ಮನೆಯಿಂದ ಆಚೆ ಬಂದಿದ್ದಾರೆ . ಇನ್ನು ಬಿಗ್ ಬಾಸ್ ಮನೆಯಲ್ಲಿ ತನ್ನ ಹೆಂಡತಿಯ ಬಗ್ಗೆ ಹಾಗೂ ಅವರ ಕ್ಯಾಟರಿಂಗ್ ಸರ್ವಿಸ್ ಬಗ್ಗೆ ಮಾತನಾಡಿದ ಶಂಕರ್ ಅಶ್ವತ್ ಅವರು ತನ್ನ ಪತ್ನಿ ಕೈಯಲ್ಲಿ ಊಟ ಮಾಡಿದೋರು 10 ರಿಂದ 15 ಜನರು ತೀರಿಕೊಂಡಿದ್ದಾರಂತೆ. ಹೀಗಂತ ಸ್ವತಃ ಶಂಕರ್ ಅವರೇ ಬಿಗ್ ಬಾಸ್ ಮನೆಯಲ್ಲಿ ಹೇಳಿಕೊಂಡಿದ್ದಾರೆ. ಇದನ್ನು ಕೇಳಿ ಒಮ್ಮೆ ಬಿಗ್ ಬಾಸ್ ಸ್ಪರ್ಧಿಗಳು ಶಾಕ್ ಆಗಿದ್ದಾರೆ. ಕೊನೆಗೆ ಇದನ್ನು ಸರಿಯಾಗಿ ನನ್ನ ಮಾತನ್ನು ಗ್ರಹಿಸಿ ಎಂದು ಹೇಳಿ , ಮದುವೆ ಆದ ಸಂದರ್ಭದಲ್ಲಿ ಶಂಕರ್ ಪತ್ನಿಗೆ ಕಾಫಿ ಕೂಡ ಮಾಡೋಕೆ ಬರುತ್ತಿರಲಿಲ್ಲ. ಈಗ ಅವರು ನಿತ್ಯ 300 ಜನರಿಗೆ ಅಡುಗೆ ಮಾಡಿ ಹಾಕುತ್ತಾರೆ. ಮುಂಬೈನಲ್ಲಿ ಡಬ್ಬಾವಾಲಾ ರೀತಿ ಶಂಕರ್ ಪತ್ನಿ ಅಡುಗೆ ಮಾಡುತ್ತಾರೆ. 10-15 ಜನರ ಕೊನೆಗಾಲದಲ್ಲಿ ಶಂಕರ್ ಪತ್ನಿ ಅವರು ಊಟ ನೀಡಿದ್ದಾರೆ. ಹೀಗಾಗಿ ಅವರು 10 ರಿಂದ 15 ಜನರು ತೀರಿಕೊಂಡಿದ್ದಾರೆ ಅಂತ ಹೇಳಿದ್ದಾರೆ. ಇದನ್ನು ತಪ್ಪು ತಿಳಿಯಬೇಡಿ, ಸರಿಯಾಗಿ ಗ್ರಹಿಸಿ ಅಂತ ಶಂಕರ್ ಹೇಳಿದ್ದಾರೆ.

ಹಾಗಿದ್ದರೆ ಈಗ ಬಿಗ್ ಬಾಸ್ ಮನೆಯಿಂದ ಆಚೆ ಬಂದ ನಂತರ ಶಂಕರ್ ಅಶ್ವತ್ ಅವರು ಹೇಗಿದ್ದಾರೆ? ಅವರ ಜೀವನ ಏನಾದರೂ ಬದಲಾವಣೆ ಆಗಿದೆಯಾ? ಸಿನಿಮಾ ತಾರೆ ಆದರೂ ಸಹ ಬರೀ ಅದೊಂದೇ ಕೆಲಸವನ್ನು ನಂಬಿ ಕೂರದೆ ಸ್ವಾಭಿಮಾನದಿಂದ ಉಬರ್ ಓಡಿಸಿಕೊಂಡು ಜೀವನ ನಡೆಸುತ್ತಿದ್ದರು. ಆದರೆ ಈಗ ಲಾಕ್ ಡೌನ್ ಇರುವುದರಿಂದ ಈಗ ಎನು ಮಾಡುತ್ತಾ ಇದ್ದಾರೆ? ಸದಾ ಸೋಷಿಯಲ್ ಮೀಡಿಯಾ ಗಳಲ್ಲಿ ಸಕ್ರಿಯರಾಗಿ ಇರುವ ಶಂಕರ್ ಅಶ್ವತ್ ಅವರು ಒಳ್ಳೊಳ್ಳೆ ವಿಚಾರಗಳ ಕುರಿತು ತಮ್ಮ ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳುತ್ತಾ ಇರುತ್ತಾರೆ. ಈಗಲೂ ಸಹ ತಾವು ಮಾಡುತ್ತಿರುವ ಕೆಲಸದ ಜೊತೆಗೆ ಒಂದು ಪೋಸ್ಟ್ ಹಂಚಿಕೊಂಡು ಈ ರೀತಿಯಾಗಿ ಬರೆದುಕೊಂಡಿದ್ದಾರೆ. ” ಬಡಿದು ತಿನ್ನುವುದಕ್ಕಿಂತ ದುಡಿದು ತಿನ್ನುವುದು ಮೇಲು, ಬಡಿದು ತಿಂದ ಹಣ ನಮ್ಮ ಸಂತಾನವನ್ನು ಕಾಡುತ್ತದೆ ಆದರೆ ಅದೇ ದುಡಿದು ತಿನ್ನುವುದರಿಂದ ನಮ್ಮ ಮುಂದಿನ ಪೀಳಿಗೆಗಳನ್ನು ಎಷ್ಟೋ ದುಪ್ಪಟ್ಟು ಕಾಪಾಡುತ್ತದೆ”. ಇದು ತನ್ನ ತಂದೆ ಕಲಿಸಿಕೊಟ್ಟ ಮಾತು ಎಂದು ನೆನಪಿಸಿಕೊಂಡು , ಈಗ ಹೇಗಿದ್ದರೂ ಉಬರ್ ಸಂಪಾದನೆ ಕೂಡಾ ಇಲ್ಲ ಹಾಗಾಗಿ ಈಗ ಲಾಕ್ ಡೌನ್ ಸಮಯದಲ್ಲಿ ಜೀವನ ನಡೆಸಲು ಸುಮಾರು ಇಪ್ಪತ್ತು ಕಿಲೋಮೀಟರ್ ವಾಹನ ಚಾಲನೆ ಮಾಡಿ ತಮ್ಮ ಪತ್ನಿಯ ಜೊತೆ ಕೆಲಸದಲ್ಲಿ ಕೈ ಜೋಡಿಸುತ್ತಾ ಇದ್ದೇನೆ. ತನ್ನ ಪತ್ನಿ ಮಾಡಿಕೊಟ್ಟ ಊಟದ ಕ್ಯಾರಿಯರ್ ನ್ನು ತಲುಪಿಸಬೇಕಾದ ಜಾಗಕ್ಕೆ ತಲುಪಿಸಿ ಬರುತ್ತೇನೆ ಎಂದು ಹೇಳುತ್ತಾರೆ. ಹಾಗೆ ಏನೂ ಕೆಲಸ ಇಲ್ಲದೆ ಸುಮ್ಮನೆ ಮನೆಯಲ್ಲಿ ಕುಳಿತು ಕಾಲ ಕಳೆಯುವುದಕ್ಕಿಂತ ಒಂದು ನಾಲ್ಕು ಕಾಸಾದರೂ ಸಂಪಾದನೆ ಮಾಡಿದರೆ ಆ ದಿನ ನೆಮ್ಮದಿ ಇರುತ್ತದೆ ಎಂದು ಹೇಳುತ್ತಾರೆ ಶಂಕರ್ ಅಶ್ವತ್ ಅವರು. ಈ ರೀತಿ ಏನೂ ಕೆಲಸ ಇಲ್ಲ ಎಂದು ಮನೆಯಲ್ಲೇ ಕುಳಿತು ಕಾಲ ಹರಣ ಮಾಡುವವರಿಗೆ ಇಳಿ ವಯಸ್ಸಿನಲ್ಲೂ ದುಡಿದು ತಿನ್ನಬೇಕು ಎಂದು ತೋರಿಸಿಕೊಟ್ಟು ಉತ್ತಮ ಮಾದರಿ ಆಗಿದ್ದಾರೆ ಶಂಕರ್ ಅಶ್ವತ್ ಅವರು.

Leave a Reply

Your email address will not be published. Required fields are marked *