Alvas free school: ಆಳ್ವಾಸ್ ಶಾಲೆಯಲ್ಲಿ ಓದುತ್ತಿದ್ದು, ಉನ್ನತ ಶಿಕ್ಷಣ ಪಡೆಯಬೇಕು ಎಂದು ಆಸೆ ಇಟ್ಟುಕೊಂಡಿರುವ ಅಭ್ಯರ್ಥಿಗಳಿಗೆ ಇದೀಗ ಒಂದು ಗುಡ್ ನ್ಯೂಸ್ ಸಿಕ್ಕಿದೆ. ಅದೇನು ಎಂದರೆ ಆಳ್ವಾಸ್ ಸಂಸ್ಥೆಯ ಮೂಲಕ ಉಚಿತ ಶಿಕ್ಷಣ ಪಡೆಯಲು ಅರ್ಜಿ ಆಹ್ವಾನಿಸಲಾಗಿದ್ದು, ಇದಕ್ಕಾಗಿ ಅರ್ಜಿ ಸಲ್ಲಿಸಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಒಳ್ಳೆಯ ಗುಣಮಟ್ಟದ ಶಿಕ್ಷಣ ಸಿಗಲಿದೆ.. ಈ ಬಗ್ಗೆ ಪೂರ್ತಿ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ನೋಡಿ..

ಎಲ್ಲಾ ತಂದೆ ತಾಯಿಯರಿಗು ತಮ್ಮ ಮಕ್ಕಳಿಗೆ ಒಳ್ಳೆಯ ಗುಣಮಟ್ಟದ ಶಿಕ್ಷಣ ಕೊಡಿಸಬೇಕು ಎಂದು ಆಸೆ ಇರುತ್ತದೆ, ಆದರೆ ಆರ್ಥಿಕ ಕಾರಣ ಅಥವಾ ಇನ್ನಿತರ ಸಮಸ್ಯೆಗಳ ಕಾರಣದಿಂದ ಎಲ್ಲರಿಗೂ ಅದು ಸಾಧ್ಯ ಆಗುವುದಿಲ್ಲ. ಹಾಗಿರುವಾಗ ಆಳ್ವಾಸ್ ಸಂಸ್ಥೆ ಈಗ ಅಂಥ ಕನಸು ಹೊಂದಿರುವ ತಂದೆ ತಾಯಿಯರಿಗೆ ಮತ್ತು ಮಕ್ಕಳಿಗೆ ಒಂದು ಒಳ್ಳೆಯ ಅವಕಾಶ ತಂದಿದೆ. 2024-25ನೇ ಸಾಲಿನ ವರ್ಷಕ್ಕೆ ಸ್ಕಾಲರ್ಶಿಪ್ ನೀಡಲು ಅರ್ಜಿ ಆಹ್ವಾನಿಸಲಾಗಿದ್ದು, ಉಚಿತ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

6, 7, 8, 9 ನೇ ತರಗತಿ ವಿದ್ಯಾರ್ಥಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಕೊನೆಯ ದಿನಾಂಕ ಮುಗಿಯುವುದರೊಳಗೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ಉಚಿತವಾಗಿ ಗುಣಮಟ್ಟದ ಶಿಕ್ಷಣ ಪಡೆದುಕೊಳ್ಳಬಹುದು. ಅರ್ಜಿ ಸಲ್ಲಿಸುವುದು ಹೇಗೆ ಎಂದು ತಿಳಿಸುತ್ತೇವೆ..
www.alvasschool.com ಮೊದಲಿಗೆ ನೀವು ಈ ವೆಬ್ಸೈಟ್ ಗೆ ಭೇಟಿ ನೀಡಬೇಕು
ಇಲ್ಲಿ ಸಿಗುವ ಅರ್ಜಿಯಲ್ಲಿ ಕೇಳಲಾಗುವ ಎಲ್ಲಾ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ಕೊಡಬೇಕು.ಬಳಿಕ ಅರ್ಜಿಯ ಪ್ರಿಂಟ್ ಔಟ್ ಪಡೆದು, ಆಗತ್ಯ ದಾಖಲೆಗಳ ಜೊತೆಗೆ ತಿಳಿಸುವ ವಿಳಾಸಕ್ಕೆ ಪೋಸ್ಟ್ ಮೂಲಕ ಕಳಿಸಬೇಕು.

ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ), ಮೂಡುಬಿದಿರೆ, ದಕ್ಷಿಣ ಕನ್ನಡ -574227.. ಈ ಅಡ್ರೆಸ್ ಗೆ ಅರ್ಜಿಯನ್ನು ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು..
6,7,8,9 ಯಾವುದೇ ಕ್ಲಾಸ್ ಗೆ ಪ್ರವೇಶ ಪಡೆಯಲು ಬಯಸುವ ವಿದ್ಯಾರ್ಥಿಗಳು ಹಿಂದಿನ ವರ್ಷದ ಮಾರ್ಕ್ಸ್ ಕಾರ್ಡ್ ನೀಡಬೇಕು
ಆಧಾರ್ ಕಾರ್ಡ್
ಫೋನ್ ನಂಬರ್
ಇಮೇಲ್ ಅಡ್ರೆಸ್
ಹಾಗೂ ಇನ್ನಿತರ ಮಾಹಿತಿಗಳು

ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು..
ಅರ್ಜಿ ಹಾಕದೆ ನೇರವಾಗಿ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಿಲ್ಲ
ಅರ್ಜಿ ಹಾಕಿ, ಈ ಪ್ರಕ್ರಿಯೆಯಲ್ಲಿ ಸೆಲೆಕ್ಟ್ ಆದವರಿಗೆ ಮಾತ್ರ ಪೂರ್ತಿ ಉಚಿತ ಶಿಕ್ಷಣ, ಉಚಿತ ವಸತಿ ಹಾಗೂ ಊಟೋಪಚಾರದ ಸೌಲಭ್ಯ ಸಿಗುತ್ತದೆ.
ಅರ್ಜಿ ಸಲ್ಲಿಕೆಗೆ 15/2/2024 ಕೊನೆಯ ದಿನಾಂಕ ಆಗಿದೆ. 3/3/2024ರಂದು, ಆಳ್ವಾಸ್ ಆವರಣ ಮೂಡುಬಿದಿರೆಯಲ್ಲಿ ಆಯ್ಕೆ ಪರೀಕ್ಷೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ 7026530137, 7026530263 ಈ ನಂಬರ್ ಗಳಿಗೆ ಕರೆಮಾಡಬಹುದು.

By AS Naik

Leave a Reply

Your email address will not be published. Required fields are marked *