Kisan ashirvad yojane: ಇತ್ತೀಚಿನ ದಿನಗಳಲ್ಲಿ ಕೃಷಿಯಲ್ಲಿ ತೊಡಗಿಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ ನಮ್ಮ ದೇಶದ ಮುಖ್ಯ ಕಸಬು ಕೃಷಿಯಾಗಿದ್ದರೂ ಕೃಷಿಯಿಂದ ದೂರ ಉಳಿಯುವವರು ಹೆಚ್ಚಾಗಿದ್ದಾರೆ ಹೀಗಾಗಿ ರೈತರ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರೈತರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ ಇದೀಗ ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯ ಬಗ್ಗೆ ಈ ಲೇಖನದಲ್ಲಿ ನೋಡೋಣ

ಕೇಂದ್ರ ಸರ್ಕಾರ ರೈತರಿಗೆ ಸಿಹಿ ಸುದ್ದಿಯೊಂದನ್ನು ನೀಡುತ್ತಿದೆ. ಕೇಂದ್ರ ಸರ್ಕಾರ ರೈತರ ಅಭಿವೃದ್ಧಿಗಾಗಿ ಹಲವಾರು ರೀತಿಯ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಲೆ ಇರುತ್ತದೆ. ರೈತರ ಅಭಿವೃದ್ಧಿಗಾಗಿ ವಿವಿಧ ಸೌಲಭ್ಯಗಳನ್ನು ಜಾರಿಗೆ ತರುವಲ್ಲಿ ಸರ್ಕಾರ ಚಿಂತನೆ ನಡೆಸಿದೆ. ಕೇಂದ್ರ ಸರ್ಕಾರ ಮೊದಲಿನಿಂದಲೂ ರೈತರು ಕೃಷಿಯಲ್ಲಿ ತೊಡಗಿಕೊಳ್ಳಲು, ಕೃಷಿ ತರಬೇತಿ ಹಾಗೂ ಕೃಷಿ ಬೀಜ ವಿತರಣೆ, ಕೃಷಿ ಸಲಕರಣೆ, ಕೃಷಿ ಉಪಕರಣಗಳ ವಿತರಣೆ ಇತ್ಯಾದಿ ಸೌಲಭ್ಯ ಹಾಗೂ ಪ್ರೇರಣೆ ನೀಡುತ್ತಾ ಬಂದಿದೆ. ಅದೆ ರೀತಿ ಕೇಂದ್ರ ಸರ್ಕಾರ ರೈತರ ಅಭಿವೃದ್ಧಿಗಾಗಿ ಹಲವಾರು ಪ್ರಮುಖ ಯೋಜನೆಗಳನ್ನು ಜಾರಿಗೊಳಿಸುತ್ತಾ ಬಂದಿದೆ ಇದೀಗ ಹೊಸ ಯೋಜನೆಯ ಬಗ್ಗೆ ಅಪ್ಡೇಟ್ ನೀಡಿದೆ.

ಕೇಂದ್ರ ಸರ್ಕಾರ ಕಿಸಾನ್ ಆಶೀರ್ವಾದ ಯೋಜನೆಯನ್ನು ಜಾರಿಗೆ ತಂದಿದೆ ಈ ಯೋಜನೆಯ ಮೂಲಕ ರೈತರಿಗೆ ಮತ್ತಷ್ಟು ಬೆಂಬಲ ದೊರೆಯಲಿದೆ ಹಾಗೂ ಕೃಷಿಯಲ್ಲಿ ತೊಡಗಿಕೊಳ್ಳಲು ಪ್ರೋತ್ಸಾಹ ಸಿಗಲಿದೆ. ಈ ಯೋಜನೆಯ ಸೌಲಭ್ಯವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಂಟಿಯಾಗಿ ರೈತರಿಗೆ ವಿತರಣೆ ಮಾಡಲಿದೆ ಸಾಕಷ್ಟು ರೈತರಿಗೆ ಈ ಯೋಜನೆಯ ಮೂಲಕ ಸಹಾಯವಾಗಲಿದೆ. ರೈತರ ಬಳಿ 5 ಅಥವಾ 5 ಎಕರೆಗಿಂತ ಕಡಿಮೆ ಜಮೀನಿದ್ದರೆ ಅಂತಹ ರೈತರ ಖಾತೆಗೆ ಹಣ ಜಮಾ ಆಗುತ್ತದೆ.

ಪ್ರಸ್ತುತ ಕಿಸಾನ್ ಆಶೀರ್ವಾದ ಯೋಜನೆ ಝಾರ್ಖಂಡ್ ರಾಜ್ಯದಲ್ಲಿ ಹೆಚ್ಚಿನ ಸ್ಥಾನವನ್ನು ಪಡೆದುಕೊಂಡಿದೆ. ಝಾರ್ಖಂಡ್ ರಾಜ್ಯದಲ್ಲಿ ಒಂದು ಎಕರೆ ಕೃಷಿ ಭೂಮಿ ಹೊಂದಿರುವವರಿಗೆ 5000 ರೂಪಾಯಿ 2 ಎಕರೆ ಕೃಷಿ ಭೂಮಿ ಹೊಂದಿರುವವರಿಗೆ 10,000 ರೂಪಾಯಿ ಮೂರು ಎಕರೆ ಕೃಷಿ ಭೂಮಿ ಹೊಂದಿರುವವರಿಗೆ 15000 ರೂಪಾಯಿ ನಾಲ್ಕು ಎಕರೆ ಕೃಷಿ ಭೂಮಿ ಹೊಂದಿರುವವರಿಗೆ 20,000 ರೂಪಾಯಿ 5 ಎಕರೆ ಕೃಷಿ ಭೂಮಿ ಹೊಂದಿರುವ ರೈತರಿಗೆ 25000 ರೂಪಾಯಿ ನೀಡಲಾಗುತ್ತದೆ.

ಕಿಸಾನ್ ಆಶೀರ್ವಾದ ಯೋಜನೆಗೆ ಅರ್ಜಿ ಸಲ್ಲಿಸಲು ರೈತರ ಕೆಲವು ದಾಖಲೆಗಳು ಅವಶ್ಯಕವಾಗಿವೆ ಅವುಗಳೆಂದರೆ ರೈತರ ಪಾಣಿ ಪತ್ರ, ಆಧಾರ್ ಕಾರ್ಡ, ಬ್ಯಾಂಕ್ ಖಾತೆ ವಿವರ ಅಂದರೆ ಪಾಸ್ ಬುಕ್ ಜೆರಾಕ್ಸ್, ವಿಳಾಸ ಪುರಾವೆಯಾಗಿ ಒಂದು ದಾಖಲೆ, ಆದಾಯ ಪ್ರಮಾಣ ಪತ್ರ ಅವಶ್ಯವಾಗಿ ಬೇಕಾಗುತ್ತದೆ. ಕಿಸಾನ್ ಆಶಿರ್ವಾದ ಯೋಜನೆ ಅರ್ಜಿ ಸಲ್ಲಿಸಲು ಸಂಬಂಧಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಅರ್ಜಿ ಫಾರಂ ಸಿಗುತ್ತದೆ ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕು ಅಥವಾ ಹತ್ತಿರದ ಕೃಷಿ ಇಲಾಖೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲ ರೈತ ಬಾಂಧವರಿಗೂ ತಿಳಿಸಿ, ಸರ್ಕಾರದ ಯೋಜನೆಯ ಪ್ರಯೋಜನ ಪಡೆಯಿರಿ.

By

Leave a Reply

Your email address will not be published. Required fields are marked *