ಭಾರತದಲ್ಲಿ ಅತಿಹೆಚ್ಚು ಸೇಲ್ ಆಗ್ತಿರೋ ಆಲ್ಟೊ 800ನ ಹೊಸ ಲುಕ್ ಹಾಗೂ ವಿಶೇಷತೆಗೆ ನೆಟ್ಟಿಗರು ಫುಲ್ ಫಿದಾ

0 1

ಕೆಲವರಿಗೆ ಕಾರನ್ನು ಖರೀದಿಸಬೇಕು ಕಾರಲ್ಲಿ ಮನೆಯವರೆಲ್ಲರೊಂದಿಗೆ ಸಂತೋಷವಾಗಿ ಓಡಾಡಬೇಕು ಎಂಬ ಆಸೆ ಇರುತ್ತದೆ. ಬಹಳಷ್ಟು ಜನರಿಗೆ ಕಾರನ್ನು ಕೊಳ್ಳುವಷ್ಟು ಹಣ ಇರುವುದಿಲ್ಲ. ಮಾರುತಿ ಸುಜುಕಿ ಕಂಪನಿಯ ವಿವಿಧ ಕಾರುಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ.

ಮಾರುತಿ ಸುಜುಕಿ 800 ಪವರ್ ವಿಂಡೋ, ಎಲ್ಇಡಿ ಡಿಆರ್​ಎಲ್​ಗಳು, ವೀಲ್ ಕ್ಯಾಪ್​ಗಳು, ಡ್ಯುಯಲ್ ಏರ್​ಬ್ಯಾಗ್​ಗಳು, ಎಬಿಎಸ್ ಜೊತೆಗೆ ಇಬಿಡಿ ಮತ್ತು ರಿವರ್ಸ್ ಪಾರ್ಕಿಂಗ್ ಮುಂತಾದ ವೈಶಿಷ್ಟ್ಯಗಳು ಈ ಕಾರಿನಲ್ಲಿ ನೋಡಬಹುದು. ಭಾರತದಲ್ಲಿ ಮಾರುತಿ ಕಂಪನಿಯ ಅತ್ಯಂತ ಕೈಗೆಟುಕುವ ಕಾರುಗಳಲ್ಲಿ ಮಾರುತಿ ಆಲ್ಟೊ 800 ಮುಂಚೂಣಿಯಲ್ಲಿದೆ. ಇದೀಗ ಕಂಪನಿಯು ಈ ಕಾರನ್ನು ಹೊಸ ಶೈಲಿಯಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ. ಇದಕ್ಕೂ ಮುನ್ನ ಆಲ್ಟೋ ಕಾರನ್ನು ಹಲವು ವಿನ್ಯಾಸ ಹಾಗೂ ಕೆಲವು ವಿಶೇಷತೆಗಳನ್ನು ಅಳವಡಿಸುವ ಮೂಲಕ ಬಿಡುಗಡೆ ಮಾಡಲಾಗಿತ್ತು. ಆದರೂ ಯಾವುದೆ ರೀತಿಯಲ್ಲಿ ಅದರ ಜನಪ್ರಿಯತೆಯಲ್ಲಿ ಕುಸಿತ ಕಂಡುಬಂದಿರಲಿಲ್ಲ.

ಇದೀಗ ಹೊಸ ಆಲ್ಟೋ ಕೂಡ ಹಳೆಯ ಮಾದರಿಯಲ್ಲೆ ಇರಲಿದ್ದು ಒಂದು ಸಣ್ಣ ಬದಲಾವಣೆಯನ್ನು ಮಾಡಲಾಗಿದೆ. ಈ ಬಾರಿ ಪೆಟ್ರೋಲ್ ಹಾಗೂ ಸಿಎನ್ ಜಿ ರೂಪಾಂತರದಲ್ಲಿ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದರ ಬೆಲೆ 5 ಲಕ್ಷ ರೂಪಾಯಿಗಿಂತ ಕಡಿಮೆ ಇರಲಿದೆ ಎಂಬುದು ಸಂತೋಷದ ವಿಷಯ. ಹಾಗಾದರೆ ಈ ಕಾರು 5 ವೈಶಿಷ್ಟ್ಯಗಳನ್ನು ಹೊಂದಿದೆ. ಹೊಸ ಆಲ್ಟೊ ಹಾರ್ಟೆಕ್ಟ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿರುವ ಸಾಧ್ಯತೆಯಿದೆ. ಇದು ಮಾರುತಿಯ ಎಸ್-ಪ್ರೆಸ್ಸೊ ಲುಕ್‌ನೊಂದಿಗೆ ಕಂಡು ಬರಲಿದೆ ಏಕೆಂದರೆ ರಸ್ತೆ ಪರೀಕ್ಷೆಯ ಸಮಯದಲ್ಲಿ ಕಂಡು ಬಂದಿರುವ ನ್ಯೂ ಜೆನ್ ಆಲ್ಟೊ ಎಸ್-ಪ್ರೆಸ್ಸೊ ಕಾರಿನ ವಿನ್ಯಾಸವನ್ನು ಹೆಚ್ಚಾಗಿ ಹೋಲುತ್ತಿದೆ. ಎರಡನೆಯ ವೈಶಿಷ್ಟ್ಯವೆಂದರೆ ಹೊಸ ತಲೆಮಾರಿನ ಆಲ್ಟೊ 796 ಸಿಸಿ, 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿರುವ ಸಾಧ್ಯತೆಯಿದೆ.

ಈ ಎಂಜಿನ್ 48 ಪಿಎಸ್ ಪವರ್ ಮತ್ತು 69 ಎನ್ಎಂ ಪೀಕ್ ಟಾರ್ಕ್ ಅನ್ನು ಪಡೆಯುತ್ತದೆ. ಇದು 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರಲಿದೆ. ಇದರಲ್ಲಿ ಮಾರುತಿ ಸುಜುಕಿ ಸ್ವಯಂಚಾಲಿತ ಗೇರ್‌ಬಾಕ್ಸ್‌ ನೀಡುವ ಸಾಧ್ಯತೆಯಿದೆ. ಮೂರನೆಯ ವಿಶೇಷವೆಂದರೆ ಕಂಪನಿಯು ಈ ಕಾರಿನ ಬೆಲೆಯನ್ನು ಕೈಗೆಟುಕುವ ವಿಭಾಗದಲ್ಲಿ ನಿರ್ವಹಿಸಲು ಬಯಸುತ್ತದೆ. ಹಾಗೆಯೆ ಸ್ಮಾರ್ಟ್‌ಪ್ಲೇ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಈ ಸರಣಿಯ ಟಾಪ್ ಎಂಡ್ ರೂಪಾಂತರದಲ್ಲಿ ಲಭ್ಯವಿರುತ್ತದೆ. ಈ ವ್ಯವಸ್ಥೆಯು ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೊ ಸಂಪರ್ಕದೊಂದಿಗೆ ಇರಲಿದೆ.

ನಾಲ್ಕನೆ ವೈಶಿಷ್ಟ್ಯವೆಂದರೆ ಪವರ್ ವಿಂಡೋ, ಎಲ್ಇಡಿ ಡಿಆರ್​ಎಲ್​ಗಳು, ವೀಲ್ ಕ್ಯಾಪ್​ಗಳು, ಡ್ಯುಯೆಲ್ ಏರ್​ಬ್ಯಾಗ್​ಗಳು, ಎಬಿಎಸ್ ಜೊತೆಗೆ ಇಬಿಡಿ ಮತ್ತು ರಿವರ್ಸ್ ಪಾರ್ಕಿಂಗ್ ಮುಂತಾದ ವೈಶಿಷ್ಟ್ಯಗಳು ಈ ಕಾರಿನಲ್ಲಿ ಲಭ್ಯವಿರುತ್ತವೆ. ಐದನೆ ವೈಶಿಷ್ಟ್ಯ ಈ ವರ್ಷದ ಅಂತ್ಯದ ವೇಳೆಗೆ ಈ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ ಆದರೂ ಇಲ್ಲಿಯವರೆಗೆ ಕಂಪನಿಯು ಬಿಡುಗಡೆಯ ಮಾಹಿತಿಯನ್ನು ಹಂಚಿಕೊಂಡಿಲ್ಲ. ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ. ಕಾರು ಪ್ರಿಯರಿಗೆ ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ಬಂಪರ್ ಬಹುಮಾನ ಪಡೆಯಿರಿ.

Leave A Reply

Your email address will not be published.