ನಟ ಅವಿನಾಶ್ ಮಾಳವಿಕ ದಂಪತಿ ಅವರ ಕನಸಿನ ಮನೆ ಹೇಗಿದೆ ನೋಡಿ

0 5

ಮಾಳವಿಕಾ ಅವಿನಾಶ್ ಅವರ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ. ಅನೇಕ ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ಮಿಂಚಿರುವುದಲ್ಲದೆ ರಾಕಿಂಗ್ ಸ್ಟಾರ್ ಯಶ್ ಅವರ ಅದ್ಭುತ ಕೆಜಿಎಫ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಮಾಳವಿಕಾ ಅವಿನಾಶ್ ಅವರ ಕುಟುಂಬದವರ ಬಗ್ಗೆ ಹಾಗೂ ಅವರ ಮನೆಯ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಮಾಳವಿಕಾ ಅವರು ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್ ಸಿನಿಮಾದಲ್ಲಿ ನಟಿಸಿದ್ದಾರೆ. ಅವರು ಕನ್ನಡ ಚಿತ್ರರಂಗ ಮಾತ್ರವಲ್ಲದೆ ತಮಿಳು ಚಿತ್ರರಂಗದಲ್ಲಿ ನಟಿಸಿದ್ದಾರೆ. ಬದುಕು ಜಟಕಾ ಬಂಡಿ ಎಂಬ ಕಿರುತೆರೆ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು. ಮಾಳವಿಕಾ ಅವರು ನಟನೆ ಮಾತ್ರವಲ್ಲದೆ ರಾಜಕೀಯದಲ್ಲಿಯೂ ಸಕ್ರೀಯವಾಗಿ ಭಾಗವಹಿಸಿದರು. ಅವರು ಚೆನ್ನೈನಲ್ಲಿ ಹುಟ್ಟಿ ಬೆಳೆದಿದ್ದಾರೆ ಈಗ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಅವರು 1988 ರಲ್ಲಿ ತಮ್ಮ ಸಿನಿ ಪಯಣವನ್ನು ಪ್ರಾರಂಭಿಸಿದರು. ಹಲವು ಸಿನಿಮಾಗಳಲ್ಲಿ ಮಾಳವಿಕಾ ಅವರು ನಟನೆ ಮಾಡಿದ್ದಾರೆ. ಇಲ್ಲಿಯವರೆಗೆ ಸುಮಾರು 50 ಸಿನಿಮಾಗಳಲ್ಲಿ ನಟಿಸಿದ್ದಾರೆ.

ಮಾಳವಿಕಾ ಅವರ ಪತಿಯ ಹೆಸರು ಅವಿನಾಶ್ ಅವರು ಸಹ ಕನ್ನಡ ಚಿತ್ರರಂಗದ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. 2001 ರಲ್ಲಿ ಮಾಳವಿಕಾ ಹಾಗೂ ಅವಿನಾಶ್ ಅವರು ವಿವಾಹವಾದರು. ಮಾಳವಿಕಾ ಅವರು ಕೇವಲ ಸಿನಿಮಾ ಮಾತ್ರವಲ್ಲದೆ ಧಾರವಾಹಿಗಳಲ್ಲಿ ಕೂಡ ಅತ್ಯುತ್ತಮ ನಟನೆಯ ಪ್ರದರ್ಶನ ಮಾಡಿದ್ದಾರೆ. 2000 ನೇ ಇಸ್ವಿಯಲ್ಲಿ ಟಿ. ಎನ್ ಸೀತಾರಾಮ್ ಅವರ ಮಾಯಾಮೃಗ, ಮನ್ವಂತರ ಧಾರವಾಹಿಗಳಲ್ಲಿ ಮಾಳವಿಕಾ ಅವಿನಾಶ್ ಅವರು ನಟಿಸಿದ್ದಾರೆ. ಮಾಳವಿಕಾ ಅವರು ಬಿಗ್ ಬಾಸ್ ಸೀಸನ್ 4ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು.

ಮಾಳವಿಕಾ ಹಾಗೂ ಅವಿನಾಶ್ ದಂಪತಿಗೆ ಮುದ್ದಾದ ಮಗನಿದ್ದಾನೆ. ಮಾಳವಿಕಾ ಅವರು ಬೆಂಗಳೂರು ಯೂನಿವರ್ಸಿಟಿಯಲ್ಲಿ ಲಾ ಓದಿದ್ದಾರೆ. ಅವರು ನಾವು ಓದುವಾಗ ಮೂರನೆ ರ್ಯಾಂಕ್ ಪಡೆದಿದ್ದಾರೆ. ಮಾಳವಿಕಾ ಅವರು ಬೆಂಗಳೂರಿನಲ್ಲಿ ಭವ್ಯವಾದ ಮನೆಯನ್ನು ನಿರ್ಮಿಸಿಕೊಂಡಿದ್ದಾರೆ. ಅವರ ಮನೆ ನೋಡಲು ವಿಶಾಲವಾಗಿದೆ ಹಾಗೂ ಸುಂದರವಾಗಿದೆ ಮನೆಯಲ್ಲಿರುವ ವಸ್ತುಗಳನ್ನು ಬಹಳ ನೀಟಾಗಿ ಜೋಡಿಸಿದ್ದಾರೆ. ಮಾಳವಿಕಾ ಅವರ ಸಿನಿರಂಗದ ಗೆಳತಿಯರಾದ ಸುಧಾರಾಣಿ ಹಾಗೂ ಶ್ರುತಿ ಅವರು ಮಾಳವಿಕಾ ಅವರ ಮನೆಗೆ ಮಾಳವಿಕಾ ಅವರ ಬರ್ತಡೆಗೆ ಸರ್ಪ್ರೈಸ್ ಭೇಟಿ ಮಾಡಿದ್ದರು. ಮಾಳವಿಕಾ ಅವರ ಕುಟುಂಬದ ಫೋಟೊ ಹಾಗೂ ಅವರ ಮನೆಯ ಫೋಟೊ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಬಹುದಾಗಿದೆ.

Leave A Reply

Your email address will not be published.