ಕನ್ನಡ ಚಿತ್ರರಂಗದ ಆಧುನಿಕ ಕರ್ಣ ರೆಬೆಲ್ ಸ್ಟಾರ್ ಅಂಬಿ ಅವರ ಕನಸಿನ ಹೊಸ ಮನೆ

0 0

ಕನ್ನಡ ಚಿತ್ರರಂಗದ ಪ್ರಮುಖ ಹಿರಿಯ ನಟ ಅಂಬರೀಷ್ ಅವರು ಇಂದು ನಮ್ಮೊಂದಿಗಿಲ್ಲ ಆದರೂ ಅವರ ನಟನೆ, ಅವರ ಗಂಡುಗಲಿಯ ಗತ್ತನ್ನು ಯಾರೂ ಮರೆತಿಲ್ಲ. ನಟ ಅಂಬರೀಷ್ ಅವರ ಬಗ್ಗೆ ಹಾಗೂ ಅವರ ಮನೆಯ ಬಗ್ಗೆ ಕೆಲವು ಇಂಟರೆಸ್ಟಿಂಗ್ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ನಮ್ಮ ಕನ್ನಡ ನಾಡಿನಲ್ಲಿ ಗಂಡು ಎಂಬ ಪದವನ್ನು ಬಳಕೆ ಮಾಡುವಾಗ ಮಂಡ್ಯದ ಗಂಡು ಎಂಬ ಪದವನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಮಂಡ್ಯದ ಗಂಡು ಎಂದು ಖ್ಯಾತಿ ಪಡೆದ ದಿವಂಗತ ಅಂಬರೀಷ್ ಅವರ ಹೃದಯ ವೈಶಾಲ್ಯತೆ, ಸ್ನೇಹ ಪರ ಗುಣಗಳಿಗೆ, ಪಾರದರ್ಶಕವಾದ ಮಾತು, ನಡವಳಿಕೆಗೆ ಮಂಡ್ಯದ ಗಂಡು ಎಂಬ ಬಿರುದು ನೀಡಲಾಗಿದೆ. ಅವರು ಹುಟ್ಟಿದ್ದು ಸಹ ಮಂಡ್ಯದಲ್ಲಿ. ಅಂಬರೀಷ್ ಅವರಿಗೆ ಆಧುನಿಕ ಕರ್ಣ ಎಂತಲೂ ಕರೆಯುತ್ತಾರೆ.

ಸಮಸ್ಯೆಯ ಸುಳಿಯಲ್ಲಿ ಸಿಲುಕಿ ಹಾಕಿಕೊಂಡವರಿಗೆ ಯಾವ ಭೇದ ಭಾವವಿಲ್ಲದೆ ತುಂಬು ಹೃದಯದಿಂದ ಸಹಾಯ ಹಸ್ತ ನೀಡುವುದರಲ್ಲಿ ಅಂಬರೀಷ್ ಅವರು ಮುಂಚೂಣಿಯಲ್ಲಿದ್ದರು. ಅವರು ಯಾವುದೆ ಪ್ರತಿಫಲ ಬಯಸದೆ ಸಹಾಯ ಮಾಡುತ್ತಿದ್ದರು. ಅವರ ಇಂತಹ ಗುಣದಿಂದ ಅವರನ್ನು ಕಲಿಯುಗದ ಕರ್ಣ ಎಂದೂ ಕೂಡ ಕರೆಯುತ್ತಾರೆ.

ಅಂಬರೀಷ್ ಈಗಲೂ ಜನಮನದಲ್ಲಿ ಚಿರಸ್ಥಾಯಿಯಾಗಿ ನಿಂತಿದ್ದಾರೆ. ಅವರು ಬದುಕಿನ ಎಲ್ಲ ಕ್ಷಣಗಳನ್ನು ಅನುಭವಿಸಿದರು ಬದುಕನ್ನು ಪ್ರೀತಿಸುತ್ತಾ ಬಂದವರು. ಅವರ ಬದುಕು ಬಿಂದಾಸ್ ಯಾವ ನಿಬಂಧನೆಗಳನ್ನು ಹಾಕಿಕೊಂಡವರಲ್ಲ. ಅಂಬರೀಷ್ ಅವರ ಮಾತು ವರಟಾದರು ಅವರ ಸ್ವಭಾವ ಮೃದುವಾಗಿತ್ತು. ಅಂಬರೀಷ್ ಅವರ ನಿಜವಾದ ಹೆಸರು ಅಮರನಾಥ್. ಅಂಬರೀಷ್ ಎಂಬ ಹೆಸರು ಅವರಿಗೆ ಚಿತ್ರರಂಗದಿಂದ ಬಂದಿದೆ. ಅಂಬರೀಷ್ ಅವರು ಕೇವಲ ಸಿನಿಮಾಗಳಲ್ಲಿ ನಟಿಸುವುದಲ್ಲದೆ ರಾಜಕಾರಣಿಯೂ ಆಗಿದ್ದರು.

ಅಂಬರೀಷ್ ಅವರು ಬದುಕಿದ್ದಾಗಲೆ ಜೆಪಿ ನಗರದಲ್ಲಿ ಇರುವ ತಮ್ಮ ಮನೆಯನ್ನು ತೆಗೆದು ತಮ್ಮ ಕನಸಿನ ಅರಮನೆಯನ್ನು ನಿರ್ಮಿಸಿದರು. ಮನೆಯ ನಿರ್ಮಾಣ ಕಾರ್ಯ ನಡೆಯುವಾಗಲೆ ಅಂಬರೀಷ್ ಅವರು ಇಹಲೋಕ ತ್ಯಜಿಸಿದರು. ನಂತರ ಅಂಬರೀಷ್ ಅವರ ಪತ್ನಿ ಸುಮಲತಾ ಅವರು ಮನೆಯ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿ ಸರಳವಾಗಿ ಗ್ರಹ ಪ್ರವೇಶ ಮಾಡಿದರು. ಅಂಬರೀಷ್ ಅವರ ಮನೆ ನೋಡಲು ಸುಂದರವಾಗಿದೆ ಹಾಗೂ ಭವ್ಯವಾಗಿದೆ ಮನೆಯ ಎದುರುಗಡೆ ಅಂಬಿ ಮನೆ ಎಂದು ಬರೆಸಲಾಗಿದೆ.

ಮನೆಯ ಒಳಗೆ ಎಲ್ಲಾ ಸೌಲಭ್ಯಗಳು, ಅನೇಕ ಕೊಠಡಿಗಳಿದ್ದು, ದೇವರಕೋಣೆ ನೋಡಲು ಸುಂದರವಾಗಿದೆ. ಅವರ ಮನೆಯಲ್ಲಿ ಅಂಬರೀಷ್ ಅವರ ವಿವಿಧ ಫೋಟೊ, ಸುಮಲತಾ, ಅಂಬರೀಷ್ ಹಾಗೂ ಅವರ ಮಗನೊಂದಿಗೆ ಇರುವ ಫೋಟೋಗಳನ್ನು ನೋಡಬಹುದು. ಅವರ ಮನೆಯನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಬಹುದು. ಈ ಮಾಹಿತಿಯನ್ನು ಅಂಬರೀಷ್ ಅವರ ಅಭಿಮಾನಿಗಳಿಗೆ ತಿಳಿಸಿ.

Leave A Reply

Your email address will not be published.