Ultimate magazine theme for WordPress.

ಶಿವರಾತ್ರಿಯ ತಿಂಗಳು ಈ ರಾಶಿಯವರು ಸ್ವಲ್ಪ ಜಾಗೃತಾವಹಿಸಿ ಎಲ್ಲ ಒಳ್ಳೇದಾಗುತ್ತೆ

0 0

ನಾವಿಂದು ಎರಡು ಸಾವಿರದ ಇಪ್ಪತ್ತೆರಡರ ಮಾರ್ಚ್ ತಿಂಗಳಿನಲ್ಲಿ ಕುಂಭ ರಾಶಿಯವರ ರಾಶಿ ಫಲ ಯಾವ ರೀತಿಯಾಗಿದೆ ಎಂಬುದರ ಕುರಿತಾಗಿ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಅದಕ್ಕಿಂತ ಮೊದಲು ಮಾರ್ಚ್ ತಿಂಗಳಲ್ಲಿ ಯಾವ ಗ್ರಹಗಳ ಬದಲಾವಣೆ ಆಗಲಿದೆ ಎಂಬುದನ್ನು ನೋಡುವುದಾದರೆ ಮಾರ್ಚ್ ಏಳನೇ ತಾರೀಖಿನಂದು ಬುಧನು ಕುಂಭ ರಾಶಿಗೆ ಪ್ರವೇಶ ಮಾಡುತ್ತಾನೆ

ಅದೇ ರೀತಿ ಮಾರ್ಚ್ ಹದಿನೈದನೇ ತಾರೀಖಿನಂದು ರವಿಯು ಮೀನ ರಾಶಿಗೆ ಪ್ರವೇಶ ಮಾಡುತ್ತಾನೆ ಮತ್ತೊಮ್ಮೆ ಬುಧನು ಮಾರ್ಚ್ ಇಪ್ಪತ್ತೈದನೇ ತಾರೀಕಿನಂದು ನೀಚಕ್ಷೇತ್ರವಾದ ಮೀನ ರಾಶಿಗೆ ಪ್ರವೇಶ ಮಾಡುತ್ತಾನೆ. ಈ ಮೂರು ಬದಲಾವಣೆಗಳು ದ್ವಾದಶ ರಾಶಿಗಳ ಮೇಲೆ ಸಾಕಷ್ಟು ಪರಿಣಾಮವನ್ನುಂಟುಮಾಡುತ್ತದೆ. ಈಗ ನಾವು ಕುಂಭ ರಾಶಿಯ ಮೇಲೆ ಯಾವ ರೀತಿ ಆದಂತಹ ಪರಿಣಾಮ ಉಂಟಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.

ಕುಂಭ ರಾಶಿಯವರಿಗೆ ಸಾಡೆಸಾತಿ ನಡೆಯುತ್ತಿದೆ ಜೊತೆಗೆ ರಾಶಿಯ ಅಧಿಪತಿ ಆಗಿರುವಂತಹ ಶನಿಮಹಾತ್ಮ ವ್ಯಯ ಭಾವದಲ್ಲಿ ಇದ್ದಾನೆ. ವಿಶ್ವ ಜಾತಕ ಮೇ ತಿಂಗಳವರೆಗೆ ಕಾಲಸರ್ಪ ಎನ್ನುವ ಯೋಗದಲ್ಲಿ ಸಿಕ್ಕಿ ಹಾಕಿಕೊಂಡಿರುತ್ತದೆ ಆದ್ದರಿಂದ ಕಾಲಸರ್ಪದ ಭೀತಿ ಇರುತ್ತದೆ. ಕಾಳಹಸ್ತಿಯಂತಹ ಕ್ಷೇತ್ರ ದರ್ಶನವನ್ನೂ ಮಾಡುವುದು ತುಂಬಾ ಒಳ್ಳೆಯದು ಇಲ್ಲದಿದ್ದರೆ ಒಳ್ಳೊಳ್ಳೆ ರಾಜಯೋಗ ಇದ್ದರೂ ಕೂಡ ಅದು ದಕ್ಕುವುದಿಲ್ಲ. ಇನ್ನು ಆರೋಗ್ಯದ ಕುರಿತು ತುಂಬಾ ಎಚ್ಚರಿಕೆಯನ್ನು ವಹಿಸಬೇಕು ನಿಮ್ಮ ಜನ್ಮ ರಾಶಿಯಲ್ಲಿ ರವಿ ಗುರುಗಳು ಇರುತ್ತಾರೆ ಸಣ್ಣಪುಟ್ಟ ಉಷ್ಣಕಾರಕ ವ್ಯಾಧಿಗಳು ಕಾಣಿಸಿಕೊಳ್ಳಬಹುದು ಕೆಲವರಿಗೆ ಹೊಸ ಕಾಯಿಲೆಗಳು ಕಾಣಿಸಿಕೊಳ್ಳಬಹುದು ಇಂತಹ ಸಮಸ್ಯೆಗಳು ಇರುವುದರಿಂದ ಆರೋಗ್ಯದ ಕುರಿತು ಎಚ್ಚರಿಕೆಯನ್ನು ವಹಿಸುವುದು ಒಳ್ಳೆಯದು.

ಯೋಗ ಕಾರಕನಾದಂತಹ ಶುಕ್ರನು ಕೂಡ ವ್ಯಯದಲ್ಲಿ ಇರುವುದರಿಂದ ಆರೋಗ್ಯದ ಕುರಿತು ಎಚ್ಚರಿಕೆಯನ್ನು ವಹಿಸುವುದು ಉತ್ತಮ. ವಿದ್ಯಾಧೀಶ ನಾದ ಗುರುವು ಜನ್ಮದಲ್ಲಿಯೇ ಸ್ಥಿತನಾಗಿದ್ದಾನೆ ಅವನು ಜನ್ಮದಲ್ಲಿ ಇರುವಷ್ಟು ಕಾಲ ನಿಮಗೆ ಅಷ್ಟು ಶುಭ ವಾಗುವುದಿಲ್ಲ. ವ್ಯಯದಲ್ಲಿರುವ ಶನಿಯು ಕೂಡ ಮೂರನೇ ದೃಷ್ಟಿಯಿಂದ ದ್ವಿತೀಯವನ್ನು ನೋಡುತ್ತಿದ್ದಾಗ ಸ್ವಲ್ಪ ಮಾತು ಕಡಿಮೆಯಾಗಿ ಹೋಗುತ್ತದೆ ಯಾರ ಜೊತೆಯು ಮಾತನಾಡುವುದಕ್ಕೆ ಮನಸ್ಸಾಗುವುದಿಲ್ಲ ಈ ಸಮಯದಲ್ಲಿ ಮೌನವಾಗಿರುವುದು ಲೇಸು ಇಲ್ಲದಿದ್ದರೆ ನಿಷ್ಟುರಕ್ಕೆ ಕಾರಣವಾಗಬಹುದು. ಹಾಗಾಗಿ ಏಪ್ರಿಲ್ 17ರವರೆಗೆ ಕಾದರೆ ನಿಮಗೆ ಪೂರ್ಣಪ್ರಮಾಣದ ಗುರುಬಲ ದೊರೆಯುತ್ತದೆ. ಈ ಮಾಸದಲ್ಲಿ ಸಂಪತ್ತಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಬಹುದು. ದಾಂಪತ್ಯ ಜೀವನದಲ್ಲೂ ಕೂಡ ಅಷ್ಟೊಂದು ಉಲ್ಲಾಸ ಕಾಣಿಸುವುದಿಲ್ಲ ಚಿಕ್ಕಪುಟ್ಟ ಮನಸ್ತಾಪಗಳು ಕಾಣಿಸಿಕೊಳ್ಳಬಹುದು.

ಸಹೋದರ ಮತ್ತು ಸಹೋದರಿಯರಲ್ಲಿ ಕೂಡ ಮನಸ್ತಾಪಗಳು ಉಂಟಾಗಬಹುದು ನಾಲ್ಕನೇ ಮನೆಯಲ್ಲಿ ರಾಹು ಇರುವುದರಿಂದ ವಿದ್ಯಾರ್ಥಿಗಳು ಕೂಡ ಅಭ್ಯಾಸದ ಕಡೆ ಸಾಕಷ್ಟು ಗಮನ ಕೊಡಬೇಕಾಗುತ್ತದೆ. ಜೊತೆಗೆ ವಾಹನ ಖರೀದಿಸುವವರಿಗೆ ಚಿಕ್ಕಪುಟ್ಟ ಅಪಘಾತಗಳು ಸಂಭವಿಸಬಹುದು ಹಾಗಾಗಿ ಈ ಸಮಯದಲ್ಲಿ ಖರೀದಿಸದೆ ಇರುವುದು ಒಳ್ಳೆಯದು. ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದಂತೆ ಸ್ವಲ್ಪ ಹಣ ವ್ಯಯ ಮಾಡಬೇಕಾಗುತ್ತದೆ.

ನೀವೇ ಕಷ್ಟದಲ್ಲಿ ಇರುವಂತಹ ಸಂದರ್ಭದಲ್ಲಿ ನಿಮಗೆ ಹಣ ಕೊಡುವಂತೆ ಯಾರಾದರೂ ಪಿಡಿಸಬಹುದು ಸ್ನೇಹ ಭಾವ ಒಡೆದು ಹೋಗಬಹುದು. ಸಪ್ತಮಾಧಿಕಾರಿಯಾಗಿ ರುವಂತಹ ಸೂರ್ಯನು ನಿಮ್ಮ ರಾಶಿಯಲ್ಲಿ ಇದ್ದಾನೆ ಅಲ್ಲಿ ಗುರು ಅಸ್ತಂಗತನಾಗಿಯು ಇದ್ದಾನೆ. ಈ ಮಾಸದಲ್ಲಿ ಹೆಚ್ಚಿನ ಗ್ರಹಗಳು ವ್ಯಯದಲ್ಲಿ ಇದೆ ವ್ಯಯ ಎಂದರೆ ಹಣಕಾಸಿನ ಖರ್ಚು ಎಂದಲ್ಲ ವ್ಯಯದಲ್ಲಿ ಗ್ರಹಗಳು ಬಂದಾಗ ಉದ್ವಿಗ್ನತೆ ಧನಹಾನಿ ಮಾನಕ್ಕೆ ಕುತ್ತು ಮನಸ್ತಾಪಗಳು ಉಂಟಾಗುವುದು.

ನೀವು ಕೆಲಸ ಮಾಡುವಂತಹ ಜಾಗದಲ್ಲಿ ಎಚ್ಚರಿಕೆಯಿಂದ ಇರಬೇಕು ಆದಷ್ಟು ಶಿಸ್ತುಬದ್ಧವಾಗಿ ಮೌನವಾಗಿ ಕೆಲಸವನ್ನ ಮಾಡುವುದು ಒಳ್ಳೆಯದು.ಪ್ರತಿನಿತ್ಯ ನೀವು ನವಗ್ರಹ ಸ್ತೋತ್ರ ಗಳನ್ನು ಮಾಡಿ ನಿಮ್ಮ ಕೆಲಸವನ್ನು ಮುಂದುವರಿಸಬೇಕು ಸಾಧ್ಯವಾದರೆ ನವಗ್ರಹ ಸ್ತೋತ್ರವನ್ನು 19 ಸಾರಿ ಮಾಡುವುದರಿಂದ ಬಹಳ ಒಳ್ಳೆಯದಾಗುತ್ತದೆ. ಬೆಳಿಗ್ಗೆ ಸ್ನಾನದ ನಂತರ ಉತ್ತರ ಅಭಿಮುಖವಾಗಿ ನಿಂತು ನವಗ್ರಹ ಸ್ತೋತ್ರವನ್ನು ಪಠಿಸಬೇಕು ಇದರಿಂದ ನಿಮಗೆ ಇರುವಂತಹ ಚಿಕ್ಕಪುಟ್ಟ ಅಶುಭಗಳು ಹೊರಟುಹೋಗುತ್ತವೆ

ಶನಿ ಮತ್ತು ಸುಬ್ರಹ್ಮಣ್ಯ ಸ್ವಾಮಿ ಹಾಗು ಲಕ್ಷ್ಮಿ ನರಸಿಂಹನ ಆರಾಧನೆಯನ್ನು ಮಾಡಬೇಕು. ಕುಂಭ ರಾಶಿಯವರು ಮಾರ್ಚ್ ತಿಂಗಳಿನಲ್ಲಿ ಸೂಕ್ಷ್ಮವಾಗಿ ನಡೆದುಕೊಳ್ಳಬೇಕು. ಇದಿಷ್ಟು ಕುಂಭರಾಶಿಯವರ ಮಾರ್ಚ್ ತಿಂಗಳ ರಾಶಿಫಲವಾಗಿದ್ದು ಒಳ್ಳೆಯ ಫಲಗಳನ್ನು ಪಡೆಯುವುದಕ್ಕೆ ನಾವು ಮೇಲೆ ಹೇಳಿರುವ ಪರಿಹಾರ ಕ್ರಮಗಳನ್ನು ಮಾಡಿಕೊಳ್ಳಬೇಕು. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

Leave A Reply

Your email address will not be published.