ಊಟದ ಜೊತೆ ನಿಂಬೆಹಣ್ಣು ತಿಂದ್ರೆ ನಿಜಕ್ಕೂ ಏನಾಗುತ್ತೆ ಗೊತ್ತಾ, ಈ ಮಾಹಿತಿ ತಿಳಿದುಕೊಳ್ಳಿ

0 6,479

ಬಹಳಷ್ಟು ಜನರು ಮಾಂಸಹಾರ ಸೇವಿಸುತ್ತಾರೆ. ಮಾಂಸಹಾರ ಸೇವಿಸುವಾಗ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಆದರೆ ಹಲವರು ಮಾಂಸಹಾರಕ್ಕೆ ನಿಂಬು ಸೇರಿಸಿ ಸೇವಿಸುತ್ತಾರೆ. ಹೀಗೆ ಸೇವಿಸುವುದರಿಂದ ದೇಹಕ್ಕೆ ಆಗುವ ಅನಾರೋಗ್ಯಕರ ಪರಿಣಾಮಗಳನ್ನು ಈ ಲೇಖನದಲ್ಲಿ ನೋಡೋಣ.

ಸಾಮಾನ್ಯವಾಗಿ ಮಾಂಸಹಾರವನ್ನು ಸೇವನೆ ಮಾಡುವಾಗ ನಿಂಬೆ ರಸವನ್ನು ಸೇರಿಸಿ ತಿನ್ನುತ್ತಾರೆ, ಎಲ್ಲರೂ ಹೀಗೆ ಮಾಡುತ್ತಾರೆ. ಆಯುರ್ವೇದಲ್ಲಿ ಇದನ್ನು ತಪ್ಪು ಅಂತ ಪರಿಗಣಿಸಲಾಗಿದೆ. ಬಾಯಿಯ ರುಚಿಗೆಂದು ನಿಂಬೆ ರಸವನ್ನು ಮಾಂಸಹಾರದ ಮೇಲೆ ಹಿಂಡಿಕೊಂಡು ಸೇವನೆ ಮಾಡುತ್ತಾರೆ ಆದರೆ ಇದು ಆರೋಗ್ಯದ ದೃಷ್ಟಿಯಿಂದ ಹಿತವಲ್ಲ ಎಂದು ಹೇಳುತ್ತಾರೆ. ಮಾಂಸಹಾರ ಮತ್ತು ನಿಂಬೆ ಹಣ್ಣು ವಿರುದ್ಧವಾದ ಆಹಾರವಾಗಿದೆ. ಯಾವುದೆ ಕಾರಣಕ್ಕೂ ನಿಂಬೆ ಹಣ್ಣು ಮತ್ತು ನಾನ್ ವೆಜ್ ಒಟ್ಟೊಟ್ಟಿಗೆ ಬಳಕೆ ಮಾಡಬಾರದು. ತಿನ್ನಲು ಅಷ್ಟೊಂದು ಇಷ್ಟವಾದರೆ ಮಾಂಸಹಾರ ಸೇವನೆ ಮಾಡಿದ ನಂತರ ಒಂದು ಗಂಟೆ ಬಿಟ್ಟು ಸಲಾಡ್ ನಲ್ಲಿ ಅಥವಾ ನಿಂಬೆ ಹಣ್ಣಿನ ಜ್ಯೂಸ್ ಅನ್ನು ಕುಡಿಯಬಹುದು ಇದರಿಂದ ಆರೋಗ್ಯಕ್ಕೆ ಒಳ್ಳೆಯದು ಸಹ ಆಗಿದೆ.

ಆಯುರ್ವೇದದಲ್ಲಿ ಇವೆರಡೂ ವಿರುದ್ಧ ಆಹಾರ ಎಂದು ಸಾಬೀತು ಮಾಡಲಾಗಿದೆ ಮೊದಲಿಗೆ ನಿಂಬೆ ಹಣ್ಣಿನ ರಸವನ್ನು ಯಾವುದೆ ಕಾರಣಕ್ಕೂ ಬಿಸಿಯಾದ ಆಹಾರದಲ್ಲಿ ಮಿಕ್ಸ್ ಮಾಡಬಾರದು. ವೈಜ್ಞಾನಿಕವಾಗಿ ನಿಂಬೆ ಹಣ್ಣನ್ನು ಯಾವತ್ತಿಗೂ ಬಿಸಿ ಮಾಡಬಾರದು. ಇದರಲ್ಲಿ ಇರುವ ಕಾರ್ಬನ್ ಕಾಫೂಸ್ ಬಿಸಿ ಮಾಡಿದಾಗ ಟಾಕ್ಸಿನ್ ಆಗಿ ಬದಲಾವಣೆ ಆಗುತ್ತದೆ ಅಂದರೆ ವಿಷವಾಗಿ ಬದಲಾಗುತ್ತದೆ.

ನಿಂಬೆ ಹಣ್ಣಿನಲ್ಲಿ ಇರುವ ಕಾರ್ಬನ್ ಕಾಪೂಸ್ ಗಾಳಿಯಲ್ಲಿ ಸೇರಿದಾಗ ಅದು ಇಬ್ಭಾಗವಾಗಿ ಬಿಡುತ್ತದೆ. ಸಾಮಾನ್ಯವಾದ ಮಾತಿನಲ್ಲಿ ಹೇಳಬೇಕೆಂದರೆ ನಮಗೆ ನೈಸರ್ಗಿಕವಾಗಿ ಸಿಗುವ ಎಲ್ಲ ಅಂಶಗಳು ನಾಶವಾಗಿ ಬಿಡುತ್ತವೆ. ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿ ಇರುತ್ತದೆ ಇದು ಬಿಸಿ ಮಾಡಿದಾಗ ಅಥವಾ ಬಿಸಿ ಪದಾರ್ಥಗಳಲ್ಲಿ ಇದನ್ನು ಹಾಕಿದಾಗ ಈ ವಿಟಮಿನ್ ಸಿ ಅಂಶ ನಶಿಸಿ ಹೋಗುತ್ತದೆ ಇದರಿಂದ ಇದರಲ್ಲಿರುವ ಅವಶ್ಯಕ ಗುಣಗಳು ಟಾಕ್ಸಿನ್ ಆಗಿ ಬದಲಾಗುತ್ತವೆ.

ಸಿಟ್ರಿಕ್ ಆ್ಯಸಿಡ್ ಇರುವ ಆಹಾರವನ್ನು ಎಂದಿಗೂ ಬಿಸಿ ಮಾಡಬಾರದು. ಕೆಲವು ಆಹಾರವನ್ನು ಬಿಸಿ ಮಾಡಬಾರದು ಅವುಗಳಲ್ಲಿ ಇವು ಪ್ರಮುಖ ಆಹಾರವಾಗಿದೆ. ಬಿಸಿ ಆಹಾರದ ಮೇಲೆ ನಿಂಬೆ ರಸ ಹಾಕಿದರೆ ಅದು ಕಾರ್ಬನ್ ಅನ್ನು ಬ್ರೇಕ್ ಮಾಡುತ್ತದೆ. ಇದು ದೇಹದಲ್ಲಿ ಸೇರಿಕೊಂಡರೆ ದೇಹದಲ್ಲಿ ಫ್ರೀ ರಾಡಿಕಲ್ ಹೆಚ್ಚಾಗುತ್ತದೆ. ಈ ಪ್ರೋಸೆಸ್ ನಿಂದ ನಮ್ಮ ದೇಹದಲ್ಲಿ ಏರುಪೇರು ಆಗುತ್ತದೆ ಆದ್ದರಿಂದ ಬಿಸಿ ಆಹಾರದ ಮೇಲೆ ಹಾಗೂ ಮಾಂಸಾಹಾರದ ಮೇಲೆ ನಿಂಬೆ ರಸವನ್ನು ಬೆರೆಸಿ ತಿನ್ನಬಾರದು.

ಕೇವಲ ಉಗುರು ಬೆಚ್ಚಗಿನ ನೀರಿನಲ್ಲಿ ಹಾಕಿ ನಿಂಬೆ ರಸ ಹಾಕಿ ಕುಡಿಯಬಹುದು, ಇದು ಆರೋಗ್ಯಕ್ಕೆ ಒಳ್ಳೆಯದು ಎಂದು ಆಯುರ್ವೇದದಲ್ಲಿ ತಿಳಿಸಿದ್ದಾರೆ. ನಿಂಬೆ ಹಣ್ಣು ಬಿಸಿ ಪದಾರ್ಥಗಳ ಜೊತೆಗೆ ಸೇರಿದಾಗ ಆಕ್ಸಿಡೇಷನ್ ಪ್ರೊಸೆಸ್ ನಡೆಯುತ್ತದೆ. ಆಗ ವಿಷಕಾರಿ ಅಂಶಗಳನ್ನು ಬಿಡುಗಡೆ ಮಾಡುತ್ತದೆ. ಅದೆ ಆಹಾರವನ್ನು ನಾವು ಸೇವಿಸಿದರೆ ನಮ್ಮ ದೇಹದಲ್ಲಿ ಕೂಡ ಆಕ್ಸಿಡೇಶನ್ ಸಿಸ್ಟಮ್ ಪ್ರಾರಂಭ ಆಗುತ್ತದೆ. ಇದರಿಂದಾಗಿ ದೇಹದಲ್ಲಿ ಫ್ರಿ ರಾಡಿಕಲ್ ಹೆಚ್ಚಾಗುತ್ತದೆ. ಇವುಗಳು ಅನೇಕ ರೀತಿಯಲ್ಲಿ ಆರೋಗ್ಯವನ್ನು ಹಾಳು ಮಾಡಲು ಕಾರಣ ಆಗಿವೆ, ಇದರ ಜೊತೆಗೆ ಫುಡ್ ಪಾಯಿಸನ್ ಆಗುತ್ತದೆ.

ಅನೇಕ ಸಮಸ್ಯೆಗೆ ಕಾರಣವಾಗಿದೆ ಹೊಟ್ಟೆಗೆ ಸಂಬಂಧಿಸಿದ ಅಜೀರ್ಣತೆ, ಮಲಬದ್ಧತೆ, ಹೊಟ್ಟೆ ಉಬ್ಬರ, ಕೆಟ್ಟ ವಾಸನೆಯ ಹುಳಿ ತೇಗು, ಆಯಾಸ ಸುಸ್ತು ವಾಂತಿ ಪಿತ್ತ ಹೆಚ್ಚಾಗುತ್ತದೆ. ನಿಂಬೆ ಹಣ್ಣು ಬಿಸಿ ಪದಾರ್ಥಗಳ ಜೊತೆಗೆ ಸೇರಿಸುವುದರಿಂದ ಆಗುವ ಅಡ್ಡ ಪರಿಣಾಮಗಳನ್ನು ಎಲ್ಲರೂ ತಿಳಿದುಕೊಳ್ಳಬೇಕು. ಈ ಮಾಹಿತಿಯನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

Leave A Reply

Your email address will not be published.