ದೇಹದ ತೂಕವನ್ನು ಇಳಿಸಿಕೊಳ್ಳಲು ಬಳಹಷ್ಟು ಜನ ಹಲವು ಶ್ರಮ ಪಡುತ್ತಾರೆ ಹಾಗೂ ಮಾರುಕಟ್ಟೆಯಲ್ಲಿ ಸಿಗುವಂತ ಹಲವು ಬಗೆಯ ಔಷಧಿಗಳ ಮೊರೆ ಹೋಗುತ್ತಾರೆ ಆದ್ರೆ ಕೆಲವೊಮ್ಮೆ ಏನು ಪ್ರಯೋಜನ ಆಗಿರೋದಿಲ್ಲ. ಈ ಮನೆಮದ್ದು ದೇಹಕ್ಕೆ ಉತ್ತಮ ಆರೋಗ್ಯವನ್ನು ನೀಡುವುಅದರ ಜೊತೆಗೆ ದೇಹದ ಅನಗತ್ಯ ಬೊಜ್ಜು ನಿವಾರಿಸಲು ಸಹಕಾರಿಯಾಗಿದೆ ಅಷ್ಟಕ್ಕೂ ಈ ಮನೆಮದ್ದು ಯಾವುದು ಇದನ್ನು ಮನೆಯಲ್ಲಿ ತಯಾರಿಸಿ ಇದರ ಪ್ರಯೋಜನವನ್ನು ಹೇಗೆ ಪಡೆದುಕೊಳ್ಳಬಹುದು ಅನ್ನೋದನ್ನ ತಿಳಿಯೋಣ.

ಸಾಮಾನ್ಯವಾಗಿ ಅಡುಗೆ ಮನೆಯಲ್ಲಿ ಇರುವಂತ ಓಮ್ ಕಾಳುಗಳು ಎಲ್ಲರಿಗೂ ಗೊತ್ತಿರುತ್ತದೆ ಇಂತಹ ಓಮ್ ಕಾಳಿನಲ್ಲಿರುವಂತ ಆರೋಗ್ಯವೇನು ಅನ್ನೋದನ್ನ ತಿಳಿಯುವುದರೆ ಓಮ್ ಕಾಳಿನ ನೀರು ಎರಡು ವಾರದಲ್ಲಿ 4 ರಿಂದ 5 ಕೆಜಿ ತೂಕವನ್ನು ಇಳಿಸಬಲ್ಲದು, ಕೆಲವರು ನಿಂಬು ಹಾಗೂ ಜೇನಿನ ರಸ, ಕೊತ್ತಂಬರಿ ಹಾಗೂ ಜೀರಾ ನೀರು ಕುಡಿದು ತೂಕ ಇಳಿಸಿಕೊಳ್ಳುತ್ತಾರೆ. ಆದರೆ ಎಲ್ಲರಿಗೂ ಕೂಡ ಇದು ಫಲಿತಾಂಶ ನೀಡದೆ ಇರಬಹುದು ಆದ್ರೆ ಕೆಲವರಿಗಂತೂ ಇದು ಉತ್ತಮ ಫಲಿತಾಂಶ ನೀಡುವುದು.

ದೇಹದ ಅನಗತ್ಯ ಬೊಜ್ಜು ಇಳಿಸಿ ದೇಹದ ಸೌಂದರ್ಯವನ್ನು ಪಡೆದುಕೊಳ್ಳಬಹುದಾಗಿದೆ, ದೇಹದಲ್ಲಿ ಅನಗತ್ಯ ಬೊಜ್ಜು ಇದ್ರೆ ದೇಹದ ಆಕಾರದಲ್ಲಿ ಅಥವಾ ಸೌಂದರ್ಯದಲ್ಲಿ ಹಿನ್ನಡೆಯಾಗಬಹುದು ಆದ್ದರಿಂದ ದೇಹದ ತೂಕವನ್ನು ಇಳಿಸಿ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬಹುದಾಗಿದೆ. ಈ ಓಮ್ ಕಾಲಿನ ನೀರನ್ನು ಹೇಗೆ ಬಳಸಬೇಕು ಅನ್ನೋದನ್ನ ಹೇಳುವುದಾದರೆ, ಊಟಕ್ಕೂ ಒಂದು ಗಂಟೆ ಮುಂಚೆ ಅಥವಾ ಖಾಲಿ ಹೊಟ್ಟೇಲಿ ಈ ನೀರನ್ನು ಕುಡಿದರೆ, ನೀಡೋ ಪರಿಣಾಮ ಅದ್ಭುತ ಎನ್ನುತ್ತಾರೆ ಈ ಪಥ್ಯ ಮಾಡಿದವರು.

ಇನ್ನು ಈ ನೀರನ್ನು ಹೇಗೆ ಕುಡಿಯಬೇಕು ಅನ್ನೋದನ್ನ ನೋಡುವುದರೆ ಮೊದಲು ಒಂದು ಟೀ ಸ್ಪೂನ್ ಓಮಿನ ಕಾಳನ್ನು ರಾತ್ರಿ ಇಡೀ ನೀರಿನಲ್ಲಿ ನೆನಸಿತ್ತು ನಂತರ ಬೆಳಗ್ಗೆ ಕಾಳಿನೊಂದಿಗೆ ನೀರನ್ನೂ ಕುದಿಸಿ ಇದಾದ ಮೇಲೆ ಇದನ್ನು ಅಂದರೆ ಕುದಿಸಿದ ನೀರನ್ನು ಸೋಸಿಕೊಂಡು ಸೇವನೆ ಮಾಡಬೇಕು. ಇದರ ಸೇವನೆ ನಂತರ ಸ್ವಲ್ಪ ಹೊತ್ತು ಬಿಟ್ಟು ಹೊಟ್ಟೆ ಏನಾದರು ಆಹಾರ ಸೇವನೆ ಮಾಡಬೇಕು

Leave a Reply

Your email address will not be published. Required fields are marked *