ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ನಾವು ಹೆಚ್ಚಾಗಿ ನೋಡುತ್ತಿರುವ ಒಂದು ದೊಡ್ಡ ಸಮಸ್ಯೆ ಎಂದರೆ ಅದು ದಪ್ಪ ದೇಹ ಹೊಂದಿರುವುದು, ಹೌದು ದಪ್ಪ ದೇಹ ಎಂದರೆ ಬೇಡವಾದ ಕೊಬ್ಬು ಅಥವಾ ಬೊಜ್ಜು ಹೊಟ್ಟೆಯ ಸುತ್ತಲೂ ಇರುವುದು ಇತ್ತೀಚಿನ ದಿನಗಳಲ್ಲಿನ ಜನರ ಜೀವನ ಶೈಲಿಯು ಮತ್ತು ಅವರ ಆಹಾರ ಕ್ರಮಗಳು ಅಲ್ಲದೇ ಹೆಚ್ಚು ಹೊತ್ತು ಕುಳಿತುಕೊಂಡು ಕೆಲಸ ಮಾಡುವುದು ವ್ಯಾಮದ ಕೊರತೆ ಹೀಗೆ ಹಲವಾರು ಕಾರಣಗಳಿಂದ ಜನರು ದಡೂತಿ ಶರೀರವನ್ನು ಹೊಂದುತ್ತಿದ್ದಾರೆ. ಹಾಗಾದ್ರೆ ಜನರ ಈ ಸಮಸ್ಯೆಗೆ ಪರಿಹಾರವೇ ಇಲ್ಲವೇ ಹೌದು ಜನರು ಇದಕ್ಕೆ ಪರಿಹಾರ ಕಂಡುಕೊಳ್ಳುತ್ತಾ ಹಲವಾರು ಔಷದಿಗಳಿಗೆ ಮೊರೆ ಹೋಗುತ್ತಿದ್ದಾರೆ, ಅದರಿಂದ ಪರಿಹಾರವು ಕಾಣದೇ ಸೋತು ಸುಮ್ಮನಾದವರಿದ್ದಾರೆ.

ಹಾಗಾದ್ರೆ ಈ ತೂಕ ಕಡಿಮೆ ಮಾಡಿಕೊಳ್ಳುವುದಕ್ಕಾಗಿ ಬೇಡವಾದ ಹೊಟ್ಟೆಯ ಸುತ್ತಲಿನ ಬೊಜ್ಜನ್ನು ಕರಗಿಸುವುದಾಕ್ಕಾಗಿ ನಾವು ಹೇಳುವ ಈ ಒಂದು ಮನೆ ಮದ್ಧನ್ನು ಉಪಯೋಗಿಸಿದರೆ ಸಾಕು ನಿಮ್ಮ ತೂಕದಲ್ಲಿ ಐದರಿಂದ ಆರು ಕೆ ಜಿ ತೂಕದ ಇಳಿಕೆಯನ್ನು ಒಂದು ತಿಂಗಳಿನಲ್ಲಿ ಕಾಣಬಹುದು ಹಾಗಾದ್ರೆ ಈ ಮನೆ ಮದ್ದನ್ನು ಮಾಡುವ ವಿಧಾನವನ್ನು ತಿಳಿದುಕೊಳ್ಳೋಣ ಬನ್ನಿ

ಮೊದಲಿಗೆ 250 ರಿಂದ 300 ಎಮ್ ಎಲ್ ಮಿನರಲ್ ವಾಟರ್ ಅನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಳ್ಳಬೇಕು ಮತ್ತು ಅದನ್ನು ಕುದಿಯುವವರೆಗೂ ಪಾತ್ರೆಯಲ್ಲಿ ನಿಯಮಿತವಾಗಿ ಕಾಯಿಸಿಕೊಳ್ಳಬೇಕು ನೀರು ಕುದಿಯಲು ಶುರು ಮಾಡಿದ ನಂತರ ಅದಕ್ಕೆ ಒಂದೆರಡು ತುಂಡು ಚಕ್ಕೆಯನ್ನು ಕುಡಿಯುವ ನೀರಿನಲ್ಲಿ ಹಾಕಿ ಅದನ್ನು ಚೆನ್ನಾಗಿ ಕುದಿಸಬೇಕು, ಅಂದರೆ ಚಕ್ಕೆಯಲ್ಲಿನ ಅಂಶ ನೀರಿನಲ್ಲಿ ವಿಲೀನವಾಗುವ ತನಕ ಕುದಿಸಬೇಕು ಇಲ್ಲವಾದಲ್ಲಿ ಚಕ್ಕೆಯ ಪುಡಿಯನ್ನು ಒಂದು ಚಮಚ ಹಾಕಿಕೊಳ್ಳಬೇಕು.

ಹೀಗೆ ಮಾಡಿಕೊಂಡ ಕಷಾಯದಲ್ಲಿ ಒಂದು ಚಮಚ ಜೇನು ತುಪ್ಪವನ್ನು ಹಾಕಿ ಕುದಿಯುವ ನೀರು ಸ್ವಲ್ಪ ಬೆಚ್ಚಗಾದ ನಂತರ ಅದನ್ನು ಸೇವಿಸಬೇಕು, ಹೀಗೆ ಈ ಕಷಾಯವನ್ನು ಪ್ರತಿದಿನ ರಾತ್ರಿ ಊಟದ ನಂತರ ಮಲಗುವ ಮುನ್ನ ಒಂದು ತಿಂಗಳು ಕುಡಿಯುತ್ತಾ ಬಂದರೆ ನಿಮ್ಮ ಹೊಟ್ಟೆಯ ಸುತ್ತಲಿನ ಬೊಜ್ಜು ಕ್ರಮೇಣ ಕಡಿಮೆಯಾಗುತ್ತದೆ ಐದರಿಂದ ಆರು ಕಿಲೋ ತೂಕವನ್ನು ನೀವು ಇಳಿಸಿಕೊಳ್ಳಬಹುದಾಗಿದೆ. ಅಲ್ಲದೇ ಈ ಕಷಾಯವನ್ನು ನಿಯಮಿತವಾಗಿ ಸೇವಿಸುತ್ತಾ ಬಂದಲ್ಲಿ ಥೈರಾಯಿಡ್ ಸಮಸ್ಯೆ ಇರುವವರಲ್ಲಿ ಕ್ರಮೇಣ ಗುಣಮುಖವಾಗುತ್ತದೆ.

Leave a Reply

Your email address will not be published. Required fields are marked *

error: Content is protected !!