ಈಗಿನ ಮಳೆಗಾಲದ ವಾತಾವರಣಕ್ಕೆ ಎಲ್ಲರಿಗೂ ಸಾಮಾನ್ಯವಾಗಿ ಜ್ವರ, ಶೀತ , ಕೆಮ್ಮು , ಕಫ ಆಗೋದು ಸಹಜ. ಕೆಲವರಿಗೆ ಕೆಮ್ಮು ಜ್ವರ ಹೋದರೂ ಕಫ ಮಾತ್ರ ಹಾಗೇ ಇರತ್ತೆ ಅದನ್ನ ಹೋಗಲಾಡಿಸೋದು ಬಹಳ ಕಷ್ಟವೇ. ನಾವು ಮನೆಯಲ್ಲಿ ಮನೆಮದ್ದನ್ನು ಮಾಡುವ ಮೂಲಕ ಎದೆಯಲ್ಲಿ ಕಫ ಕಟ್ಟಿದ್ದರೆ ಬೇಗ ನಿವಾರಿಸಿಕೊಳ್ಳಬಹುದಾದ ಒಂದು ಸಸ್ಯದ ಬಗ್ಗೆ ಹಾಗೂ ಅದರ ಬಳಕೆಯ ಬಗ್ಗೆ ತಿಳಿದುಕೊಳ್ಳೋಣ.

ಆಡು ಸೋಗೆ /ಆಡು ಮುಟ್ಟದ ಗಿಡ ಎಂದು ಕರೆಯಲ್ಪಡುವ ಈ ಸಸ್ಯ ಕಟ್ಟಿರುವ ಕಫವನ್ನು ಹೊರಹಾಕಲು ಈ ಒಂದು ಸಸ್ಯ ರಾಮಬಾಣ ಎನ್ನಬಹುದು. ಇದನ್ನ ಹೇಗೆ ಬಳಕೆ ಮಾಡೋದು ಅಂತ ನೋಡುವುದಾದರೆ , ನಾಲ್ಕು ಆಡುಸೋಗೆ ಸೊಪ್ಪನ್ನು ತೆಗೆದುಕೊಂಡು ಅದನ್ನ ಸ್ವಚ್ಛ ಮಾಡಿಕೊಂಡು ಅದರ ರಸವನ್ನು ತೆಗೆದುಕೊಳ್ಳಬೇಕು. ಒಂದು ಸ್ಪೂನ್ ತುರಿದ ಹಸಿ ಶುಂಠಿ ಅಥವಾ ಹಸಿ ಶುಂಠಿಯ ರಸ, ಒಂದು ಸ್ಪೂನ್ ಕಾಳು ಮೆಣಸು, ಇವೆಲ್ಲವನ್ನೂ ಸೇರಿಸಿ ಒಂದು ಲೋಟ ನೀರು ಹಾಕಿ ಎಲ್ಲವನ್ನೂ ಬಿಸಿ ಮಾಡಿ ನಂತರ ಇದನ್ನು ಸೋಸಿಕೊಂಡು ಆರಿ ತಣ್ಣಗಾದ ಮೇಲೆ ಇದಕ್ಕೆ ಒಂದು ಟೀ ಚಮಚ ಜೇನುತುಪ್ಪ ಸೇರಿಸಿ ಸೇವಿಸಬೇಕು.

ಇದನ್ನು ಸೇವಿಸುವುದರಿಂದ ಕಫ ಕಟ್ಟಿ ಬಿಗಿದಿದ್ದರೆ ಸಡಿಲವಾಗಿ ಆರಾಮ ಎನಿಸುತ್ತದೆ ಹಾಗೇ ಕಫ ಕಟ್ಟಿ ಉಸಿರಾಟದ ಸಮಸ್ಯೆ ಇದ್ದರೂ ಸಹ ನಿವಾರಣೆ ಆಗುವುದು. ಚಿಕ್ಕ ಮಕ್ಕಳಿಗೆ ಆದರೆ ಇದನ್ನು ಎರಡು ಚಮಚ ಕೊಡಬಹುದು. ದೊಡ್ಡವರಿಗಾದರೆ ಒಂದು ಲೋಟ ಕೊಡಬಹುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!