ಅಡಿಕೆ ಬೆಲೆ ಗಗನಕ್ಕೇರಿದ್ದು ಕೆಲಸ ಮಾಡದ ಸೊಂಬೇರಿಗಳು ತೋಟಕ್ಕೆ ನುಗ್ಗಿ ಅಡಿಕೆ ಕಳ್ಳತನ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಹೆಚ್ಚಿನ ಅಡಿಕೆ ಕಳ್ಳತನ ಪ್ರಕರಣಗಳು ವರದಿಯಾಗಿದೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಅಡಿಕೆ ಬೆಲೆ ಹೆಚ್ಚಾಗಿದ್ದು ದಾವಣಗೆರೆ ಜಿಲ್ಲೆಯ ರೈತರು ರಾತ್ರಿಯಿಡಿ ತಮ್ಮ ತೋಟದ ಕಾವಲು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ದಾವಣಗೆರೆ ಜಿಲ್ಲೆಯ ಹಲವೆಡೆ ತೋಟಗಳಲ್ಲಿ ಅಡಿಕೆ ಮರಗಳಿಂದ ಹಸಿ ಅಡಿಕೆ ಕೊಯ್ದು ಕಳವು ಮಾಡಿರುವ ಪ್ರಕರಣಗಳು ವರದಿಯಾಗುತ್ತಿವೆ.

ರಾತ್ರೋರಾತ್ರಿ ತೋಟಗಳಿಗೆ ನುಗ್ಗುವ ಕಳ್ಳರು ಕೈಲಾದಷ್ಟು ಅಡಿಕೆ ಕೊಯ್ದುಕೊಂಡು ಪರಾರಿಯಾಗುತ್ತಿದ್ದಾರೆ ಇದರಿಂದ ಅಡಿಕೆ ಬೆಳೆಗಾರರು ಕಂಗಾಲಾಗಿದ್ದಾರೆ. ಜಿಲ್ಲೆಯ ಚನ್ನಗಿರಿ ತಾಲೂಕಿನ ಹೆಬ್ಳಿಗೆರೆ ಸೇರಿ ಹಲವು ಹಳ್ಳಿಗಳಲ್ಲಿ ಅಡಿಕೆ ಹೆಚ್ಚು ಬೆಳೆಯುತ್ತಿದ್ದು ಅಲ್ಲಿ ಕಳುವಾಗಿರುವ ಬಗ್ಗೆ ವರದಿಯಾಗಿದೆ.

ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ತೋಟಗಳನ್ನು ಕಳ್ಳರು ಟಾರ್ಗೆಟ್ ಮಾಡಿಕೊಂಡಿದ್ದು ನಡು ರಾತ್ರಿ ತೋಟಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಅಡಿಕೆ ಬೆಳೆಯುವ ಚನ್ನಗಿರಿ ತಾಲೂಕಿನ ಹೆಬ್ಳಿಗೆರೆ ಸೇರಿ ಹಲವು ಹಳ್ಳಿಗಳಲ್ಲಿ ಅಡಿಕೆ ಕಳುವಾಗಿರುವ ಬಗ್ಗೆ ವರದಿಯಾಗಿದೆ. ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ತೋಟಗಳನ್ನು ಕಳ್ಳರು ಟಾರ್ಗೆಟ್ ಮಾಡಿಕೊಂಡಿದ್ದು ನಡು ರಾತ್ರಿ ತೋಟಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಕೆಂಪು ಅಡಿಕೆ ಬೆಲೆ ಹೆಚ್ಚಾಗಿದೆ. ಬುಧವಾರ ಒಂದು ಕ್ವಿಂಟಾಲ್ ಅಡಿಕೆಗೆ 52,000 ರೂ ಆಗಿದ್ದು, ಶಿವಮೊಗ್ಗ ಹಾಗೂ ಇತರೆ ಮಾರುಕಟ್ಟೆಗಳಲ್ಲೂ 52,000 ರೂಪಾಯಿಯಿಂದ 54,000 ರೂಪಾಯಿ ಇದೆ. ಹಸಿ ಅಡಿಕೆ ಅಂದರೆ ಸಿಪ್ಪೆ ಸಹಿತ ಅಡಿಕೆಗೆ ಒಂದು ಕ್ವಿಂಟಾಲ್‌ಗೆ 7,000 ರೂಪಾಯಿ ಇದೆ.

ತೋಟಗಳಿಗೆ ನುಗ್ಗಿ ಕೈಗೆ ಸಿಕ್ಕಷ್ಟು ಮರಗಳಿಂದ ಅಡಿಕೆ ಕೊಯ್ಯುವ ಕಳ್ಳರು ಅವುಗಳನ್ನು ಸಿಪ್ಪೆ ಸಹಿತ ಮಾರಾಟ ಮಾಡಿ ಹಣ ಮಾಡಿಕೊಳ್ಳುತ್ತಿದ್ದಾರೆ. ರಸ್ತೆ ಬದಿ ವಾಹನ ನಿಲ್ಲಿಸಿ ಅದರಲ್ಲಿ ಚಾಲಕನನ್ನು ಬಿಟ್ಟು ಉಳಿದವರು ತೋಟಗಳಿಗೆ ನುಗ್ಗುತ್ತಾರೆ. ಸಾಮಾನ್ಯವಾಗಿ ಈ ಕಳ್ಳರ ತಂಡಗಳಲ್ಲಿ ಐದಕ್ಕೂ ಹೆಚ್ಚು ಮಂದಿ ಇರುತ್ತಾರೆ. ಯಾರಾದರೂ ದಾರಿಯಲ್ಲಿ ಹೋಗುವವರು ಇಲ್ಲೇಕೆ ವಾಹನ ನಿಲ್ಲಿಸಿದ್ದೀಯ ಎಂದು ಚಾಲಕನನ್ನು ಕೇಳಿದರೆ ನಿದ್ದೆ ಮಾಡುತ್ತಿದ್ದೆ, ಮೂತ್ರ ವಿಸರ್ಜನೆ ಮಾಡಲು ನಿಲ್ಲಿಸಿದೆ ಎಂದು ಹೇಳಿ ಸಾಗುಹಾಕುತ್ತಾರೆ.

ಅನುಮಾನಗೊಂಡು ಹೆಚ್ಚು ಪ್ರಶ್ನೆ ಕೇಳಿದರೆ ರಸ್ತೆಯೇನು ನಿನ್ನ ಆಸ್ತಿಯಾ, ಎಂದು ಜಗಳಕ್ಕೆ ಬರುತ್ತಾರೆ ಎಂದು ಚನ್ನಗಿರಿ ಜಿಲ್ಲೆ ಪಾಂಡೋಮಟ್ಟಿ ಗ್ರಾಮದ ಅಡಿಕೆ ಬೆಳೆಗಾರರೊಬ್ಬರು ಮಾಹಿತಿ ನೀಡಿದ್ದಾರೆ. ಅಡಿಕೆ ಕದಿಯಲು ಹೆಚ್ಚಾಗಿ ಕದ್ದ ಹಳೆ ವಾಹನಗಳು ಬಳಕೆಯಾಗುತ್ತಿವೆ. ಒಂದು ವೇಳೆ ಪೊಲೀಸರು ಹಿಡಿಯಲು ಬಂದರೆ ವಾಹನವನ್ನು ಬಿಟ್ಟು ಓಡುತ್ತಾರೆ. ಕದ್ದ ವಾಹನವಾದ್ದರಿಂದ ಕಳ್ಳ ಯಾರು ಎಂದು ಗೊತ್ತಾಗುವುದಿಲ್ಲ.

ಚನ್ನಗಿರಿ ಜಿಲ್ಲೆಯ ಹೆಬ್ಳಿಗೆರೆ ಗ್ರಾಮದಲ್ಲಿ ಇತ್ತೀಚೆಗಷ್ಟೆ ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ಮನೆಯವರಿಗೆ ಚಾಕು ಮತ್ತಿತರ ಆಯುಧಗಳನ್ನು ತೋರಿಸಿ ಬೆದರಿಸಿ 18 ಲಕ್ಷ ರೂಪಾಯಿ ನಗದು, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಒಡವೆ, ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದರು.

ಹಿಂದಿನ ವರ್ಷದ ಅಡಿಕೆ ಮಾರಾಟ ಮಾಡದೆ ಹಾಗೆಯೆ ಇಟ್ಟುಕೊಂಡ ರೈತ ಕಳೆದ ವಾರ ಒಳ್ಳೆಯ ಬೆಲೆ ಬಂದ ಕಾರಣ ಮಾರಾಟ ಮಾಡಿದ್ದರು. ಅಡಿಕೆ ಮಾರಿದ ಹಣ 18 ಲಕ್ಷ ರೂಪಾಯಿಗಳನ್ನು ಮರುದಿನ ಬ್ಯಾಂಕ್ ಖಾತೆಗೆ ಹಾಕಿದರಾಯಿತು ಎಂದು ಮನೆಯಲ್ಲೆ ಇಟ್ಟುಕೊಂಡಿದ್ದರು ಆದರೆ ಅದೆ ದಿನ ರಾತ್ರಿ ಮನೆಗೆ ನುಗ್ಗಿದ 7 ಜನ ಕಳ್ಳರ ಗುಂಪು ಮನೆಯವರಿಗೆ ಮಾರಕಾಸ್ತ್ರ ತೋರಿಸಿ ಹೆದರಿಸಿ ಹಣ, ಒಡವೆಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.

ಹರಿಹರ ತಾಲೂಕಿನ ಮಲೇಬೆನ್ನೂರು ಪಟ್ಟಣ, ಕುಂಬಳೂರು ಮತ್ತು ಜಿಗಳಿ ಗ್ರಾಮಗಳಲ್ಲಿ ಕೂಡ ಅಡಿಕೆ ಕಳವು ಹೆಚ್ಚಾಗಿದೆ. ವಾರದ ಹಿಂದೆ ಮಧ್ಯರಾತ್ರಿ ಜಿಗಳಿ ಗ್ರಾಮದ ತೋಟವೊಂದಕ್ಕೆ ನುಗ್ಗಿ ಅಡಿಕೆ ಕದ್ದು ಟ್ರಾಕ್ಟರ್‌ನಲ್ಲಿ ಹೋಗುತ್ತಿದ್ದ ಕಳ್ಳರ ತಂಡವನ್ನು ಹೆದ್ದಾರಿಯಲ್ಲಿ ಪೊಲೀಸರು ಹಿಡಿದಿದ್ದಾರೆ.

ಬಂಧನಕ್ಕೆ ಒಳಗಾದ 10 ಮಂದಿ ಕಳ್ಳರು ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ ಇದು ವಿಷಾದನೀಯ. ಎರಡು ದಿನಗಳ ಹಿಂದಷ್ಟೆ ಮಲೇಬೆನ್ನೂರು ಗ್ರಾಮದ ಹರಳಹಳ್ಳಿ ರಸ್ತೆಯಲ್ಲಿರುವ ತೋಟದಲ್ಲೂ ಹಸಿ ಅಡಿಕೆ ಕಳುವಾಗಿದೆ. ಸುಮಾರು 40 ಗಿಡಗಳಲ್ಲಿದ್ದ ಅಡಿಕೆ ಗೊನೆಗಳನ್ನು ಕಳ್ಳರು ಕದ್ದೊಯ್ದಿದ್ದಾರೆ ಹಾಗೆಯೆ ಮಲೇಬೆನ್ನೂರು ಗ್ರಾಮಕ್ಕೆ ಹೊಂದಿಕೊಂಡಂತಿರುವ ಕುಂಬಳೂರು ಗ್ರಾಮದಲ್ಲಿ ಕೂಡ ಒಂದು ತೋಟದಲ್ಲಿ ಹಸಿ ಅಡಿಕೆ ಕಳುವಾಗಿರುವ ಬಗ್ಗೆ ವರದಿಯಾಗಿದೆ.

ಮೆಕ್ಕೆಜೋಳದ ಕಣಜ ಎಂದು ಹೆಸರಾಗಿರುವ ದಾವಣಗೆರೆ ಜಿಲ್ಲೆಯಲ್ಲಿ ಇತ್ತೀಚೆಗೆ ಅಡಿಕೆ ಬೆಳೆ ಸಾಕಷ್ಟು ವಿಸ್ತರಣೆಯಾಗುತ್ತಿದ್ದು, ಅಡಿಕೆ ಈ ಭಾಗದ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. 2010ರಲ್ಲಿ ಪ್ರತಿ ಕ್ವಿಂಟಾಲ್ ಅಡಿಕೆಗೆ ಕೇವಲ 10,000-15,000 ರೂಪಾಯಿ ದರವಿತ್ತು. 2014ರಲ್ಲಿ ಒಂದು ಕ್ವಿಂಟಾಲ್ ಅಡಿಕೆ ದರ 99,000 ರೂಪಾಯಿಯಿಂದ ಒಂದು ಲಕ್ಷ ರೂಪಾಯಿವರೆಗೆ ಇತ್ತು ಆಗಲೂ ಕಳ್ಳರು ಅಡಿಕೆ ತೋಟಗಳನ್ನು ಟಾರ್ಗೆಟ್ ಮಾಡಿಕೊಂಡಿದ್ದರು.

ಈಗ ಮತ್ತೊಮ್ಮೆ ಅಡಿಕೆ ಕಳ್ಳರ ಹಾವಳಿ ಹೆಚ್ಚಾಗಿದೆ. 2021ರ ಆರಂಭದಲ್ಲಿ ಹೊನ್ನಾಳಿ ತಾಲೂಕಿನ ಮಾದಾಪುರ ಗ್ರಾಮದ ಬಸವನಗೌಡ ಎಂಬ ರೈತನ ನಾಲ್ಕು ಲಕ್ಷ ರೂಪಾಯಿ ಮೌಲ್ಯದ ಅಡಿಕೆ ಕಳ್ಳತನ ಆಗಿತ್ತು. ಹರಿಹರ ತಾಲೂಕಿನ ನಂದಿತಾವರೆ ಗ್ರಾಮದಲ್ಲಿ ಒಂದು ಲಕ್ಷ ರೂಪಾಯಿ ಬೆಲೆಯ ಅಡಿಕೆ ಕಳುವಾಗಿತ್ತು. ಈ ಅವಧಿಯಲ್ಲಿ ಒಂದು ತಿಂಗಳಲ್ಲಿ ಹತ್ತು ಅಡಿಕೆ ಕಳವು ಪ್ರಕರಣಗಳು ಪತ್ತೆ ಆಗಿದ್ದವು.

ಅಡಿಕೆ ಕದ್ದವರ ವಿರುದ್ಧ ಐಪಿಸಿ 379 ಪ್ರಕಾರ ಮೂರರಿಂದ ಏಳು ವರ್ಷ ಸಾದಾ ಜೈಲು ಶಿಕ್ಷೆ ಇದೆ ಆದರೆ ಐದಾರು ದಿನದಲ್ಲಿ ಬೇಲ್ ಸಿಗುತ್ತದೆ. ಜಾಮೀನು ಸಿಕ್ಕ ನಂತರ ಬೇರೆ ಕೆಲಸ ಮಾಡದ ಕಳ್ಳರು ಮತ್ತೆ ಅಡಿಕೆ ಕಳ್ಳತನಕ್ಕೆ ಇಳಿಯುತ್ತಿದ್ದಾರೆ ಆದ್ದರಿಂದ ಅಡಿಕೆ ಕಳ್ಳತನ ಮಾಡುವವರ ವಿರುದ್ಧ ಹೆಚ್ಚಿನ ಕ್ರಮ ಕೈಗೊಂಡು ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು.

Leave a Reply

Your email address will not be published. Required fields are marked *