ಇತ್ತೀಚಿನ ದಿನಗಳಲ್ಲಿ ಆಹಾರ ಪದ್ಧತಿ ಅಥವಾ ಕೆಲಸದ ಒತ್ತಡದಿಂದಾಗಿ ಕೆಲವರಿಗೆ ದೇಹದ ತೂಕ ಹೆಚ್ಚಾಗುವುದಿಲ್ಲ. ಕೆಲವು ಜನರಿಗೆ ಎಷ್ಟೇ ಪ್ರಯತ್ನಪಟ್ಟರೂ ತಮ್ಮ ದೇಹದ ತೂಕವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಕೆಲವು ಜನರಿಗೆ ತೂಕವನ್ನು ಕಡಿಮೆ ಮಾಡಿಕೊಳ್ಳುವ ಸಮಸ್ಯೆಯಾದರೆ ಇನ್ನು ಕೆಲವರಿಗೆ ತಮ್ಮ ತೂಕವನ್ನು ಹೆಚ್ಚಿಸಿ ಕೊಳ್ಳುವುದು ಕಷ್ಟವಾಗಿದೆ.

ಹಾಗಾಗಿ ಇವತ್ತಿನ ದಿನ ನಾವು ತೂಕವನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು ಎಂಬುದರ ಮಾಹಿತಿಯನ್ನು ತಿಳಿದುಕೊಳ್ಳೋಣ. ಹಾಗಾಗಿ ನಾವು ನಿಮಗೆ ಒಂದು ಒಳ್ಳೆಯ ರಸಾಯನದ ಬಗ್ಗೆ ತಿಳಿಸಿಕೊಡುತ್ತೇವೆ ಇದರಿಂದ ನೀವು ನಿಮ್ಮ ತೂಕವನ್ನು ಹೆಚ್ಚಿಸಿಕೊಳ್ಳಬಹುದು.

ನಾವಿಂದು ನಿಮಗೆ ತಿಳಿಸಿ ಕೊಡುತ್ತಿರುವ ರಸಾಯನ ಕೂಷ್ಮಾಂಡ ರಸಾಯನ. ಇದನ್ನು ಮನೆಯಲ್ಲಿಯೇ ಸುಲಭವಾಗಿ ಮಾಡಿಕೊಳ್ಳಬಹುದು. ಇದನ್ನು ಹೇಗೆ ಮಾಡಿಕೊಳ್ಳುವುದು ಎಂಬುದನ್ನು ತಿಳಿದುಕೊಳ್ಳೋಣ. ಸಾಮಾನ್ಯವಾಗಿ ಎಲ್ಲರೂ ಬೂದುಗುಂಬಳಕಾಯಿಯನ್ನು ನೋಡಿರುತ್ತೀರಿ. ನೀವು ಬೂದುಗುಂಬಳಕಾಯಿಯನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ತುರಿಯಬೇಕು ತುರಿದ ಬೂದುಗುಂಬಳವನ್ನು ಚೆನ್ನಾಗಿ ಬೇಯಿಸಿಕೊಳ್ಳಬೇಕು ಅದರಲ್ಲಿರುವ ನೀರು ಆರುವ ತನಕ ಅದನ್ನು ಬೇಯಿಸಿಕೊಳ್ಳಬೇಕು

ಬೇಯಿಸುವಾಗ ಹುಟ್ಟಿನಿಂದ ತಿರಿಸುತ್ತಾ ತಿರಿಸುತ್ತ ಬೇಯಿಸಿಕೊಳ್ಳಬೇಕು. ಹಾಗೆ ಬೇಯಿಸಿದಾಗ ಅದರಲ್ಲಿರುವ ನೀರಿನಂಶ ಸಂಪೂರ್ಣವಾಗಿ ಹೊರಗೆ ಹೋಗುತ್ತದೆ ನೀರು ಹೊರಗೆ ಹೋದ ನಂತರ ಅದು ಕಲಿಸಿದ ಹಿಟ್ಟಿನ ರೀತಿಯಲ್ಲಿ ಆಗುತ್ತದೆ. ಅದನ್ನು ನೀವು ತುಪ್ಪದೊಂದಿಗೆ ಮತ್ತೆ ಹುರಿದುಕೊಳ್ಳಬೇಕು. ಬೇಯಿಸಿರುವ ಕುಂಬಳಕಾಯಿಯ ತುರಿ ಅರ್ಧ ಕೆಜಿ ಆಗಿದ್ದರೆ ಅದಕ್ಕೆ ಕನಿಷ್ಠ ಎರಡುನೂರು ಎಂಎಲ್ ಆಗುವಷ್ಟು ತುಪ್ಪವನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು.

ಇದಾದ ನಂತರ ನೀವು ಡ್ರೈಫ್ರೂಟ್ಸ್ ಗಳನ್ನು ಪುಡಿ ಮಾಡಿಟ್ಟುಕೊಳ್ಳಬೇಕು ಅರ್ಧ ಕೆಜಿ ಬೂದುಗುಂಬಳಕಾಯಿ ತುರಿಗೆ ನೂರು ಗ್ರಾಂ ಬಾದಾಮಿ ನೂರು ಗ್ರಾಂ ಗೋಡಂಬಿ ನಂತರ ನೂರು ಗ್ರಾಂ ಖರ್ಜೂರ. ಖರ್ಜೂರವನ್ನು ಸಣ್ಣದಾಗಿ ಹೆಚ್ಚಿಕೊಳ್ಳಬೇಕು ಅಥವಾ ಅದನ್ನು ಜಜ್ಜಿ ಪುಡಿ ಮಾಡಿಕೊಳ್ಳಬೇಕು. ನಂತರ ನೂರು ಗ್ರಾಂ ಅಂಜಿರ ಇವುಗಳನ್ನು ತೆಗೆದುಕೊಂಡು ಪುಡಿ ಮಾಡಿಟ್ಟುಕೊಳ್ಳಬೇಕು. ಈ ಪುಡಿಮಾಡಿಟ್ಟುಕೊಂಡ ಡ್ರೈಫ್ರೂಟ್ಸ್ ಗಳನ್ನು ಮತ್ತೆ ತುಪ್ಪದಲ್ಲಿ ಹುರಿದುಕೊಳ್ಳಬೇಕು.

ನಂತರ ಅದನ್ನು ಹುರಿದುಕೊಂಡಿರುವ ಬೂದುಗುಂಬಳಕಾಯಿ ರಸಾಯನಕ್ಕೆ ಹಾಕಬೇಕು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಇದಾದ ನಂತರ ಕೆಂಪು ಕಲ್ಲು ಸಕ್ಕರೆಯನ್ನು ಪಾಕ ಮಾಡಿ ಅದರೊಳಗೆ ನಿಮಗೆ ಎಷ್ಟು ಸಿಹಿ ಬೇಕೋ ಅಷ್ಟನ್ನು ಅದರೊಳಗೆ ಹಾಕಬೇಕು. ಅದನ್ನು ಚೆನ್ನಾಗಿ ಮಿಕ್ಸ್ ಮಾಡಿದ ನಂತರ ಅದರ ಮೇಲೆ ಏಲಕ್ಕಿ ಪುಡಿಯನ್ನು ಹಾಕಿ ಕೊಳ್ಳಬೇಕು. ಈ ರೀತಿಯಾಗಿ ತಯಾರಿಸಿದ ರಸಾಯನ ಹದಿನೈದು ದಿನಗಳ ತನಕ ಚೆನ್ನಾಗಿ ಬಾಳಿಕೆ ಬರುತ್ತದೆ.

ಹಾಗಾದರೆ ರಸಾಯನವನ್ನು ಹೇಗೆ ಮತ್ತು ಯಾವಾಗ ಸೇವಿಸಬೇಕು ಎಂಬುದನ್ನು ನೋಡುವುದಾದರೆ ಕುಂಬಳಕಾಯಿ ರಸಾಯನವನ್ನು ಬೆಳಿಗ್ಗೆ ಮತ್ತು ರಾತ್ರಿ ನೀವು ಖಾಲಿ ಹೊಟ್ಟೆಯಲ್ಲಿ ಎರಡು ಚಮಚ ತಿನ್ನುವುದರಿಂದ ನಿಮ್ಮ ತೂಕ ಹೆಚ್ಚಾಗುತ್ತದೆ. ತೂಕ ಹೆಚ್ಚಿಸಿಕೊಳ್ಳಲು ಇನ್ನೊಂದು ವಿಧಾನವನ್ನು ತಿಳಿಸಿ ಕೊಡುತ್ತಿದ್ದೇವೆ ಅದು ಪಚ್ಚ ಬಾಳೆಹಣ್ಣು. ಪಚ್ಚ ಬಾಳೆಹಣ್ಣು ತೂಕವನ್ನು ಹೆಚ್ಚಿಸಿಕೊಳ್ಳುವುದಕ್ಕೆ ತುಂಬಾ ಸಹಾಯಕಾರಿಯಾಗಿದೆ.

ಪ್ರತಿದಿನ ನೀವು ಆಹಾರಕ್ಕಿಂತ ಅರ್ಧಗಂಟೆ ಮೊದಲು ಅಥವಾ ಆಹಾರದ ಮೂರು ಗಂಟೆಯ ನಂತರ ಎರಡೆರಡು ಬಾಳೆಹಣ್ಣುಗಳನ್ನ ಪ್ರತಿದಿನ ತಿನ್ನಬೇಕು ಸಾಧ್ಯವಾದರೆ ಮೂರನ್ನು ತಿಂದರೆ ಒಳ್ಳೆಯದು. ನಿರಂತರವಾಗಿ ಈ ರೀತಿ ಪಚ್ಚೆಬಾಳೆಹಣ್ಣನ್ನು ತಿನ್ನುವುದರಿಂದ ಒಂದು ತಿಂಗಳಲ್ಲಿ ನಿಮ್ಮ ಮೇಧಸ್ಸು ವೃದ್ಧಿಯಾಗುತ್ತದೆ ಅಸ್ತಿ ವೃದ್ಧಿಯಾಗುತ್ತದೆ ಮಜ್ಜ ವೃದ್ಧಿಯಾಗುತ್ತದೆ ಮಾಂಸಖಂಡಗಳು ಪುಷ್ಟಿ ಯಾಗುತ್ತವೆ. ನೈಸರ್ಗಿಕವಾಗಿ ಹಣ್ಣಾಗಿರುವ ಬಾಳೆಹಣ್ಣುಗಳನ್ನ ಬಳಸುವುದು ಬಹಳ ಉತ್ತಮ.

ನಿಮ್ಮ ತೂಕವನ್ನು ಹೆಚ್ಚಿಸುವುದಕ್ಕೆ ಸಹಾಯಕವಾದ ಇನ್ನೊಂದು ವಸ್ತು ಚಿಕ್ಕು ಹಣ್ಣು .ಇದನ್ನು ಸೇವಿಸುವುದರಿಂದಲೂ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಬಹುದು. ಜೊತೆಗೆ ಹಾಲು ಮತ್ತು ಜೇನು ಸೇರಿದರೆ ನಿಮ್ಮ ದೇಹದಲ್ಲಿನ ತೂಕ ಹೆಚ್ಚಾಗುತ್ತದೆ ಹಸಿ ಹಾಲು ಅಥವಾ ಕಾಯಿಸಿ ಆರಿಸಿದ ಹಾಲಿಗೆ ಎರಡು ಚಮಚ ಜೇನುತುಪ್ಪವನ್ನು ಬೆರೆಸಿ ಕುಡಿಯುವುದರಿಂದ ನಿಮ್ಮ ದೇಹದಲ್ಲಿನ ತೂಕ ಹೆಚ್ಚಾಗುತ್ತದೆ. ನಾವು ನಿಮಗೆ ಮೇಲೆ ತಿಳಿಸಿರುವ ಎರಡು ಮೂರು ವಿಧಾನಗಳಲ್ಲಿ ನಿಮಗೆ ಯಾವುದು ಸುಲಭವೆನಿಸುತ್ತದೆ ಆ ವಿಧಾನವನ್ನು ಅನುಸರಿಸಿ ನಿಮ್ಮ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಿ.

ನಾವು ನಿಮಗೆ ಮೇಲೆ ತಿಳಿಸಿರುವ ವಿಧಾನವನ್ನು ಅನುಸರಿಸುವುದರಿಂದ ಒಂದು ತಿಂಗಳಲ್ಲಿ ನಿಮಗೆ ಮೂರರಿಂದ ನಾಲ್ಕು ಕೆಜಿ ತೂಕ ಹೆಚ್ಚಾಗುತ್ತದೆ. ಹಾಗಾಗಿ ನೀವು ನಿಮ್ಮ ತೂಕವನ್ನು ಹೆಚ್ಚಿಸಿ ಕೊಳ್ಳಬೇಕು ಅಥವಾ ನಿಮ್ಮ ಪರಿಚಿತರು ಯಾರಾದರೂ ತೂಕವನ್ನು ಹೆಚ್ಚಿಸಿಕೊಳ್ಳುವುದಕ್ಕೆ ತುಂಬಾ ಪ್ರಯತ್ನ ಪಡುತ್ತಿದ್ದರೆ ಅವರಿಗೆ ಈ ಮಾಹಿತಿಯನ್ನು ತಿಳಿಸಿ ದೇಹದ ತೂಕವನ್ನು ಸುಲಭವಾಗಿ ಹೆಚ್ಚಿಸಿಕೊಳ್ಳುವುದಕ್ಕೆ ಈ ಮಾಹಿತಿ ತುಂಬಾ ಉಪಯುಕ್ತವಾಗಿದೆ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *