ನಮ್ಮ ಸುತ್ತಮುತ್ತಲಿನ ಪ್ರಕೃತಿಯಲ್ಲಿ ಸಿಗುವ ಒಂದೊಂದು ಸಸ್ಯವು ಕೂಡ ಮನುಷ್ಯನಿಗೆ ಬೇಕಾದ ಔಷಧಿಯ ಗುಣವನ್ನು ಹೊಂದಿವೆ. ಆದರೆ ಅವುಗಳ ಬಗ್ಗೆ ನಮಗೆ ಸರಿಯಾದ ಮಾಹಿತಿ ಇರುವುದಿಲ್ಲ ನಾವು ಅವುಗಳ ಉಪಯೋಗವನ್ನು ಪಡೆದುಕೊಳ್ಳುವುದಿಲ್ಲ. ನಮ್ಮ ಪ್ರಕೃತಿಯಲ್ಲಿರುವ ಗಿಡಗಳಲ್ಲಿ ಉತ್ತರಾಣಿ ಗಿಡವು ಕೂಡ ಒಂದು. ಸಾಮಾನ್ಯವಾಗಿ ನೀವೆಲ್ಲರೂ ಕೂಡ ಉತ್ತರಾಣಿ ಗಿಡವನ್ನು ನೋಡಿರುತ್ತೀರಿ.

ಹೊಲ-ಗದ್ದೆಗಳಲ್ಲಿ ಕಳೆ ಗಿಡದಂತೆ ಕಾಣಿಸಿಕೊಳ್ಳುತ್ತದೆ ಉತ್ತರಾಣಿ ಗಿಡ. ಈ ಗಿಡಕ್ಕೆ ಬಂಜರುಭೂಮಿ ಬೆಟ್ಟ ಕಣಿವೆ ಎನ್ನುವ ಯಾವುದೇ ಭೇದಭಾವವಿಲ್ಲ ಎಲ್ಲಾ ಕಡೆಗಳಲ್ಲಿಯೂ ಇದು ಬೆಳೆಯುತ್ತದೆ. ಉತ್ತರಾಣಿ ಗಿಡ ದಲ್ಲಿ ಎರಡು ಬಗೆಯ ಸಸ್ಯಗಳು ಕಂಡುಬರುತ್ತವೆ ಒಂದು ಕೆಂಪು ಕಾಂಡವನ್ನು ಹೊಂದಿದ್ದರೆ ಇನ್ನೊಂದು ಬಿಳಿಯ ಕಾಂಡವನ್ನು ಹೊಂದಿರುತ್ತದೆ. ಉತ್ತರಾಣಿ ಸಸ್ಯ ಮತ್ತು ಅದರ ಕಡ್ಡಿ ಹಲವು ರೋಗಗಳನ್ನು ಹೋಗಲಾಡಿಸುವ ಗುಣವನ್ನು ಹೊಂದಿದೆ ಅವುಗಳ ಬಗ್ಗೆ ನಾವಿಂದು ತಿಳಿದುಕೊಳ್ಳೋಣ.

ಸಾಮಾನ್ಯವಾಗಿ ಎಲ್ಲ ಪ್ರದೇಶಗಳಲ್ಲಿ ಸಿಗುವ ಉತ್ತರಾಣಿ ಹಲವು ರೋಗಗಳಿಗೆ ಒಳ್ಳೆಯ ಮದ್ದಾಗಿದೆ. ನಾವಿಂದು ನಿಮಗೆ ಉತ್ತರಾಣಿ ಗಿಡವು ಯಾವ ರೀತಿಯ ಔಷಧಿ ಗುಣಗಳನ್ನು ಹೊಂದಿದೆ ಎಂಬುದರ ಬಗ್ಗೆ ನಿಮಗೆ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ. ಉತ್ತರಾಣಿ ಗಿಡದ ಬೇರು ಬಹಳಷ್ಟು ಉಪಯುಕ್ತವಾಗಿದೆ ಇದರ ಬೇರನ್ನು ತೊಳೆದು ಜಜ್ಜಿ ಅದರಿಂದ ರಸವನ್ನು ತೆಗೆದು ಅದನ್ನು ನೀರಿನಲ್ಲಿ ಹಾಕಿ ಕುದಿಸಿ ಆರಿಸಿ ಕುಡಿದರೆ ನಿದ್ರಾಹೀನತೆ ಮಾಯವಾಗುತ್ತದೆ.

ಉತ್ತರಾಣಿ ಗಿಡದ ಎಲೆಯು ಕೂಡ ತುಂಬಾ ಉಪಯುಕ್ತವಾಗಿದೆ ಇದರ ಎಲೆಗಳನ್ನು ಬಳಸಿ ಕಷಾಯವನ್ನು ಮಾಡಿ ಕುಡಿದರೆ ಮೂತ್ರವಿಸರ್ಜನೆಗೆ ಸಂಬಂಧಿಸಿದ ಕಾಯಿಲೆಗಳು ಗುಣವಾಗುತ್ತದೆ. ಜೇನು ಹುಳು ಅಥವಾ ಇತರ ಕೀಟಗಳು ಕಡಿದಾಗ ಉತ್ತರಾಣಿ ಎಲೆಗಳನ್ನು ಅರೆದು ಅದರ ಲೆಪನವನ್ನು ಗಾಯದ ಮೇಲೆ ಹಚ್ಚಿದರೆ ಗಾಯ ಬಹಳ ಬೇಗ ಉಪಶಮನವಾಗುತ್ತದೆ.

ಕೆಲವೊಂದು ಸಾರಿ ಗಾಯಗಳಾಗಿ ರಕ್ತ ಬರುತ್ತಿರುತ್ತದೆ ಆಗ ಕೆಂಪು ಉತ್ತರಾಣಿ ಗಿಡದ ಎಲೆಯ ರಸವನ್ನು ಗಾಯದ ಮೇಲೆ ಹಿಂಡುವುದರಿಂದ ತಕ್ಷಣ ರಕ್ತಸ್ರಾವ ನಿಲ್ಲುತ್ತದೆ ಜೊತೆಗೆ ಗಾಯವು ಕೂಡ ಕ್ರಮೇಣವಾಗಿ ವಾಸಿಯಾಗುತ್ತದೆ. ಕೆಂಪು ಉತ್ತರಾಣಿ ರಸವನ್ನು ಎರಡು ಮೂರು ಚಮಚ ಉಗುರು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ದೇಹದ ಭಾಗದಲ್ಲಿ ರಕ್ತ ಸೋರುತ್ತಿದ್ದರೆ ಅದು ನಿಲ್ಲುತ್ತದೆ. ಮತ್ತು ಕೆಮ್ಮನ್ನು ಕಡಿಮೆ ಮಾಡುವ ಶಕ್ತಿ ಉತ್ತರಾಣಿ ಗಿಡಕ್ಕಿದೆ.

ಕೆಮ್ಮನ್ನು ನಿವಾರಿಸುವುದಕ್ಕೆ ಒಣಗಿದ ಉತ್ತರಾಣಿ ಗಿಡದ ಕಾಂಡವನ್ನು ಸುಟ್ಟು ಭಸ್ಮ ಮಾಡಿ ಅದನ್ನು ಕಾಳುಮೆಣಸಿನಪುಡಿ ಜೇನುತುಪ್ಪದ ಜೊತೆ ಮೂರು ನಾಲ್ಕು ಚಿಟಿಕೆ ಹಾಕಿಕೊಂಡು ಸೇವಿಸಿದರೆ ಕೆಮ್ಮು ರಕ್ತಹೀನತೆ ಅಸ್ತಮಾ ನಿವಾರಣೆಯಾಗುತ್ತದೆ.

ಸ್ನಾನ ಮಾಡುವ ನೀರಿಗೆ ಉತ್ತರಾಣಿ ರಸವನ್ನು ಬೆರೆಸಿ ನಿಯಮಿತವಾಗಿ ಸ್ನಾನ ಮಾಡುವುದರಿಂದ ಚರ್ಮರೋಗ ನಿವಾರಣೆಯಾಗುತ್ತದೆ. ಮತ್ತು ಈ ಗಿಡದ ಎಲೆಯ ರಸವನ್ನು ಮೊಸರಿನೊಂದಿಗೆ ಸೇರಿಸಿ ಸೇವನೆ ಮಾಡುವುದರಿಂದ ಬೇದಿ ಕಡಿಮೆಯಾಗುತ್ತದೆ ಜೊತೆಗೆ ಹೊಟ್ಟೆ ನೋವು ಇದ್ದರೆ ಅದು ಕೂಡ ವಾಸಿಯಾಗುತ್ತದೆ. ಮತ್ತು ನೀವು ರಕ್ತಹೀನತೆಯಿಂದ ಬಳಲುತ್ತಿದ್ದರೆ ಈ ಗಿಡದ ರಸವನ್ನು ಬೆಲ್ಲದೊಂದಿಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ರಕ್ತಹೀನತೆ ಕಡಿಮೆಯಾಗುತ್ತದೆ.

ಈ ರೀತಿಯಾಗಿ ಉತ್ತರಾಣಿ ಗಿಡವು ಔಷಧೀಯ ಗುಣಗಳನ್ನು ಹೊಂದಿದ್ದು ಇದನ್ನು ನೀವು ಬಳಸುವುದರಿಂದ ಅದರ ಉಪಯೋಗಗಳನ್ನು ಪಡೆದುಕೊಳ್ಳಬಹುದು ಜೊತೆಗೆ ನಿಮ್ಮ ಮನೆಯಂಗಳದಲ್ಲಿ ಅಥವಾ ಹೊಲದಲ್ಲಿ ಉತ್ತರಾಣಿ ಸಸ್ಯ ವಿದ್ದರೆ ಅದನ್ನು ಕಿತ್ತು ಎಸೆಯುವ ಮೊದಲು ಹತ್ತಿರದಲ್ಲಿರುವ ಆಯುರ್ವೇದ ವೈದ್ಯರನ್ನು ಭೇಟಿ ಮಾಡಿ ಅವರ ಸಲಹೆ ಪಡೆದು ಈ ಔಷಧಿ ಗಿಡದ ಉಪಯೋಗವನ್ನು ಪಡೆದುಕೊಳ್ಳಿ ಜೊತೆಗೆ ನಿಮ್ಮ ಪರಿಚಿತರಿಗೂ ಸ್ನೇಹಿತರಿಗೂ ಕೂಡ ಉತ್ತರಾಣಿ ಗಿಡದ ಉಪಯೋಗಗಳ ಬಗ್ಗೆ ಮಾಹಿತಿಯನ್ನು ತಿಳಿಸಿಕೊಡಿ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *