ದಕ್ಷಿಣ ಭಾರತದ ಸಿನಿ ಜಗತ್ತು ಹಲವು ಪ್ರತಿಭಾವಂತ ನಟ, ನಟಿಯರನ್ನು ಕಂಡಿದೆ. ಅದರಲ್ಲಿ ಸಿಂಧು ಮೆನನ್ ಎಂಬ ಪ್ರತಿಭಾನ್ವಿತ ನಟಿಯನ್ನು ಕಾಣಲಾಯಿತು. ಅವರು ಅನೇಕ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಬಹು ಭಾಷಾ ನಟಿಯಾಗಿದ್ದು ಚಿಕ್ಕ ವಯಸ್ಸಿನಲ್ಲೇ ಭರತನಾಟ್ಯ ಸಹ ಕಲಿತಿದ್ದಾರೆ. ನಟನೆ ಮಾಡುತ್ತಿದ್ದವರು ಇದ್ದಕಿದ್ದಂತೆ ಮಾಯವಾಗುತ್ತಾರೆ ಅದಕ್ಕೆ ಕಾರಣ ಏನು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ದಕ್ಷಿಣ ಭಾರತದ ಸಿನಿ ಜಗತ್ತು ಕಂಡ ಸುಂದರಿ, ಪ್ರತಿಭಾನ್ವಿತ ನಟಿ ಸಿಂಧು ಮೆನನ್. ಇವರು ಕನ್ನಡ, ತೆಲುಗು, ತಮಿಳು, ಮಲೆಯಾಳಿ ಚಿತ್ರದಲ್ಲಿ ನಟಿಸಿ ಸಿನಿ ಪ್ರಿಯರ ಮನಸನ್ನು ಗೆದ್ದಿದ್ದಲ್ಲದೆ ವಿಮರ್ಶಕರ ಮೆಚ್ಚುಗೆ ಗಳಿಸಿದ್ದಾರೆ. ಸಿಂಧು ಮೆನನ್ ಜೂನ್ 21,1985 ರಲ್ಲಿ ಬೆಂಗಳೂರಿನ ಮಲೆಯಾಳಿ ಕುಟುಂಬದಲ್ಲಿ ಜನಿಸಿದರು. ಸಿಂಧು ಬಾಲ್ಯದಲ್ಲಿ ಭರತನಾಟ್ಯ ಕಲಿಯುತ್ತಿದ್ದರು ಆಗ ಅಂದರೆ 1994ರ ಸಮಯದಲ್ಲಿ ಕನ್ನಡದ ರಶ್ಮಿ ಎಂಬ ಸಿನಿಮಾದಲ್ಲಿ ಬಾಲ ನಟಿಯಾಗಿ ನಟಿಸಲು ಅವಕಾಶ ದೊರೆಯಿತು. ಅವರ ಸಿನಿ ಪ್ರಯಾಣ ಅಲ್ಲಿಂದಲೇ ಪ್ರಾರಂಭವಾಯಿತು. ನಂತರ 1999 ರಲ್ಲಿ ಕನ್ನಡದ ಪ್ರೇಮಾ ಪ್ರೇಮಾ ಪ್ರೇಮಾ ಎಂಬ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾದಲ್ಲಿ ನಟಿಸುವಾಗ ಸಿಂಧು ಅವರ ವಯಸ್ಸು 13. ಇವರ 15 ನೇ ವರ್ಷದಲ್ಲಿ ಸಿಂಧು ತೆಲುಗು, ತಮಿಳು ಚಿತ್ರದಲ್ಲಿ ನಟಿಸಿ ಪ್ರೇಕ್ಷಕರಿಗೆ ಮನರಂಜನೆ ನೀಡಿ ಸೈ ಎನಿಸಿಕೊಂಡರು.

ಇವರು ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಇವರು ಮಾರಿ ಕಣ್ಣು ಹೋರಿ ಮ್ಯಾಗೆ, ನಂದಿ, ಖುಷಿ, ವಿಕ್ರಮ್, ಜೇಷ್ಠ, ಯಾರೇ ನೀ ಹುಡುಗಿ ಇನ್ನೂ ಅನೇಕ ಸಿನಿಮಾಗಳಲ್ಲಿ ನಟಿಸಿ ಜನರ ಮನಸನ್ನು ಗೆದ್ದಿದ್ದಾರೆ. ಇಂತಹ ಪ್ರತಿಭಾನ್ವಿತ ನಟಿ ಚಿತ್ರರಂಗದಲ್ಲಿ ಇದ್ದಕಿದ್ದಂತೆ ಕಣ್ಮರೆಯಾದರು. ಸಿಂಧು ಅವರು 2010 ರಲ್ಲಿ ಪ್ರಭು ಎಂಬ ಉದ್ಯಮಿಯನ್ನು ಮದುವೆಯಾಗುತ್ತಾರೆ. ಮದುವೆ ನಂತರ ಸಿಂಧು ತಮ್ಮ ಗಂಡನ ಜೊತೆ ಲಂಡನ್ ನಲ್ಲಿ ನೆಲೆಸುತ್ತಾರೆ. ನಂತರ ಸಿಂಧು ಸಿನಿಮಾದಲ್ಲಿ ನಟಿಸುವುದಿಲ್ಲ. ಅವರಿಗೆ ಒಬ್ಬ ಸೆಟ್ಲಾನ್ ಎಂಬ ಮುದ್ದಾದ ಹೆಣ್ಣು ಮಗಳಿದ್ದಾಳೆ.

ಸಿಂಧು ಅವರಿಗೆ ಲಂಡನ್ ನಲ್ಲಿ ಉದ್ಯಮವಿದ್ದು ಅದರ ಜವಾಬ್ದಾರಿ ವಹಿಸಬೇಕಾಗಿದೆ ಆದ್ದರಿಂದ ಅವರು ಸಿನಿ ಜಗತ್ತಿನಿಂದ ದೂರ ಉಳಿದರು. ಸಿನಿ ಜೀವನಕ್ಕಿಂತ ವಯಕ್ತಿಕ ಜೀವನವನ್ನು ಅವರು ಆರಿಸಿಕೊಳ್ಳಬೇಕಾಯಿತು. ಒಟ್ಟಿನಲ್ಲಿ ಸಿಂಧು ಅವರು ತಮ್ಮ ನಟನೆಯಿಂದ ಅಭಿಮಾನಿಗಳನ್ನು ಗಳಿಸಿದ್ದಾರೆ. ಸಿಂಧು ಅವರು ತಮ್ಮ ಕುಟುಂಬದವರೊಂದಿಗೆ ಸುಖವಾಗಿ ಇರಲಿ ಎಂದು ಆಶಿಸೋಣ. ಈ ಮಾಹಿತಿಯನ್ನು ಸಿಂಧು ಅವರ ಅಭಿಮಾನಿಗಳಿಗೆ ತಿಳಿಸಿ.

Leave a Reply

Your email address will not be published. Required fields are marked *