ಬಿಗ್ ಬಾಸ್‌ ಸೀಸನ್‌ 5ರ ಸ್ಪರ್ಧಿಗಳಾಗಿದ್ದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ವೈವಾಹಿ ಜೀವನಕ್ಕೆ ಕಾಲಿಟ್ಟ ನಂತರ ಸೋಷಿಯಲ್ ಮೀಡಿಯಾದಲ್ಲಿ ಕಪಲ್ ಫೋಟೋಸ್‌ ಹೆಚ್ಚಾಗಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್‌ ರಿವೀಲ್ ಮಾಡಿದ್ದಾರೆ ಅದುವೇ ಒಟ್ಟಾಗಿ ಸಿನಿಮಾ ಮಾಡುವುದು. ಈ ಮೂಲಕ ಗುಡ್​ ನ್ಯೂಸ್​ ಕೊಟ್ಟಿದ್ದಾರೆ ರ್ಯಾಪರ್ ಚಂದನ್​ ಶೆಟ್ಟಿ ದಂಪತಿ.

ಅರ್ಜುನ್ ಜನ್ಯರ ಬಳಿ ಸಹಾಯಕ ಗಾಯಕನಾಗಿದ್ದ ಚಂದನ್​ ಶೆಟ್ಟಿ ಇವತ್ತು ಕನ್ನಡದ ಫೇಮಸ್ ಫ್ಯೂಚರ್​​ ಮ್ಯೂಸಿಕ್ ಡೈರೆಕ್ಟರ್. ಚಂದನ್ ಶೆಟ್ಟಿ ರ್ಯಾಪ್ ಸಾಂಗ್ಸ್​ಗಳು ಇಂದಿನ 4G ಯುಗದ ಯುವಕರ ಫೇವರೆಟ್ ಪದ್ಯಗಳಾಗಿವೆ. ಚಂದನ್ ಯಾವುದೇ ಸಾಂಗ್ ಮಾಡ್ಲೀ ಅವು ಯೂ ಟ್ಯೂಬ್ ಮನೆಯ ಟಾಪ್ ಫ್ಲೋರ್​ನಲ್ಲಿ ರಾರಾಜಿಸುತ್ತಿರುತ್ತವೆ. ಅಂದ ಹಾಗೇ, ಸದ್ಯ ಚಂದನ್​ ಶೆಟ್ಟಿಗೆ ಪ್ರಮೋಷನ್​ ಸಿಕ್ಕಿದೆ.

ಚಂದನ್ ಶೆಟ್ಟಿ ಮಾತ್ರ ಅಲ್ಲ ಅವರ ಪತ್ನಿ ನಿವೇದಿತಾ ಗೌಡಾನೂ ಪ್ರಮೋಟ್​ ಆಗುತ್ತಾ ಇದ್ದಾರೆ. ನೀವೇನಾದ್ರು ಚಂದನ್ ಮತ್ತು ನಿವೇದಿತಾ ಅಪ್ಪ ಅಮ್ಮ ಆಗ್ತಿದ್ದಾರೆ ಅಂತ ಅಂದುಕೊಂಡಿದ್ದರೆ ಅದು ನಿಜಕ್ಕೂ ತಪ್ಪು. ಚಂದನ್ ಶೆಟ್ಟಿ, ನಿವೇದಿತಾ ಗೌಡ ಅಪ್ಪ-ಅಮ್ಮ ಆಗೋದಕ್ಕೆ ಇನ್ನೂ ಟೈಮ್ ಇದೆ. ಆದ್ರೆ ಪ್ರಮೋಷನ್ ಆಗ್ತಿದ್ದಾರೆ ಅನ್ನೋ ವಿಚಾರವೇ ಬೇರೆ. ಗಾಯಕ, ಸಾಹಿತಿ, ಸಂಗೀತ ನಿರ್ದೇಶಕ, ರ್ಯಾಪರ್ ಚಂದನ್ ಶೆಟ್ಟಿಗೆ ಹೀರೋ ಆಗಿ ಪ್ರಮೋಷನ್ ಸಿಕ್ಕಿದೆ.

ಚಂದನ್ ಶೆಟ್ಟಿ ಹೀರೋ ಆಗಲು ಸಜ್ಜಾಗಿದ್ದಾರೆ. ಚಂದನ್ ಶೆಟ್ಟಿ ಹೀರೋ ಆಗ್ತಾರೆ ಅನ್ನೋ ಮಾತುಗಳು ಚಂದನ್ ಬಿಗ್ ಬಾಸ್ ವಿನ್ನರ್ ಆದ ಕಾಲದಿಂದಲೂ ಕೇಳಿ ಬರುತ್ತಿತ್ತು. ಆದರೆ ಈಗ ಆ ಕಾಲ ಸನಿಹವಾಗಿದೆ. ತಾನು ಹೀರೋ ಆಗುತ್ತಿರೋ ಬಗ್ಗೆ, ತನ್ನ ಸಿನಿಮಾದಲ್ಲಿ ತನ್ನ ಶ್ರೀಮತಿಯೇ ಹೀರೋಯಿನ್ ಆಗ್ತಿರೋ ಬಗ್ಗೆ ಚಂದನ್ ಶೆಟ್ಟಿ ಸದ್ಯ ಮಾಹಿತಿ ನೀಡಿದ್ದಾರೆ.

ಚಂದನ್ ಶೆಟ್ಟಿ ಮತ್ತು ಬಾರ್ಬಿ ಡಾಲ್ ನಿವೇದಿತಾ ಗೌಡ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಗುಡ್ ನ್ಯೂಸ್‌ ನೀಡಿದ್ದಾರೆ. ಚಂದನ್‌ಗೆ ಸಿನಿಮಾ ತಯಾರಿ ಮಾಡಿದ ನಿರ್ದೇಶಕರು ನಿವೇದಿತಾರನ್ನು ನಾಯಕಿಯಾಗಿ ಕೇಳುತ್ತಿದ್ದಾರೆ. ಇಬ್ಬರಿಗೂ ಈಗಾಗಲೇ ಸ್ಕ್ರಿಪ್ಟ್ ರೆಡಿಯಾಗಿದ್ದು ಸಿನಿಮಾ ಮಾಡಲು ತಯಾರಿಯಲ್ಲಿದ್ದಾರಂತೆ. ಚಿತ್ರದ ಬಗ್ಗೆ ಯಾವುದೇ ಮಾಹಿತಿಯನ್ನು ರಿವೀಲ್ ಮಾಡಿಲ್ಲವಾದರೂ ವಿಶೇಷ ದಿನದಂದು ಬಹಿರಂಗಪಡಿಸಲಿದ್ದಾರೆ.

ಮದುವೆಗೂ ಮುನ್ನ ಆಲ್ಬಂ ಸಾಂಗ್‌ನಲ್ಲಿ ಇಬ್ಬರು ಒಟ್ಟಾಗಿ ನೋಡಿ ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ನಿವೇದಿತಾ ಈ ಹಿಂದೆ ಟಿಕ್‌ಟಾಕ್‌ ವಿಡಿಯೋಗಳನ್ನು ಮಾಡಿದ್ದಾರೆ. ಅಭಿನಯಿಸುವುದು ಸುಲಭವಾಗುತ್ತದೆ. ಕೆಲ ದಿನಗಳ ಹಿಂದೆ ಚಂದನ್ ಹುಟ್ಟುಹಬ್ಬಕ್ಕೆ ಇಬ್ಬರು ಒಟ್ಟಾಗಿ ವಿಡಿಯೋ ಮಾಡಿದ್ದರು. ಇಬ್ಬರು ಕೆಂಪು ವಸ್ತ್ರದಲ್ಲಿ ಕಂಗೊಳ್ಳಿಸುತ್ತಾ ಪರಿಸರದ ನಡುವೆ ಹೆಜ್ಜೆ ಹಾಕಿದ್ದಾರೆ.

ಇನ್ನು, ಚಂದನ್ ಶೆಟ್ಟಿ ಈ ಬಾರಿಯ ಹ್ಯಾಪಿ ನ್ಯೂಇಯರ್​ಗೆ ಪಾರ್ಟಿ ಫ್ರೀಕ್ ಅನ್ನೋ ಹಾಡೊಂದನ್ನ ಎರಡೆರಡು ಭಾಷೆಗಳಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಚಂದನ್ ರ್ಯಾಪ್ ಸಾಂಗ್​ ಅಂಗಳದಲ್ಲಿ ಮುದ್ದು ಮಲ್ಲೆ ನಿಶ್ವಿಕಾ ನಾಯ್ಡು ಹಾಗೂ ಚಂದನ್ ಅವರ ಮಡದಿ ನಿವೇದಿತಾ ಗೌಡ ಕೂಡ ಕುಣಿದು ಕಂಗೊಳಿಸಲಿದ್ದಾರೆ. ಡಿಸೆಂಬರ್ 31ಕ್ಕೆ ಚಂದನ್ ಶೆಟ್ಟಿ ನಿರ್ದೇಶನ ಪಾರ್ಟಿ ಫ್ರೀಕ್ ಸಾಂಗ್ ಹೊರ ಬರಲಿದೆ. ಈ ಹಾಡಿನ ನಂತರದ ದಿನಗಳಲ್ಲಿ ಚಂದನ್ ನಟಿಸುವ ಸಿನಿಮಾ ಯಾವುದು ಅನ್ನೋದು ಕನ್ಫರ್ಮ್ ಆಗಲಿದೆ.

Leave a Reply

Your email address will not be published. Required fields are marked *