ಮಾಲ್ಡೀವ್ಸ್ ಹೆಸರು ಯಾರು ತಾನೇ ಕೇಳಿಲ್ಲ? ಮಾಲೆ ಧಿವೆಹಿ ರಾಜ್ಜೆ ಎಂಬ ಮೂಲ ಶಬ್ದದಿಂದ ಮಾಲ್ಡೀವ್ಸ್ ಶಬ್ಧ ಉತ್ಪತ್ತಿ ಆಗಿದೆ. “ದ್ವೀಪ ರಾಜಧಾನಿ ಮಾಲೆ” ಇದು “ಮಾಲ್ಡೀವ್ಸ್”‌ನ ಸ್ಥಳೀಯ ಹೆಸರಾಗಿದೆ. ಈ ದ್ವೀಪರಾಷ್ಟ್ರದ ಹೆಸರು ಇದರ ರಾಜಧಾನಿ ಮಾಲೆಯ ಪರ್ಯಾಯ ಪದವಾಗಿದೆ. ಕೆಲವೊಮ್ಮೆ ’ಮಹಾಲ್ಡೀಬ್’ ಎಂದೂ ಇಲ್ಲಿಯ ಜನರನ್ನು ಮಾಲ್ಡೀವಿಯನ್ ’ಧಿವೆಹಿನ್’ ಎಂದು ಕರೆಯುತ್ತಾರೆ. ವಸಾಹತು ಶಾಕೆಯ ಕಾಲದಲ್ಲಿ ಈ ದೇಶವನ್ನು ಡಚ್ಚರು ಮಾಲ್ಡೀವಿಸ್‌ಚೆ ಐಲ್ಯಾಂಡನ್ ಎಂದು ಉಲ್ಲೇಖಿಸಿದ್ದಾರೆ. ಬ್ರಿಟೀಷರು ಸ್ಥಳೀಯ ಹೆಸರು ಬಳಸಿಕೊಂಡು ಮಾಲ್ಡೀವ್ ಐಸ್‌ಲ್ಯಾಂಡ್ ಎಂದು ಇಂಗೀಷ್ ಭಾಷೆಗೆ ತರ್ಜುಮೆ ಮಾಡಿದರು. ನಂತರ ಮಾಲ್ಡೀವ್ಸ್ ಆಗಿ ಕರೆಯಲ್ಪಟ್ಟಿತು. ಇಂತಹ ಇತಿಹಾಸವನ್ನು ಹೊಂದಿರುವ ಮಾಲ್ಡೀವ್ಸ್ ತನ್ನ ಪ್ರಾಕೃತಿಕ ಸೌಂದರ್ಯಕ್ಕೆ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಇಲ್ಲಿ ತಮ್ಮ ಸಂತಸದ ಸಮಯ ಕಳೆಯಲು ಎಂದೇ ಸಾಕಷ್ಟು ಜನರು ವಿದೇಶಗಳಿಂದ ಬರುತ್ತಾರೆ. ಇದೀಗ ಲಾಕ್‌ಡೌನ್‌ನಿಂದ ಹೊರಬರುತ್ತಿದ್ದಂತೆ ಸೆಲೆಬ್ರಿಟಿಗಳೆಲ್ಲಾ ಎಂಜಾಯ್ ಮೂಡ್‌ಗೆ ಹೋಗಿದ್ದಾರೆ. ಅದಕ್ಕಾಗಿ ನೆಚ್ಚಿನ ಸ್ಥಳಗಳಿಗೆ ಭೇಟಿ ನೀಡಿ ಹಾಲಿಡೇ ಎಂಜಾಯ್ ಮಾಡ್ತಿದ್ದಾರೆ. ಸ್ಟಾರ್ ನಟ ಹಾಗೂ ನಟಿಯ ಕುಟುಂಬಗಳು ದುಬೈ ಕಡೆ ಹೋಗಿದ್ದರೆ, ಯುವ ನಟಿಯರು ಮಾಲ್ಡೀವ್ಸ್‌ ಕಡೆ ವಿಮಾನ ಹತ್ತಿದ್ದಾರೆ.

ಕಳೆದ ಒಂದೂವರೆ ತಿಂಗಳಿನಿಂದ ದಕ್ಷಿಣ ಭಾರತದ ಖ್ಯಾತ ನಟಿಯರು ಮಾಲ್ಡೀವ್ಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಕನ್ನಡ ನಟಿ ಶರ್ಮಿಳಾ ಮಾಂಡ್ರೆ ಮತ್ತು ಬಹುಭಾಷಾ ನಟಿ ವೇದಿಕಾ ಸಹ ಮಾಲ್ಡೀವ್ಸ್‌ನಲ್ಲಿ ಪ್ರತ್ಯಕ್ಷವಾಗಿದ್ದಾರೆ. ಈ ಇಬ್ಬರು ನಟಿಯರ ಬಿಕಿನಿ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಶಿವಲಿಂಗ ಸಿನಿಮಾ ಖ್ಯಾತಿಯ ನಟಿ ವೇದಿಕಾ ಸದ್ಯ ಮಾಲ್ಡೀವ್ಸ್‌ನಲ್ಲಿ ಹಾಲಿಡೇ ಎಂಜಾಯ್ ಮಾಡುತ್ತಾ ಇದ್ದಾರೆ. ಸ್ನೇಹಿತರ ಜೊತೆ ಮಾಲ್ಡೀವ್ಸ್ ಪ್ರಯಾಣ ಮಾಡಿರುವ ನಟಿ ಬೀಚ್‌ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಮಾಲ್ಡೀವ್ಸ್‌ ಬೀಚ್‌ನಲ್ಲಿ ಬಿಕಿನಿ ತೊಟ್ಟು ಫೋಸ್ ನೀಡಿರುವ ವೇದಿಕಾ ಫೋಟೋಗಳು ಇನ್ಸ್ಟಾಗ್ರಾಂನಲ್ಲಿ ಸದ್ದು ಮಾಡ್ತಿದೆ. ಉಪೇಂದ್ರ ಅಭಿನಯದ ‘ಹೋಮ್ ಮಿನಿಸ್ಟರ್’ ಹಾಗೂ ತೆಲುಗು, ತಮಿಳು ಚಿತ್ರಗಳಲ್ಲಿ ವೇದಿಕಾ ನಟಿಸುತ್ತಿದ್ದಾರೆ. ಕನ್ನಡದ ಮತ್ತೊಬ್ಬ ನಟಿ ಶರ್ಮಿಳಾ ಮಾಂಡ್ರೆ ಸಹ ಮಾಲ್ಡೀವ್ಸ್‌ನಲ್ಲಿ ಸುತ್ತಾಡುತ್ತಿದ್ದಾರೆ. ಸ್ನೇಹಿತರ ಜೊತೆ ಹಾಲಿಡೇ ಎಂಜಾಯ್ ಮಾಡ್ತಿರುವ ನಟಿಯೂ ಸಹ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ನಟಿ ಕಾಜಲ್ ಅಗರ್‌ವಾಲ್ ತಮ್ಮ ಪತಿ ಜೊತೆ ಮಾಲ್ಡೀವ್ಸ್‌ನಲ್ಲಿ ಹನಿಮೂನ್ ಎಂಜಾಯ್ ಮಾಡಿದ್ದಾರೆ. ಸಮಂತಾ ಮತ್ತು ನಾಗಚೈತನ್ಯ ಸಹ ಮಾಲ್ಡೀವ್ಸ್‌ಗೆ ಹೋಗಿ ಬಂದಿದ್ದಾರೆ. ಕನ್ನಡ ನಟಿ ಶಾನ್ವಿ ಶ್ರೀವಾಸ್ತವ್, ರಕುಲ್ ಪ್ರೀತ್ ಸಿಂಗ್ ಸಹ ಮಾಲ್ಡೀವ್ಸ್‌ನಲ್ಲಿ ಕಾಣಿಸಿಕೊಂಡಿದ್ದರು. ಈಗ ಶರ್ಮಿಳಾ ಮಾಂಡ್ರೆ ಮತ್ತು ವೇದಿಕಾ ಸಹ ಮಾಲ್ಡೀವ್ಸ್‌ನಲ್ಲಿ ಸಮಯ ಕಳೆಯುತ್ತಿದ್ದಾರೆ.

ತೆಲುಗು ನಟಿ ಸಮಂತಾ ಅಕ್ಕಿನೇನಿ ಸದ್ಯ ಮಾಲ್ಡೀವ್ಸ್‌ನಲ್ಲಿ ಹಾಲಿಡೇ ಎಂಜಾಯ್ ಮಾಡ್ತಿದ್ದಾರೆ. ಲಾಕ್‌ಡೌನ್‌ನಿಂದ ಮನೆಯಲ್ಲಿ ಕುಳಿತು ಟೈಂ ಪಾಸ್ ಮಾಡಿದ್ದ ಸಮಂತಾ ಈಗ ಮಾಲ್ಡೀವ್ಸ್‌ ಬೀಚ್‌ನಲ್ಲಿ ಮೋಜು ಮಸ್ತಿ ಮಾಡ್ತಿದ್ದಾರೆ. ಪತಿ ನಾಗಚೈತನ್ಯ ಜೊತೆ ಮಾಲ್ಡೀವ್ಸ್‌ನಲ್ಲಿ ಸಮಯ ಕಳೆಯುತ್ತಿರುವ ಸ್ಯಾಮ್, ಬಿಕಿನಿ ಫೋಟೋವೊಂದನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡು ಎಲ್ಲರನ್ನು ಬೆರಗಾಗಿಸಿದ್ದಾರೆ.

ಇನ್ನು ಸಮಂತಾ ಅಕ್ಕಿನೇನಿ ಸ್ಯಾಮ್ ಜಾಮ್ ಎಂಬ ಹೆಸರಿನಲ್ಲಿ ಟಾಕ್ ಶೋ ನಿರೂಪಣೆ ಮಾಡುತ್ತಿದ್ದಾರೆ. ನಾಗಾರ್ಜುನ ಅನುಪಸ್ಥಿತಿಯಲ್ಲಿ ಒಂದು ವಾರ ಬಿಗ್ ಬಾಸ್ ನಿರೂಪಣೆ ಮಾಡಿದರು. ಇನ್ನು ವಿಜಯ್ ಸೇತುಪತಿ ಮತ್ತು ನಯನತಾರ ನಟಿಸುತ್ತಿರುವ ಚಿತ್ರದಲ್ಲಿ ಸಮಂತಾ ಕಾಣಿಸಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ವಿಜಯ್ ನಟಿಸಲಿರುವ 65ನೇ ಚಿತ್ರಕ್ಕೆ ನಾಯಕಿ ಎಂದು ಸಹ ಹೇಳಲಾಗ್ತಿದೆ.

ಮಾಲ್ಡೀವ್ಸ್‌ನಲ್ಲಿ ಸೌತ್ ಇಂಡಸ್ಟ್ರಿ ಚೆಲುವೆಯರು ಹಾಲಿಡೇ ಎಂಜಾಯ್. ಲಾಕ್‌ಡೌನ್‌ನಿಂದ ಬ್ರೇಕ್ ಪಡೆದುಕೊಂಡಿದ್ದ ಸಿನಿತಾರೆಯರು ಈಗ ಎಂಜಾಯ್ ಮಾಡೋ ಮೂಡ್‌ನಲ್ಲಿದ್ದಾರೆ. ಏಳೆಂಟು ತಿಂಗಳು ಮನೆಗಳಲ್ಲಿ ಕೂತು ಸಮಯ ಕಳೆದಿದ್ದ ಸೆಲೆಬ್ರಿಟಿಗಳು ಈಗ ಫ್ಯಾಮಿಲಿ ಜೊತೆ ವಿದೇಶಗಳಲ್ಲಿ ಟೈಂ ಪಾಸ್ ಮಾಡ್ತಿದ್ದಾರೆ. ವಿಶೇಷ ಅಂದ್ರೆ ದಕ್ಷಿಣ ಭಾರತ ಬಹುತೇಕ ಖ್ಯಾತ ನಟಿಯರೆಲ್ಲರೂ ಒಂದೇ ಜಾಗಕ್ಕೆ ಹೋಗುತ್ತಿರುವುದು ಗಮನ ಸೆಳೆಯುತ್ತಿದೆ. ಲಾಕ್‌ಡೌನ್ ಮುಗಿದ ಬಳಿಕ ಶಾನ್ವಿ ಶ್ರೀವಾಸ್ತವ್, ರಕುಲ್ ಪ್ರೀತ್ ಸಿಂಗ್, ಪ್ರಣಿತಾ ಸುಭಾಷ್ ಸೇರಿದಂತೆ ಹಲವರು ಮಾಲ್ಡೀವ್ಸ್‌ನಲ್ಲಿ ಪ್ರವಾಸ ಮಾಡಿ ಬಂದಿದ್ದಾರೆ.

Leave a Reply

Your email address will not be published. Required fields are marked *