ಕನ್ನಡ ಕಿರುತೆರೆ ಲೋಕದಲ್ಲಿ ಅನೇಕ ಧಾರಾವಾಹಿಗಳು ಪ್ರಸಾರವಾಗಿ ಹೋಗಿವೆ. ಅಷ್ಟೇ ಅಲ್ಲದೆ ಅನೇಕ ಧಾರಾವಾಹಿಗಳು ಹೊಸದಾಗಿ ಆರಂಭವಾಗುತ್ತಿರುತ್ತವೆ. ಈಗಾಗಲೇ ಅಂತ್ಯವಾಗಿರುವ ಧಾರಾವಾಹಿಗಳಲ್ಲಿ ಕೆಲವು ಮೆಗಾ ಧಾರಾವಾಹಿಗಳಾಗಿ, ಜನರ ಮನಸ್ಸಲ್ಲಿ ಇನ್ನೂ ಅಚ್ಚಳಿಯಾಗಿ ಉಳಿದಿದೆ. ಅಂತಹ ಧಾರಾವಾಹಿಗಳಲ್ಲಿ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಮೃತವರ್ಷಿಣಿ ಧಾರವಾಹಿ ಕೂಡಾ ಒಂದಾಗಿತ್ತು.

ಸುಮಾರು 1700ಕ್ಕೂ ಅಧಿಕ ಕಂತುಗಳು ಅಮೃತವರ್ಷಿಣಿ ಧಾರಾವಾಹಿ ಪ್ರಸಾರವಾಗಿತ್ತು. ಅತಿ ಹೆಚ್ಚು ವರ್ಷಗಳು ಪ್ರಸಾರವಾದ ಸೀರಿಯಲ್ ಗಳ ಪೈಕಿ ಅಮೃತವರ್ಷಿಣಿಯೂ ಒಂದಾಗಿದೆ. ಈ ಧಾರಾವಾಹಿಯಲ್ಲಿ ನಾಯಕಿಯಾಗಿ ಅಮೃತ ಪಾತ್ರದಲ್ಲಿ ನಟಿಸಿದ್ದ ಮಾತು ರಂಜಿನಿ ಅವರು ಧಾರವಾಹಿ ಮುಗಿದ ನಂತರ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಇತ್ತೀಚೆಗೆ ಇವರ ಒಂದು ನೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು ಈಗ ಮತ್ತೆ ಸುದ್ದಿಯಲ್ಲಿ ಇದ್ದಾರೆ ನಟಿ ರಂಜಿನಿ.

ಕೆಲ ವರ್ಷಗಳ ಸ್ಟಾರ್ ಸುವರ್ಣ ವಾಹಿನಿ ಶುರುವಾದ ಹೊಸತರಲ್ಲಿ ಆರಂಭವಾದ ಧಾರಾವಾಹಿ ಅಮೃತವರ್ಷಿಣಿ. ಈ ಧಾರಾವಾಹಿಯಲ್ಲಿ ಹಿರಿಯ ಕಲಾವಿದರಾದ ಹೇಮಾ ಚೌಧರಿ ಅವರು ಸಹ ಇದ್ದರು, ಜೊತೆಗೆ ಅಮೃತವರ್ಷಿಣಿ ಧಾರಾವಾಹಿ ಮೂಲಕ ಅನೇಕ ಯುವಪ್ರತಿಭೆಗಳು ಸಹ ಕನ್ನಡ ಕಿರುತೆರೆಗೆ ಪರಿಚಯವಾದರು. ಅಮೃತವರ್ಷಿಣಿ ಧಾರಾವಾಹಿಯ ನಾಯಕಿ ಅಮೃತ ಪಾತ್ರ ನಿರ್ವಹಿಸಿದ ನಟಿ ರಜಿನಿ, ಮುಗ್ಧವಾದ ನಟನೆಯಿಂದ ಕರ್ನಾಟಕದ ಮನೆಮಾತಾಗಿದ್ದರು. ಅಮೃತವರ್ಷಿಣಿ ಧಾರಾವಾಹಿಯ ನಂತರ ಬೇರೆ ಧಾರಾವಾಹಿಗಳ ಕೆಲಸಗಳಲ್ಲಿ ಬ್ಯುಸಿ ಆಗಿದ್ದ ನಟಿ ರಂಜಿನಿ ಅವರು ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್. ಇತ್ತೀಚಿಗೆ ಅಮೃತವರ್ಷಿಣಿ ನಟಿ ರಂಜಿನಿ ಅವರು ಅದ್ಭುತವಾಗಿ ಡಾನ್ಸ್ ಮಾಡಿ, ತಮ್ಮ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸದ್ಯ ರಂಜಿನಿ ಅವರ ಈ ಡಾನ್ಸ್ ವಿಡಿಯೋ ಎಲ್ಲೆಡೆ ಸಕತ್ ವೈರಲ್ ಆಗಿದೆ.

ಇದೀಗ ಮಂಗಳಗೌರಿ ಸೀರಿಯಲ್ ಕಲಾವಿದರ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ ರಜಿನಿ, ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈ-ರಲ್ ಆಗ್ತಿದೆ. ಈ ಫೋಟೋ ನೋಡಿದ ನೆಟ್ಟಿಗರು, ಮಂಗಳಗೌರಿ ಮದುವೆ ಧಾರಾವಾಹಿಯಲ್ಲಿ ರಜಿನಿ ನಟಿಸಲಿದ್ದಾರಾ? ಎಂಬ ಪ್ರಶ್ನೆ ಮೂಡಿತ್ತು. ಇದಕ್ಕೆ ಸ್ವತಃ ರಜಿನಿ ಅವರೇ ಉತ್ತರ ನೀಡಿದ್ದಾರೆ. ಫೋಟೋದಲ್ಲಿ ಲಂಗ ದಾವಣಿಯಲ್ಲಿ ಕಾಣಿಸಿಕೊಂಡಿದ್ದಾರೆ ರಜಿನಿ. ಬೇರೆ ಧಾರಾವಾಹಿಯ ಲುಕ್ ಟೆಸ್ಟ್ ಗಾಗಿ ರಜಿನಿ ಹೋಗಿದ್ದಾಗ, ಮಂಗಳಗೌರಿ ಮದುವೆ ಧಾರಾವಾಹಿ ಕಲಾವಿದರು ಸಿಕ್ಕಾಗ ಫೋಟೋ ತೆಗೆಸಿಕೊಳ್ಳಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದೀಗ ಹೊಸ ಧಾರಾವಾಹಿಯ ತಯಾರಿಯಲ್ಲಿದ್ದ ರಜಿನಿ ಇತ್ತೀಚೆಗೆ ತಮ್ಮ ಮೂಗನ್ನು ಸರ್ಜರಿ ಮಾಡಿಸಿಕೊಂಡು, ಜಿಮ್ ನಲ್ಲಿ ವರ್ಕ್ ಔಟ್ ಮಾಡಿ ಫಿಟ್ ಆಂಡ್ ಫೈನ್ ಆಗಿದ್ದಾರೆ. ಇದುವರೆಗೂ ನಟಿಸಿರದ ವಿಭಿನ್ನವಾದ ಪಾತ್ರಗಳು ಸಿಕ್ಕರೆ ನಟಿಸಲು ಇಷ್ಟಪಡುತ್ತೇನೆ ಎಂದಿದ್ದಾರೆ. ಭಾಷೆ ಯಾವುದಾದರೂ ಸರಿ ಕಥೆ ಮತ್ತು ಪಾತ್ರ ಚೆನ್ನಾಗಿದ್ದರೆ ನಟಿಸಲು ಸಿದ್ಧ ಇರುವುದಾಗಿ ತಿಳಿಸಿದ್ದಾರೆ. ಅಮೃತವರ್ಷಿಣಿ ಅಮೃತ ಪಾತ್ರವನ್ನು ಇಂದಿಗೂ ಸಹ ಯಾರೂ ಮರೆಯಲು ಸಾಧ್ಯವಿಲ್ಲ. ಈ ಪಾತ್ರದ ಮೂಲಕ ಕನ್ನಡ ಕಿರುತೆರೆ ಪ್ರಿಯರ ಮನೆಮನೆಗೂ ತಲುಪಿದ್ದರು ರಜಿನಿ. 3 ವರ್ಷಕ್ಕೂ ಹೆಚ್ಚಿನ ಕಾಲ ಪ್ರಸಾರವಾಗಿತ್ತು ಈ ಧಾರಾವಾಹಿ. ಇದರ ನಂತರ ಕಲರ್ಸ್ ಕನ್ನಡ ವಾಹಿನಿಯ ಫೇಮಸ್ ರಿಯಾಲಿಟಿ ಶೋ ಡ್ಯಾನ್ಸಿಂಗ್ ಸ್ಟಾರ್ಸ್ ನಲ್ಲಿ ಸ್ಪರ್ಧಿಸಿದ್ದರು. ಡ್ಯಾನ್ಸಿಂಗ್ ಸ್ಟಾರ್ ಕಾರ್ಯಕ್ರಮದಲ್ಲಿ ಅದ್ಭುತವಾಗಿ ನೃತ್ಯ ಮಾಡಿ ತೀರ್ಪುಗಾರರನ್ನು ಹಾಗೂ ವೀಕ್ಷಕರನ್ನು ಬೆರಗುಗೊಳಿಸಿದ್ದರು. ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಂದ ಪ್ರಶಂಸೆ ಪಡೆದಿದ್ದರು. ನಂತರ ಆತ್ಮಬಂಧನ ಧಾರಾವಾಹಿಯಲ್ಲಿ ನಟಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ರಜಿನಿ, ತಮ್ಮ ಫೋಟೋಗಳನ್ನು ಪೋಸ್ಟ್ ಮಾಡುತ್ತಾರೆ.

Leave a Reply

Your email address will not be published. Required fields are marked *