ಭಾರತೀಯ ನಟಿ. ತೆಲುಗು , ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ನಾಲ್ಕು ಫಿಲ್ಮ್ಫೇರ್ ಪ್ರಶಸ್ತಿ, ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ, ಮೂರು ನ೦ದಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ ಇವರು ರಮ್ಯಾ ಕೃಷ್ಣ ಎಂಬ ಹೆಸರಿನಿಂದ ಹೆಸರುವಾಸಿಯಾಗಿದ್ದಾರೆ. ಪದಯಪ್ಪ ಚಲನಚಿತ್ರದಲ್ಲಿ ನೀಲಾ೦ಬರಿ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಪಾತ್ರಕ್ಕಾಗಿ ಅತ್ಯುತ್ತಮ ನಟಿ ಫಿಲ್ಮ್ಫೇರ್ ಪ್ರಶಸ್ತಿಯನ್ನು ಪಡೆದರು.

೨೦೧೫ರ ಬಾಹುಬಲಿ ಚಿತ್ರದಲ್ಲಿ ಶಿವಗಾಮಿ ದೇವಿ ಎಂಬ ಪಾತ್ರವನ್ನು ನಿರ್ವಹಿಸಿ ಸಾರ್ವತ್ರಿಕ ಮೆಚ್ಚುಗೆಯನ್ನು ಪಡೆದಿದ್ದಾರೆ. ಈ ಚಿತ್ರವು ಭಾರತದ ಹೆಚ್ಚು ಗಳಿಕೆಯ ಚಿತ್ರಗಳಲ್ಲಿ ಒಂದು. ಇದರ ಎರಡನೆ ಭಾಗವೂ ಕೂಡ ಅತಿ ಹೆಚ್ಚು ಗಳಿಕೆಯ ಚಿತ್ರಗಳಲ್ಲಿ ಕೂಡ ಒಂದಾಗಿದೆ. ಬಾಹುಬಲಿ ದ ಬಿಗಿನ್ನಿಂಗ್ ಚಿತ್ರಕ್ಕಾಗಿ ಅವರಿಗೆ ಅತ್ಯುತ್ತಮ ಪೋಷಕ ನಟಿ, ಫಿಲ್ಮ್ಫೇರ್ ಪ್ರಶಸ್ತಿ ಹಾಗೂ ನಂದಿ ಪ್ರಶಸ್ತಿ ದೊರೆತಿದೆ. ಇಷ್ಟೊಂದು ಪ್ರಶಸ್ತಿ ಹಾಗೂ ಜನಪ್ರಿಯತೆ ಹೊಂದಿರುವ ರಮ್ಯಕೃಷ್ಣ ಅವರು ಒಂದು ದಿನದ ಶೂಟ್‌ಗೆ ತೆಗೆದುಕೊಳ್ಳುವ ಸಂಭಾವನೆ ಎಷ್ಟು ಎನ್ನುವುದನ್ನು ನಾವಿಲ್ಲಿ ನೋಡೋಣ.

ರಮ್ಯಾ ಚೆನ್ನೈನಲ್ಲಿ ಕೃಷ್ಣನ್ ಮತ್ತು ಮಾಯಾ ದಂಪತಿಗೆ ಜನಿಸಿದರು. ಅವರು ಹಿರಿಯ ತಮಿಳು ಹಾಸ್ಯನಟ ಚೋ ರಾಮಸ್ವಾಮಿಯ ಸೋದರ ಸೊಸೆ. ಅವರು ಭರತನಾಟ್ಯ, ಪಾಶ್ಚಾತ್ಯ ಮತ್ತು ಕುಚಿಪುಡಿ ನೃತ್ಯ ಪ್ರಕಾರಗಳಲ್ಲಿ ಆರಂಭಿಕ ತರಬೇತಿಯನ್ನು ಪಡೆದರು ಮತ್ತು ಅನೇಕ ರಂಗ ಪ್ರದರ್ಶನಗಳನ್ನು ನೀಡಿದ್ದಾರೆ. ರಮ್ಯಾ ರವರು ೧೯೮೪ರಲ್ಲಿ ವೈ.ಜಿ ಮಹೇ೦ದ್ರ ರವರ ಜೊತೆ ವೆಲ್ಲಿ ಮನಸ್ಸು ಎ೦ಬ ತಮಿಳು ಚಲನಚಿತ್ರದಲ್ಲಿ ೧೪ ನೇ ವಯಸ್ಸಿನಲ್ಲಿ ನಟಿಸಿದ್ದಾರೆ. ಅವರ ಮೊದಲ ತೆಲುಗು ಚಿತ್ರ ಭಲೆ ಮಿತ್ರುಲು. ಕಾಶಿನಾಧುನಿ ವಿಶ್ವನಾಥ್ ರವರ ಸೂತ್ರಧಾರುಲು ಚಿತ್ರದಿಂದ ಜನಪ್ರಿಯ ಹೊಂದಿದ್ದರು.

೧೯೯೦ ರಲ್ಲಿ ಸೌ೦ದರ್ಯ, ಮೀನಾ, ರೋಜಾ, ನಗ್ಮಾ ಹಾಗೂ ಮು೦ತಾದ ನಟಿಯರೊ೦ದಿಗೆ ತೆಲುಗು ಉದ್ಯಮದಲ್ಲಿ ಪ್ರಮುಖ ನಟಿಯಾಗಿ ಹೊರಹೊಮ್ಮಿದ್ದರು. ಇವರು ಎನ್.ಟಿ ರಾಮ ರಾವ್,ಕೃಷ್ಣ, ಚಿರ೦ಜೀವಿ, ಬಾಲಕೃಷ್ಣ, ವೆ೦ಕಟೇಶ್, ಮೋಹನ್ ಬಾಬು ,ಜಗಪತಿ ಬಾಬು, ರಾಜಶೇಖರ್, ರಜನಿಕಾಂತ್ ಹಾಗೂ ಕನ್ನಡದಲ್ಲಿ ರವಿಚಂದ್ರನ್, ಪುನೀತ್ ರಾಜ್‍ಕುಮಾರ್, ಉಪೇಂದ್ರ ಹಾಗೂ ಮು೦ತಾದ ನಟರ ಜೊತೆ ಚಲನಚಿತ್ರದಲ್ಲಿ ನಟಿಸಿದ್ದಾರೆ.

ನಟಿ ರಮ್ಯಾ ಕೃಷ್ಣ ಅವರು ಹಲವು ಭಾಷೆಯ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು. ಆದರೆ ಬಾಹುಬಲಿ ಚಿತ್ರದ ನಂತರ ಅವರು ಬಹಳ ಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ. ಬಾಹುಬಲಿ ಖ್ಯಾತಿಯ ಶಿವಗಾಮಿ ಒಂದು ದಿನದ ಸಂಭಾವನೆ ಎಷ್ಟು ಗೊತ್ತಾ.? ಲಕ್ಷಗಟ್ಟಲೆ ಪೇಮೆಂಟ್ ಪಡಿತಾರೆ ರಮ್ಯಾ ಕೃಷ್ಣ. ನಟಿ ರಮ್ಯಾಕೃಷ್ಣ ಅವರು ಬಾಹುಬಲಿ ಚಿತ್ರದಲ್ಲಿ ಬಾಹುಬಲಿಯ ಅಮ್ಮ ಶಿವಗಾಮಿ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರ ಸೂಪರ್ ಹಿಟ್ ಆದ ಕಾರಣದಿಂದ ರಮ್ಯಾಕೃಷ್ಣ ಅವರ ಡಿಮ್ಯಾಂಡ್ ಸಾಕಷ್ಟು ಏರಿಕೆಯಾಗಿದೆ. ಜೊತೆಗೆ ಅವರ ಸಂಬಳದಲ್ಲಿ ಕೂಡ ಏರಿಕೆಯಾಗಿದೆ ಎಂಬುದಾಗಿ ಮೂಲಗಳಿಂದ ತಿಳದುಬಂದಿದೆ. ಮೂಲಗಳ ಪ್ರಕಾರ ರಮ್ಯಾ ಒಂದು ದಿನದ ಶೂಟಿಂಗ್ ಗೆ ಆರು ಲಕ್ಷ ರೂಪಾಯಿ ಪಡೆಯುತ್ತಿದ್ದಾರಂತೆ. ರಮ್ಯಾ 25 ದಿನಗಳ ಕಾಲ ಶೂಟಿಂಗ್ ಮಾಡಲಿದ್ದಾರೆ. ಅಂದ್ರೆ ರಮ್ಯಾ ಒಂದು ಚಿತ್ರಕ್ಕೆ 1.50 ಕೋಟಿ ರೂಪಾಯಿ ಪಡೆಯಲಿದ್ದಾರೆ. ಸಿನಿಮಾ ರಂಗದಲ್ಲಿ ಅಂದೂ ಮತ್ತು ಇಂದೂ ಮಿಂಚುತ್ತಿರುವ ನಟಿಯರಲ್ಲಿ ರಮ್ಯಾ ಕೃಷ್ಣ ಕೂಡಾ ಒಬ್ಬರು.

Leave a Reply

Your email address will not be published. Required fields are marked *