ಶ್ರೀರಾಮ ಮಂದಿರ ಉದ್ಘಾಟನೆ ದಿನವೇ ರಾಮನ ಚಿತ್ರ ಇರುವ ನೋಟ್ ಜಾರಿಗೆ ಬರುತ್ತಾ? ಸ್ಪಷ್ಟನೆ ಕೊಟ್ಟ RBI

0 28,028

ಒಂದೆರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಚಾರ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅದೇನು ಎಂದರೆ 500 ರೂಪಾಯಿಯ ನೋಟ್ ಅನ್ನು ಸರ್ಕಾರ ಬದಲಾವಣೆ ಮಾಡುತ್ತದೆ. ಇನ್ನುಮುಂದೆ ಶ್ರೀರಾಮನ ಭಾವಚಿತ್ರ ಹಾಗೂ ಅಯೋಧ್ಯೆಯ ದೇವಸ್ಥಾನದ ಭಾವಚಿತ್ರ ಇರುವ ಹೊಸ ನೋಟ್ ಜಾರಿಗೆ ಬರುತ್ತದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇಲ್ಲಿ ಶ್ರೀರಾಮನ ಹಾಗೂ ಅಯೋಧ್ಯೆ ದೇವಸ್ಥಾನ ಇರುವ ನೋಟ್ ಫೋಟೋಗಳು ಕೂಡ ವೈರಲ್ ಆಗುತ್ತಿದೆ.

ಜನವರಿ 22ರಂದು ಅಯೋಧ್ಯೆಯ ದೇವಸ್ಥಾನದ ಫೋಟೋ ಇರುವ 500 ರೂಪಾಯಿಯ ನೋಟ್ ಗಳ ಓಹಿತೋಶ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಯೋಧ್ಯೆ ದೇವಸ್ಥಾನದಲ್ಲಿ ಉದ್ಘಾಟನೆಯ ದಿನ ಜನವರಿ 22ರಿಂದ ಈ ನೋಟ್ ಜಾರಿಗೆ ಬರುತ್ತದೆ ಎಂದು ಕೂಡ ಹೇಳಲಾಗುತ್ತಿದೆ. ಇದನ್ನೆಲ್ಲಾ ನೋಡಿದ ಜನರು ಕೂಡ, ಗೊಂದಲಕ್ಕೆ ಒಳಗಾಗಿದ್ದಾರೆ. 500 ರೂಪಾಯಿಯ ಈಗಿರುವ ನೋಟ್ ಬ್ಯಾನ್ ಆಗುತ್ತಾ? ಎನ್ನುವ ಪ್ರಶ್ನೆ ಶುರುವಾಗಿದೆ.

ಇದಕ್ಕೆ ಈಗ ಖುದ್ದು ಆರ್ಬಿಐ ಅಧಿಕೃತವಾಗಿ ಮಾಹಿತಿ ನೀಡಿದ್ದು, ಸಧ್ಯಕ್ಕೆ RBI ತಿಳಿಸಿರುವ ಪ್ರಕಾರ, ಯಾವುದೇ ನೋಟ್ ಚೇಂಜ್ ಆಗುವ ಬಗ್ಗೆ RBI ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ, ಆ ಬಗ್ಗೆ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು RBI ಸ್ಪಷ್ಟನೆ ನೀಡಿದೆ. ಈ ಕಾರಣದಿಂದ ಜನರು ಇಂಥ ಸುಳ್ಳು ಸುದ್ದಿಗಳನ್ನು ನಂಬುವುದು ಬೇಡ ಎಂದು ಹೇಳಲಾಗಿದೆ.

Leave A Reply

Your email address will not be published.