ಕೇವಲ 21ವರ್ಷಕ್ಕೆ IPS ಅಧಿಕಾರಿಯಾದ ದಿವ್ಯ! ಇವರು ಓದುವ ಟ್ರಿಕ್ಸ್ ಹೇಗಿತ್ತು ಗೊತ್ತಾ..

0 3,281

ಐಎಎಸ್, ಐಪಿಎಸ್ ಅಧಿಕಾರಿಗಳಾಗಿರುವವರನ್ನ ನೋಡಿದರೆ, ಅವರ ಹಿನ್ನಲೆ ಕಥೆ ತಿಳಿದರೆ ಎಲ್ಲರದ್ದೂ ಒಂದೊಂದು ರೀತಿ ಸ್ಫೂರ್ತಿ ತುಂಬುವಂಥ ಕಥೆಗಳೇ ಎಂದರೆ ತಪ್ಪಲ್ಲ. ಯು.ಪಿ.ಎಸ್.ಸಿ ಪರೀಕ್ಷೆ ಕ್ಲಿಯರ್ ಮಾಡುವುದು ಅಷ್ಟು ಸುಲಭದ ವಿಷಯ ಕೂಡ ಅಲ್ಲ. ಆದರೆ ದಿವ್ಯ ಎನ್ನುವ ಇವರು ಕೇವಲ 21 ವರ್ಷಕ್ಕೆ UPSC ಪರೀಕ್ಷೆ ಕ್ಲಿಯರ್ ಮಾಡಿದರು. ಇವರ ಬಗ್ಗೆ ಇಂದು ನಿಮಗೆ ಪೂರ್ತಿ ಮಾಹಿತಿ ತಿಳಿಸಿಕೊಡುತ್ತೇವೆ..

ದಿವ್ಯ ಅವರು ಅತ್ಯಂತ ಕಿರಿಯ ವಯಸ್ಸಿಗೆ UPSC ಪರೀಕ್ಷೆ ಕ್ಲಿಯರ್ ಮಾಡಿ, ಐಪಿಎಸ್ ಅಧಿಕಾರಿಯಾದ ಹುಡುಗಿ. 2021ರ ಬ್ಯಾಚ್ ನಲ್ಲಿ ಪರೀಕ್ಷೆ ಬರೆದು, ಉತ್ತಮ ರ್ಯಾಂಕ್ ಪಡೆದು ಉತ್ತೀರ್ಣರಾಗಿ ಐಪಿಎಸ್ ಅಧಿಕಾರಿ ಆಗಿದ್ದಾರೆ ದಿವ್ಯ. ಕಷ್ಟದಲ್ಲಿ ಅರಳಿದ ಪ್ರತಿಭೆ ಇವರು. ದಿವ್ಯ ಅವರ ಬಗ್ಗೆ ಹೇಳುವುದಾದರೆ ಮೂಲತಃ ಇವರು ಹರಿಯಾಣದವರು, ಅಲ್ಲಿನ ನವೋದಯ ಶಾಲೆಯಲ್ಲಿ ಓದುತ್ತಿದ್ದ ದಿವ್ಯ ಶಿಕ್ಷಣದಲ್ಲಿ ಚುರುಕಾಗಿದ್ದರು.

ಆದರೆ ಇವರ ಮನೆಯಲ್ಲಿ ಆರ್ಥಿಕ ಸ್ಥಿತಿ ಚೆನ್ನಾಗಿರಲಿಲ್ಲ. ದಿವ್ಯ ತನವಾರ್ ಅವರು ಶಾಲೆಯಲ್ಲಿ ಓದುವಾಗಲೇ ಅವರ ತಂದೆ ಮರಣ ಹೊಂದಿದರು, ಮನೆ ಮತ್ತು ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ದಿವ್ಯ ಅವರ ತಾಯಿ ಮೇಲೆಯೇ ಬಿದ್ದಿತ್ತು. ದಿವ್ಯ ಅವರ ತಾಯಿಗೆ ಮೂವರು ಮಕ್ಕಳು. ಕಸೂತಿ ಮಾಡುತ್ತಾ, ಇನ್ನಿತರ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಾ ದಿವ್ಯ ಅವರನ್ನು ಓದಿಸುವುದಕ್ಕೆ ಸಹಾಯ ಮಾಡಿದರು.

ಪಿಯುಸಿ ಮುಗಿಸಿ, ಡಿಗ್ರಿಗೆ ಸೇರುತ್ತಿದ್ದ ಹಾಗೆ UPSC ಪರೀಕ್ಷೆಗೆ ತಯಾರಿ ಶುರು ಮಾಡಿದ್ದರು ದಿವ್ಯ. ಇವರು ಯಾವುದೇ ತರಬೇತಿ ಪಡೆಯದೆ ಮನೆಯಲ್ಲಿದ್ದ ಒಂದು ಸಣ್ಣ ರೂಮ್ ನಲ್ಲಿ ಪ್ರತಿದಿನ 10 ಗಂಟೆಗಳ ಕಾಲ ಓದುತ್ತಾ, ಪ್ರಿಪೇರ್ ಆಗುತ್ತಿದ್ದರು. 2021ರಲ್ಲಿ ಮೊದಲ ಬಾರಿಗೆ UPSC ಪರೀಕ್ಷೆ ಬರೆದು, 438ನೇ ರ್ಯಾಂಕ್ ಪಡೆದು ಉತ್ತೀರ್ಣರಾಗಿ, IPS ಅಧಿಕಾರಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Leave A Reply

Your email address will not be published.