Women’s property Rights: ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಎಷ್ಟು ಪಾಲಿದೆ ಮಾನ್ಯ ಸುಪ್ರೀಂ ಕೋರ್ಟ್ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಎಷ್ಟು ಪಾಲಿದೆ ಅದಕ್ಕೆ ಸಂಬಂಧಿಸಿದಂತೆ ಏನೇನು ಸ್ಪಷ್ಟಪಡಿಸಿದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ

ಪಿತ್ರಾರ್ಜಿತ ಆಸ್ತಿಯಲ್ಲಿ ಮಹಿಳೆಗೆ ಪಾಲು ಸಿಗಬೇಕಾದರೆ ಮಹಿಳೆಯ ಹೊಣೆಗಾರಿಕೆಯೇನು, 1956 ಹಾಗೂ 2005 ಕಾಯ್ದೆಗಳಲ್ಲಿ ಮಹಿಳೆಯರಿಗೆ ಸಿಗುವ ಆಸ್ತಿಯ ಬಗ್ಗೆ ಯಾವ ತೀರ್ಪುಗಳಿವೆ ಎಂದು ತಿಳಿಯೋಣ. ಈ ಹಿಂದೆ 1956ರ ಕಾಯ್ದೆಯ ಪ್ರಕಾರ ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಯಾವುದೇ ರೀತಿಯ ಹಕ್ಕು ಇರಲಿಲ್ಲ. 2005ರ ಹೊಸ ಕಾಯಿದೆ ಬರುವವರೆಗೆ ತಂದೆ ಸಾವನ್ನಪ್ಪಿದ್ದಲ್ಲಿ ಅಥವಾ ಆಸ್ತಿ ಹಂಚಿಕೆಯಾಗಿದ್ದಲ್ಲಿ ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಹಕ್ಕು ಇರಲಿಲ್ಲ.

ಹೆಣ್ಣು ಮಕ್ಕಳ ಸಮಪಾಲು ಆಸ್ತಿಗಾಗಿ ನ್ಯಾಯಾಲಯ ಮೆಟ್ಟಿಲೇರಿದ ಪ್ರಕರಣಗಳ ಸಂಖ್ಯೆ ಹೆಚ್ಚಾದಾಗ ಭಾರತ ಸರ್ಕಾರ ಮಹಿಳೆಯರ ಆಸ್ತಿಗೆ ಸಂಬಂಧಿಸಿದಂತೆ ಈ ಹಿಂದೆ ಜಾರಿಯಲ್ಲಿದ್ದ ಹಿಂದೂ ಉತ್ತರಾಧಿಕಾರ್ ಕಾಯಿದೆ 1956 ಅನ್ನು ತಿದ್ದುಪಡಿ ಮಾಡಿ ಹಿಂದೂ ಉತ್ತರಾಧಿಕಾರ್ ತಿದ್ದುಪಡಿ ಕಾಯ್ದೆ 2005 ಜಾರಿಗೆ ಬಂತು. ಕಾಯ್ದೆ 2005ರಲ್ಲಿ ಮನೆಯ ಹಿರಿಯರು ಸಾವನ್ನಪ್ಪಿದ ನಂತರ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಹಕ್ಕಿದೆ ಎಂದು ಮಾನ್ಯ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ನ್ಯಾಯಪೀಠ ತೀರ್ಪು ನೀಡಿದೆ.

ಇಂತಹದೆ ಪ್ರಕರಣದ ವಿತರಣೆ ನಡೆಸಿದ ಸುಪ್ರೀಂಕೋರ್ಟ್ ನ ಎ ಕೆ ಸಿಕ್ರಿ ಹಾಗೂ ಅಶೋಕ್ ಭೂಷಣ್ ಪೀಠವು 2005ಕ್ಕಿಂತ ಮೊದಲು ಜನಿಸಿದ ಹೆಣ್ಣು ಮಕ್ಕಳಿಗೂ ಸಹ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಪಾಲು ಹಕ್ಕಿದೆ ಎಂದು ತೀರ್ಪು ನೀಡಿದೆ. ಹಿಂದೂ ಉತ್ತರಾಧಿಕಾರಿ ಕಾಯ್ದೆ ಪ್ರಕಾರ ಹೆಣ್ಣು ಮಕ್ಕಳು ಹುಟ್ಟಿನಿಂದಲೆ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಉತ್ತರಾಧಿಕಾರಿಯಾಗಿರುತ್ತಾರೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. 2005ರ ಕಾಯ್ದೆಯಲ್ಲಿ ತನ್ನ ತಂದೆ ತಾಯಿ ಆಸ್ತಿಯಲ್ಲಿ ಮಗನಷ್ಟೆ ಸಮಾನವಾಗಿ ಮಗಳಿಗೂ ಸಮಾನ ಅಧಿಕಾರವಿದೆ.

ಹೆಣ್ಣು ಮಕ್ಕಳು ತಾವು ಪಡೆದ ಪಾಲನ್ನು ಮಾರಾಟ ಮಾಡುವ ಮೂಲಕ ಅಥವಾ ಉಡುಗೊರೆ ರೂಪದಲ್ಲಿ ವಿಲೇವಾರಿ ಮಾಡಬಹುದು. ಒಟ್ಟು ಕುಟುಂಬದ ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಸಮಾನ ಅಧಿಕಾರವಿದೆ . ಪಿತ್ರಾರ್ಜಿತ ಆಸ್ತಿ 20 /12/2004 ರ ಮೊದಲು ಪಿತ್ರಾರ್ಜಿತ ಆಸ್ತಿ ಪರಭಾರೆ ಅಥವಾ ವಿಲ್ ಆಗಿದ್ದರೆ ಅದರಲ್ಲಿ ಮಹಿಳೆಗೆ ಹಕ್ಕು ಸಿಗದೆ ಇರಬಹುದು ಇದನ್ನು ಹೊರತುಪಡಿಸಿ ನೋಂದಣಿ ಆಗಿದ್ದರೂ ಕೂಡ ಮಹಿಳೆಗೆ ಹಕ್ಕು ಪಡೆಯಲು ಅವಕಾಶವಿದೆ.

ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡು ಮಕ್ಕಳು ಹಾಗೂ ಹೆಣ್ಣು ಮಕ್ಕಳಿಗೆ ಸಮಾನ ಪಾಲು ಹಕ್ಕಿದ್ದಂತೆ ಸಮಾನ ಹೊಣೆಗಾರಿಕೆಗಳು ಇವೆ. ಹೆಣ್ಣು ಮಕ್ಕಳು ಪಿತ್ರಾರ್ಜಿತ ಆಸ್ತಿಯಲ್ಲಿ ಸಮಪಾಲು ಪಡೆದುಕೊಂಡರೆ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವಂತಿಲ್ಲ. ಕುಟುಂಬದ ಮೇಲೆ ಸಾಲ ಅಥವಾ ಋಣ ಭಾರವಿದ್ದಲ್ಲಿ ಮಹಿಳೆಯು ಸಾಲ ತೀರಿಸಲು ಬದ್ಧಳಾಗಿರಬೇಕು, ತಂದೆ ತಾಯಿಯ ಸೇವೆ ಮಾಡಬೇಕು ಅವರ ವೈದ್ಯಕೀಯ ಖರ್ಚು ಹೀಗೆ ಮಗನಿಗೆ ಸಮಾನವಾಗಿ ತಂದೆ ತಾಯಿಯನ್ನು ನೋಡಿಕೊಳ್ಳಬೇಕು. ಈ ಕಾಯ್ದೆಯ ಉದ್ದೇಶಗಳು ಪ್ರತಿಯೊಬ್ಬರಿಗೂ ತಿಳಿಯಬೇಕು.

ಗಂಡು ಮತ್ತು ಹೆಣ್ಣು ಲಿಂಗ ತಾರತಮ್ಯವನ್ನು ಹೋಗಲಾಡಿಸುವ ಸಲುವಾಗಿ ಈ ಕಾಯ್ದೆಯನ್ನು ತರಲಾಗಿದೆ. ಸಮಾಜದಲ್ಲಿ ಗಂಡು ಹಾಗೂ ಹೆಣ್ಣು ಸಮಾನತೆಯ ದೃಷ್ಟಿಯಲ್ಲಿ ಹಕ್ಕು ಹೊಂದಿರುತ್ತಾರೆ ಎಂದು ತಿಳಿಸಲು. ಮಹಿಳೆಯರು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಮುಂದೆ ಬರಲು. ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡು ಹಾಗೂ ಹೆಣ್ಣು ಸಮಾನತೆ ಸಮಬಾಳು ಹೊಂದಿರಬೇಕು.

ಮಹಿಳೆಯರು ಶೋಷಣೆಗೆ ಒಳಗಾಗುವುದರಿಂದ ಸಂಕಷ್ಟ ಪರಿಸ್ಥಿತಿಯಲ್ಲಿ ಈ ಹಕ್ಕು ಅವರಿಗೆ ಅನುಕೂಲವಾಗುತ್ತದೆ ಎಂದು. ಈ ಮಾಹಿತಿಯನ್ನು ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೂ ತಲುಪಿಸಿ ಗಂಡಿನಷ್ಟೆ ಸಮಾನವಾದ ಅಧಿಕಾರ ಹೆಣ್ಣಿಗೆ ಕೊಟ್ಟಿರುವ ಈ ಕಾಯ್ದೆಯನ್ನು ಗೌರವಿಸೋಣ ಹಾಗೂ ಹೆಣ್ಣು ಮಕ್ಕಳಿಗಿರುವ ಅಧಿಕಾರ ಹಕ್ಕು ದುರುಪಯೋಗವಾಗದಂತಿರಲಿ.

Leave a Reply

Your email address will not be published. Required fields are marked *