ಈಗ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದೆ. ಯಶ್ ಸಂಪೂರ್ಣವಾಗಿ ಶೂಟಿಂಗ್ ಮುಗಿಸಿದ್ದಾರೆ. ಈಗಷ್ಟೇ ಟೀಸರ್ ರಿಲೀಸ್ ಆಗಿದ್ದು, ಭರ್ಜರಿ ರೆಸ್‌ಪಾನ್ಸ್ ಪಡೆದುಕೊಂಡ ಕೆಜಿಎಫ್ ಚಾಪ್ಟರ್ 2 ಈಗ ರಿಲೀಸ್‌ಗೆ ಕೂಡಾ ಸಿದ್ಧವಾಗುತ್ತಿದೆ. ಈ ಕಡೆ ಯಶ್ ಮುಂದಿನ ಸಿನಿಮಾ ಯಾವುದು ಎಂಬ ಚರ್ಚೆ ಹುಟ್ಟಿಕೊಂಡಿದೆ. ಅಷ್ಟಕ್ಕೂ, ರಾಕಿ ಭಾಯ್ ಮುಂದಿನ ಸಿನಿಮಾ ಯಾವ ನಿರ್ದೇಶಕರ ಜೊತೆ ಮಾಡಲಿದ್ದಾರೆ? ಎನ್ನುವ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಕೆಜಿಎಫ್ ಚಾಪ್ಟರ್ 1 ರಿಲೀಸ್ ಆಗಿ ಸಕ್ಸಸ್ ಆಗುತ್ತಿದ್ದಂತೆ ಚಾಪ್ಟರ್ 2ಗೂ ಮೊದಲೇ ರಾಕಿಂಗ್ ಸ್ಟಾರ್ ಹೊಸ ಪ್ರಾಜೆಕ್ಟ್‌ಗೆ ಸಹಿ ಹಾಕಲಿದ್ದಾರೆ ಎಂದು ಅನೇಕ ಸುದ್ದಿಗಳು ವರದಿಯಾದವು. ತಮಿಳು, ತೆಲುಗು ಹಾಗೂ ಬಾಲಿವುಡ್ ನಿರ್ಮಾಣ ಸಂಸ್ಥೆಗಳು ಯಶ್ ಜೊತೆ ಸಿನಿಮಾ ಮಾಡಲು ಆಸಕ್ತಿ ತೋರುತ್ತಿದ್ದಾರೆ ಎಂಬ ವರದಿಗಳಾದವು. ಆದರೆ, ಬೇರೆ ಯಾವ ಪ್ರಾಜೆಕ್ಟ್‌ ಓಕೆ ಎನ್ನದ ನಟ ಚಾಪ್ಟರ್ 2 ಮುಗಿದ ಮೇಲೆ ಮುಂದಿನ ಸಿನಿಮಾ ಎಂದುಬಿಟ್ಟರು. ಕೆಜಿಎಫ್ ಚಾಪ್ಟರ್ 2 ಮುಗಿದ ಮೇಲೆ ನಟ ಯಶ್ ಸಿನಿಮಾ ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಬಹುದು ಎಂಬ ಲೆಕ್ಕಾಚಾರ ಇದ್ದರೆ ಅದು ನಿರಾಸೆಯಾಗಬಹುದು. ಗಾಂಧಿನಗರದಲ್ಲಿ ಚರ್ಚೆಯಾಗುತ್ತಿರುವ ಸುದ್ದಿಯ ಪ್ರಕಾರ, ಯಶ್ ಮುಂದಿನ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ. ಅದಕ್ಕೆ ತಕ್ಕಂತೆ ನಿರ್ದೇಶಕ-ನಿರ್ಮಾಪಕರ ಜೊತೆ ಮುಂದಿನ ಸಿನಿಮಾ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಮಫ್ತಿ ಸಿನಿಮಾ ಮುಗಿದ್ಮೇಲೆ ನಿರ್ದೇಶಕ ನರ್ತನ್ ಒಂದೆರಡು ಪ್ರಾಜೆಕ್ಟ್ ಟೇಕ್ ಆನ್ ಮಾಡಿದರೂ ಕಾರಣಾಂತರಗಳಿಂದ ಅದು ಮುಂದುವರಿಯಲಿಲ್ಲ. ಈ ಕಡೆ ರಾಕಿಂಗ್ ಸ್ಟಾರ್ ಗೆ ನರ್ತನ್ ಕಥೆ ಮಾಡಿದ್ದು, ಮುಂದಿನ ಚಿತ್ರವನ್ನು ರಾಕಿ ಭಾಯ್ ಜೊತೆಯಲ್ಲಿ ಮಾಡಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದೆ. ಇನ್ನೂ ಕೆಜಿಎಫ್ ಹಿಟ್ ಆದಮೇಲೆ ಯಶ್ ಜೊತೆ ಸಿನಿಮಾ ಮಾಡಲು ಪ್ರಯತ್ನ ಪಡುತ್ತಿರುವ ಕೆಲವು ನಿರ್ದೇಶಕರು, ಕಥೆ ಸಿದ್ಧ ಮಾಡ್ಕೊಂಡು ಕಾಯುತ್ತಿದ್ದಾರೆ. ಯಶ್ ಕಾಲ್‌ಶೀಟ್‌ ಪಡೆಯುವುದಕ್ಕಾಗಿ ಎಲ್ಲ ಪ್ರಯತ್ನ ಮಾಡ್ತಿದ್ದು, ಕೆಜಿಎಫ್ ಶೂಟಿಂಗ್‌ನಿಂದ ಬ್ರೇಕ್ ಪಡೆದುಕೊಳ್ಳಲಿ ಎಂದು ಇದ್ದರು. ಈಗ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದ್ದು, ಯಶ್ ಡೇಟ್ ಪಡೆಯಲು ಮುಂದಾಗಬಹುದು.

ನಟ ಯಶ್ ಅವರಿಗೆ ಸದ್ಯ ಚಾಪ್ಟರ್ 2 ಬಿಡುಗಡೆ ಮೇಲೆ ಮಾತ್ರ ಗಮನ ಇರುವಂತಿದೆ. ಸಿನಿಮಾ ರಿಲೀಸ್ ಆಗಿ ಸಕ್ಸಸ್ ಕಂಡ ಮೇಲಷ್ಟೇ ಹೊಸ ಸಿನಿಮಾದ ಮಾತುಕತೆ ಅಥವಾ ಚರ್ಚೆಗೆ ಮುಂದಾಗಬಹುದು. ಏಕಂದರೆ ಈ ಹಿಂದೆ ಚಾಪ್ಟರ್ 1 ಸಮಯದಲ್ಲೂ ಯಶ್ ಅದೇ ಹೇಳಿದ್ದರು. ಸದ್ಯಕ್ಕೆ ಕೆಜಿಎಫ್ ಆಮೇಲೆ ಹೊಸ ಸಿನಿಮಾ ಎಂದಿದ್ದರು. ಇನ್ನು ಕನ್ನಡದ ನಿರ್ದೇಶಕ ನರ್ತನ್ ನಿರ್ದೇಶನದಲ್ಲಿ ಯಶ್ ಅಭಿನಯದಲ್ಲಿ ಮುಂದೆ ಮೂಡಿ ಬರುವ ಚಿತ್ರ ಎಂದರೆ ಅದು ಜಟಸ್ಯ. ಜಟಸ್ಯ ಎಂಬ ಈ ಪದವು ಸಂಸ್ಕೃತ ಶಬ್ಧ ಆಗಿದ್ದು ಇನ್ನೇನು ಕೆಲವು ದಿನಗಳಲ್ಲಿ ಚಿತ್ರತಂಡ ಈ ಚಿತ್ರದ ಹೆಸರನ್ನು ಬಿಡುಗಡೆ ಮಾಡಲಿದೆ. ಈಗಾಗಲೇ ಪ್ರೀಪ್ರೊಡಕ್ಷನ ಕೆಲಸಗಳು ಮುಗಿದಿದ್ದು ಚಿತ್ರತಂಡ ಶೂಟಿಂಗ್ ಗೆ ಬೇಕಾದ ತಯಾರಿ ನಡೆಸುತ್ತಿದೆ. ಜುಲೈ ಹದಿನಾರರಂದು ಕೆಜಿಎಫ್ 2 ಚಿತ್ರ ರಿಲೀಸ್ ಆಗಲಿದ್ದು ಅಷ್ಟರಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಮುಂಬರುವ ಚಿತ್ರಗಳಿಗೆ ಸಹಿ ಹಾಕಲಿದ್ದಾರೆ. ಒಟ್ಟಿನಲ್ಲಿ ಯಶ್ ಅವರ ಮುಂದಿನ ಸಿನಿಮಾ ಜಟಸ್ಯ ಕೂಡಾ ಫ್ಯಾನ್ ಇಂಡಿಯಾ ರೇಂಜಿಗೆ ಸದ್ದು ಮಾಡುವುದಾ!? ಎಂದು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *