ರಶ್ಮಿಕಾ ಮಂದಣ್ಣ ಅವರು ಕನ್ನಡ, ತೆಲುಗು, ಮಲಯಾಳಂ ಭಾಷೆಯ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಅವರು 1996, ಏಪ್ರಿಲ್ 4ರಂದು ಕರ್ನಾಟಕದ ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಜನಿಸಿದರು. ಇವರು ನಟನೆ ಮಾಡುವುದಲ್ಲದೆ ರೂಪದರ್ಶಿಯಾಗಿ ಕೂಡ ಜನಪ್ರಿಯರಾಗಿದ್ದಾರೆ. ಇವರು ಮೈಸೂರಿನಲ್ಲಿ ತಮ್ಮ ಶಿಕ್ಷಣವನ್ನು ಪಡೆದಿದ್ದಾರೆ, ಸೈಕಾಲಜಿ, ಜರ್ನಲಿಸಂ, ಹಾಗೂ ಇಂಗ್ಲೀಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಇವರು ಮೊಡೆಲ್ ಆಗಿ ಕ್ಲೀನ್ ಅಂಡ್ ಕ್ಲಿಯರ್ ಅಂಬಾಸಿಡರ್ ಆಗಿದ್ದರು. 2017ರಲ್ಲಿ ರಕ್ಷಿತ್ ಶೆಟ್ಟಿ ಅವರೊಂದಿಗೆ ನಿಶ್ಚಿತಾರ್ಥವಾಗಿತ್ತು ಆದರೆ ಹೊಂದಾಣಿಕೆ ಸಮಸ್ಯೆಯಿಂದಾಗಿ ಪರಸ್ಪರ ನಿಶ್ಚಿತಾರ್ಥವನ್ನು ಕ್ಯಾನ್ಸಲ್ ಮಾಡಿಕೊಂಡರು. ರಶ್ಮಿಕಾ ಅವರು ಬಹುಬೇಡಿಕೆಯ ನಟಿಯಾಗಿದ್ದಾರೆ. ಕನ್ನಡ ಚಿತ್ರರಂಗದ ಪ್ರಮುಖ ನಟರೊಂದಿಗೆ ರಶ್ಮಿಕಾ ಮಂದಣ್ಣ ಅವರು ನಟಿಸಿದ್ದಾರೆ. 2016ರಲ್ಲಿ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಸಾನ್ವಿ ಪಾತ್ರದಲ್ಲಿ ನಟ ರಕ್ಷಿತ್ ಶೆಟ್ಟಿ ಅವರ ಜೊತೆ ನಟಿಸಿದ್ದಾರೆ. ಈ ಸಿನಿಮಾದ ಮೂಲಕ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದರು ಅಲ್ಲದೆ ಈ ಸಿನಿಮಾದ ನಂತರ ಅವರಿಗೆ ಹೆಚ್ಚು ಅವಕಾಶಗಳು ಬರತೊಡಗಿದವು.

2017ರಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜೊತೆ ಅಂಜನಿಪುತ್ರ ಸಿನಿಮಾದಲ್ಲಿ ನಟಿಸಿದರು. ಅದೇ ವರ್ಷ ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ ಚಮಕ್ ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿದ್ದಾರೆ. 2018 ರಲ್ಲಿ ಚಲೋ ಎಂಬ ತೆಲುಗು ಸಿನಿಮಾದಲ್ಲಿ ನಟಿಸಿದರು. ಅದೇ ವರ್ಷ ಗೀತ ಗೋವಿಂದಂ ಎಂಬ ತೆಲುಗು ಸಿನಿಮಾದಲ್ಲಿ ನಟಿಸಿ ಹೆಚ್ಚು ಜನಪ್ರಿಯರಾದರು. ಅದೇ ವರ್ಷ ದೇವದಾಸ್ ಎಂಬ ಸಿನಿಮಾದಲ್ಲಿ ಕೂಡ ನಟಿಸಿದ್ದಾರೆ. 2019ರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ಯಜಮಾನ ಸಿನಿಮಾದಲ್ಲಿ ನಟಿಸಿದ್ದಾರೆ. ಅದೇ ವರ್ಷ ಡಿಯರ್ ಕಾಮ್ರೇಡ್ ಎಂಬ ತೆಲುಗು ಸಿನಿಮಾದಲ್ಲಿ ನಟಿಸಿದರು. 2020 ರಲ್ಲಿ ಧ್ರುವ ಸರ್ಜಾ ಅವರ ಜೊತೆ ಪೊಗರು ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಇದೇ ಫೆಬ್ರುವರಿ 19 ರಂದು ರಿಲೀಸ್ ಆಗಲಿದೆ. ರಶ್ಮಿ‌ಕಾ ಅವರು ಒಟ್ಟು 9 ಸಿನಿಮಾಗಳಲ್ಲಿ ನಟಿಸಿದ್ದಾರೆ. ರಶ್ಮಿಕಾ ಮಂದಣ್ಣ ಅವರು ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಜನರಿಗೆ ಮನರಂಜನೆ ನೀಡಲಿ ಎಂದು ಆಶಿಸೋಣ.

By

Leave a Reply

Your email address will not be published. Required fields are marked *