ಈಗ ಹಲವು ರೀತಿಯ ಕಾರುಗಳನ್ನು ನೋಡಬಹುದಾಗಿದೆ. ಮೊದಲು ಅಂಬಾಸಿಡರ್, ಮಾರುತಿ, ಓಮಿನಿ, ಝೆನ್ ಕಾರುಗಳನ್ನು ನೋಡಬಹುದಾಗಿತ್ತು. ಅಂದು ಶ್ರೀಮಂತರ ಬಳಿ ಮಾತ್ರ ಕಾರು ಇರುತಿತ್ತು ಆದರೆ ಇಂದು ಸಾಮಾನ್ಯ ಜನರ ಬಳಿಯೂ ಕಾರು ಇರುತ್ತದೆ. ವಿಶ್ವದ ಮೊದಲ ಕಾರಿನ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಟಾಂಗಾ ರೀತಿಯಲ್ಲಿ ಇದ್ದ ಕಾರು ಡೆವಲೆಪ್ ಆಗುತ್ತಾ ಗೇರ್ ನಿಂದ ಗೇರ್ ಲೆಸ್ ಕಾರುಗಳು, ಪೆಟ್ರೋಲ್ ಕಾರುಗಳು, ವಿದ್ಯುತ್ ಕಾರುಗಳು, ರಸ್ತೆಯಲ್ಲಿ ಓಡಾಡುವ ಕಾರುಗಳಿಂದ ಹಾರುವ ಕಾರುಗಳವರೆಗೆ ನೋಡಬಹುದಾಗಿದೆ. ಮೊದಲ ಕಾರನ್ನು ಇನ್ವೆಂಟ್ ಮಾಡಿರುವುದು 1885 ರಲ್ಲಿ ಜರ್ಮನಿಯ ಕಾರ್ಲ ಬೆಂಜ್ ಎಂಬಾತನಿಂದ ಸಿದ್ಧವಾದ ಕಾರು ಗ್ಯಾಸ್ ಎಂಜಿನ್ ನಿಂದ ಕೂಡಿದ್ದ ಎರಡು ಸೀಟ್, ಗೇರ್, ಸ್ಟೇರಿಂಗ್, 3 ಚಕ್ರಗಳನ್ನು ಹೊಂದಿತ್ತು ನೋಡಲು ಟಾಂಗಾ ಗಾಡಿಯನ್ನು ಹೋಲುತ್ತಿತ್ತು. ಈ ಕಾರಿನ ಬೆಲೆ 4,268 ಡಾಲರ್ ಅಂದರೆ ಭಾರತದ ಸುಮಾರು 3,13,000 ರೂ. ಈ ಕಾರುಗಳು ಬಂದ ನಂತರ ಅಮೆರಿಕದಲ್ಲಿ ಪ್ರಾಣಿಗಳನ್ನು ಗಾಡಿಗಳಿಗೆ ಬಳಸುವುದನ್ನು ನಿಲ್ಲಿಸಲಾಯಿತು. ಪಶ್ಚಿಮ ಯುರೋಪ್ ಹಾಗೂ ಇತರ ದೇಶಗಳಿಗೆ ಕಾರುಗಳ ಬಳಕೆ ತಡವಾಯಿತು. ಸುಮಾರು 100 ಕೆ.ಜಿ ತೂಕದ ಈ ಕಾರನ್ನು ಮ್ಯಾನಹೆಮ್ ವಿಶ್ವವಿದ್ಯಾಲಯದಲ್ಲಿ ಟೆಸ್ಟ್ ಮಾಡಲಾಯಿತು.

1894 ರಲ್ಲಿ ಈ ಕಾರು ಸ್ವಲ್ಪ ಅಭಿವೃದ್ಧಿಗೊಂಡ ಬೆಂಜ್ ಬೇಲೊ ಹೆಸರಿನ ನಾಲ್ಕು ಚಕ್ರಗಳ ಕಾರುಗಳನ್ನು ತಯಾರಿಸಲಾಯಿತು. 20 ಕಿ.ಮೀ ಪರ್ ಅವರ್ ಇದರ ಸ್ಪೀಡಾಯಿತು. ನಂತರ ಪೋಚೋ, ಟಾಟಾಸ್ಕೋಡ, ಲ್ಯಾಂಡ್ರೋವರ್, ಫೋರ್ಡ್ ಮುಂತಾದ ಕಂಪನಿಗಳು ತಮ್ಮದೇ ಆದ ಕಾರುಗಳನ್ನು ಮಾರ್ಕೆಟ್ ಗೆ ತಂದರು. ಪೋರ್ಟ ಮೋಟಾರ್ ಕಂಪನಿ ಬಿಡುಗಡೆಗೊಳಿಸಿದ ಕಾರು ಕಡಿಮೆ ಬೆಲೆಯಲ್ಲಿ ಸಿಗುತ್ತಿತ್ತು ಆದ್ದರಿಂದ ಈ ಕಂಪನಿಯ ಕಾರುಗಳು ಹೆಚ್ಚು ಮಾರಾಟವಾದವು. ನಂತರ ಮೊದಲಾದ ಕಂಪನಿಗಳು ಮಧ್ಯಮ ವರ್ಗದವರಿಗೆ ಸಿಗುವ ಹಾಗೆ ಕಾರುಗಳನ್ನು ಮಾರುಕಟ್ಟೆಗೆ ತಂದರು.

ಭಾರತಕ್ಕೆ ಮೊದಲು ಕಾರು ಬಂದಿದ್ದು 1892 ರಲ್ಲಿ ಪಟಿಯಾಲಾದ ರಾಜ ರಾಜೇಂದ್ರ ಸಿಂಗ್ ಭಾರತದ ಮೊದಲ ಕಾರಿನ ಮಾಲಿಕರಾದರು. ಫ್ರಾನ್ಸ್ ಕಂಪನಿಯ ಕಾರುಗಳು ಭಾರತಕ್ಕೆ ಮೊದಲು ಕಾಲಿಟ್ಟ ಕಾರುಗಳಾಗಿದೆ. ಭಾರತದಲ್ಲಿ ಬ್ರಿಟಿಷ್ ಅಧಿಕಾರಿಗಳು, ಶ್ರೀಮಂತರು ಕಾರುಗಳನ್ನು ಬಳಸುತ್ತಿದ್ದರು. ಭಾರತದಲ್ಲಿ 1942 ರಲ್ಲಿ ಹಿಂದುಸ್ಥಾನ್ ಮೋಟಾರ್ ಲಿಮಿಟೆಡ್ ಭಾರತದ ಮೊದಲ ಕಾರು ತಯಾರಿಕಾ ಕಂಪನಿಯಾಗಿದೆ ಅದು ಹಿಂದುಸ್ಥಾನ ಟೆನ್ ಎಂಬ ತನ್ನ ಮೊದಲ ಕಾರನ್ನು ಬಿಡುಗಡೆ ಮಾಡಿತು. ಇದರ ಭಾಗಗಳನ್ನು ಇಂಗ್ಲೆಂಡ್ ನಿಂದ ತರಿಸಲಾಗುತಿತ್ತು. ಹಿಂದುಸ್ಥಾನ್ ಅಂಬಾಸಿಡರ್ ಕಾರು ದೇಶದಲ್ಲೇ ಮೊದಲು ತಯಾರಿಸಿದ ಕಾರಾಗಿದೆ. ನಂತರ ಮಾರುತಿ, ಟಯೋಟ, ಮಹೀಂದ್ರಾ, ಟಾಟಾ ಮೊದಲಾದ ಕಾರುಗಳ ಕಂಪನಿಯನ್ನು ನೋಡಬಹುದಾಗಿದೆ.

Leave a Reply

Your email address will not be published. Required fields are marked *