ಸಿಹಿ ಸುದ್ದಿಯೊಂದಿಗೆ ಬರ್ತಾ ಇದೆ ಕನ್ನಡದ ಬಿಗ್ ರಿಯಾಲಿಟಿ ಶೋ

0 0

ಹಲವಾರು ಭಾಷೆಗಳಲ್ಲಿ ಪ್ರಸಾರ ಆಗುತ್ತಿರುವ ಬಿಗ್ ಬಾಸ್ ರಿಯಾಲಿಟಿ ಶೋ ಈಗ ಮತ್ತೆ ಹೊಸ ಸೀಸನ್ ಜೊತೆಗೆ ಹೊಸ ಸ್ಪರ್ಧಿಗಳನ್ನು ಹೊತ್ತು ಬರುತ್ತಿದೆ ಬಿಗ್ ಬಾಸ್ ಕನ್ನಡ ಹೊಸ ಸೀಸನ್. ಈ ಬಾರಿಯ ಸೀಸನ್ ನಲ್ಲಿ ಯಾವೆಲ್ಲ ಸ್ಪರ್ಧಿಗಳು ಭಾಗವಹಿಸಲಿದ್ದಾರೆ? ಯವಾಗಿನಿಂದ ಬಿಗ್ ಬಾಸ್ ಕಾರ್ಯಕ್ರಮ ಆರಂಭ ಆಗಲಿದೆ? ಈ ಎಲ್ಲಾ ವಿಷಯಗಳ ಕುರಿತಾಗಿ ನಾವು ಈ ಲೇಖನದ ಮೂಲಕ ಮಾಹಿತಿಯನ್ನು ತಿಳಿದುಕೊಳ್ಳೋಣ.

ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಆದ ಬಿಗ್ ಬಾಸ್ ನ ಹೊಸ ಸೀಸನ್ ಶುರುವಾಗುತ್ತಿದೆ. ಪ್ರತಿ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಆರಂಭವಾಗುತ್ತಿದ್ದ ಬಿಗ್ ಬಾಸ್ ಸೀಸನ್ ಕೊರೊನಾ ಕಾರಣದಿಂದಾಗಿ ಇದೀಗ ತಡವಾಗಿ ಆರಂಭವಾಗುತ್ತಿದೆ‌‌. ಅದಾಗಲೇ ಇತರ ಭಾಷೆಗಳಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ಆರಂಭ, ಯಾವುದೇ ತೊಂದರೆ ಇಲ್ಲದೇಯೆ ಕಾರ್ಯಕ್ರಮ ಸಾಗುತ್ತಿದೆ. ಇತ್ತ ಕನ್ನಡದಲ್ಲಿಯೂ ಎಂದಿನಂತೆ ಅಕ್ಟೋಬರ್ ತಿಂಗಳಿನಲ್ಲಿ ಶುರುವಾಗಲಿದೆ ಎನ್ನುವ ಮಾತು ಕೇಳಿ ಬರುತಿತ್ತು‌. ಆದರೆ ಕಾರ್ಯಕ್ರಮ ನಿರೂಪಣೆ ಮಾಡುವ ಸುದೀಪ್ ಅವರು ಶೂಟಿಂಗ್ ನಲ್ಲಿ ಬ್ಯುಸಿ ಇದ್ದ ಕಾರಣ ಹಾಗೂ ಸ್ಪರ್ಧಿಗಳ ಆಯ್ಕೆ ಸಂಪೂರ್ಣವಾಗದ ಕಾರಣ ಅಕ್ಟೋಬರ್ ತಿಂಗಳಿನಲ್ಲಿ ಮಾಡದೆ ಮುಂದೂಡಲಾಗಿತ್ತು. ಆದರೆ ತಡವಾಗಿಯಾದರೂ ಬಿಗ್ ಬಾಸ್ ನಡೆಯಲಿದೆ ಎಂದು ವಾಹಿನಿಯ ಮೂಲಗಳಿಂದ ಮಾಹಿತಿ ತಿಳಿದುಬಂದಿತ್ತು.

ಬಿಗ್ ಬಾಸ್ ಶುರುವಾದರೆ ಕಿಚ್ಚ ಸುದೀಪ್ ಅವರು ಆರೋಗ್ಯದ ದೃಷ್ಟಿಯಿಂದ ಹೊರಗೆಲ್ಲೂ ಪ್ರಯಾಣ ಮಾಡದೇ ಬೆಂಗಳೂರಿನಲ್ಲಿಯೇ ಉಳಿದುಕೊಳ್ಳಬೇಕಿರುವುದರಿಂದ 2021 ರ ಆರಂಭದಲ್ಲಿ ಬಿಗ್ ಬಾಸ್ ಶೋ ಪ್ರಾರಂಭವಾಗುವುದು ಬಹುತೇಕ ಖಚಿತವಾಗಿದೆ.ಅದಾಗಲೇ ಬಿಡದಿಯಲ್ಲಿನ ಬಿಗ್ ಬಾಸ್ ಮನೆಯನ್ನು ಈಗ ನವೀಕರಣ ಮಾಡಲಾಗುತ್ತಿದ್ದು ಈ ಬಾರಿ ಕಳೆದೆಲ್ಲಾ ಸೀಸನ್ ಗಳಿಗಿಂತ ಮನೆಯನ್ನು ಸಂಪೂರ್ಣವಾಗಿ ವಿಭಿನ್ನ ರೀತಿಯಲ್ಲಿ ಸಿದ್ಧತೆ ಮಾಡಲಾಗುತ್ತಿದೆ. ಒಂದು ತಂಡ ಬಿಡದಿಯಲ್ಲಿಯೇ ಉಳಿದುಕೊಂಡಿದ್ದು ಮನೆ ನವೀಕರಣದ ಕೆಲಸದಲ್ಲಿ ತೊಡಗಿಕೊಂಡಿದೆ.

ಇನ್ನು ಈ ಬಾರಿಯ ಸೀಸನ್ ನಲ್ಲಿ ಯಾವೆಲ್ಲ ಸ್ಪರ್ಧಿಗಳು ಭಾಗವಹಿಸುತ್ತಾರೆ ಎಂಬ ವಿಚಾರಕ್ಕೆ ಬಂದರೆ, ಇದರಲ್ಲಿ ಏನೂ ವಿಶೇಷತೆ ಇಲ್ಲ ಎಲ್ಲಾ ಸೀಸನ್ ಗಳ ಹಾಗೆಯೇ ಈ ಬಾರಿಯೂ ಕೂಡಾ ಎಲ್ಲಾ ಸ್ಪರ್ಧಿಗಳೂ ಸೆಲಿಬ್ರೆಟಿಗಳೇ ಆಗಿರಲಿದ್ದಾರೆ ಎಂಬ ಮಾಹಿತಿ ಇದೆ. ಕಿರುತೆರೆ ಧಾರಾವಾಹಿಯ ಮೂಲಕ ಬಂದ ಕಲಾವಿದರು, ಪ್ರಖ್ಯಾತ ಟಿವಿ ನಿರೂಪಕರು ಹಾಗೂ ಒಬ್ಬರು ಸ್ಪೋರ್ಟ್ಸ್ ಪರ್ಸನ್ ಕೂಡ ಇರಲಿದ್ದು ಎಂದಿನಂತೆ ಈ ವರ್ಷ ಕಾಂಟ್ರೋವರ್ಸಿಯಲ್ಲಿ ಕೇಳಿಬಂದ ವ್ಯಕ್ತಿಗಳು ಸಹ ಬಿಗ್ ಬಾಸ್ ಸೀಸನ್ ನಲ್ಲಿ ಭಾಗವಾಗಲಿದ್ದಾರೆ. ಈಗಾಗಲೇ ಕೆಲವು ಹಿರಿಯ ಕಲಾವಿದರನ್ನು ಕೂಡಾ ಬಿಗ್ ಬಾಸ್ ತಂಡ ಭೇಟಿ ಮಾಡಿದ್ದು ಕಲಾವಿದರು ಸಹ ಬಿಗ್ ಬಾಸ್ ಗೆ ಬರಲು ಒಪ್ಪಿದ್ದಾರೆ ಎನ್ನಲಾಗಿದೆ. ಆದರೆ ವಾಹಿನಿಯಿಂದ ಅಧಿಕೃತ ಮಾಹಿತಿ ಹೊರಬರಬೇಕಿದೆಯಷ್ಟೇ.

ಇನ್ನು ಶೋ ವಿಚಾರಕ್ಕೆ ಬಂದರೆ ಅದಾಗಲೇ ಕಲರ್ಸ್ ಕನ್ನಡ ಹೊಸ ಹೊಸ ಧಾರಾವಾಹಿಗಳ ಮೂಲಕ ತನ್ನ ಹಳೆಯ ಫಾರ್ಮ್ ಗೆ ಮರಳುತ್ತಿದ್ದು ಬಿಗ್ ಬಾಸ್ ಶೋ ಹಿಟ್ ಮಾಡುವುದರ ಮೂಲಕ ಮತ್ತೆ ನಂಬರ್ ಒನ್ ಸ್ಥಾನಕ್ಕೆ ಬರುವ ಪ್ರಯತ್ನದಲ್ಲಿದೆ. ಈ ಬಾರಿಯ ಬಿಗ್ ಬಾಸ್ ಶೋ ನಲ್ಲಿ ಸಂಪೂರ್ಣ ಮನರಂಜನೆಗೆ ಪ್ಲಾನ್ ಮಾಡಲಾಗುತ್ತಿದೆ ಎಂದು ತಿಳಿದುಬಂದಿದ್ದು, ಹೊಸ ಹೊಸ ಆಟಗಳಿಗೆ ಪ್ರಾಪರ್ಟಿಸ್ ಗಳ ತಯಾರಿ ಕೂಡಾ ನಡೆಸಲಾಗುತ್ತಿದೆ ಎನ್ನಲಾಗಿದೆ.

ಒಟ್ಟಿ‌ನಲ್ಲಿ 2021 ರ ಶುಭಾರಂಭದೊಂದಿಗೆ ಬಿಗ್ ಬಾಸ್ ಶೋ ಕೂಡ ಆರಂಭವಾಗಲಿದ್ದು 108 ದಿನಗಳ ಮನರಂಜನೆಗೆ ಕಿರುತೆರೆ ವೀಕ್ಷಕರು ಕಾಯುತ್ತಿದ್ದಾರೆ ಎನ್ನಬಹುದು. ಆದರೆ ಕಳೆದ ಸೀಸನ್ ಬಿಗ್ ಬಾಸ್ 7 ರಲ್ಲಿ ಯಾವುದೇ ಸಾಮಾನ್ಯ ಜನರಿಗೆ ಮನೆಯ ಸದಸ್ಯರಾಗಲು ಅವಕಾಶವಿರಲಿಲ್ಲ.. ಈ ಬಾರಿಯೂ ಸೀಸನ್ 8 ರಲ್ಲಿಯೂ ಸಹ ಕಾಮನ್ ಮ್ಯಾನ್ ಗೆ ಬಿಗ್ ಬಾಸ್ ಶೋ ನಲ್ಲಿ ಭಾಗವಹಿಸಲು ಅವಕಾಶ ಇಲ್ಲದೆ ಇರುವುದು ಬೇಸರ ತರಿಸಿದೆ ಎನ್ನಬಹುದು. ಅದಾಗಲೇ ವಾಹಿನಿಗೆ ಬಹಳಷ್ಟು ಮಂದಿ ಬಿಗ್ ಬಾಸ್ ಅವಕಾಶಕ್ಕಾಗಿ ಫೋನ್ ಮೂಲಕ ಮನವಿ ಮಾಡುತ್ತಿರುವುದೂ ಇದೆಯಂತೆ.

ಒಟ್ಟಿನಲ್ಲಿ ಕೆಲವರಿಗೆ ಬಿಗ್ ಬಾಸ್ ಕಾರ್ಯಕ್ರಮ ನೋಡುವ ಅದರ ಅಭಿಮಾನಿಗಳಿಗೆ ಮಾತ್ರ ಇದು ಸಿಹಿ ಸುದ್ಧಿ ಆಗಿದ್ದು , ಬಿಗ್ ಬಾಸ್ ಕಾರ್ಯಕ್ರಮದಿಂದ ಪ್ರಯೋಜನ ಎನು? ಎಂದು ಹಲವಾರು ಟೀಕೆಗಳನ್ನು ಮಾಡುವವರಿಗೆ ಮತ್ತೆ ಈ ಬಾರಿಯ ಬಿಗ್ ಬಾಸ್ ಸೀಸನ್ ಸಿಕ್ಕಿದೆ. ಒಟ್ಟಿನಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ನಿಜಕ್ಕೂ ಪ್ರಯೋಜನಕಾರಿ ಹೌದೋ ಅಲ್ಲವೋ ಎಂಬುದರ ಕುರಿತಾದ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.

Leave A Reply

Your email address will not be published.