ನಮ್ಮ ದೇಶಕೃಷಿಯಾಧಾರಿತವಾಗಿದ್ದು ಕೃಷಿಯಲ್ಲಿ ಬೀಜ ಬಿತ್ತಿ ಬೀಜ ಪಡೆಯುವರೆಗೆ ಅಂದರೆ ಬಿತ್ತನೆಯಿಂದ ಕಟಾವಿನವರೆಗೆ ಮಹಿಳೆಯರು ನಿರ್ವಹಿಸುವ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿರುವುದು ಕೃಷಿ ಕ್ಷೇತ್ರ. ಎಲ್ಲಿ ನೋಡಿದರೂ ಕೃಷಿ ಕ್ಷೇತ್ರದ ಕುರಿತು ನಕರಾತ್ಮಕ ಮಾತುಗಳೇ ಕೇಳಿ ಬರುತ್ತಿರುವ ಈ ಸಂದರ್ಭದಲ್ಲಿ ಎದೆಗುಂದದೆ ತಮ್ಮ ಕಾರ್ಯವ್ಯಾಪ್ತಿಯಲ್ಲಿ ಸಮಾಜ ತಿರುಗಿನೋಡುವಂತೆ ಸಾಧನೆ ಮಾಡಿದ ಮಹಿಳೆ ಅರುಣ್ ಬಗ್ಗೆ ತಿಳಿಯೋಣ.

ಕೃಷಿಯನ್ನು ಎಲ್ಲರೂ ಇಷ್ಟಪಟ್ಟು ಮಾಡುವ ಕ್ಷೇತ್ರವಲ್ಲ ಆದರೆ ಅರುಣ ಎಂಬ ಆಕೆ ಅನಿವಾರ್ಯ ಕಾರಣದಿಂದ ಕೃಷಿಯನ್ನು ಆಯ್ಕೆಮಾಡಿಕೊಂಡು ತಮ್ಮ ಜೀವನವನ್ನು ಸುಧಾರಿಸಿಕೊಳ್ಳಲು ಈ ಮಾರ್ಗ ಸುಲಭವಾಗಿದೆ, ತಮ್ಮ ತಂದೆ ತೀರಿಕೊಂಡ ನಂತರ ತಮ್ಮ 4 ಎಕರೆ ಜಮೀನನ್ನು ಬೇರೆಯವರಿಗೆ ಭೋಗ್ಯಕ್ಕೆ ಕೊಟ್ಟಿದ್ದನ್ನು ಮರಳಿ ಪಡೆದು ಅದರಲ್ಲಿ ತಮ್ಮ ತಾಯಿ ವ್ಯವಸಾಯವನ್ನು ಶುರುಮಾಡಿದ್ದರು ಅರುಣ ಎಂಬುವವರು ವಿದ್ಯಾಭ್ಯಾಸ ಮಾಡುತ್ತಿದ್ದರು ತನ್ನ ತಾಯಿಯ ಕಷ್ಟವನ್ನು ನೋಡಲಾರದೆ ತನ್ನ ವಿದ್ಯಾಭ್ಯಾಸವನ್ನು ಸ್ಥಗಿತಗೊಳಿಸಿ ತಾಯಿಯೊಂದಿಗೆ ತಾವು ಕೂಡ ಕೃಷಿಕ್ಷೇತ್ರದಲ್ಲಿ ಮುಂದುವರಿಯಲು ಇಚ್ಚಿಸಿ ಜಮೀನಿನಲ್ಲಿ ವ್ಯವಸಾಯವನ್ನು ಮುಂದುವರಿಸಿದರು, ಮೊದಲು ಮಳೆಯಾಶ್ರಿತ ನೀರನ್ನು ನಂಬಿ ವ್ಯವಸಾಯವನ್ನು ಮಾಡುತ್ತಿದ್ದರು ನಂತರ ಕೂಲಿ ಮಾಡಿ ಉಳಿಸಿದ ದುಡ್ಡಿನಿಂದ ಬೋರ್ವೆಲ್ ಕರೆಸಿ ಅದರಿಂದ ನೀರನ್ನು ಉಪಯೋಗಿಸುವುದು ಹಾಗೆ ತರಕಾರಿ ಮತ್ತು ಹೂವುಗಳನ್ನು ಬೆಳೆದು ಅದರಿಂದ ಬಂದ ಲಾಭಾಂಶವನ್ನು ಮತ್ತೊಂದು ಬೋರ್ವೆಲ್ಲಿಗೆ ವ್ಯಯಿಸಿ ತೆಂಗು ಅಡಿಕೆ ಬಾಳೆ ಇವುಗಳೆಲ್ಲವನ್ನು ಬೆಳೆಯುವಲ್ಲಿ ಸಫಲರಾದರು ಪ್ರಸ್ತುತ ಅರುಣರಲ್ಲಿ ನಾಲ್ಕು ಬೋರ್ವೆಲ್ ಗಳು ಇವೆ.

ಜಜ್ಜು ಮಣ್ಣನ್ನು ಉಪಯೋಗಿಸುವುದರಿಂದ ನೀರಿನ ಉಪಯೋಗ ಮಿತವಾಗುತ್ತದೆ ಎಂಬುದನ್ನು ಅರುಣ ರವರು ತಿಳಿಸಿಕೊಟ್ಟಿದ್ದಾರೆ. ಸಾವಯವ ಕೃಷಿ ಮಾಡುವುದು ತುಂಬಾ ಉಪಕಾರಿ, ಎಂಬುದು ಅರುಣ ರವರ ನಿಲುವು ಏಕೆಂದರೆ ಅವರು ಬೆಳೆಯುವ ಜೇನು ಸ್ವತಹ ಕಂಪನಿಯವರು ಬಂದು ದಿನದ ಮಾರ್ಕೆಟ್ ಬೆಲೆ ಏನಿದೆ ತಂದುಕೊಟ್ಟು ಜೇನು ಖರೀದಿಸುತ್ತಾರೆ ಆದ್ದರಿಂದ ನಾವು ಉತ್ತಮ ಗುಣಮಟ್ಟದ ಬೆಳೆಗಳನ್ನು ಒದಗಿಸಿದರೆ ನಮಗೂ ಸಹ ಗುಣಮಟ್ಟದ ಲಾಭಾಂಶ ದೊರೆಯುತ್ತದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಪದವಿ ಬಿಟ್ಟು ಕೃಷಿ ಕೈಹಿಡಿದ ನಾರಿ ಎಂಬ ಬಿರುದನ್ನು ಪಡೆದಿದ್ದಾರೆ ಹಾಗೆಯೇ ಸುಮಾರು ಪ್ರಶಸ್ತಿ ಹಾಗು ಸನ್ಮಾನಗಳನ್ನು ಪಡೆದಿದ್ದಾರೆ ಇವರು ಪ್ರತಿ ಹೆಣ್ಣು ಮಕ್ಕಳಿಗೂ ಹಾಗೂ ಕೃಷಿಯನ್ನು ತೊರೆದ ಜನಸಾಮಾನ್ಯರಿಗೂ ಮಾದರಿಯಾಗಿದ್ದಾರೆ ಈಕೆಯ ಅಭಿಪ್ರಾಯ ಏನೆಂದರೆ ನಾನು ಪದವಿ ಮುಗಿಸಿ ಮತ್ತೊಬ್ಬರ ಕೈಕೆಳಗೆ ದಿನಗೂಲಿಗೆ ಕೆಲಸ ಮಾಡಬೇಕಿತ್ತು ಆದರೆ ಪ್ರಸ್ತುತ ಸ್ವತಹ ನಾನೇ ನಿರ್ಧಾರ ಕೈಗೊಳ್ಳಬಹುದು ನಾನೇ ಯೋಚನೆಗಳನ್ನು ನಿರ್ಧರಿಸಬಹುದು ಹೀಗಿರಬೇಕಾದರೆ ವ್ಯವಸಾಯ ಹಾಗೂ ಕೃಷಿ ನನ್ನ ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *