ರಚಿತಾ ರಾಮ್ ಅವರ ಜೀವನ ಶೈಲಿ ಹೇಗಿದೆ ನೋಡಿ

0 30

ಬಿಂದ್ಯಾ ರಾಮ್ (ಹುಟ್ಟಿದ್ದು, 3 ಅಕ್ಟೋಬರ್ ೧೯೯೨), ತನ್ನ ಸಿನಿಮಾ ಕ್ಷೇತ್ರದ ಹೆಸರಿನಿಂದ ಜನಪ್ರಿಯರಾಗಿರುವ ರಚಿತಾ ರಾಮ್, ಅವರು ಭಾರತದ ನಟಿ. ಪ್ರಥಮವಾಗಿ ಕನ್ನಡ ಚಿತ್ರರಂಗದಲ್ಲಿ ನಟಿಸಿದ್ದರು. ಅವರು ಕನ್ನಡದ ಕಿರುತೆರೆಯ ದೈನಿಕ ಧಾರಾವಾಹಿ ಅರಸಿ ಎಂಬ ಧಾರಾವಾಹಿಯಲ್ಲಿ ಕಾಣಿಸಿಕೊಂಡರು.ದೂರದರ್ಶನ ವೃತ್ತಿಜೀವನದ ನಂತರ, ರಚಿತಾ ಅವರು, ಮೊದಲನೆಯ ಚಿತ್ರ “ಬುಲ್ ಬುಲ್”ನಲ್ಲಿ ದರ್ಶನ್ ಜೊತೆಗ ನಾಯಕಿಯಾಗಿ ನಟಿಸಿದರು. ಮೊದಲಿಗೆ ಅವರು ಯಶಸ್ಸು ಕಂಡ ಚಿತ್ರ ಬುಲ್ ಬುಲ್. ನಂತರ ಅವರು ದಿಲ್ ರಂಗೀಲಾ ಹಾಗು ಅಂಬರೀಶಾ ಚಿತ್ರಗಳಲ್ಲಿ ನಟಿಸಿದರು.

ರಚಿತಾ ಅವರು ೨ ಅಕ್ಟೋಬರ್ ೧೯೯೨ರಂದು ಜನಿಸಿದರು. ರಚಿತಾ ಅವರು ಭಾರತೀಯ ಶಾಸ್ತ್ರೀಯ ಭರತನಾಟ್ಯ ನೃತ್ಯಗಾರ್ತಿ ಯಾಗಿದ್ದರು. ರಚಿತಾ ಅವರು ೪೦ ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ ಮತ್ತು ಅವರ ತಂದೆ ಕೂಡ ಭಾರತೀಯ ಶಾಸ್ತ್ರೀಯ ಭರತನಾಟ್ಯ ನೃತ್ಯಗಾರ. ಅವರ ತಂದೆಯವರು ೫೦೦ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ. ಕಿರುತೆರೆ ಮತ್ತು ಚಲನಚಿತ್ರ ನಟಿಯಾದ ನಿತ್ಯಾ ರಾಮ್ ಅವರು ರಚಿತಾ ರಾಮ್ ಅವರ ಸಹೋದರಿ. 2013 ರಲ್ಲಿ ತೆರೆಕಂಡ ಬುಲ್‌ಬುಲ್ ಚಿತ್ರದ ಮೂಲಕ ಚಂದನವನಕ್ಕೆ ನಾಯಕಿಯಾಗಿ ಪ್ರವೇಶಿಸಿದರು.

ಚಿತ್ರದ ಅಡಿಷನ್‌ಗಾಗಿ ಬಂದ 200 ಕ್ಕೂ ಹೆಚ್ಚು ಯುವತಿಯರಲ್ಲಿ ರಚಿತಾ ಆಯ್ಕೆಯಾದರು.ಈ ಚಿತ್ರದಲ್ಲಿ ತಮ್ಮ ಡೈಲಾಗ್ ಡೆಲಿವರಿ ಸ್ಟೈಲ್ ಮತ್ತು ಕ್ಯೂಟ್ ನಟನೆಯಿಂದ ಪ್ರೇಕ್ಷಕರ ಮತ್ತು ವಿಮರ್ಶಕರ ಅಪಾರ ಮೆಚ್ಚುಗೆ ಪಡೆದರು. ನಂತರ ದರ್ಶನರ `ಅಂಬರೀಶ್, ಗಣೇಶ್‌ರ `ದಿಲ್ ರಂಗೀಲಾ’,ಸುದೀಪ್‌ರ `ರನ್ನ’, ಶ್ರೀಮುರಳಿಯವರ `ರಥಾವರ’ ಪುನೀತ್‌ರ `ಚಕ್ರವ್ಯೂಹ’ ಮುಂತಾದ ಚಿತ್ರಗಳಲ್ಲಿ ನಟಿಸಿ ಕನ್ನಡದ ಬಹುಬೇಡಿಕೆಯ ನಟಿಯಾದರು. ರನ್ನ ಚಿತ್ರದ ಅಭಿನಯಕ್ಕಾಗಿ ಸೈಮಾ ಉತ್ತಮ ನಟಿ ಪ್ರಶಸ್ತಿ ಮತ್ತು ಫಿಲ್ಮಫೇರ್ ಸೌಥ್ ಪ್ರಶಸ್ತಿ ಪಡೆದರು.ರಚಿತಾ ರಾಮ್, ಶ್ರೀ ಮಹಾದೇವ ಮತ್ತು ಪ್ರಜ್ವಲ್ ದೇವರಾಜ್‌ರ ಪತ್ನಿ ರಾಗಿಣಿ ಚಂದ್ರನ್ ಅಭಿನಯದ `ರಿಷಭಪ್ರಿಯ’ ಎಂಬ ಡಾಕುಮೆಂಟರಿಯನ್ನು ನಿರ್ಮಿಸಿ ಚಿತ್ರ ನಿರ್ಮಾಣದಲ್ಲಿ ಮೊದಲ ಹೆಜ್ಜೆಯನ್ನಿಟ್ಟರು. ಇದೊಂದು ಮ್ಯೂಸಿಕಲ್ ಕಿರುಚಿತ್ರವಾಗಿದ್ದು ಸೈಮಾ ಕಿರುಚಿತ್ರ ಸ್ಫರ್ಧೆಯಲ್ಲಿ ಮೂರು ವಿಭಾಗದಲ್ಲಿ ಪ್ರಶಸ್ತಿ ಪಡೆಯಿತು.

ಬುಲ್‌ಬುಲ್ ಚಿತ್ರ ತೆರೆಕಾಣುವ ಮುನ್ನ 2013 ರಲ್ಲಿ ರಚಿತಾ ರಾಮ್ ಇಂಡಿಯನ್ ಎಕ್ಸಪ್ರೆಸ್ ಪತ್ರಿಕೆ ಸಂದರ್ಶನವೊಂದರಲ್ಲಿ “ನಾನು ಈಗಿನ ರಿಯಾಲಟಿ ಶೋಗಳ ಬಗ್ಗೆ ತುಂಬಾ ಆಕರ್ಷಿತಳಾಗಿದ್ದೇನೆ. ನಾನು ಯಾವುದಾದರೂ ಒಂದು ರಿಯಾಲಿಟಿ ಶೋ ನಿರೂಪಕಿಯಾಗಬೇಕು” ಎಂದು ಹೇಳದ್ದರು. 2016 ರಲ್ಲಿ ಉದಯ ಟಿವಿಯ `ಕಿಕ್’ ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸದರು .ಆದರೆ ನಿರೂಪಕಿಯಾಗಿ ಅಲ್ಲ,ಬದಲಾಗಿ ಶೋ ಜಡ್ಜ್ ಆಗಿ. ನಂತರ `ಕಾಮಿಡಿ ಟಾಕೀಸ್’,`ಮಜಾಭಾರತ- 2′ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡರು.ರಚಿತಾ ಹಿಂದೂ ಕುಟುಂಬಕ್ಕೆ ಸೇರಿದವರು. ಅವರ ತಂದೆ ಕೆ.ಎಸ್.ರಾಮು ಭರತನಾಟ್ಯ ನರ್ತಕಿ ಮತ್ತು ಐನೂರಕ್ಕೂ ಹೆಚ್ಚು ಸಾರ್ವಜನಿಕ ಪ್ರದರ್ಶನ ನೀಡಿದ್ದಾರೆ. ಅವರಿಗೆ ನಿತ್ಯ ರಾಮ್ ಎಂಬ ಸಹೋದರಿ ಇದ್ದಾರೆ, ಅವರು ನಟಿಯೂ ಹೌದು ಅವಳು ಪ್ರಯಾಣ ಮತ್ತು ಛಾಯಾಗ್ರಹಣ ಮಾಡುವುದನ್ನು ಇಷ್ಟಪಡುತ್ತಾಳೆ. ಅವರ ಕುಟುಂಬ ಭೋಪಾಲ್ ಮೂಲದವರಾದರೂ, ಅವರು ಕರ್ನಾಟಕದ ಬೆಂಗಳೂರಿನಲ್ಲಿ ಜನಿಸಿದರು. ಅವರು ಭರತನಾಟ್ಯ ನರ್ತಕಿಯಾಗಿ ಸುಮಾರು 50 ಲೈವ್ ನೃತ್ಯ ಪ್ರದರ್ಶನಗಳನ್ನು ನೀಡಿದ್ದಾರೆ.ಕಿಕ್, ಕಾಮಿಡಿ ಟಾಕೀಸ್, ಮತ್ತು ಮಜಾ ಭಾರತಾ- ಸೀಸನ್ 2 ಮತ್ತು 3 ರಂತಹ ರಿಯಾಲಿಟಿ ಶೋಗಳನ್ನು ಅವರು ನಿರ್ಣಯಿಸಿದ್ದಾರೆ.

Leave A Reply

Your email address will not be published.