ಸಾಲಗಾರ ತಂದೆ ಇರಬಾರದು, ಸುಂದರಿ ಹೆಂಡತಿ ಸಿಗಬಾರದು ಅಂತ ಚಾಣಿಕ್ಯ ಹೇಳಿದ್ದೇಕೆ ಗೊತ್ತೇ

0 188

chanikya niti: ಆಚಾರ್ಯ ಚಾಣಕ್ಯರು ಬರೆದಿರುವ ಚಾಣಕ್ಯ ನೀತಿಯಲ್ಲಿ ಅದ್ಬುತವಾದ ಹಲವು ಸಂಗತಿಗಳಿವೆ ಅವುಗಳಲ್ಲಿ ಒಂದು ಪ್ರಮುಖವಾದ ಸಂಗತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಆಚಾರ್ಯ ಚಾಣಕ್ಯರು ತಮ್ಮ ಅರ್ಥಶಾಸ್ತ್ರ ಗ್ರಂಥದಲ್ಲಿರುವ ಯಲ್ಲಿರುವ ಅಪರೂಪವಾದ ಸಂಗತಿಯೆಂದರೆ ಚಾಣಕ್ಯರ ಪ್ರಕಾರ ಮನುಷ್ಯನಿಗೆ ಮನೆಯಲ್ಲಿಯೇ ನಾಲ್ಕು ಶತ್ರುಗಳಿರುತ್ತಾರೆ.

ಶತ್ರು ಅಂದರೆ ಯಾರು ಎಂದು ಹೇಳುತ್ತಾರೆ. ಸಾಲಗಾರನಾದ ತಂದೆ ಶತ್ರುವಿದ್ದಂತೆ ಏಕೆಂದರೆ ತಂದೆ ಸಾಲ ಮಾಡಿದ್ದರೆ ಮಗನ ಇಡೀ ಬದುಕು ಸಾಲ ತೀರಿಸುವುದೆ ಆಗಿರುತ್ತದೆ. ಎರಡನೆಯದಾಗಿ ನಡೆತೆಗೆಟ್ಟ ತಾಯಿ ಶತ್ರುವಿದ್ದಂತೆ ಎಂದು ಚಾಣಕ್ಯ ಹೇಳಿದ್ದಾರೆ ತಾಯಿಯನ್ನು ದೇವರು ಎಂದು ಹೇಳುತ್ತದೆ ನಮ್ಮ ಸಂಸ್ಕೃತಿ. ಅಂತಹ ತಾಯಿ ನಡೆತೆಗೆಟ್ಟವಳಾದ್ರೆ ಆ ಮನೆಯೆ ನರಕವಾಗುತ್ತದೆ ಮಕ್ಕಳಿಗೆ ಅವಳು ಕೊಡುವ ಶಿಕ್ಷಣ ಅನೈತಿಕ ಶಿಕ್ಷಣವಾಗಿರುತ್ತದೆ.

ಮೂರನೇಯದಾಗಿ ಸುಂದರವಾದ ಹೆಂಡತಿ ಮನೆಯಲ್ಲಿರುವ ಶತ್ರು ಎಂದು ಚಾಣಕ್ಯ ಹೇಳಿದ್ದಾರೆ. ಹೆಂಡತಿ ಸುಂದರಿಯಾಗಿದ್ದರೆ ಯಾವಾಗಲೂ ಗಮನ ಅವಳ ಮೇಲೆಯೇ ಇರುತ್ತದೆ ಅವಳಿಗೆ ನನ್ನ ಮೇಲೆ ಪ್ರೀತಿ ಕಡಿಮೆಯಾಗಬಹುದೆ ಅಥವಾ ಇತರರ ಮೇಲೆ ಆಕರ್ಷಿತಳಾಗಬಹುದೆ ಈ ರೀತಿಯ ಯೋಚನೆ ಪುರುಷನಲ್ಲಿ ಸದಾಕಾಲ ಇರುತ್ತದೆ ಹೀಗಿದ್ದರೆ ಕೆಲಸ ಮಾಡಲು, ವೃತ್ತಿಯಲ್ಲಿ ಮುಂದೆ ಬರಲು ಸಾಧ್ಯವಿಲ್ಲ ಹೀಗಾಗಿ ಸುಂದರ ಹೆಂಡತಿಯು ಶತ್ರು ಎಂದು ಚಾಣಕ್ಯ ಹೇಳಿದ್ದಾರೆ.

ಅವಿದ್ಯಾವಂತ ಮಗನು ಶತ್ರುವಿದ್ದಂತೆ ಮಗನು ವಿದ್ಯಾವಂತನು ಬುದ್ದಿವಂತನು ಆಗಿರಬೇಕು. ಇಲ್ಲವಾದರೆ ದುಡಿದಿದ್ದನ್ನು ಉಳಿಸಿಕೊಂಡು ಹೋಗಲು ವಿಫಲನಾಗುತ್ತಾನೆ ಅಂತಹ ಮಗನು ಶತ್ರುವಿಗೆ ಸಮಾನ. ಎಂದು ಆಚಾರ್ಯ ಚಾಣಕ್ಯ ಹೇಳಿದ್ದಾರೆ. ಹೀಗೆ ಈ ನಾಲ್ವರು ಮನೆಯಲ್ಲಿರುವ ಶತ್ರುಗಳು ಎಂದು ಚಾಣಕ್ಯ ಹೇಳಿದ್ದಾರೆ. ಅವರು ತಮ್ಮ ಗ್ರಂಥದಲ್ಲಿ ಇನ್ನು ಅನೇಕ ವಿಷಯಗಳನ್ನು ಪ್ರಸ್ತುತಪಡಿಸಿದ್ದಾರೆ.

Leave A Reply

Your email address will not be published.