ರೈತರು 90% ಸಬ್ಸಿಡಿಯಲ್ಲಿ ಟಾರ್ಪಾಲಿನ್ (ತಾಡಪತ್ರೆ) ಪಡೆಯೋದು ಹೇಗೆ ತಿಳಿಯಿರಿ

0 29

ರೈತರು ಬೆಳೆದಂತ ಬೆಳೆಗಳಿಗೆ ಅಗತ್ಯ ಸಲಕರಣೆಗಳನ್ನು ಖರೀದಿಸಲು ಕಷ್ಟವಾಗುತ್ತದೆ ಹಾಗಾಗಿ ರೈತರಿಗೆ ಕಡಿಮೆ ಹಣದಲ್ಲಿ ಕೃಷಿಗೆ ಬೇಕಾದ ಸಾಮಗ್ರಿಗಳನ್ನು ಪಡೆಯಲು ಇದು ಸಹಕಾರಿಯಾಗಿದೆ ಇದೊಂದು ಪ್ರಮುಖ ಸಹಾಯಧನ ಯೋಜನೆಯಾಗಿದೆ ಹಾಗಿದ್ದರೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಟಾರ್ಪಾಲಿನ್ (ತಾಡಪತ್ರೆ) 50%-90% ಸಬ್ಸಿಡಿಯಲ್ಲಿ ದೊರೆಯುತ್ತದೆ. ಸಾಮಾನ್ಯ ರೈತರು 50%ಸಬ್ಸಿಡಿಯಲ್ಲಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರು 90% ರ ಸಬ್ಸಿಡಿಯಲ್ಲಿ ತಾಡಪತ್ರಿಯನ್ನು ಪಡೆಯಬಹುದು. ತಾಡಪತ್ರಿಯನ್ನು ಪಡೆಯಲು ರೈತ ಸಂಪರ್ಕ ಕೇಂದ್ರದಲ್ಲಿ ಅರ್ಜಿ ದೊರೆಯುತ್ತದೆ ಆ ಅರ್ಜಿಯನ್ನು ಭರ್ತಿಮಾಡಿ ಅದರೊಂದಿಗೆ ಎಫ್.ಐ.ಡಿ ಸಂಖ್ಯೆಯನ್ನು ನಮೂದಿಸಬೇಕು.

ಪಹಣಿ ಪತ್ರವನ್ನು ಕೊಡಬೇಕಾಗುತ್ತದೆ ಮತ್ತು ಪಾಸ್ಪೋರ್ಟ್ ಸೈಜ್ ಫೋಟೋ, ಆಧಾರ ಕಾರ್ಡ್, ಬ್ಯಾಂಕ್ ಖಾತೆ ಪಾಸಬುಕ್ ನ ಪ್ರತಿ, ಆದಾಯ ಮತ್ತು ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು. ರೈತರು ತಮ್ಮ ವ್ಯಾಪ್ತಿಯಲ್ಲಿ ಬರುವ ಹೋಬಳಿ ಅಥವಾ ತಾಲೂಕು ಮಟ್ಟದ ರೈತ ಸಂಪರ್ಕ ಕೇಂದ್ರದಲ್ಲಿ ಎಲ್ಲ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು.

ಸಾಮಾನ್ಯವಾಗಿ ಜೂನ್-ಜುಲೈ ತಿಂಗಳಿನಲ್ಲಿ ಅರ್ಜಿ ಸಲ್ಲಿಸಬಹುದು ಆದರೆ ಕರ್ನಾಟಕದಲ್ಲಿ ಬೇರೆ ಬೇರೆ ಪ್ರದೇಶದಲ್ಲಿ ಬೇರೆ ಬೇರೆ ಬೆಳೆಗಳನ್ನು ಬೆಳೆಯುವುದರಿಂದ ಅದಕ್ಕನುಗುಣವಾಗಿ ಕೃಷಿ ಇಲಾಖೆ ಅರ್ಜಿಯನ್ನು ಆಹ್ವಾನಿಸುತ್ತದೆ ಅದರಂತೆ ಉತ್ತರ ಕರ್ನಾಟಕದ ಕಡೆ ಜೂನ್ ಅಥವಾ ಜುಲೈ ತಿಂಗಳಿನಲ್ಲಿ ಅರ್ಜಿ ಸಲ್ಲಿಸಬಹುದು ಬೆಳೆಗಳಿಗೆ ಅನುಸಾರವಾಗಿ ಅರ್ಜಿ ಕರೆಯುವುದರಿಂದ ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿ ಮಾಹಿತಿ ಪಡೆಯಬಹುದು.

ರೈತರು ಖಾಸಗಿ ವ್ಯಾಪಾರಿಗಳ ಬಳಿ ಖರೀದಿ ಮಾಡಿದರೆ 1,000ರೂ ಕೊಡಬೇಕಾಗುತ್ತದೆ ಆದರೆ ಕೃಷಿ ಇಲಾಖೆಯಲ್ಲಿ ಸಾಮಾನ್ಯ ರೈತರಿಗೆ 500ರೂಪಾಯಿಗೆ ತಾಡಪತ್ರಿ ಸಿಗುತ್ತದೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ 100 ರೂಪಾಯಿಗೆ ತಾಡಪತ್ರಿ ಸಿಗುತ್ತದೆ ರೈತರು ಕೃಷಿ ಇಲಾಖೆಯಲ್ಲಿ ತಾಡಪತ್ರಿ ಖರೀದಿ ಮಾಡುವುದರಿಂದ ಹಣವನ್ನು ಉಳಿಸಬಹುದು ಅಲ್ಲದೆ ಖಾಸಗಿಯವರ ದಬ್ಬಾಳಿಕೆ ತಡೆಯಬಹುದು ಈ ಮಾಹಿತಿಯನ್ನು ಹೆಚ್ಚು ಹೆಚ್ಚು ರೈತರಿಗೆ ತಿಳಿಸಿ ಲಾಭ ಪಡೆದುಕೊಳ್ಳಲಿ ಇನ್ನು ಹೆಚ್ಚಿನ ಮಾಹಿತಿಯನ್ನು ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿ ಪಡೆಯಬಹುದಾಗಿದೆ.

Leave A Reply

Your email address will not be published.