Show me your friends , and I will show you your future ನಾವು ಈ ಸಾಲುಗಳನ್ನ ಕೇಳಿರುತ್ತೇವೆ. ಇದು ಇವತ್ತಿನದ್ದೋ ಅಥವಾ ನಿನ್ನೆಯದ್ದೋ ಮಾತಲ್ಲ ಬಹಳಷ್ಟು ವರ್ಷಗಳ ಹಿಂದಿನ ಮಾತಿದು. ನಾವು ಗೆಳೆತನ ಮಾಡುವಾಗ ಸ್ವಲ್ಪ ವಿಚಾರ ಮಾಡಿ ಗೆಳೆತನ ಮಾಡಬೇಕು ಎಂದು ಎಲ್ಲ ಹಿರಿಯರೂ ಹೇಳುತ್ತಾರೆ. ಆದರೂ ಕೆಲವೊಮ್ಮೆ ನಮಗೆಲ್ಲ ಎಂತಹವರ ಜೊತೆ ಗೆಳೆತನ ಮಾಡಬೇಕು ಎನ್ನುವುದು ತಿಳಿಯುವುದಿಲ್ಲ. ಇದಕ್ಕೆ ಉತ್ತರವಾಗಿ ಮೌರ್ಯ ಸಾಮ್ರಾಜ್ಯದ ಸ್ಥಾಪನೆಗೆ ಕಾರಣವಾದ, ಅರ್ಥಶಾಸ್ತ್ರ ಕೃತಿಯ ಕರ್ತೃ ಆದ ಚಾಣಕ್ಯ ಅವರು ಈ ರೀತಿಯಾಗಿ ಉತ್ತರ ನೀಡಿದ್ದಾರೆ. ನಮ್ಮ ಕಷ್ಟದ ಸಮಯದಲ್ಲಿ ನಮ್ಮ ಗೆಳೆತನ ಎಂತಹದ್ದು ಎಂದು ತಿಳಿಯುತ್ತದೆ. ನಮಗೆ ಕಷ್ಟ ಬಂದಾಗ ನಮ್ಮ ಸ್ನೇಹಿತರು ಹೇಗೆ ಎನ್ನುವುದು ನಮಗೆ ತಿಳಿಯುತ್ತದೆ. ನಮ್ಮ ಬಳಿ ಹಣ, ಕಾರು, ಬಂಗಲೆ ಎಲ್ಲವೂ ಇದ್ದಾಗ ನಮ್ಮ ಜೊತೆ ಸ್ನೇಹಿತರು ಸಬಂಧಿಕರು ಎಲ್ಲರೂ ಇರುತ್ತಾರೆ. ಅದೇ ನಮಗೆ ಏನಾದರೂ ಕಷ್ಟ ಬಂದಾಗ ನಮ್ಮ ಜೊತೆ ಎಲ್ಲಾ ಸ್ನೇಹಿತರೂ ಸಹ ಸಹಾಯಕ್ಕೆ ಬರುವುದಿಲ್ಲ ನಮ್ಮ ಬೆನ್ನ ಹಿಂದೆ ನಿಂತು ಆಡಿಕೊಂಡು ನಗುತ್ತಾರೆ. ಆದರೆ ಇನ್ನೂ ಕೆಲವು ಸ್ನೇಹಿತರು ನಮ್ಮ ಕಷ್ಟದ ಕಾಲದಲ್ಲಿ ಸದಾ ಕಾಲ ನಮ್ಮ ಜೊತೆಗೆ ಇದ್ದು ಯಾವುದೇ ಕಾರಣಕ್ಕೂ ಆಡಿಕೊಂಡು ನಗದೇ ನಮಗೆ ಬೆನ್ನೆಲುಬಾಗಿ ನಿಲ್ಲುತ್ತಾರೆ.

ಇಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾದ ಅಂಶ ಎಂದರೆ ನಾವು ನಮ್ಮ ಕಷ್ಟದ ಕಾಲದಲ್ಲೂ ನಮ್ಮ ಜೊತೆಗೆ ಇರುವವರ ಜೊತೆಗೆ ಮಾತ್ರ ಸ್ನೇಹವನ್ನು ಬೆಳೆಸಬೇಕು ಉಳಿದವರ ಜೊತೆಗೆ ಕೇವಲ ನಮ್ಮ ಪರಿಚಯವನ್ನು ಮಾತ್ರ ಇಟ್ಟುಕೊಳ್ಳಬೇಕು ವಿನಹ ನಮ್ಮ ಗೆಳೆತನವನ್ನು ಅಲ್ಲಾ. ಒಂದುವೇಳೆ ನೀವು ಯಾರದೇ ಜೊತೆಗೆ ಗೆಳೆತನವನ್ನು ಮುಂದುವರೆಸಬೇಕಿದ್ದಲ್ಲಿ ಆ ಸ್ನೇಹಿತ ಮುಂದೆ ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುವಂತವನಾಗಿರಬೇಕು. ನಿಮ್ಮಲ್ಲಿ ಏನಾದರೂ ಕೆಟ್ಟ ಹವ್ಯಾಸಗಳು ಇದ್ದರೆ ಅಥವಾ ಮುಂದೆ ಕೆಟ್ಟ ಹವ್ಯಾಸಗಳನ್ನು ಬೆಳೆಸಿಕೊಂಡರೆ ಅದಕ್ಕೆ ನೀವೇ ಜವಾಬ್ಧಾರಿ ಆಗಿ ಇರುತ್ತೀರಿ. ಮತ್ತು ಅಂತಹ ಕೆಟ್ಟ ಚಟಗಳ ಕಡೆಗೆ ನೀವು ಮತ್ತಷ್ಟು ವಾಲುತ್ತಿದ್ದರೆ ಅದಕ್ಕೆ ನಿಮ್ಮ ಸ್ನೇಹಿತ ಕಾರಣ ಆಗುತ್ತಾನೆ. ಒಂದುವೇಳೆ ನಿಮ್ಮಲ್ಲಿ ಒಳ್ಳೆಯ ಗುಣಗಳು ಇದ್ದರೆ ಅದಕ್ಕೆ ನೀವು ಆರಿಸಿಕೊಂಡ ಸ್ನೇಹಿತರೆ ಆಗಿರುತ್ತಾರೆ. ಅವರು ನಿಮ್ಮ ಜೀವನದಲ್ಲಿ ಎಂದಿಗೂ ಕೆಟ್ಟ ದಾರಿಯಲ್ಲಿ ಹೋಗಲು ಬಿಡುವುದಿಲ್ಲ ಬದಲಿಗೆ ತಮ್ಮಂತೆಯೇ ಒಳ್ಳೆಯ ಹಾಗೂ ಒಬ್ಬ ದೊಡ್ಡ ವ್ಯಕ್ತಿ ಆಗುವ ಹಾಗೆ ನೋಡಿಕೊಳ್ಳುತ್ತಾರೆ.

ಗೆಳೆತನವನ್ನು ನಮ್ಮ ಸಮಾನ ಇರುವವರ ಜೊತೆಗೇ ಮಾಡಬೇಕು. ಚಾಣಕ್ಯ ಹೇಳುವಂತೆ ನಾವೇನಾದರೂ ಬಹಳ ಶ್ರೀಮಂತ ವ್ಯಕ್ತಿಯ ಜೊತೆಗೆ ಗೆಳೆತನ ಮಾಡಿದರೆ ತನ್ನಲ್ಲಿ ಇರುವ ಹಣದ ಕಾರಣದಿಂದಾಗಿ ನೀವು ಆತನ ಜೊತೆಗೆ ಗೆಳೆತನ ಮಾಡಿದಿರಿ ಎಂದು ತಿಳಿಯುತ್ತಾನೆ. ನಾವೇನಾದರೂ ಬಡವರಾಗಿದ್ದರೆ ನಮ್ಮ ಮನಸ್ಸಿನಲ್ಲಿ ಒಂದಲ್ಲ ಒಂದು ಹೀನತೆ ಇರುತ್ತದೆ. ಇನ್ನೊಂದು ಕಡೆ ನೀವು ತೀರಾ ಬಡವರಾಗಿದ್ದ ವ್ಯಕ್ತಿಯ ಜೊತೆಗೆ ಗೆಳೆತನ ಮಾಡಿದರೆ ಆತ ನಿಮ್ಮಿಂದ ಸದಾ ಹಣದ ನಿರೀಕ್ಷೆಯನ್ನು ಇಟ್ಟುಕೊಂಡಿರುತ್ತಾನೆ. ಇದರಿಂದಾಗಿ ನಿಮ್ಮ ನಡುವೆ ಕಣ್ಣಿಗೆ ಕಾಣದ ಒಂದು ದ್ವೇಷದ ಗೋಡೆ ಎದ್ದಿರುತ್ತದೆ. ಅದೇ ನೀವು ನಿಮಗೆ ಸಮಾನರ ಜೊತೆಗೆ ಗೆಳೆತನ ಮಾಡಿದಾಗ ಇಂತಹ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಇಬ್ಬರೂ ಜೀವಮಾದಲ್ಲಿ ಸಮಾನವಾಗಿ ಬೆಳೆಯುತ್ತೀರ.

ಪ್ರತೀ ಗೆಳೆತನದಲ್ಲೂ ಸ್ವಾರ್ಥ ಇದ್ದೆ ಇರುತ್ತದೆ. ಚಾಣಕ್ಯ ಹೇಳುವ ಪ್ರಕಾರ ಪ್ರತಿಯೊಂದು ಗೆಳೆತನದಲ್ಲೂ ಸಹ ಸ್ವಾರ್ಥ ಇದ್ದೆ ಇರುತ್ತದೆ. ಸ್ವಾರ್ಥ ಇಲ್ಲದ ಗೆಳೆತನ ಯಾವುದೂ ಇಲ್ಲ. ನೀವೂ ಸಹ ನಿಮ್ಮ ಗೆಳೆತನದಲ್ಲಿ ಈ ಸ್ವಾರ್ಥವನ್ನು ಸರಿಯಾಗಿ ಇಟ್ಟುಕೊಂಡಲ್ಲಿ ಮಾತ್ರ ನಿಮ್ಮ ಗೆಳೆತನದಲ್ಲಿ ಯಾವುದೇ ಬಿರುಕು ಬರಲು ಸಾಧ್ಯ ಇಲ್ಲ ಎಂದು ಚಾಣಕ್ಯ ಹೇಳುತ್ತಾರೆ.

By

Leave a Reply

Your email address will not be published. Required fields are marked *